Marburg Disease: ಮಾರ್ಬರ್ಗ್ ರೋಗ ಅದರ ಲಕ್ಷಣ, ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲಿದೆ

ಎಬೋಲಾದಂತೆ, ಮಾರ್ಬರ್ಗ್ ವೈರಸ್ ಬಾವಲಿಗಳಲ್ಲಿ ಹುಟ್ಟುತ್ತದೆ ಮತ್ತು ಸೋಂಕಿತ ಜನರೊಂದಿಗೆ ಯಾರು ಸಂಪರ್ಕದಲ್ಲಿರುತ್ತಾರೆ ಅವರ ಆರೈಕೆಯಲ್ಲಿರುವವರಿಗೆ ಹರಡುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ.

Marburg Disease: ಮಾರ್ಬರ್ಗ್ ರೋಗ ಅದರ ಲಕ್ಷಣ, ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲಿದೆ
ಮಾರ್ಬರ್ಗ್ ರೋಗ Image Credit source: CTV News
Follow us
ಅಕ್ಷತಾ ವರ್ಕಾಡಿ
|

Updated on:Feb 14, 2023 | 11:07 AM

ಮಾರಣಾಂತಿಕ ಮಾರ್ಬರ್ಗ್(Marburg) ವೈರಸ್​​ ಸಂಬಂಧಿಸಿದ ಸುದ್ದಿಗಳು ಹೆಚ್ಚಾಗುತ್ತಿದೆ. ಈ ಕಾಯಿಲೆ ಮೊದಲ ಪ್ರಕರಣ ಗಿನಿಯಾದಲ್ಲಿ ದೃಢಪಡಿಸಲಾಗಿದೆ. ಎಬೋಲಾ-ಸಂಬಂಧಿತ ವೈರಸ್ ಪಶ್ಚಿಮ ಆಫ್ರಿಕಾದ ದೇಶದಲ್ಲಿ ಒಂಬತ್ತು ಸಾವುಗಳಿಗೆ ಕಾರಣವಾಗಿದ್ದು, ಈಕ್ವಟೋರಿಯಲ್ ಗಿನಿಯಾದ ಮಾದರಿಗಳನ್ನು ಸೆನೆಗಲ್‌ನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ WHO ಸಾಂಕ್ರಾಮಿಕ ರೋಗವನ್ನು ದೃಢಪಡಿಸಿದೆ.

ಮಾರ್ಬರ್ಗ್ ವೈರಸ್ ರೋಗ ಎಂದರೇನು?

WHO ಪ್ರಕಾರ, ಮಾರ್ಬರ್ಗ್ ಹೆಮರಾಜಿಕ್ ಜ್ವರ ಎಂದು ಈ ಹಿಂದೆ ಕರೆಯಲ್ಪಡುವ ಮಾರ್ಬರ್ಗ್ ವೈರಸ್ ಕಾಯಿಲೆಯಾಗಿದೆ. ಈ ಸಾಂಕ್ರಾಮಿಕ ರೋಗವು ಬಾವಲಿಗಳಿಗೆ ಮೊದಲು ಹರಡಿ ನಂತರ ಮನುಷ್ಯರಿಗೂ ಹರಡುತ್ತದೆ. ನಂತರ ರೋಗಿಯ ಸಂಪರ್ಕದಲ್ಲಿರುವ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ರೋಗ ಇದಾಗಿದೆ. ಇದರಿಂದ ಶೇಕಡಾ 88ರಷ್ಟು ಸಾಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮಾರ್ಬರ್ಗ್ ರೋಗ ಹೇಗೆ ಹರಡುತ್ತದೆ?

ಎಬೋಲಾದಂತೆ, ಮಾರ್ಬರ್ಗ್ ವೈರಸ್ ಬಾವಲಿಗಳಲ್ಲಿ ಹುಟ್ಟುತ್ತದೆ ಮತ್ತು ಸೋಂಕಿತ ಜನರೊಂದಿಗೆ ಯಾರು ಸಂಪರ್ಕದಲ್ಲಿರುತ್ತಾರೆ ಅವರ ಆರೈಕೆಯಲ್ಲಿರುವವರಿಗೆ ಹರಡುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ.

ಇದನ್ನೂ ಓದಿ: ಮಧುಮೇಹಿಗಳಿಗೆ ಇಲ್ಲಿದೆ ಸಿಹಿ ಸುದ್ದಿ, ನಿಮಗಾಗಿ ಬಂದಿದೆ ಅಪ್ಲಿಕೇಶನ್, ಅದರ ಕಾರ್ಯ ವಿಧಾನ ಹೀಗಿದೆ

ಮಾರ್ಬರ್ಗ್ ಕಾಯಿಲೆಯ ಲಕ್ಷಣಗಳು:

ಮಾರ್ಬರ್ಗ್ ವೈರಸ್​​​ನಿಂದಾಗುವ ಮೊದಲ ಲಕ್ಷಣ ತೀವ್ರ ಜ್ವರದಿಂದ ಬಳಲುತ್ತಾನೆ. ಜೊತೆಗೆ ತಲೆನೋವು, ಸುಸ್ತು ಮುಂತಾದ ಲಕ್ಷಣಗಳನ್ನು ಕಾಣಬಹುದು. ಅನೇಕ ರೋಗಿಗಳಲ್ಲಿ ಏಳು ದಿನಗಳಲ್ಲಿ ತೀವ್ರವಾದ ರಕ್ತಸ್ರಾವದ ಲಕ್ಷಣಗಳನ್ನು ಕೂಡ ಕಾಣಬಹುದು.

ಮಾರ್ಬರ್ಗ್ ಕಾಯಿಲೆಗೆ ಚಿಕಿತ್ಸೆ ನೀಡಲು ಲಸಿಕೆ ಇದೆಯಾ?

ಮಾರ್ಬರ್ಗ್‌ಗೆ ಚಿಕಿತ್ಸೆ ನೀಡಲು ಯಾವುದೇ ಅಧಿಕೃತ ಲಸಿಕೆಗಳು ಅಥವಾ ಔಷಧಿಗಳಿಲ್ಲ, ಆದರೆ ರೋಗಲಕ್ಷಣಗಳನ್ನು ನಿವಾರಿಸಲು ಈಗ ನೀಡುವ ಚಿಕಿತ್ಸೆಯು ಬದುಕುಳಿಯುವ ಸಾಧ್ಯತೆಗಳನ್ನು ಸುಧಾರಿಸುತ್ತದೆ. ಮಾರ್ಬರ್ಗ್‌ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಈವರೆಗೂ ಅಭಿವೃದ್ಧಿ ಪಡಿಸಲಾಗಿಲ್ಲ. ಆದರೆ, ಸಾಕಷ್ಟು ನೀರು ಕುಡಿಯುವುದು ಹಾಗೂ ನಿರ್ದಿಷ್ಟ ಲಕ್ಷಣಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ.

ಮಾರ್ಬರ್ಗ್ ವೈರಸ್  ಯಾವಾಗ ಮೊದಲು ಗುರುತಿಸಲಾಯಿತು?

ಜರ್ಮನಿಯ ಮಾರ್ಬರ್ಗ್ ಮತ್ತು ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿರುವ ಪ್ರಯೋಗಾಲಯಗಳಲ್ಲಿ ರೋಗವನ್ನು ಉಂಟುಮಾಡಿದ ನಂತರ ಅಪರೂಪದ ವೈರಸ್​​ನ್ನು 1967 ರಲ್ಲಿ ಮೊದಲು ಗುರುತಿಸಲಾಯಿತು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 11:07 am, Tue, 14 February 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ