AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meat Side Effects: ಕೆಂಪು ಮಾಂಸವು ನಿಮ್ಮ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

ಮಾಂಸವು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳ ತುಂಬಿರುವ ಆರೋಗ್ಯಕರ ಆಹಾರದ ಮೂಲವಾಗಿದೆ. ಆದರೆ ಇದರ ಅತಿಯಾದ ಸೇವನೆ, ಕೆಂಪು ಮಾಂಸ ಹಾಗೂ ಸಂಸ್ಕರಿಸಿದ ಮಾಂಸದ ಸೇವನೆಯನ್ನು ಕಡಿಮೆ ಮಾಡಲು ವೈದ್ಯಕೀಯ ವೃತ್ತಿಪರರು ಸಲಹೆ ನೀಡುತ್ತಾರೆ.

Meat Side Effects: ಕೆಂಪು ಮಾಂಸವು ನಿಮ್ಮ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 21, 2023 | 8:05 AM

Share

ಅತಿಯಾದ ಕೊಲೆಸ್ಟಾಲ್, ಹೃದ್ರೋಗ, ಮೂತ್ರಪಿಂಡದ ಕಾಯಿಲೆ ಹಾಗೂ ಮೂಳೆಯ ಸಮಸ್ಯೆಯಿರುವವರಿಗೆ ಮಾಂಸದ ಸೇವನೆಯನ್ನು ತಪ್ಪಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ಮಾಂಸವು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳ ತುಂಬಿರುವ ಆರೋಗ್ಯಕರ ಆಹಾರದ ಮೂಲವಾಗಿದೆ. ಆದರೆ ಇದರ ಅತಿಯಾದ ಸೇವನೆ, ಕೆಂಪು ಮಾಂಸ ಹಾಗೂ ಸಂಸ್ಕರಿಸಿದ ಮಾಂಸದ ಸೇವನೆಯನ್ನು ಕಡಿಮೆ ಮಾಡಲು ವೈದ್ಯಕೀಯ ವೃತ್ತಿಪರರು ಸಲಹೆ ನೀಡುತ್ತಾರೆ. ಕೆಲವು ಮಾಂಸಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೇರಳವಾಗಿರುವುದರಿಂದ ಇದು ಕೊಲೆಸ್ಟಾಲ್ ಮಟ್ಟವನ್ನು ಹೆಚ್ಚಿಸಬಹುದು. ಹಾಗೂ ಅಧಿಕ ಕೊಲೆಸ್ಟಾಲ್ ಹೊಂದಿರುವವರಲ್ಲಿ ಹೃದಯದ ಆಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

ಪ್ರಾಣಿ ಪ್ರೋಟೀನ್ ವಿಶೇಷವಾಗಿ ಕೆಂಪು ಮಾಂಸವು ಆರೋಗ್ಯಕರ ಮೂಳೆಗಳಿಗೆ ಅಗತ್ಯವಾಗಿದ್ದರೂ, ಅದರ ಅಧಿಕ ಸೇವನೆಯು ಮೂಳೆಗಳಿಗೆ ಹಾನಿಕಾರಕವಾಗಬಹುದು. ನಿಮ್ಮ ಆಹಾರದಲ್ಲಿ ಡೈರಿ, ಮೀನು, ಚಿಕನ್ ಮತ್ತು ಸಸ್ಯ ಆಧಾರಿತ ಪ್ರೋಟೀನ್‌ಗಳ ಮೂಲವನ್ನು ಸಮಾನವಾಗಿ ಸೇರಿಸಿಕೊಳ್ಳಿ. ಹಾಗೂ ಸಾಕಷ್ಟು ಹಣ್ಣುಗಳು, ತರಕಾರಿಗಳು ಹಾಗೂ ಧಾನ್ಯಗಳನ್ನು ಸೇವಿಸುವ ಮೂಲಕ ಅವುಗಳನ್ನು ಸಮತೋಲದಲ್ಲಿರಿಸಬೇಕು ಎಂದು ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಹೇಳುತ್ತಾರೆ.

ಪ್ರತಿದಿನ ಮಾಂಸ ಸೇವಿಸುವುದರಿಂದ ಮೂಳೆಗಳ ಮೇಲಾಗುವ ಅಡ್ಡ ಪರಿಣಾಮ:

ಹೆಚ್ಚಿನ ಪ್ರೋಟೀನ್ ಆಹಾರ, ವಿಶೇಷವಾಗಿ ಪ್ರಾಣಿ ಮೂಲಗಳ ಆಹಾರವು ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗಬಹುದು ಹಾಗೂ ಮೂಳೆಯ ಆರೋಗ್ಯಕ್ಕೆ ಹಾನಿಯಾಗಬಹುದು. ಪ್ರಾಣಿ ಪ್ರೋಟೀನ್ ವಿಶೇಷವಾಗಿ ಕೆಂಪು ಮಾಂಸವನ್ನು ಸೇವಿಸುವುದರಿಂದ ಅದು ರಕ್ತದ ಆಮ್ಲೀಯತೆಗೆ ಕಾರಣವಾಗಬಹುದು. ಮತ್ತು ಇದು ಮೂಳೆಗಳಿಂದ ಕ್ಯಾಲ್ಸಿಯಂನ್ನು ತೆಗೆದುಹಾಕಬಹುದು.

ಇದನ್ನೂ ಓದಿ: Health Tips: ನವಜಾತ ಶಿಶುಗಳ ಆರೈಕೆಗೆ ಸಂಬಂಧಿಸಿದ ಸತ್ಯ, ಮಿಥ್ಯ ಅಂಶಗಳಾವುವು?

ಮಾಂಸವು ಹೆಚ್ಚಿನ ಫಾಸ್ಪರಸ್ ಕ್ಯಾಲ್ಸಿಯಂ ಅನುಪಾತವನ್ನು ಹೊಂದಿದೆ. ಇದು ಕ್ಯಾಲ್ಸಿಯಂ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಇದು ಮೂಳೆಯ ಖನಿಜೀಕರಣಕ್ಕೆ ಕಾರಣವಾಗಬಹುದು.

ಬೀನ್ಸ್, ಬೇಳೆಕಾಳುಗಳು, ತರಕಾರಿಗಳು, ಪೌಷ್ಟಿಕ ಧಾನ್ಯಗಳು ಮುಂತಾದ ಸಸ್ಯಾಧಾರಿತ ಪ್ರೋಟೀನ್‌ಗಳನ್ನು ಸೇವಿಸುವ ಮೂಲಕ ಮಾಂಸದ ಸೇವನೆಯನ್ನು ಕಡಿಮೆ ಮಾಡಬೇಕು. ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಬೇಕು.

Follow Us
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​