ವೈದ್ಯಕೀಯ ತುರ್ತು ಪರಿಸ್ಥಿತಿಯು ಯಾವ ಸಂದರ್ಭದಲ್ಲಿ ಬಂದೊದಗಬಹುದು ಎಂದು ಹೇಳುವುದು ಕಷ್ಟ. ಹಾಗಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಕೆಲವು ವೈದ್ಯಕೀಯ ಸಾಮಗ್ರಿಗಳನ್ನು ಸದಾ ಇಟ್ಟುಕೊಳ್ಳುವುದು ಒಳಿತು.
ಮನೆ, ಶಾಲೆ, ಕಚೇರಿಗಳು. ಕಾರು, ಬೈಕ್ಗಳಲ್ಲಿ ಇದು ಕಡ್ಡಾಯವಾಗಿರಬೇಕು. ಯಾಕೆಂದರೆ ಯಾವುದೇ ಸಣ್ಣಪುಟ್ಟ ಗಾಯಗಳು ಅಥವಾ ತೊಂದರೆ ಆದರೆ ಆಗ ಪ್ರಥಮ ಚಿಕಿತ್ಸೆ ನೀಡಲು ಇದು ಸಹಕಾರಿ ಆಗಲಿದೆ. ಕೆಲವೊಂದು ಬಾರಿ ಪ್ರಥಮ ಚಿಕಿತ್ಸೆ ಡಬ್ಬ ಮಾತ್ರ ಇರುವುದು. ಇದರೊಳಗೆ ಯಾವುದೇ ಸಾಮಗ್ರಿಗಳು ಇರುವುದೇ ಇಲ್ಲ.
ಯಾವುದೇ ಗಾಯವಾದ ವೇಳೆ ಬ್ಯಾಂಡೇಜ್ ಹಾಕುವ ಮೊದಲು ನೀವು ಗಾಯವನ್ನು ಶುಚಿಗೊಳಿಸಬೇಕು ಮತ್ತು ಅದಕ್ಕೆ ಆಂಟಿಸೆಪ್ಟಿಕ್ ಕ್ರೀಂ ಹಚ್ಚಬೇಕು. ಇದು ನೀವು ಮಾಡಬೇಕಾದ ಮೊದಲ ಕೆಲಸ. ಆಂಟಿಸೆಪ್ಟಿಕ್ ಕ್ರೀಮ್ ಬಳಸಿದರೆ ಆಗ ಕೀವು ನಿಲ್ಲುವುದನ್ನು ತಡೆಯಬಹುದು.
ಖಂಡಿತವಾಗಿಯೂ ಇದು ನಾವೆಲ್ಲರು ಮಾಡುವಂತಹ ತಪ್ಪು. ಯಾಕೆಂದರೆ ಪ್ರಥಮ ಚಿಕಿತ್ಸಾ ಡಬ್ಬವೆಂದರೆ ಅದರಲ್ಲಿ ಪ್ರಥಮ ಚಿಕಿತ್ಸೆಗೆ ಯಾವೆಲ್ಲಾ ಸಾಮಗ್ರಿಗಳು ಇರಬೇಕೋ ಅದು ಇರಲೇಬೇಕು.
ಬ್ಯಾಂಡೇಜ್: ಯಾವುದೇ ರೀತಿಯ ಗಾಯಗಳಾದರೂ ಗಾಳಿಗೆ ತೆರೆದುಕೊಳ್ಳಬಾರದು, ಧೂಳು ಶೇಖರಣೆಗೊಂಡು ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನೀವು ಹಲವಾರು ಗಾತ್ರಗಳಲ್ಲಿ ಸಿಗುವಂತಹ ಅಂಟುವ ಬ್ಯಾಂಡೇಜ್ನ್ನು ಬಳಸಿ. ಗಾಯಕ್ಕೆ ಬೇಕಾಗಿರುವ ಬ್ಯಾಂಡೇಜ್ ಬಳಸಿ. ಪ್ರಾಣಿಗಳಿಗಾಗಿ ಇರುವಂತಹ ಬ್ಯಾಂಡೇಜ್ನ್ನು ನೀವು ಸಾಕು ಪ್ರಾಣಿಗಳಿಗೆ ಬಳಸಬಹುದು.
ಥರ್ಮೋಮೀಟರ್: ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಕಡ್ಡಾಯವಾಗಿ ಥರ್ಮೋಮೀಟರ್ ಇರಲೇಬೇಕು. ದೇಹದ ಉಷ್ಣತೆಯು ಹೆಚ್ಚಾದ ವೇಳೆ ಅಗತ್ಯವಾಗಿ ಯಾವುದೇ ಮಾತ್ರೆ ತೆಗೆದುಕೊಳ್ಳುವ ಮೊದಲು ನೀವು ಥರ್ಮಾಮೀಟರ್ ಬಳಸಿ ಅಳೆದುಕೊಳ್ಳಿ.
ಅಲರ್ಜಿ ಮಾತ್ರೆಗಳು: ನಿಮ್ಮ ಮನೆಯಲ್ಲಿ ಅಲರ್ಜಿ ಸಮಸ್ಯೆಯವರು ಇದ್ದರೆ ಆಗ ನೀವು ಅಲರ್ಜಿ ಮಾತ್ರೆಗಳನ್ನು ಕೂಡ ಇಟ್ಟುಕೊಳ್ಳಿ. ಇದು ತುಂಬಾ ನೆರವಿಗೆ ಬರುವುದು.
ಕೆಲವು ಆಹಾರ ಅಥವಾ ವಸ್ತುಗಳಿಂದ ಜನರಿಗೆ ಅಲರ್ಜಿ ಉಂಟಾಗುವುದು. ಅಲರ್ಜಿ ಉಂಟು ಮಾಡುವಂತಹ ಆಹಾರ ಸೇವನೆ ಮಾಡಿದರೆ ಅದರಿಂದ ಭಾರೀ ಪರಿಣಾಮ ಬೀರುವುದು.
ಚಿಮುಟ: ಗಾಯದ ವೇಳೆ ಚರ್ಮದಲ್ಲಿ ಅಂಟಿಕೊಂಡಿರುವಂತಹ ಯಾವುದೇ ಬಾಹ್ಯ ವಸ್ತುವನ್ನು ತೆಗೆಯಲು ಚಿಮುಟದ ಅವಶ್ಯಕತೆ ಇದೆ. ನೀವು ಒಮ್ಮೆ ಚಿಮುಟವನ್ನು ಬಳಕೆ ಮಾಡಿದರೆ, ಬಳಿಕ ಅದನ್ನು ಬಿಸಿ ನೀರಿಗೆ ಹಾಕಿ ಕುದಿಸಿ ಮತ್ತು ಇದರ ಬಳಿಕ ಬಾಕ್ಸ್ ನಲ್ಲಿಡಿ.
ಟೇಪ್ : ರಕ್ತಸ್ರಾವವನ್ನು ತಡೆಯಲು ದೊಡ್ಡದಾದ ಟೇಪ್ ಬಳಸಿಕೊಳ್ಳಿ. ನೀವು ಆಂಟಿಸೆಪ್ಟಿಕ್ ಕ್ರೀಂ ಹಾಕಿ ಮತ್ತು ಇದಕ್ಕೆ ಪ್ಯಾಡ್ ಹಾಕಿದ ಬಳಿಕ ಟೇಪ್ ಹಾಕಿ. ಮಕ್ಕಳು ಹಾಗೂ ಪ್ರಾಣಿಗಳಿಗೆ ಇದು ಒಳ್ಳೆಯದು.
ಸ್ನಾಯು ಸೆಳೆತಕ್ಕೆ ಸ್ಪ್ರೇ : ಸಾಮಾನ್ಯವಾಗಿ ಜನರಿಗೆ ಅತಿಯಾಗಿ ಕಾಡುವಂತಹ ಸಮಸ್ಯೆಯೆಂದರೆ ತಲೆನೋವು, ಸ್ನಾಯು ನೋವು ಮತ್ತು ಬೆನ್ನುನೋವು. ನೀವು ಸ್ಪ್ರೇ ಬಳಸಿಕೊಂಡು ಸ್ನಾಯು ನೋವು ಕಡಿಮೆ ಮಾಡಬಹುದು. ಆದರೆ ಸ್ಪ್ರೇಯನ್ನು ನೀವು ಮಿತವಾಗಿ ಬಳಕೆ ಮಾಡಬೇಕು.
ಈ ಮೇಲಿನ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:20 am, Fri, 3 June 22