Microplastics: ಗರ್ಭಿಣಿಯರಲ್ಲಿ ಹೆಚ್ಚುತ್ತಿವೆ ಡೇಂಜರಸ್​​ ಮೈಕ್ರೋಪ್ಲಾಸ್ಟಿಕ್​ ಕಣಗಳು

ಜರ್ನಲ್ ಆಫ್ ಟಾಕ್ಸಿಕೊಲಾಜಿಕಲ್ ಸೈನ್ಸಸ್‌ನಲ್ಲಿ ಪ್ರಕಟವಾದ ವಿವರಗಳ ಪ್ರಕಾರ, ವಿಜ್ಞಾನಿಗಳು 62 ಗರ್ಭಿಣಿ ಮಹಿಳೆಯರ ಮಾದರಿಗಳನ್ನು ಪರಿಶೀಲಿಸಿದಾಗ, ಅವರು ಪ್ರತಿ ಗ್ರಾಂ ಅಂಗಾಂಶದಲ್ಲಿ 6.5 ರಿಂದ 790 ಮೈಕ್ರೋಗ್ರಾಂಗಳಷ್ಟು ಮೈಕ್ರೋಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ.

Microplastics: ಗರ್ಭಿಣಿಯರಲ್ಲಿ ಹೆಚ್ಚುತ್ತಿವೆ ಡೇಂಜರಸ್​​ ಮೈಕ್ರೋಪ್ಲಾಸ್ಟಿಕ್​ ಕಣಗಳು
ಗರ್ಭಿಣಿಯರಲ್ಲಿ ಹೆಚ್ಚುತ್ತಿವೆ ಡೇಂಜರಸ್​​ ಮೈಕ್ರೋಪ್ಲಾಸ್ಟಿಕ್​ ಕಣಗಳು
Image Credit source: Pinterest

Updated on: Feb 24, 2024 | 5:10 PM

ಪ್ರತಿಯೊಬ್ಬರು ಕೂಡ ತಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಸಿಯೇ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಪ್ರತಿಯೊಂದು ಕೆಲಸದಲ್ಲೂ ಪ್ಲಾಸ್ಟಿಕ್ ಬಳಕೆ ಆಗುತ್ತಲೆ ಇರುತ್ತದೆ. ನೀರಿನ ಬಾಟಲಿ, ಟೀ ಕಪ್‌, ಟೀ ಬ್ಯಾಗ್‌,ಇನ್ಸ್ಟೆಂಟ್​​ ಫುಡ್​, ಕಾಸ್ಮೆಟಿಕ್ ಉತ್ಪನ್ನಗಳು ಇತ್ಯಾದಿಗಳಲ್ಲಿಯೂ ಪ್ಲಾಸ್ಟಿಕ್ ಕಂಡುಬರುತ್ತದೆ. ಇವುಗಳಲ್ಲಿ ಮಾನವನ ದೇಹಕ್ಕೆ ಹಾನಿಕಾರಕವಾದ ಮೈಕ್ರೋಪ್ಲಾಸ್ಟಿಕ್ ಗಳಿವೆ. ಆದರೆ ಇತ್ತೀಚೆಗಷ್ಟೇ ವಿಜ್ಞಾನಿಗಳು ಆಘಾತಕಾರಿ ವಿಷಯವನ್ನು ಹೊರಹಾಕಿದ್ದಾರೆ. ಗರ್ಭಿಣಿಯರಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳು ಹೆಚ್ಚಾಗುತ್ತಿವೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನ್ಯೂ ಮೆಕ್ಸಿಕೋ ಹೆಲ್ತ್ ಸೈನ್ಸಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೊಸ ಸಾಧನದ ಮೂಲಕ ಗರ್ಭಿಣಿಯರ ಜರಾಯುಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಅವಶೇಷಗಳನ್ನು ಪತ್ತೆಹಚ್ಚಿರುವುದನ್ನು ಬಹಿರಂಗಪಡಿಸಿದ್ದಾರೆ.

ಜರ್ನಲ್ ಆಫ್ ಟಾಕ್ಸಿಕೊಲಾಜಿಕಲ್ ಸೈನ್ಸಸ್‌ನಲ್ಲಿ ಪ್ರಕಟವಾದ ವಿವರಗಳ ಪ್ರಕಾರ, ವಿಜ್ಞಾನಿಗಳು 62 ಗರ್ಭಿಣಿ ಮಹಿಳೆಯರ ಮಾದರಿಗಳನ್ನು ಪರಿಶೀಲಿಸಿದಾಗ, ಅವರು ಪ್ರತಿ ಗ್ರಾಂ ಅಂಗಾಂಶದಲ್ಲಿ 6.5 ರಿಂದ 790 ಮೈಕ್ರೋಗ್ರಾಂಗಳಷ್ಟು ಮೈಕ್ರೋಪ್ಲಾಸ್ಟಿಕ್ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಮಕ್ಕಳ ಮೇಲಿನ ಒತ್ತಡವೇ ಹೃದಯಾಘಾತಕ್ಕೆ ಕಾರಣವಾಗುತ್ತಿದೆಯೇ? ಹೆತ್ತವರು ಈ ಬಗ್ಗೆ ಗಮನ ಕೊಡಿ

ಇಂದು ಪರಿಸರದಲ್ಲಿ ಕಂಡುಬರುವ ಮೈಕ್ರೋಪ್ಲಾಸ್ಟಿಕ್ ಸುಮಾರು 40 ರಿಂದ 50 ವರ್ಷಗಳಷ್ಟು ಹಳೆಯದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದಾಗ್ಯೂ, ನಮ್ಮ ದೇಹದಲ್ಲಿ ಮೈಕ್ರೊಪ್ಲಾಸ್ಟಿಕ್‌ಗಳ ಹೆಚ್ಚುತ್ತಿರುವ ಸಾಂದ್ರತೆಯು ಉರಿಯೂತದ ಕರುಳಿನ ಕಾಯಿಲೆ, ಕರುಳಿನ ಕ್ಯಾನ್ಸರ್ ಮತ್ತು ಕಡಿಮೆಯಾದ ವೀರ್ಯದಂತಹ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿರಬಹುದು ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಮ್ಯಾಥ್ಯೂ ಕ್ಯಾಂಪೆನ್ ಹೇಳಿದ್ದಾರೆ. ಪ್ರಪಂಚದಾದ್ಯಂತ ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಇದನ್ನು ತಡೆಯದಿದ್ದಲ್ಲಿ ಪರಿಸರದಲ್ಲಿ ಪ್ಲಾಸ್ಟಿಕ್‌ ಹೆಚ್ಚುವ ಅಪಾಯ ಹೆಚ್ಚಲಿದೆ ಎಂದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us