Monsoon: ಮಳೆಗಾಲದಲ್ಲಿ ಯಾವಾಗಲೂ ನಿದ್ರೆಯ ಮಂಪರಿನಲ್ಲಿರುತ್ತೀರಾ? ಇದಕ್ಕೆ ಕಾರಣವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 07, 2023 | 12:32 PM

ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಏಳಲು ಹೆಚ್ಚುವರಿ ಪ್ರಯತ್ನ ಪಡಬೇಕೇ? ಹಾಗಾದರೆ ಇದರಲ್ಲಿ ನಿಮ್ಮ ತಪ್ಪಿಲ್ಲ. ಹೊರಗಿನ ವಾತಾವರಣ ನಿಮ್ಮನ್ನು ಹೆಚ್ಚು ನಿದ್ರೆ ಮಾಡುವಲ್ಲಿ ಪ್ರೇರೇಪಿಸುತ್ತಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

Monsoon: ಮಳೆಗಾಲದಲ್ಲಿ ಯಾವಾಗಲೂ ನಿದ್ರೆಯ ಮಂಪರಿನಲ್ಲಿರುತ್ತೀರಾ? ಇದಕ್ಕೆ ಕಾರಣವೇನು?
ಸಾಂದರ್ಭಿಕ ಚಿತ್ರ
Follow us on

ನೀವು ಇತ್ತೀಚೆಗೆ ಎಲ್ಲೆಂದರಲ್ಲಿ ನಿದ್ರೆ ಮಾಡುತ್ತಿದ್ದೀರಾ? ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳಲು ಹೆಚ್ಚುವರಿ ಪ್ರಯತ್ನ ಪಡಬೇಕಾ? ಹಾಗಾದರೆ ಇದರಲ್ಲಿ ನಿಮ್ಮ ತಪ್ಪಿಲ್ಲ. ಹೊರಗಿನ ವಾತಾವರಣ ನಿಮ್ಮನ್ನು ಹೆಚ್ಚು ನಿದ್ರೆ ಮಾಡುವಲ್ಲಿ ಪ್ರೇರೇಪಿಸುತ್ತಿದೆ. ಮಾನ್ಸೂನ್ ಆರಂಭವಾಗಿರುವುದರಿಂದ ಅದರ ಲಯ ಮತ್ತು ತಂಪಾದ ಹವಾಮಾನಕ್ಕೆ ಮನಸೋತು, ದಿನವಿಡೀ ಬೆಚ್ಚಗೆ ಕಂಬಳಿ ಹೊದ್ದು ಮಲಗಲು ಬಯಸುವುದು ಸಹಜ. ಆದರೆ ಇದಕ್ಕಿಂತ ಮಿಗಿಲಾಗಿ ನಿಮ್ಮ ಆಹಾರ, ನಿದ್ರೆಗೆ ಸಾಕಷ್ಟು ಸಂಬಂಧ ಹೊಂದಿದೆ. ನೀವು ಪ್ರತೀದಿನ ಏನು ತಿನ್ನುತ್ತೀರೋ ಅದು ನಿಮ್ಮ ದೇಹದ ಶಕ್ತಿಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಇದು ನಿಮ್ಮನ್ನು ದಿನವಿಡೀ ತಾಜಾತನದಿಂದಿರಲು ಸಹಾಯ ಮಾಡುತ್ತದೆ. ಹಾಗಾದರೆ ಹಗಲಿನಲ್ಲಿ ಪದೇ ಪದೇ ನಿದ್ರೆ ಬರದಿರಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ.

ಮಾನ್ಸೂನ್ ಸಮಯದಲ್ಲಿ ಆಲಸ್ಯ ಅತೀ ಯಾಗುವುದು ಏಕೆ?

ಮಾನ್ಸೂನ್​​ನೊಂದಿಗೆ, ನಮ್ಮ ಆಹಾರವು ಹಠಾತ್ ಬದಲಾವಣೆಯಾಗುತ್ತದೆ. ನಾವು ಹಿಂದೆಂದಿಗಿಂತಲೂ ಹೆಚ್ಚು ಕರಿದ ಆಹಾರಗಳನ್ನು ಬಯಸುತ್ತೇವೆ ಮತ್ತು ಆಗಾಗ ಪಕೋಡಾ, ಸಮೋಸಾ ಮತ್ತು ಬಜ್ಜಿಗಳನ್ನು ತಿನ್ನಲು ಇಷ್ಟ ಪಡುತ್ತೇವೆ. ವಾಸ್ತವದಲ್ಲಿ ಈ ಕ್ಯಾಲೊರಿ, ವಿಧ ವಿಧವಾದ ಭಕ್ಷ್ಯಗಳು ವರ್ಷದ ಬೇರೆ ಸಮಯದಲ್ಲಿ ಅನೇಕರಿಗೆ ಆರಾಮದಾಯಕ ಆಹಾರವಾಗುತ್ತವೆ. ಆದರೆ ಮಳೆಗಾಲದಲ್ಲಿ ಪಕೋಡಾದಂತ ಆಹಾರಗಳು ನಿಮ್ಮನ್ನು ಆಲಸ್ಯಕ್ಕೆ ದುಡಿಬಿಡುತ್ತವೆ. ಇವೆಲ್ಲವನ್ನೂ ನೀವು ಅರಿತುಕೊಳ್ಳಲು ವಿಫಲರಾಗುವ ಕಾರಣ, ಮಳೆಗಾಲದಲ್ಲಿ ಅತೀಯಾಗಿ ನಿದ್ದೆ ನಿಮ್ಮನ್ನು ಆಕ್ರಮಿಸಿಕೊಳ್ಳುತ್ತದೆ.

ಪ್ರಪಂಚದಾದ್ಯಂತದ ಅನೇಕ ಅಧ್ಯಯನಗಳ ಪ್ರಕಾರ, ಕರಿದ ಆಹಾರಗಳಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್​​ಗಳು ಹೆಚ್ಚಾಗಿರುತ್ತವೆ, ಮತ್ತು ಅವುಗಳನ್ನು ಅತಿಯಾಗಿ ಸೇವಿಸುವುದರಿಂದ ನಿಮಗೆ ದಿನಪೂರ್ತಿ ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡಬಹುದು, ಇದು ದೇಹದಲ್ಲಿ ಶಕ್ತಿಯ ಕೊರತೆಗೆ ಕಾರಣವಾಗಬಹುದು. ಪರಿಣಾಮವಾಗಿ, ನೀವು ಯಾವಾಗಲೂ ದಣಿದ, ಸೋಮಾರಿ ಮತ್ತು ನಿದ್ರೆಯ ಮಂಪರಿನಲ್ಲಿರುತ್ತೀರಿ. ಇದಕ್ಕೆ ಏಕೈಕ ಸಂಭಾವ್ಯ ಪರಿಹಾರವೆಂದರೆ ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಹಾಗಾಗಿ ಋತುವಿನಲ್ಲಿ ನಿಯಮಿತ ಅಂತರಗಳಲ್ಲಿ ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಲು ತಜ್ಞರು ಯಾವಾಗಲೂ ಸಲಹೆ ನೀಡುತ್ತಾರೆ. ಉದಾಹರಣೆಗೆ, ಮಾನ್ಸೂನ್ ಸಮಯದಲ್ಲಿ, ಆರೋಗ್ಯಕರವಾಗಿ, ಶಕ್ತಿಯುತವಾಗಿರಲು ನೀರು ಮತ್ತು ಕಾಲೋಚಿತ ಆಹಾರವನ್ನು ನಿಮ್ಮ ದೇಹಕ್ಕೆ ಲೋಡ್ ಮಾಡಿಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: Monsoon Hacks: ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತೀರಾ? ಈ ಅಪಾಯ ಖಂಡಿತ, ಇಲ್ಲಿದೆ ತಜ್ಞರ ಸಲಹೆ

ಮಾನ್ಸೂನ್​​ನಲ್ಲಿ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ 5 ಆಹಾರಗಳು:

1. ಮಸಾಲಾ ಚಾಯ್: ಮಸಾಲಾ ಚಹಾ ಮಳೆಯೊಂದಿಗೆ ಯುಗಾಂತರಗಳಿಂದ ಸಂಬಂಧ ಹೊಂದಿವೆ. ಆದರೆ ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ಪಾನೀಯಕ್ಕೆ ಸೇರಿಸಲಾದ ಮಸಾಲಾಗಳಲ್ಲಿ ಸಾಮಾನ್ಯವಾಗಿ ಲವಂಗ, ದಾಲ್ಚಿನ್ನಿ, ಏಲಕ್ಕಿ ಮತ್ತು ಶುಂಠಿಯನ್ನು ಒಳಗೊಂಡಿರುತ್ತದೆ. ಅವುಗಳಲ್ಲಿ ಪ್ರತಿಯೊಂದರಲ್ಲಿಯೂ ಪೋಷಕಾಂಶಗಳು ತುಂಬಿರುತ್ತದೆ, ಇದು ಪೋಷಣೆ ಮತ್ತು ಕಾಲೋಚಿತ ರೋಗಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಚಹಾವು ಪ್ರತಿ ಬಾರಿಯೂ ತಾಜಾತನವನ್ನು ಮರಳಿ ಪಡೆಯಲು ಮೊದಲ ಸಾಲಿನಲ್ಲಿರುತ್ತದೆ.

2. ಸೂಪ್: ಈ ಹವಾಮಾನವು ಬೆಚ್ಚಗಿನ ಮತ್ತು ಹಿತವಾದ ಅನುಭವ ನೀಡುತ್ತದೆ, ಹಾಗಾಗಿ ಇಂತಹ ಸಂದರ್ಭದಲ್ಲಿ ನಿಮ್ಮ ಆಹಾರದಲ್ಲಿ ಮುಖ್ಯವಾಗಿ ಸೇರಿಸಬೇಕಾದದ್ದು ಒಂದು ಬೌಲ್ ಸೂಪ್. ಇದು ಕೇವಲ ತೃಪ್ತಿಕರವಷ್ಟೇ ಅಲ್ಲ ಬದಲಾಗಿ ನಿಮ್ಮನ್ನು ಪೋಷಿಸಲು ಮತ್ತು ಬಲಪಡಿಸಲು ಉತ್ತಮ ಪ್ರಮಾಣದ ದ್ರವಗಳು ಮತ್ತು ಅಗತ್ಯ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.

3. ಖಿಚಡಿ: ದಾಲ್ ಪೋಷಕಾಂಶಗಳ ಭಂಡಾರವಾಗಿದೆ, ಇದರ ಜೊತೆಗೆ ಅಕ್ಕಿ, ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ, ನಿಮ್ಮನ್ನು ಶಕ್ತಿಯುತವಾಗಿಡಲು ಉತ್ತಮ ಕಾರ್ಬೋಹೈಡ್ರೇಟ್ಗಳನ್ನು ಒದಗಿಸುತ್ತದೆ. ಮತ್ತು ಒಟ್ಟಿಗೆ ಬೆರೆಸಿದಾಗ, ಒಳ್ಳೆ ಖಾದ್ಯವೂ ತಯಾರಾಗುತ್ತದೆ. ಇದಲ್ಲದೆ, ಖಿಚಡಿ ತಯಾರಿಸುವುದು ಸಹ ಸುಲಭ. ಆದ್ದರಿಂದ, ಈ ಆರಾಮದಾಯಕ ಆಹಾರ ತಯಾರಿಸಿಕೊಂಡು ನಿಮ್ಮ ಮಾನ್ಸೂನ್ ಆಲಸ್ಯವನ್ನು ದೂರಮಾಡಬಹುದು.

4. ಕಷಾಯ ಅಥವಾ ಗಿಡಮೂಲಿಕೆಗಳ ಪಾನೀಯ: ಅನಾದಿ ಕಾಲದಿಂದಲೂ ಕಷಾಯಗಳು ಸಾಂಪ್ರದಾಯಿಕ ಔಷಧದ ಒಂದು ಭಾಗವಾಗಿದೆ. ವಿವಿಧ ಗಿಡಮೂಲಿಕೆಗಳು ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಿಸಲಾದ ಕಷಾಯಗಳು ರೋಗನಿರೋಧಕ ಶಕ್ತಿಯನ್ನು ಉಳಿಸಿಕೊಳ್ಳಲು ಮತ್ತು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ ಮತ್ತು ಕಾಲೋಚಿತ ಜ್ವರವನ್ನು ತಡೆಯಲು ಸಹಾಯ ಮಾಡುತ್ತದೆ.

5. ಪ್ರೋಬಯಾಟಿಕ್ಸ್: ನಮ್ಮ ಶಕ್ತಿಯ ಮಟ್ಟವು ಕರುಳಿನ ಆರೋಗ್ಯದೊಂದಿಗೆ ಸಾಕಷ್ಟು ಸಂಬಂಧ ಹೊಂದಿದೆ. ಸರಿಯಾದ ಜೀರ್ಣಕ್ರಿಯೆ ಮತ್ತು ಚಯಾಪಚಯವು ದಿನವಿಡೀ ಆರೋಗ್ಯಕರ, ಸಂತೋಷ ಮತ್ತು ಸಕ್ರಿಯವಾಗಿರಲು ನಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ಗ್ಯಾಸ್, ಆಮ್ಲೀಯತೆ ಮತ್ತು ಕರುಳಿನ ಸಮಸ್ಯೆಗಳಂತಹ ಮಾನ್ಸೂನ್- ಸಂಬಂಧಿತ ಕರುಳಿನ ಸಮಸ್ಯೆಗಳನ್ನು ದೂರವಿರಿಸಲು, ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಬಯಾಟಿಕ್​​ಗಳನ್ನು ಸೇರಿಸಲು ತಜ್ಞರು ಸೂಚಿಸುತ್ತಾರೆ. ಪ್ರೋಬಯಾಟಿಕ್​ಗಳು ದೇಹದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾದ ಉತ್ಪಾದನೆಗೆ ಕಾರಣವಾಗುತ್ತವೆ.

ಮಾನ್ಸೂನ್ ಸಮಯದಲ್ಲಿ ನಿಮ್ಮ ನೆಚ್ಚಿನ ಕರಿದ ಆಹಾರಗಳನ್ನು ನೀವು ಸಂಪೂರ್ಣವಾಗಿ ತ್ಯಜಿಸಬೇಕು ಎಂಬುದು ಇದರ ಅರ್ಥವಲ್ಲ. ಪೌಷ್ಟಿಕ ಆಹಾರ ಮತ್ತು ಭೋಗಗಳ ನಡುವೆ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ತಜ್ಞರು ಸೂಚಿಸುತ್ತಾರೆ. ಯಾವಾಗಲೂ ನೆನಪಿಡಿ, ಎಲ್ಲವನ್ನೂ ಅತಿಯಾಗಿ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ