Mood Swings: ಭಾವನೆಗಳ ಸುನಾಮಿ ಮೂಡ್ಸ್ವಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?
ಮೂಡ್ಸ್ವಿಂಗ್ ಅನ್ನು ಭಾವನೆಗಳ ಸುನಾಮಿ ಎಂದೇ ಹೇಳಬಹುದು. ಕೆಲವೊಮ್ಮೆ ನೀವು ಸಂತೋಷವಾಗಿರುತ್ತೀರಿ, ಕೆಲವೇ ಸೆಕೆಂಡುಗಳಲ್ಲಿ ಸಂತೋಷ ಮಾಯವಾಗಿ ಕೋಪವು ನಿಮ್ಮ ಮುಖವೇರುತ್ತದೆ.
ಮೂಡ್ಸ್ವಿಂಗ್ ಅನ್ನು ಭಾವನೆಗಳ ಸುನಾಮಿ ಎಂದೇ ಹೇಳಬಹುದು. ಕೆಲವೊಮ್ಮೆ ನೀವು ಸಂತೋಷವಾಗಿರುತ್ತೀರಿ, ಕೆಲವೇ ಸೆಕೆಂಡುಗಳಲ್ಲಿ ಸಂತೋಷ ಮಾಯವಾಗಿ ಕೋಪವು ನಿಮ್ಮ ಮುಖವೇರುತ್ತದೆ. ನಿಮ್ಮ ಆಸುಪಾಸಿನಲ್ಲಿರುವ ಜನರು ಇವರು ಹುಚ್ಚರಿರಬೇಕು ಎಂದುಕೊಳ್ಳುವಷ್ಟು ಬೇಗ ಭಾವನೆಗಳು ಬದಲಾಗುತ್ತವೆ ಅದನ್ನು ಮೂಡ್ಸ್ವಿಂಗ್ ಎಂದು ಕರೆಯುತ್ತೇವೆ.
ಮೂಡ್ಸ್ವಿಂಗ್ಸ್ಗೆ ಕಾರಣಗಳೇನು ಎಂಬ ಕುರಿತು ಮಾಹಿತಿ ಇಲ್ಲಿದೆ ಪರಿಸರ: ನಿಮ್ಮ ಭಾವನೆಗಳು ನೀವು ಯಾವ ಪರಿಸರದಲ್ಲಿದ್ದೀರಿ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ. ಪಾರ್ಟಿ, ಕಚೇರಿಯ ಒತ್ತಡ ಇವೆಲ್ಲವೂ ನಿಮ್ಮ ಮಾನಸಿಕ ಸ್ಥಿತಿ ಮೇಲೆ ಪರಿಣಾಮವನ್ನು ಬೀರುತ್ತದೆ.
ಹಾರ್ಮೋನ್ಗಳು: ಹಾರ್ಮೋನ್ಗಳ ಅಸಮತೋಲನವು ಕೂಡ ಮೂಡ್ಸ್ವಿಂಗ್ಸ್ಗೆ ಒಂದು ಕಾರಣ, ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಕೋಪ, ಅಳು ಎಲ್ಲವೂ ಒಮ್ಮಲೆ ಬರುತ್ತದೆ.
ಡಯೆಟ್: ನಾವು ಯಾವ ರೀತಿಯ ಆಹಾರಗಳನ್ನು ಸೇವಿಸುತ್ತೇವೆ ಹಾಗೂ ಯಾವ ಸಮಯದಲ್ಲಿ ಸೇವಿಸುತ್ತೇವೆ ಎಂಬುದು ಮುಖ್ಯವಾಗಿರುತ್ತದೆ.
ಮಾನಸಿಕ ಒತ್ತಡ: ನೀವು ಸಾಕಷ್ಟು ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರೆ ಪದೇ ಪದೇ ಮೂಡ್ಸ್ವಿಂಗ್ಸ್ ಉಂಟಾಗುತ್ತದೆ. ನಮ್ಮಲ್ಲಿ ಅನೇಕರು ಕೆಲವು ಸೆಕೆಂಡುಗಳ ಕಾಲ ಮೂಡ್ ಸ್ವಿಂಗ್ ಸಮಸ್ಯೆ ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯು ಯಾವುದೋ ಕಾರಣಕ್ಕಾಗಿ ಒಂದು ಕ್ಷಣದಲ್ಲಿ ನಕ್ಕರೆ, ಸ್ವಲ್ಪ ಸಮಯದ ನಂತರ ಆತ ದುಃಖ ಅಥವಾ ಕೋಪದಿಂದ ಇರುವುದನ್ನು ನೋಡುತ್ತೀರಿ.
ಇದು ಜೈವಿಕ ಅಸ್ವಸ್ಥತೆಯಾಗಿದೆ. ಮೂಡ್ ಸ್ವಿಂಗ್ ಗೆ ಯಾವುದೇ ಸ್ಪಷ್ಟ ಕಾರಣವಿಲ್ಲ. ಆದರೆ ಹಾರ್ಮೋನುಗಳು ಮತ್ತು ನರ ಇದಕ್ಕೆ ಕಾರಣ ಎಂದು ನಂಬಲಾಗಿದೆ. ಮನಸ್ಥಿತಿಯ ಭಯವನ್ನು ಪ್ರಚೋದಿಸುವ ಇತರ ಅಂಶಗಳಲ್ಲಿ ನರವ್ಯೂಹದ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ರೋಗಗಳು ಮತ್ತು ಅಸ್ವಸ್ಥತೆಗಳು ಸೇರಿವೆ.
ಮೂಡ್ ಸ್ವಿಂಗ್‌ನಲ್ಲಿ, ಒಬ್ಬ ವ್ಯಕ್ತಿ ತನ್ನ ಕೋಪವನ್ನು ಬೇರೊಬ್ಬರ ಮೇಲೆ ಹೊರಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಕೆಲವರು ಮನಸ್ಥಿತಿಯ ಪರಿಸ್ಥಿತಿಯನ್ನು ಸೈಕೋಗೆ ಸ್ವಿಂಗ್ ಎಂದು ಕರೆಯುತ್ತಾರೆ. ಆದ್ದರಿಂದ ನೀವು ಅದರ ರೋಗ ಲಕ್ಷಣಗಳನ್ನು ಗುರುತಿಸಿ ಮಾನಸಿಕ ಅರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು.
ಮೂಡ್ಸ್ವಿಂಗ್ಸ್ನ ಪರಿಣಾಮಗಳು ಮೂಡ್ಸ್ವಿಂಗ್ಸ್ ಅನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳಬೇಡಿ, ದೀರ್ಘಕಾಲದವರೆಗೆ ಇದೇ ರೀತಿ ಮುಮದುವರೆದರೆ ಮಾನಸಿಕ ಖಿನ್ನತೆಗೆ ಉಂಟಾಗಬಹುದು.
ಮೂಡ್ ಸ್ವಿಂಗ್ ಎಂದರೆ ಮಿಶ್ರ ಭಾವನೆಗಳನ್ನು ಅನುಭವಿಸುವುದು. ಜನರು ಈ ಮನಸ್ಥಿತಿಯನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ, ಆದರೆ ಕೆಲವೊಮ್ಮೆ ಮನಸ್ಥಿತಿಯ ಬದಲಾವಣೆಗಳು ಅಪಾಯವನ್ನುಂಟು ಮಾಡಬಹುದು.
ಇದರಲ್ಲಿ ಒತ್ತಡ ಮತ್ತು ಆತಂಕ, ಖಿನ್ನತೆ, ನಿದ್ರೆಯ ಕೊರತೆ, ಅನಾರೋಗ್ಯಕರ ಆಹಾರ, ಜೀವನಶೈಲಿ, ಮಾದಕ ವಸ್ತು ಬಳಕೆ ಇತ್ಯಾದಿಗಳಿವೆ. ಈ ಸಮಸ್ಯೆಯನ್ನು ನಿವಾರಣೆ ಮಾಡಲು ಯಾವುದೇ ಸುಲಭ ಸಾಧನಗಳಿಲ್ಲ.