Nipah Virus: ವಯನಾಡಿನ ಬಾವಲಿಗಳಲ್ಲಿ ನಿಪಾ ವೈರಸ್ ಇರುವುದು ದೃಢ; ಕೇರಳದಲ್ಲಿ ಕಟ್ಟೆಚ್ಚರ

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರಕಾರ, ಐಸಿಎಂಆರ್ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಮತ್ತು ಮಾನತವಾಡಿಯಿಂದ ಸಂಗ್ರಹಿಸಲಾದ ಬಾವಲಿಗಳ ಮಾದರಿಗಳಲ್ಲಿ ನಿಪಾ ವೈರಸ್‌ ಇರುವುದು ದೃಢಪಟ್ಟಿದೆ.

Nipah Virus: ವಯನಾಡಿನ ಬಾವಲಿಗಳಲ್ಲಿ ನಿಪಾ ವೈರಸ್ ಇರುವುದು ದೃಢ; ಕೇರಳದಲ್ಲಿ ಕಟ್ಟೆಚ್ಚರ
ನಿಪಾ ವೈರಸ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 26, 2023 | 1:58 PM

ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಗ್ರಹಿಸಿದ ಬಾವಲಿಗಳ ಮಾದರಿಯಲ್ಲಿ ನಿಪಾ ವೈರಸ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ತಿಳಿಸಿದೆ. ಬಾವಲಿಗಳ ದೇಹದಲ್ಲಿ ಮಾರಣಾಂತಿಕ ನಿಪಾ ವೈರಸ್ ಇರುವಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರಕಾರ, ಐಸಿಎಂಆರ್ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಮತ್ತು ಮಾನತವಾಡಿಯಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ನಿಪಾ ವೈರಸ್‌ ಇರುವುದು ದೃಢಪಟ್ಟಿದೆ.

ಕೇರಳ ರಾಜ್ಯದಲ್ಲಿ ಆಗಾಗ ನಿಪಾ ವೈರಸ್ ಪತ್ತೆಯಾಗುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ನಿಪಾ ವೈರಸ್ ಏಕಾಏಕಿ ಪತ್ತೆಯಾಗುವ ಪ್ರದೇಶವನ್ನು ಕಂಡುಹಿಡಿಯಲು ICMR ರಾಜ್ಯಾದ್ಯಂತ ಅಧ್ಯಯನವನ್ನು ನಡೆಸುತ್ತಿದೆ. ನಿಪಾ ವೈರಸ್​ನಿಂದ ಸಾವನ್ನಪ್ಪುವವರ ಪ್ರಮಾಣ ಶೇ. 70ರಿಂದ 90ರಷ್ಟು ಎಂದು ಪರಿಗಣಿಸಲಾಗಿದೆ. ಆದರೆ, ಕೇರಳದಲ್ಲಿ ಸಾವಿನ ಪ್ರಮಾಣ ಕೇವಲ ಶೇ. 33.33ರಷ್ಟಿದೆ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಸೀಸ್ ಎಕ್ಸ್​ ಎದುರಿಸಲು ಸಿದ್ಧವಾಗುತ್ತಿದೆ ಭಾರತ; ಏನಿದು ಹೊಸ ರೋಗ?

ನಿಪಾ ಸೋಂಕಿನ ಹರಡುವಿಕೆಯನ್ನು ಸಹ ನಿಯಂತ್ರಿಸಬಹುದು. ಸೋಂಕಿನ ಆರಂಭಿಕ ಪತ್ತೆಯಿಂದ ಇದು ಸಾಧ್ಯವಾಗುತ್ತದೆ. ನಿಪಾ ಸಂಶೋಧನಾ ಕೇಂದ್ರವು ಗುರುವಾರದಿಂದ ಕೋಳಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.

ನಿಪಾ ವೈರಸ್​ ಲಕ್ಷಣಗಳೇನು?:

ಸುಂಗೈ ನಿಪಾ ಎಂಬ ಮಲೇಷಿಯಾದ ಹಳ್ಳಿಯಿಂದ ಹುಟ್ಟಿಕೊಂಡ ನಿಪಾ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದೆ. ಇದು ಸೋಂಕಿತ ಆಹಾರ, ಸೋಂಕಿತರೊಂದಿಗೆ ನೇರ ಸಂವಹನ ಅಥವಾ ಹಣ್ಣಿನ ಬಾವಲಿಗಳ ಸಂಪರ್ಕದ ಮೂಲಕವೂ ಹರಡಬಹುದು. ನಿಪಾದ ಸಾಮಾನ್ಯ ಲಕ್ಷಣಗಳು ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ ಮತ್ತು ವಾಕರಿಕೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಈ ವೈರಸ್ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಮಾರಕವಾಗಿದೆ. ಇದು ಹಂದಿಗಳಂತಹ ಪ್ರಾಣಿಗಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಮಾನವರಿಗೆ ಮತ್ತು ಪ್ರಾಣಿಗಳಿಗೆ ಈ ಸೋಂಕು ತಗುಲಿದರೆ ಯಾವುದೇ ಲಸಿಕೆ ಮತ್ತು ಚಿಕಿತ್ಸೆ ಇಲ್ಲ.

ಇದನ್ನೂ ಓದಿ: Nipah Virus: ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ನಿಫಾ ವೈರಸ್‌ನಿಂದ ಇಬ್ಬರು ಸಾವು, ಸಹಾಯಕ್ಕೆ ಧಾವಿಸಿದ ಕೇಂದ್ರ ಆರೋಗ್ಯ ತಂಡ

ನಿಪಾ ವೈರಸ್ ಸೋಂಕಿಗೆ ಒಳಗಾದ ನಂತರ, ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲು ಸಾಮಾನ್ಯವಾಗಿ 5ರಿಂದ 14 ದಿನಗಳನ್ನು ತೆಗೆದುಕೊಳ್ಳುತ್ತದೆ. ನಿಪಾ ವೈರಸ್ ಸೋಂಕಿನ ಲಕ್ಷಣಗಳು ಹೀಗಿವೆ.

– ತೀವ್ರವಾದ ಉಸಿರಾಟದ ಸೋಂಕು

– ಜ್ವರ

– ಸ್ನಾಯು ನೋವು

– ತಲೆನೋವು

– ಗಂಟಲು ನೋವು

– ವಾಕರಿಕೆ/ ವಾಂತಿ

– ತಲೆತಿರುಗುವಿಕೆ

– ತೂಕಡಿಕೆ

– ಮಾನಸಿಕ ಗೊಂದಲ

– ನ್ಯುಮೋನಿಯಾ

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ