ಇನ್ನೂ ಕೆಲ ಸಮಯ ಕೊರೊನಾ ಸೋಂಕಿನೊಂದಿಗೆ ಬದುಕುವುದು ಕಲಿಯಬೇಕಿದೆ: ದಕ್ಷಿಣ ಆಫ್ರಿಕಾದ ತಜ್ಞ ವೈದ್ಯೆ ಆಂಜೆಲಿಕ್ ಕೊಯೆಟ್ಜಿ

ಈ ಸಂದರ್ಶನದಲ್ಲಿ ಅವರು ಬೂಸ್ಟರ್​ ಡೋಸ್​ಗಳ ಮಿತಿ ಮತ್ತು ಕೊವಿಡ್ ನಿರ್ವಹಣೆಯ ದೀರ್ಘಾವಧಿ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಕೆಲ ಸಮಯ ಕೊರೊನಾ ಸೋಂಕಿನೊಂದಿಗೆ ಬದುಕುವುದು ಕಲಿಯಬೇಕಿದೆ: ದಕ್ಷಿಣ ಆಫ್ರಿಕಾದ ತಜ್ಞ ವೈದ್ಯೆ ಆಂಜೆಲಿಕ್ ಕೊಯೆಟ್ಜಿ
ದಕ್ಷಿಣ ಆಫ್ರಿಕಾದ ತಜ್ಞ ವೈದ್ಯೆ ಆಂಜೆಲಿಕ್ ಕೊಯೆಟ್ಜಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 07, 2022 | 6:22 PM

ದಕ್ಷಿಣ ಆಫ್ರಿಕಾದ ಆರೋಗ್ಯ ತಜ್ಞೆ ಅಂಜೆಲಿಕ್ ಕೊಯೆಟ್ಜಿ ಪ್ರಿಟೋರಿಯಾದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಸ್ತುತ ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘದ ಅಧ್ಯಕ್ಷರಾಗಿದ್ದಾರೆ (ಇದು ವೈದ್ಯರಿಗಾಗಿ ಕಾರ್ಯನಿರ್ವಹಿಸುತ್ತಿರುವ ಲಾಭದ ಅಪೇಕ್ಷೆಯಿಲ್ಲದ ಸಂಸ್ಥೆಯಾಗಿದೆ). ನವೆಂಬರ್ 2021 ರಲ್ಲಿ, ಕೋವಿಡ್-19ರ SARS-CoV-2 ಒಮಿಕ್ರಾನ್ ರೂಪಾಂತರದ ರೋಗಿಗಳು ಅನುಭವಿಸಿದ ವಿಭಿನ್ನ ಕ್ಲಿನಿಕಲ್ ರೋಗಲಕ್ಷಣಗಳನ್ನು ಗುರುತಿಸಿ, ಹೊಸ ರೂಪಾಂತರದ ಬಗ್ಗೆ ಜಾಗೃತಿ ಮೂಡಿಸಿದ ಮೊದಲ ವೈದ್ಯೆ ಕೊಯೆಜ್ಟಿ. ಹೀಗಾಗಿಯೇ ಇವರ ಮಾತುಗಳಿಗೆ ವಿಶೇಷ ಪ್ರಾಮುಖ್ಯತೆ ಬಂದಿದೆ. ಈ ಸಂದರ್ಶನದಲ್ಲಿ ಅವರು ಬೋಸ್ಟರ್​ ಡೋಸ್​ಗಳ ಮಿತಿ ಮತ್ತು ಕೊವಿಡ್ ನಿರ್ವಹಣೆಯ ದೀರ್ಘಾವಧಿ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಶ್ನೆ: ಓಮಿಕ್ರಾನ್‌ನ ದಕ್ಷಿಣ ಆಫ್ರಿಕಾದ ಅನುಭವ ಏನು? ಉ: ಇಂದು ನಿಮ್ಮ ಅನುಭವ ಹೇಗಿದೆಯೋ, ಹಿಂದೆ ನಮ್ಮ ಅನುಭವವೂ ಅದೇ ಅಗಿತ್ತು. ವೈರಸ್ ಸೋಂಕಿತರ ಸಂಖ್ಯೆ ಬೇಗನೆ ದ್ವಿಗುಣಗೊಂಡಿತು. ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ತಪಾಸಣೆಗೆ ಒಳಪಡಿಸಲು ನಾವು ಪ್ರೋತ್ಸಾಹಿಸಿದೆವು.. ಸೋಂಕು ಹೊಂದಿರುವವರನ್ನು ಗುರುತಿಸಿ, ಪ್ರತ್ಯೇಕಿಸಲು ಆಗಾಗ್ಗೆ ಟೆಸ್ಟಿಂಗ್ ಮಾಡಲಾಯಿತು. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯೇ ಇತ್ತು.

ಪ್ರಶ್ನೆ: ದಕ್ಷಿಣ ಆಫ್ರಿಕಾದಲ್ಲಿ ವೆಂಟಿಲೇಟರ್‌ ಸಹಿತ ನೆರವಿನ ಹಾಸಿಗೆಗಳ ಅಗತ್ಯ ಎಷ್ಟಿತ್ತು? ಉ: ಡೆಲ್ಟಾ ರೂಪಾಂತರವು ಪ್ರಬಲವಾಗಿ 3ನೇ ಅಲೆ ಕಾಣಿಸಿಕೊಳ್ಳುವವರೆಗೆ ಸೋಂಕಿತರ ಸಂಖ್ಯೆ ಕಡಿಮೆಯೇ ಇತ್ತು. ಬುಧವಾರ ಬಿಡುಗಡೆಯಾದ ಮಾಹಿತಿಯ ಪ್ರಕಾರ, 666 ಆಸ್ಪತ್ರೆಗಳಲ್ಲಿ 1294 ಜನರಿಗೆ ಆಮ್ಲಜನಕದ ಅಗತ್ಯಬಿತ್ತು. ಕೇವಲ 309 ಜನರಿಗೆ ಮಾತ್ರ ವೆಂಟಿಲೇಟರ್ ಬೇಕಾಯಿತು. ಒಟ್ಟಾರೆಯಾಗಿ 8857 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದರಲ್ಲಿ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳೂ ಸೇರಿದ್ದಾರೆ.

ಪ್ರಶ್ನೆ: ಓಮಿಕ್ರಾನ್ ನೆಗಡಿಯಂತಿದೆ ಎಂಬ ಅನಿಸಿಕೆ ಏಕೆ ಹುಟ್ಟಿಕೊಂಡಿದೆ? ಉ: ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ 50 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳು ಜಾಗರೂಕರಾಗಿರಬೇಕು ಎಂದು ತಿಳಿಯುವುದು ಮುಖ್ಯ. ಸೋಂಕು ಸೌಮ್ಯವಾಗಿರಬಹುದು, ಆದರೆ ನಂತರದ ದಿನಗಳಲ್ಲಿ ಇದು ವಿಷಮಶೀತಜ್ವರವಾಗಿ ಬದಲಾಗಬಹುದು. ಒಮಿಕ್ರಾನ್​ಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು. ಆದರೆ ಅದು ಕಡಿಮೆ ಅಪಾಯಕಾರಿ ಎಂದೇನು ಅಲ್ಲ. ಒಮಿಕ್ರಾನ್ ಸೋಂಕಿತರ ಪೈಕಿ ಕೆಲವರಿಗೆ ಸಾಮಾನ್ಯ ಜ್ವರ, ಕೆಲವರಿಗೆ ತೀವ್ರ ಜ್ವರ ಕಾಣಿಸಿಕೊಳ್ಳಬಹುದು.

ಪ್ರಶ್ನೆ: ಇದು ವೈದ್ಯಕೀಯ ಮೂಲಸೌಕರ್ಯವನ್ನು ದುರ್ಬಲಗೊಳಿಸಬಹುದೇ? ಉ: ಅಧಿಕತೂಕ ಮತ್ತು ಲಸಿಕೆ ಹಾಕಿಸಿಕೊಳ್ಳದವರು ಭಾರತದಲ್ಲಿ ಎಷ್ಟು ಜನರಿದ್ದಾರೆ ಎಂಬದನ್ನು ಇದು ಅವಲಂಬಿಸಿರುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಮರಣ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣಗಳಾಗುತ್ತವೆ. ಈ ಸಮಸ್ಯೆಗಳನ್ನು ಹೊಂದಿರುವ ಜನಸಂಖ್ಯೆಯ ಪ್ರಮಾಣ ಅಧಿಕವಾಗಿದ್ದರೆ ವೈದ್ಯಕೀಯ ಸೌಲಭ್ಯಗಳ ಮೇಲೆ ಒತ್ತಡ ವಿಪರೀತ ಎನಿಸುವಷ್ಟು ಹೆಚ್ಚಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರ ಆರೋಗ್ಯ ಚೆನ್ನಾಗಿದ್ದರೆ ಓಮಿಕ್ರಾನ್​ನಿಂದ ವೈದ್ಯಕೀಯ ವ್ಯವಸ್ಥೆಯು ದುರ್ಬಲಗೊಳ್ಳುವುದಿಲ್ಲ.

ಪ್ರಶ್ನೆ: ಒಮಿಕ್ರಾನ್ ಅನ್ನು ಯಾವುದು ವಿಭಿನ್ನಗೊಳಿಸುತ್ತದೆ? ಉ: ಒಮಿಕ್ರಾನ್ ಸಹ ಕೊರೊನಾ ಕುಟುಂಬದ ಭಾಗವಾಗಿದೆ. ಒಮಿಕ್ರಾನ್ ಸೋಂಕನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ ಇದು ಡೆಲ್ಟಾಕ್ಕಿಂತ ಸೌಮ್ಯವಾಗಿದೆ. ಸೂಕ್ತ ರೀತಿಯಲ್ಲಿ ಲಸಿಕಾಕರಣ ನಡೆಯದಿದ್ದರೆ ಜನರು ಗಂಭೀರವಾದ ಅನಾರೋಗ್ಯ ಸಮಸ್ಯೆಗಳಿಗೆ ಈಡಾಗಹಬುದು. ಡೆಲ್ಟಾ ಸೋಂಕು ಇಡೀ ಶ್ವಾಸಕೋಶಕ್ಕೆ ವ್ಯಾಪಿಸುತ್ತಿತ್ತು. ಆದರೆ ಒಮಿಕ್ರಾನ್ ಸೋಂಕು ಹೀಗಲ್ಲ. ಅದು ಶ್ವಾಸಕೋಶದ ಮೇಲ್ಭಾಗಕ್ಕೆ ಮಾತ್ರ ಸೀಮಿತವಾಗಿದೆ.

ಪ್ರಶ್ನೆ: ಸೋಂಕು ಎದುರಿಸುವ ವಿಚಾರದಲ್ಲಿ ಭಾರತದ ಮುಂದಿನ ದಾರಿ ಹೇಗಿರಬೇಕು? ಉ: ಲಸಿಕೆಯ ಮೌಲ್ಯವನ್ನು ನಾವು ಜನರಿಗೆ ಅರ್ಥಮಾಡಿಕೊಳ್ಳಬೇಕು. ಜನರು ಮಾಸ್ಕ್ ಧರಿಸಬೇಕು ಮತ್ತು ಅವುಗಳನ್ನು ಕಡ್ಡಾಯಗೊಳಿಸಬೇಕು. ಸೋಂಕನ್ನು ತಡೆಗಟ್ಟುವಲ್ಲಿ ವಾತಾಯನವು ಮುಖ್ಯವಾಗಿದೆ ಮತ್ತು ಜನಸಂದಣಿಯನ್ನು ತಪ್ಪಿಸಬೇಕು.

ಪ್ರಶ್ನೆ: ಒಮಿಕ್ರಾನ್‌ನಂತಹ ರೂಪಾಂತರಗಳು ಲಸಿಕಾಕರಣದಲ್ಲಿ ಆದ ತಾರತಮ್ಯ ನೀತಿಯ ಪರಿಣಾಮ ಎನ್ನುವುದು ನಿಜವೇ? ಉ: ಸರಿ. ಆಫ್ರಿಕಾದಲ್ಲಿ ಲಸಿಕೆಗಳೊಂದಿಗೆ ನಮಗೆ ಮತ್ತೊಂದು ಸಮಸ್ಯೆ ಇದೆ. ಲಸಿಕೆಗಳನ್ನು ಶೇಖರಿಸಲು, ಸಾಗಿಸಲು ನಮಗೆ ಸಾಕಷ್ಟು ಅನುಕೂಲಗಳು ಇಲ್ಲ. ಲಾಜಿಸ್ಟಿಕ್ಸ್ ಸಮಸ್ಯೆ ಇದೆ. ಈ ಲಸಿಕೆಗಳು ರೆಫ್ರಿಜರೇಟರ್‌ಗಳು ಇರುವಲ್ಲಿ ಕಾರ್ಯನಿರ್ವಹಿಸುತ್ತವೆ. ನಗರಗಳೊಂದಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವೇ ಲಸಿಕಾಕರಣ ವೇಗ ಪಡೆದಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಆಫ್ರಿಕಾದಲ್ಲಿ ಲಸಿಕಾಕರಣ ಪ್ರಕ್ರಿಯೆಯು ಜಟಿಲವಾಗಿದೆ. ಕಂಪನಿಗಳು ಟ್ಯಾಬ್ಲೆಟ್ ರೂಪದಲ್ಲಿ ಲಸಿಕೆಗಳನ್ನು ತಯಾರಿಸಲು ಪ್ರಾರಂಭಿಸಬೇಕು. ಆಗ ಬಡದೇಶಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಮುಕ್ತಾಯ ದಿನಾಂಕದ ಸಮೀಪವಿರುವ ಲಸಿಕೆಗಳನ್ನು ದಕ್ಷಿಣ ಆಫ್ರಿಕಾಕಕ್ಕೆ ತಂದು ಬಿಸಾಡುವುದರಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಬೂಸ್ಟರ್ ಡೋಸ್‌ ನೀಡಿಕೆ ಮುಂದುವರಿಯಬಹುದು. ಆದರೆ, ಆಫ್ರಿಕಾ ಸಂಪೂರ್ಣವಾಗಿ ಲಸಿಕಾಕರಣಗೊಳ್ಳುವವರೆಗೆ ಹೊಸ ರೂಪಾಂತರಗಳು ಬರುತ್ತಲೇ ಇರುತ್ತವೆ.

ಪ್ರಶ್ನೆ: ಓಮಿಕ್ರಾನ್ ಮತ್ತೆ ರೂಪಾಂತರಗೊಳ್ಳಬಹುದೇ? ಉ: ಹೌದು, ಈ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ. ಅದು ಹೇಗೆ ಬದಲಾಗಬಹುದು ಎನ್ನುವುದೇ ನಮ್ಮೆದುರು ಇರುವ ಪ್ರಶ್ನೆ. ಅದು ವೈರಸ್ ಆಗುತ್ತದೆಯೇ ಅಥವಾ ವೇಗವಾಗಿ ಬದಲಾಗುವ ರೂಪಾಂತರಿ ವೈರಾಣು ಆಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಜನರು ವೈರಸ್‌ನೊಂದಿಗೆ ಬದುಕಲು ಕಲಿಯುತ್ತಾರೆ. ಅದುಬಿಟ್ಟು ನಮ್ಮೆದುರು ಬೇರೆ ದಾರಿಯಿಲ್ಲ. ಮಾಸ್ಕ್​ನೊಂದಿಗೆ ಬದುಕುವುದನ್ನು ಜನರು ಕಲಿಯಲೇಬೇಕಾಗಿದೆ.

ಪ್ರಶ್ನೆ: ಕೋವಿಡ್ ಬಹುಬೇಗ ದೂರವಾಗುವುದಿಲ್ಲ ಎಂದು ಹೇಳುತ್ತಿದ್ದೀರಾ? ಎ: ಇಲ್ಲ, ಇದು ಬಹಳ ಬೇಗ ಹೋಗುವುದಿಲ್ಲ. ಸಾಂಕ್ರಾಮಿಕ ರೋಗದಿಂದ ಹೊರಬರಲು ಮಾಸ್ಕ್ ಬಳಕೆಯೊಂದೇ ಮಾರ್ಗ. ಜನರು ದೊಡ್ಡ ಗುಂಪು ಸೇರುವುದನ್ನು ತಪ್ಪಿಸಬೇಕು. ಮುಂದಿನ ಎರಡು ಮೂರು ವರ್ಷಗಳ ಕಾಲ ನಾವು ಎಚ್ಚರಿಕೆಯಿಂದ ಇರಬೇಕು. ನಾವು ಎಚ್ಚರಿಕೆಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು, ಜನರು ಈ ಮೊದಲಿನ ರೀತಿಯಲ್ಲಿ ವರ್ತಿಸಲು ಸಾಧ್ಯವಿಲ್ಲ. ಮನುಷ್ಯರು ಸಾಮಾಜಿಕವಾಗಿ ಬೆರೆಯಲು ಇಷ್ಟಪಡುತ್ತಾರೆ. ಆದರೆ ಇದು ಕೋವಿಡ್-19 ಇರುವವರೆಗೂ ಸಾಧ್ಯವಿಲ್ಲ. ನೀವು ಹೊರಗೆ ಹೋಗಲು ಬಯಸಿದರೆ, ನೀವು ಭೇಟಿ ನೀಡುವ ಸ್ಥಳದಲ್ಲಿ ಚೆನ್ನಾಗಿ ಗಾಳಿ ಇದೆ ಎಂದು ಖಚಿತಪಡಿಸಿಕೊಳ್ಳಿ. ದಕ್ಷಿಣ ಆಫ್ರಿಕಾದಲ್ಲಿ ನಾವು ಮಾಸ್ಕ್​ ಧರಿಸುವ ಕುರಿತು ಜಾಗೃತಿ ಮೂಡಿಸಲು ಅಭಿಯಾನಗಳನ್ನು ನಡೆಸಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಕರ್ಫ್ಯೂ, ನಿರ್ಬಂಧಗಳು ಇಲ್ಲ. ಲಸಿಕೆಗಳು ಮತ್ತು ಮಾಸ್ಕ್​ನೊಂದಿಗೆ ಜೀವನ ನಡೆಸಬಹುದು, ಆದರೆ ನೀವು ಎಷ್ಟು ಅಂತ ಬೂಸ್ಟರ್​ ಡೋಸ್​ಗಳನ್ನು ಕೊಡಲು ಸಾಧ್ಯ?

ಪ್ರಶ್ನೆ: ಕೊವಿಡ್ ನಿಭಾಯಿಸುವಲ್ಲಿ ಬೂಸ್ಟರ್​ ಡೋಸ್​ಗಳಿಂದ ಹೆಚ್ಚು ಪ್ರಯೋಜನವಿಲ್ಲ ಎಂಬುದು ನಿಮ್ಮ ಅಭಿಪ್ರಾಯವೇ? ಉ: ನನ್ನ ಅಭಿಪ್ರಾಯ ಅದಲ್ಲ. ವೈಜ್ಞಾನಿಕವಾಗಿ ನೀವು ಬೂಸ್ಟರ್ ಡೋಸ್ ನೀಡುವುದನ್ನು ಮುಂದುವರಿಸಬಹುದು. ಇಂತಹ ಅಭಿಯಾನದಲ್ಲಿ ಸರ್ಕಾರ ಎಷ್ಟು ದಿನ ಸಾಮಾನ್ಯ ಜನರ ಉತ್ಸಾಹ ಕಾಪಾಡಬಹುದು? ಬೂಸ್ಟರ್ ಶಾಟ್‌ಗಳನ್ನು ತೆಗೆದುಕೊಳ್ಳಲು ಸರ್ಕಾರವು ಎಷ್ಟು ದಿನಗಳವರೆಗೆ ಜನರನ್ನು ಒತ್ತಾಯಿಸಲು ಸಾಧ್ಯ? ಮಾಸ್ಕ್ ಮತ್ತು ನೈರ್ಮಲ್ಯದಿಂದ ಮಾತ್ರ ಕೊವಿಡ್ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಲು ಸಾಧ್ಯ. ನೀವು ಲಸಿಕೆ ಪಡೆದುಕೊಳ್ಳಲು ಹಿಂಜರಿಯಬಾರದು. ಲಸಿಕೆ ಅಭಿಯಾನ ಇನ್ನೂ ಆರಂಭವೇ ಆಗದ ಸ್ಥಳಗಳು ಹಲವಿವೆ. ನಾವು ಜನರ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ಒಂದು ಹಂತದಲ್ಲಿ ಲಸಿಕೆಯ ಬಗ್ಗೆಯೇ ಜನರಿಗೆ ಅವಜ್ಞೆ ಮೂಡುವ ಸಾಧ್ಯತೆಯಿದೆ. ಸಾಕಷ್ಟು ಬಾರಿ ಲಸಿಕೆಗಳನ್ನು ಹಾಕಿಸಿಕೊಂಡಿದ್ದೇವೆ ಎಂದು ಜನರು ಹೇಳುತ್ತಾರೆ.

ಪ್ರಶ್ನೆ: ಪ್ರಜಾಪ್ರಭುತ್ವಗಳು ಕೋವಿಡ್ 19 ಮೀರಿ ಉಳಿಯಬಲ್ಲವೇ? ಬದುಕಬಹುದೇ? ಉ: ಪ್ರಜಾಪ್ರಭುತ್ವವು ಉಳಿಯುತ್ತದೆ. ಜನರು ಕೊವಿಡ್ ಮಾರ್ಗಸೂಚಿಗಳನ್ನು ಅನುಸರಿಸಿದರೆ ಪರಸ್ಪರರನ್ನು ಭೇಟಿಯಾಗಲು ಸಾಧ್ಯವಿದೆ. ಮಾಸ್ಕ್​ ಕೇವಲ ಸ್ವಯಂ ರಕ್ಷಣೆಗಾಗಿ ಅಲ್ಲ. ಮಾಸ್ಕ್​ ಬಳಕೆಯು ಮತ್ತೊಬ್ಬರನ್ನು, ಇಡೀ ಸಮುದಾಯವನ್ನು ರಕ್ಷಿಸುತ್ತದೆ.

ಇದನ್ನೂ ಓದಿOmicron: 7 ತಿಂಗಳ ನಂತರ ಒಂದೇ ದಿನ 1 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲು; 3,000 ಗಡಿ ದಾಟಿದ ಒಮಿಕ್ರಾನ್ ಇದನ್ನೂ ಓದಿ: ಒಮಿಕ್ರಾನ್ ಆತಂಕ: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪ್ರಯಾಣ ಮಾರ್ಗಸೂಚಿ ಪರಿಷ್ಕರಣೆ; ಇಲ್ಲಿದೆ ಮಾಹಿತಿ

Published On - 6:21 pm, Fri, 7 January 22

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ