Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಲ್ಲಿ ‘ಬೊಜ್ಜು’ ಬರಲು ಪೋಷಕರೇ ಕಾರಣ, ಮಗುವಿಗೆ ಪಾಠದ ಜತೆ ಆಟ ಅಗತ್ಯ ಎನ್ನುತ್ತಾರೆ ಡಾ. ಅರುಣಾ ಮಲ್ಯಾ

‘ಬೊಜ್ಜು’ ಇಡೀ ದೇಶದಲ್ಲಿ ಇದು ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಕೂಡ ಎಚ್ಚರಿಕೆಯನ್ನು ನೀಡಿದ್ದಾರೆ. ಭಾರತದಲ್ಲಿ ಮಕ್ಕಳಲ್ಲೂ ಬೊಜ್ಜು ಸಮಸ್ಯೆ ಕಾಡುತ್ತಿದೆ. ಇದರಿಂದ ಮಕ್ಕಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾಡುತ್ತಿದೆ. ಇದಕ್ಕೆ ಮುಖ್ಯವಾಗಿ ಕಾರಣ ಪೋಷಕರು ಎಂದು ಹೇಳಬಹುದು. ಯಾಕೆಂದರೆ ಮಕ್ಕಳಿಗೆ ನೀಡುವ ಆಹಾರಗಳ ಬಗ್ಗೆ ಎಚ್ಚರ ಇರಬೇಕು ಹಾಗೂ ಅನೇಕ ಮಕ್ಕಳಿಗೆ ಪಾಠ ಮಾತ್ರ ಸಿಗುತ್ತದೆ ಹೊರತು ಆಟ ಇಲ್ಲ. ಇದರಿಂದಲ್ಲೂ ಬೊಜ್ಜು ಬರುತ್ತಿದೆ. ಅದಕ್ಕಾಗಿ ಮಂಗಳೂರು ಕೆ ಎಂ ಸಿ ಆಸ್ಪತ್ರೆ ವೈದ್ಯರಾದ ಅರುಣಾ ಮಲ್ಯಾ ಕೆಲವೊಂದು ಕಾರಣ ಹಾಗೂ ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ.

ಮಕ್ಕಳಲ್ಲಿ ‘ಬೊಜ್ಜು’ ಬರಲು ಪೋಷಕರೇ ಕಾರಣ, ಮಗುವಿಗೆ ಪಾಠದ ಜತೆ ಆಟ ಅಗತ್ಯ ಎನ್ನುತ್ತಾರೆ ಡಾ. ಅರುಣಾ ಮಲ್ಯಾ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 10, 2025 | 4:33 PM

ಪೇಟೆಗೆ ಹೋದರೆ ಬಣ್ಣ ಬಣ್ಣದ ಸಿಹಿ ತಿನಿಸುಗಳು, ಕರಿದ ಆಹಾರ ಪದಾರ್ಥಗಳು ಮಕ್ಕಳನ್ನು ಆಕರ್ಷಿಸದೇ ಬಿಡುವುದಿಲ್ಲ. ಟಿವಿ ನೋಡಲು ಕೂತರೂ ತಿನ್ನಲು ಬೇಕೇ ಬೇಕು. ಮಕ್ಕಳ ಹಠಕ್ಕೆ ಸೋತು ಇಂತಹ ತಿನಿಸುಗಳನ್ನು ತಿನ್ನಲು ನೀಡಿದರೆ, ಪೋಷಕರಾಗಿ ನೀವೇ ಮಕ್ಕಳ ಆರೋಗ್ಯ ಕೆಡಿಸಿದಂತೆ ನೆನಪಿರಲಿ.

ಭಾರತದಲ್ಲಿ ‘ಬೊಜ್ಜು’ ಆತಂಕ ಹೆಚ್ಚಿಸುತ್ತಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಅವರು ಕೂಡ ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ ಬಗ್ಗೆ ಮಾತನಾಡಿದ್ದರು. 20ನೇ ವಯಸ್ಸಿಗೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೂಡ ಬೊಜ್ಜು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಭಾರತದಲ್ಲಿ ಶೇ.45 ರಷ್ಟು ಜನರಲ್ಲಿ ಬೊಜ್ಜಿನ ಸಮಸ್ಯೆ ಇದ್ದು ಇದಕ್ಕೆ ಬಹುಮುಖ್ಯ ಕಾರಣ ಜೀವನ ಶೈಲಿ ಹಾಗೂ ಆಹಾರ ಪದ್ದತಿ.

ಊಟ ಅರಿತವನಿಗೆ ರೋಗದ ಭಯವಿಲ್ಲ ಎಂಬ ಮಾತಿದೆ. ಅದರಂತೆ ನಾವು ಏನನ್ನು ತಿನ್ನುತ್ತಿದ್ದೇವೆ ಎಂಬುದರ ಸಂಪೂರ್ಣ ಜ್ಞಾನವಿದ್ದಲ್ಲಿ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ‘ಬೊಜ್ಜು’ ಸಮಸ್ಯೆಗೆ ಮೂಲ ಕಾರಣವೇ ಆಹಾರ. ಬಾಯಿ ರುಚಿಗೆ ಸೋತು ತಿನ್ನುವ ಅಭ್ಯಾಸವಿದ್ದರೆ , ಸೇವಿಸುವ ಆಹಾರ ಎಷ್ಟು ಆರೋಗ್ಯ ಪೂರ್ಣವಾಗಿದೆ ಎಂದು ಮೊದಲು ಅರಿತುಕೊಳ್ಳಬೇಕು.

ವಿಪರೀತ ಸಿಹಿ ಪದಾರ್ಥ, ಕರಿದ ತಿಸಿಸುಗಳು, ಸರಿಯಾದ ದೈಹಿಕ ಚಟುವಟಿಕೆ ಇಲ್ಲದಿರುವುದು, ಅತಿಯಾದ ಒತ್ತಡದ ಜೀವನ ಎಲ್ಲವೂ ಬೊಜ್ಜಿಗೆ ದಾರಿ ಮಾಡಿಕೊಡುತ್ತದೆ. ಬೊಜ್ಜು ಡಯಾಬಿಟಿಸ್‌, ಹೈಪರ್‌ಟೆನ್ಷನ್‌, ಪಿಸಿಒಎಸ್‌ ಸಮಸ್ಯೆ, ಉಸಿರಾಟದ ಸಮಸ್ಯೆ, ಹೃದಯ ರೋಗಕ್ಕೆ ಕಾರಣವಾಗುತ್ತದೆ.

ವಿಪರೀತ ತಿನ್ನುವ ಚಟ

ಕೆಲವರಲ್ಲಿ ದೇಹಕ್ಕೆ ಬೇಕೋ ಬೇಡವೋ, ಕಂಡಿದ್ದೆಲ್ಲ ತಿನ್ನುವ ಅಭ್ಯಾಸವಿರುತ್ತದೆ. ಇದಕ್ಕೆ ಮಿತಿಮೀರಿ ತಿನ್ನುವ ಚಟ ಎಂದೂ ಕರೆಯಬಹುದು. ಹೀಗೆ ಸೇವಿಸಿದ ಆಹಾರವನ್ನು ದೈಹಿಕ ಚಟುವಟಿಕೆಗಳ ಮೂಲಕ ಕರಗಿಸಿದರೆ ಒಳ್ಳೆಯದು ಆದರೆ ಹಾಗೇ ಉಳಿದಲ್ಲಿ ಬೊಜ್ಜಿಗೆ ಕಾರಣವಾಗುವುದು ಖಚಿತ. ತಿಂದಷ್ಟೇ ದುಡಿ ಎಂಬ ಮಾತಿನಂತೆ ಆಹಾರ ಸೇವನೆ ಜತೆಗೆ ವ್ಯಾಯಾಮ, ಆಟೋಟ, ದೈಹಿಕ ಶ್ರಮ ಬೇಡುವ ಕೆಲಸ ಮಾಡುವುದು ಮುಖ್ಯ.

ಏನನ್ನಾದರೂ ತಿನ್ನಲೇ ಬೇಕೆಂಬ ಹಂಬಲ

ಕೆಲವು ವ್ಯಕ್ತಿಗಳಲ್ಲಿ ಹಾರ್ಮೋನ್‌ ಅಸಮತೋಲನ ಉಂಟಾದಾಗ ಈ ರೀತಿ ಏನನ್ನಾದರೂ ತಿನ್ನಲೇ ಬೇಕೆಂಬ ಹಠ ಉಂಟಾಗುತ್ತದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಸಿಹಿ ತಿನಿಸು, ಚಾಕಲೇಟ್‌ಗಳನ್ನು ತಿನ್ನುವವರು ಹೆಚ್ಚು . ಇನ್ನು ಅತಿಯಾದ ಒತ್ತಡ ಅನುಭವಿಸುತ್ತಿರುವವರಲ್ಲೂ ಪದೇ ಪದೇ ತಿನ್ನುವ ಅಭ್ಯಾಸವನ್ನು ಕಾಣಬಹುದು. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬಿದಂತಹ ಸಮಸ್ಯೆಗಳು ಬೊಜ್ಜಿಗೆ ಕಾರಣವಾಗಬಹುದು. ಜತೆಗೆ ದೇಹದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಕೂಡ ಏರುಪೇರು ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಇಂತಹ ಅಭ್ಯಾಸವನ್ನು ಆದಷ್ಟು ನಿಯಂತ್ರಿಸಿ.

ಇದನ್ನೂ ಓದಿ: ಅತಿಯಾದ ಆಲೂಗಡ್ಡೆ ಸೇವನೆಯೂ ಆರೋಗ್ಯಕ್ಕೆ ಮಾರಕ, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಆಟವಿಲ್ಲ ಪಾಠ ಮಾತ್ರವೆಂದರೆ ಹೇಗೆ?

ಮಕ್ಕಳು ಮೊದಲೆಲ್ಲ ಆಟದಲ್ಲಿ ಸಮಯ ಕಳೆಯುವುದು ಹೆಚ್ಚಾಗಿತ್ತು. ಆದರೆ ಈಗ ಮನೆಯೊಳಗೆ ಟಿವಿ, ಹೋಮ್‌ವರ್ಕ್ ಗಳ ಸಂಗವೇ ಹೆಚ್ಚು. ಬೆಳೆಯುವ ಮಕ್ಕಳಲ್ಲಿ ಹೊರಾಂಗಣ ಆಟ ದೈಹಿಕ ಬೆಳವಣಿಗೆ ಹಾಗೂ ಜೀರ್ಣಕ್ರಿಯೆಗೆ ಅತ್ಯಂತ ಮಹತ್ವದ್ದು. ಟಿವಿ ನೋಡುತ್ತಾ ಪ್ಯಾಕೆಟ್‌ ಚಿಪ್ಸ್‌, ಸಿಹಿ ತಿನಿಸುಗಳನ್ನು ತಿನ್ನುವ ಅಭ್ಯಾಸವನ್ನು ನಿಮ್ಮ ಮಕ್ಕಳು ರೂಢಿಸಿಕೊಂಡಿದ್ದರೆ ತಕ್ಷಣ ತಪ್ಪಿಸಿ. ಮಕ್ಕಳು ಆದಷ್ಟು ಆಟ, ದೈಹಿಕ ಚಟುವಟಿಕೆಯ ಜತೆ ಸಮಯ ಕಳೆಯಲಿ. ಹಾಗೇ ಮಕ್ಕಳು ಊಟ ಮಾಡುವಾಗ ಅವರ ಗಮನ ತಿನ್ನುವ ಆಹಾರದ ಮೇಲಿರಲಿ. ಮಕ್ಕಳ ಮನವೊಲಿಸಲು ಕೇಕ್‌, ಚಿಪ್ಸ್‌, ಐಸ್‌ಕ್ರೀಮ್‌ಗಳನ್ನು ಊಟದ ಜತೆ ನೀಡುವುದನ್ನು ನಿಲ್ಲಿಸಿ.

ಮಕ್ಕಳಿಗೆ ಯಾವುದು ಬೆಸ್ಟ್‌?

ಬೊಜ್ಜಿನ ಸಮಸ್ಯೆ ಈ ಮೊದಲು ವಯಸ್ಕರಲ್ಲಿ ಕಂಡುಬರುವುದು ಹೆಚ್ಚಾಗಿತ್ತು ಆದರೆ 20 ವರ್ಷಕ್ಕೂ ಸಣ್ಣ ವಯಸ್ಸಿನ ಮಕ್ಕಳು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವುದು ಆತಂಕಕಾರಿ.ಇದಕ್ಕೆಲ್ಲ ನಾವು ರೂಢಿಸಿಕೊಂಡ ಆಹಾರ ಪದ್ದತಿಯೇ ಕಾರಣ. ಅಡುಗೆ ಮಾಡಲು ಸಮಯವಿಲ್ಲ ಎಂದು ಹೊರಗಿನಿಂದ ತಂದು ತಿಂಡಿ ತಿನ್ನುತ್ತೇವೆ ಆದರೆ ಅದರಲ್ಲಿ ಆರೋಗ್ಯಕರ ಅಂಶ ಎಷ್ಟಿದೆ ಎಂದು ಯೋಚಿಸುತ್ತೇವೆಯೇ? ಪ್ರೊಸೆಸ್ಡ್‌ ಫುಡ್‌ ಎಂದು ಕರೆಯಲ್ಪಡುವ ಚಿಪ್ಸ್‌, ರೆಡಿ ಟು ಈಟ್ ಆಹಾರ ಪದಾರ್ಥಗಳು, ಪದೇ ಪದೇ ಕರಿದ ಎಣ್ಣೆ ಪದಾರ್ಥಗಳು ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತವೆ. ಅದರಲ್ಲೂ ಅರಿವೇ ಇಲ್ಲದೇ ಯಾಂತ್ರಿಕವಾಗಿ ಆಹಾರ ಸೇವಿಸುವ ಕ್ರಮ ಬಹಳ ಕೆಟ್ಟದ್ದು. ಮಕ್ಕಳೇ ಆಗಲಿ ವಯಸ್ಕರೇ ಆಗಲಿ ನಿತ್ಯದ ಆಹಾರದಲ್ಲಿ ಹಣ್ಣು, ತರಕಾರಿಗಳ ಬಳಕೆ ತಪ್ಪದೇ ಇರಲಿ. ಕಾಲಕ್ಕೆ ತಕ್ಕಂತಹ ಹಣ್ಣುಗಳ ಸೇವನೆ, ಸೂಕ್ತ ಪ್ರಮಾಣದಲ್ಲಿ ನೀರು, ದೇಹಕ್ಕೆ ಉತ್ತಮ ವ್ಯಾಯಾಮ, ಆರಾಮ ಅಗತ್ಯ. ‘ಫಿಟ್‌ ಇಂಡಿಯಾ’ ಗೆ ಆಹಾರ ಸೇವನೆ ಹಾಗೂ ದೈಹಿಕ ಚಟುವಟಿಕೆಯಲ್ಲಿ ಶಿಸ್ತು ಪಾಲಿಸಲೇ ಬೇಕು.

-ಅರುಣಾ ಮಲ್ಯಾ, ಹಿರಿಯ ಡೈಯಟೀಶಿಯನ್‌, ಕೆ ಎಂ ಸಿ ಆಸ್ಪತ್ರೆ, ಬಿ ಆರ್‌ ಅಂಬೇಡ್ಕರ್‌ ಸರ್ಕಲ್‌ ಮಂಗಳೂರು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:33 pm, Mon, 10 February 25

ಬಹಳಷ್ಟು ಪಡಿತರ ಅಂಗಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ವಂಚನೆ
ಬಹಳಷ್ಟು ಪಡಿತರ ಅಂಗಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ವಂಚನೆ
ಕಾಳಿಂಗ ಸರ್ಪದೊಂದಿಗೆ ಭೀಕರ ಕಾಳಗ: ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ
ಕಾಳಿಂಗ ಸರ್ಪದೊಂದಿಗೆ ಭೀಕರ ಕಾಳಗ: ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ
ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್​ನಿಂದ ಹೊರ ಬಂದ ಸುನಿತಾ
ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್​ನಿಂದ ಹೊರ ಬಂದ ಸುನಿತಾ
‘ನನ್ನ ಕೊಲೆಗೆ ಡಿಕೆಶಿ ಸಹೋದರರು​ ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
‘ನನ್ನ ಕೊಲೆಗೆ ಡಿಕೆಶಿ ಸಹೋದರರು​ ಸೇರಿ 4 ಜನರಿಂದ ಸ್ಕೆಚ್’: ಮುನಿರತ್ನ ಆರೋಪ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ