ಕನ್ನಡ ಭಾಷೆಯಲ್ಲಿ ಪಾಪಾಸುಕಳ್ಳಿ, ಡಬ್ಬುಗಳ್ಳಿ, ಡಬ್ಬಗೊಳ್ಳಿ, ಸಂಸ್ಕೃತ ಭಾಷೆಯಲ್ಲಿ ವಜ್ರಕಾಯ, ವಿದಾರ ವಿಶ್ವಸಾರಕ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ನಾಗ ಫಣಿ (Opuntia elatior, prickly pear) ಭಾರತಾದ್ಯಂತ ಬಂಜರು ಭೂಮಿಯಲ್ಲಿ ಕುರುಚಲು ಕಾಡುಗಳಲ್ಲಿ ಬೆಳೆಯುವ ಸಸ್ಯ. ಪಾಪಾಸು ಕಳ್ಳಿಯ ಮೂಲ ಅಮೆರಿಕಾ ಖಂಡಗಳು. ಪೋರ್ಚುಗೀಸ್ ರು ಅಲ್ಲಿಂದ ಭಾರತಕ್ಕೆ ತಂದರೆಂದು ಹೇಳಲಾಗುತ್ತದೆ. ಭೀಕರ ಬರಗಾಲದಲ್ಲೂ ಬದುಕಬಲ್ಲ ಈ ಡಬ್ಬುಗಳ್ಳಿ ಹೊಲ ಮನೆ ತೋಟ ಗದ್ದೆಗಳ ಕಾವಲಿಗೆ ವಜ್ರಾಯುಧ ಇದ್ದಂತೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಟ್ರ್ಯಾಕ್ಟರ್ ಜೆ ಸಿ ಬಿ ಗಳಿಂದ ನಾಶ ಪಡಿಸಲಾಗುತ್ತಿದೆ ಎಂಬುದು ಬೇಸರದ ಸಂಗತಿ. ಅಳಿವಿನಂಚಿನಲ್ಲಿರುವ ಈ ಡಬ್ಬುಗಳ್ಳಿ ನಿಜಕ್ಕೂ ವಿಶೇಷ ಗುಣಗಳನ್ನು ಹೊಂದಿದೆ (prickly pear health benefits).
ಈಗ ಅಪರೂಪವಾಗುತ್ತಿರುವ ಈ ಪಾಪಾಸುಕಳ್ಳಿ ನಿಜಕ್ಕೂ ರೈತನ ಮಿತ್ರ ಎಂದು ಹೇಳಬಹುದು. ಇದರಲ್ಲಿ ಬೇರೆ ಬೇರೆ ಪ್ರಭೇದಗಳಿವೆ. ರಾಜಸ್ಥಾನದಲ್ಲಿ ಮುಳ್ಳು ಇರದ ಪಾಪಾಸುಕಳ್ಳಿ ಬೆಳೆದು ಕತ್ತರಿಸಿ ದನ ಕರುಗಳಿಗೆ ಮೇವಾಗಿ ಬಳಸುತ್ತಾರೆ. ಕೆಲವು ದಶಕಗಳ ಹಿಂದಿನವರೆಗೂ ಹೆಣ್ಣು ಮಕ್ಕಳ ಕಿವಿ ಚುಚ್ಚಲು ಇದರ ಮುಳ್ಳುಗಳನ್ನೇ ಬಳಸುತ್ತಿದ್ದರು. ಅತ್ಯಂತ ಚೂಪಾದ ಹಾಗೂ ಗಟ್ಟಿಯಾದ ಇದರ ಮುಳ್ಳಿನಲ್ಲಿ ಆಂಟಿಸೆಪ್ಟಿಕ್ ಗುಣ ಇರುತ್ತದೆ.
ಇದರ ಹಣ್ಣುಗಳು ತಿನ್ನಲು ತುಂಬಾ ರುಚಿ. ತಿಂದಾಗ ಬಾಯಿಯಲ್ಲಾ ಕೆಂಪು ಕೆಂಪು. ಆದರೆ ಹಣ್ಣುಗಳನ್ನು ಬಿಡಿಸಲು ಪರಿಣಿತಿ ಬೇಕು. ಹಣ್ಣಿನ ಮೇಲೆ ಸುಂಕ ( ಸಣ್ಣ ಸಣ್ಣ ಮುಳ್ಳು) ಇರುವುದರಿಂದ ತಂಗಡಿಸೊಪ್ಪು ಅಥವಾ ಹುಲ್ಲಿನಿಂದ ಬಡಿದು ಹಣ್ಣಿನ ತಿರುಳು ತಿನ್ನಬೇಕು.
ಬರಗಾಲದಲ್ಲಿ ಇದರ ಎಲೆಯ ಮೇಲಿನ ಮುಳ್ಳುಗಳನ್ನು ತೊಲಗಿಸಿ ಮಧ್ಯದಲ್ಲಿ ತೆಳ್ಳಗೆ ಸೀಳಿ, ಉಪ್ಪು ಖಾರ ಸೇರಿಸಿ ಕೆಂಡದ ಮೇಲೆ ಅಥವಾ ಹೆಂಚಿನ ಮೇಲೆ ಕಾಯಿಸಿ ತಿನ್ನುತ್ತಿದ್ದರಂತೆ ಅದಕ್ಕೆ “ಚಪಾತಿಗಳ್ಳಿ” ಎಂಬ ಎಂಬ ಹೆಸರೂ ಇದೆ.
ಪಾಪಾಸುಕಳ್ಳಿ ಹಣ್ಣಿನ ಔಷಧೀಯ ಗುಣಗಳು ಹೀಗಿವೆ: