Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರದಂತೆ ತಡೆಯಲು ಈ ರೀತಿ ಮಾಡಿ

ನಾವು ಉಸಿರಾಡುವ ಗಾಳಿಯಲ್ಲಿ, ಕುಡಿಯುವ ನೀರಿನಲ್ಲಿ ಮತ್ತು ತಿನ್ನುವ ಆಹಾರದಲ್ಲಿ ಮೈಕ್ರೋಪ್ಲಾಸ್ಟಿಕ್ ಗಳು ಎಲ್ಲೆಡೆ ಇರುತ್ತವೆ. ಮಾನವನ ರಕ್ತ, ಶ್ವಾಸಕೋಶ ಮತ್ತು ಮೆದುಳಿನಲ್ಲಿಯೂ ಇಂತಹ ಸಣ್ಣ ಪ್ಲಾಸ್ಟಿಕ್ ತುಂಡುಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಇದು ಎಷ್ಟರ ಮಟ್ಟಿಗೆ ಹರಡಿದೆಯೆಂದರೆ ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಅವುಗಳನ್ನು ಸಂಪೂರ್ಣವಾಗಿ ತಪ್ಪಿಸಲು ಪ್ರಾಯೋಗಿಕವಾಗಿ ಅಸಾಧ್ಯ. ಆದರೆ ನಾವು ತೆಗೆದುಕೊಳ್ಳುವ ಕೆಲವು ಮುನ್ನೆಚ್ಚರಿಕೆಯು ಇದರ ಪ್ರಮಾಣವನ್ನು ಬಹಳಷ್ಟು ಕಡಿಮೆ ಮಾಡುತ್ತದೆ. ಹಾಗಾದರೆ ಮೈಕ್ರೋಪ್ಲಾಸ್ಟಿಕ್ ಕಣಗಳು ನಮ್ಮ ದೇಹ ಸೇರದಂತೆ ತಡೆಯುವುದು ಹೇಗೆ ತಿಳಿದುಕೊಳ್ಳಿ.

ಆಹಾರದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರದಂತೆ ತಡೆಯಲು ಈ ರೀತಿ ಮಾಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 11, 2025 | 12:56 PM

ಇತ್ತೀಚಿನ ವರ್ಷಗಳಲ್ಲಿ ನಮ್ಮ ಆರೋಗ್ಯ(Health) ಕಾಪಾಡಿಕೊಳ್ಳುವುದು ತಿಳಿದುಕೊಂಡಷ್ಟು ಸುಲಭವಲ್ಲ. ಜೀವನಶೈಲಿಯಲ್ಲಿ ಮತ್ತು ಆಹಾರದಲ್ಲಿ ಮಾಡಿಕೊಂಡಂತಹ ಬದಲಾವಣೆ ಅನಾರೋಗ್ಯಕ್ಕೆ ಒಂದು ರೀತಿಯಲ್ಲಿ ಕಾರಣವಾದರೆ ಇದರ ಹೊರತಾಗಿ ಮೈಕ್ರೋಪ್ಲಾಸ್ಟಿಕ್ ನಮ್ಮ ಆರೋಗ್ಯವನ್ನು ನಮಗರಿವಿಲ್ಲದಂತೆ ಹಾಳು ಮಾಡುತ್ತಿದೆ. ನಾವು ಉಸಿರಾಡುವ ಗಾಳಿಯಲ್ಲಿ, ಕುಡಿಯುವ ನೀರಿನಲ್ಲಿ ಮತ್ತು ತಿನ್ನುವ ಆಹಾರದಲ್ಲಿ ಮೈಕ್ರೋಪ್ಲಾಸ್ಟಿಕ್(microplastics) ಗಳು ಎಲ್ಲೆಡೆ ಇರುತ್ತವೆ. ಮಾನವನ ರಕ್ತ, ಶ್ವಾಸಕೋಶ(Lungs) ಮತ್ತು ಮೆದುಳಿನಲ್ಲಿಯೂ ಇಂತಹ ಸಣ್ಣ ಪ್ಲಾಸ್ಟಿಕ್ ತುಂಡುಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಇದು ಎಷ್ಟರ ಮಟ್ಟಿಗೆ ಹರಡಿದೆಯೆಂದರೆ ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಅವುಗಳನ್ನು ಸಂಪೂರ್ಣವಾಗಿ ತಪ್ಪಿಸಲು ಪ್ರಾಯೋಗಿಕವಾಗಿ ಅಸಾಧ್ಯ. ಆದರೆ ನಾವು ತೆಗೆದುಕೊಳ್ಳುವ ಕೆಲವು ಮುನ್ನೆಚ್ಚರಿಕೆಯು ಇದರ ಪ್ರಮಾಣವನ್ನು ಬಹಳಷ್ಟು ಕಡಿಮೆ ಮಾಡುತ್ತದೆ. ಹಾಗಾದರೆ ಮೈಕ್ರೋಪ್ಲಾಸ್ಟಿಕ್ ಕಣಗಳು ನಮ್ಮ ದೇಹ ಸೇರದಂತೆ ತಡೆಯುವುದು ಹೇಗೆ ತಿಳಿದುಕೊಳ್ಳಿ.

ಮೈಕ್ರೋಪ್ಲಾಸ್ಟಿಕ್ ಎಂದರೇನು?

ಐದು ಮಿಲಿಮೀಟರ್ ಗಿಂತ ಕಡಿಮೆ ಗಾತ್ರ ಹೊಂದಿರುವ ಪ್ಲಾಸ್ಟಿಕ್ ತುಂಡುಗಳನ್ನು ಮೈಕ್ರೋಪ್ಲಾಸ್ಟಿಕ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವಿಶ್ವದಲ್ಲಿ ವಾರ್ಷಿಕವಾಗಿ ಸುಮಾರು 450 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದಿಸಲಾಗುತ್ತದೆ. ಬಳಿಕ ಇದು ಒಂದಲ್ಲಾ ಒಂದು ರೀತಿಯಲ್ಲಿ ಕಸದ ರಾಶಿಯನ್ನು ತಲುಪುತ್ತದೆ. ಇಂತಹ ಸಂದರ್ಭಗಳಲ್ಲಿ ಬಲೆಗಳು, ಬಾಟಲಿಗಳು, ಚೀಲಗಳು ಇತ್ಯಾದಿ ವಸ್ತುಗಳು ಸೂರ್ಯನ ಬೆಳಕಿನಿಂದ ಉಂಟಾಗುವ ಕಾಲೋಚಿತ ಬದಲಾವಣೆಗಳ ಪರಿಣಾಮವಾಗಿ ಸಣ್ಣ ಕಣಗಳಾಗಿ ರೂಪುಗೊಳ್ಳುತ್ತವೆ. ಇದು ವಿವಿಧ ಮಾರ್ಗಗಳ ಮೂಲಕ ಅಂದರೆ ಆಹಾರದ ಮೂಲಕ, ಉಸಿರಾಟದ ಮೂಲಕ, ವಾತಾವರಣದಲ್ಲಿನ ಕಣಗಳಿಂದ ಮತ್ತು ಸೌಂದರ್ಯವರ್ಧಕಗಳ ಮೂಲಕ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ.

ಇದನ್ನೂ ಓದಿ: ಮೂತ್ರದ ಬಣ್ಣದಿಂದ ನಿಮಗಿರುವ ಆರೋಗ್ಯ ಸಮಸ್ಯೆಯನ್ನು ತಿಳಿಯಬಹುದು

ಇದನ್ನೂ ಓದಿ
Image
ಮಡಕೆಯಲ್ಲಿ ಇಟ್ಟ ಮೊಸರು ಹುಳಿ ಬರದಿರಲು ಕಾರಣವೇನು?
Image
ಎಬಿಸಿ ಜ್ಯೂಸ್ ಕುಡಿಯುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ
Image
ಮಕ್ಕಳಲ್ಲಿ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ!
Image
ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ

ಇದನ್ನು ಕಡಿಮೆ ಮಾಡುವುದು ಹೇಗೆ?

ಬಾಟಲಿ ನೀರಿನ ಬಳಕೆಯನ್ನು ಕಡಿಮೆ ಮಾಡಿ: ಮೈಕ್ರೋಪ್ಲಾಸ್ಟಿಕ್ ಗಳು ಸಾಮಾನ್ಯವಾಗಿ ಬಾಟಲಿ ನೀರಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಒಂದು ಲೀಟರ್ ಬಾಟಲಿ ನೀರಿನಲ್ಲಿ 240,000 ಪ್ಲಾಸ್ಟಿಕ್ ತುಂಡುಗಳು ಇರುತ್ತವೆ ಎಂದು ಸಾಬೀತಾಗಿದೆ. ಅವು ಮಾನವನ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತವೆ. ಹಾಗಾಗಿ ಹೊರಗಡೆ ಹೋದಾಗ ನೀರಿನ ಬಾಟಲಿ ಖರೀದಿ ಮಾಡುವುದಕ್ಕಿಂತ ಮನೆಯಿಂದ ನೀರನ್ನು ತೆಗೆದುಕೊಂಡು ಹೋಗಿ. ಸಿಕ್ಕ ಸಿಕ್ಕ ಕಡೆಗಳಲ್ಲಿ ನೀರು ಕುಡಿಯುವುದನ್ನು ಕಡಿಮೆ ಮಾಡಿ. ಆದಷ್ಟು ಕಾಯಿಸಿ, ಆರಿಸಿದ ನೀರನ್ನು ಕುಡಿಯಲು ಪ್ರಯತ್ನಿಸಿ.

ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ಬಿಸಿ ಮಾಡುವುದನ್ನು ತಪ್ಪಿಸಿ: ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ಸಂಗ್ರಹಿಸುವುದು ಮತ್ತು ತಿನ್ನುವುದು ಅಪಾಯಕಾರಿ. ಅತಿಯಾಗಿ ಬಿಸಿಯಾಗುವ ಪ್ಲಾಸ್ಟಿಕ್ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಪ್ಲಾಸ್ಟಿಕ್ ಕಣಗಳನ್ನು ಆಹಾರಕ್ಕೆ ಸೇರಿಸುತ್ತದೆ ಎಂದು ಸಂಶೋಧನೆ ಕಂಡು ಹಿಡಿದಿದೆ. ಹಾಗಾಗಿ ಮನೆಗಳಲ್ಲಿ ಪ್ಲಾಸ್ಟಿಕ್ ಪಾತ್ರೆಗಳ ಬಳಕೆಯನ್ನು ಕಡಿಮೆ ಮಾಡಿ.

ಚಹಾ ಚೀಲಗಳನ್ನು ಬಳಕೆ ಮಾಡಬೇಡಿ: ಚಹಾ ಚೀಲದಿಂದ ಚಹಾ ತಯಾರಿಸುವುದನ್ನು ತಪ್ಪಿಸುವುದು ಒಳ್ಳೆಯದು ಎಂದು ಕೆಲವು ಸಂಶೋಧಕರು ಹೇಳುತ್ತಾರೆ. ಈ ರೀತಿ ಮಾಡುವುದರಿಂದ, ಹೆಚ್ಚಿನ ಪ್ರಮಾಣದ ಮೈಕ್ರೋಪ್ಲಾಸ್ಟಿಕ್ ಗಳು ನಮಗರಿವಿಲ್ಲದಂತೆ ನಮ್ಮ ದೇಹವನ್ನು ಸೇರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದೆಲ್ಲದರ ಜೊತೆಗೆ ಪ್ಯಾಕ್ ಮಾಡಿದ ಆಹಾರಗಳು ಮತ್ತು ಪಾನೀಯಗಳನ್ನು ಸಾಧ್ಯವಾದಷ್ಟು ತಪ್ಪಿಸುವ ಮೂಲಕ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ. ಅರೋಗ್ಯವನ್ನು ಕಾಪಾಡಿಕೊಳ್ಳಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ