Acidity Pills Side Effect: ಗ್ಯಾಸ್ ಸಮಸ್ಯೆಯೇ? ಅಸಿಡಿಟಿ ಮಾತ್ರೆ ಸೇವಿಸುವ ಮುನ್ನ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಪ್ರಸ್ತುತ ಬದಲಾದ ಆಹಾರ ಪದ್ಧತಿಯಿಂದಾಗಿ ಮನುಷ್ಯರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ಅಸಿಡಿಟಿ ಸಮಸ್ಯೆಯೂ ಒಂದು. ಇದರ ನಿವಾರಣೆಗೆ ಮಾತ್ರೆ, ಸಿರಪ್ ಸೇವಿಸುವವರು ಹಲವರಿದ್ದಾರೆ. ಆದರೆ, ದೀರ್ಘಾವಧಿಯ ಮಾತ್ರೆ ಸೇವನೆಯಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿರಲಿ.

Acidity Pills Side Effect: ಗ್ಯಾಸ್ ಸಮಸ್ಯೆಯೇ? ಅಸಿಡಿಟಿ ಮಾತ್ರೆ ಸೇವಿಸುವ ಮುನ್ನ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ
ಅಸಿಡಿಟಿ ಮಾತ್ರೆಗಳ ಅಡ್ಡಪರಿಣಾಮಗಳು
Follow us
Rakesh Nayak Manchi
|

Updated on:Aug 13, 2023 | 10:44 PM

ಆಸಿಡ್ ರಿಫ್ಲಕ್ಸ್ ಎಂದೂ ಕರೆಯಲ್ಪಡುವ ಅಸಿಡಿಟಿ (Acidity) ಮಸಾಲೆಯುಕ್ತ ಆಹಾರ ಸೇವನೆಯಿಂದ ಉಂಟಾಗುತ್ತದೆ. ಹೊಟ್ಟೆಯಲ್ಲಿ ಉರಿ, ವಾಕರಿಕೆ ಇತ್ಯಾದಿಗಳು ಇದರ ರೋಗಲಕ್ಷಣಗಳಾಗಿವೆ. ಆದರೆ ಕೆಲವರು ಅಸಿಡಿಟಿ ಉಂಟಾದರೆ ತಕ್ಷಣ ಮೆಡಿಕಲ್​ಗೆ ಹೋಗಿ ಮಾತ್ರೆಗಳನ್ನು ತಂದು ಸೇವಿಸುತ್ತಾರೆ. ವೈದ್ಯರ ಸಲಹೆ ಮೇರೆಗೆ ಸೇವಿಸಿದರೆ ಪರವಾಗಿಲ್ಲ. ಆದರೆ ಸ್ವತಃ ನೀವೇ ವೈದ್ಯರಾಗಿ ಮಾತ್ರೆಗಳನ್ನು ಸೇವಿಸಿದರೆ ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂಬುದು ತಿಳಿದಿರಲಿ.

ಅಸಿಡಿಡಿ ಸಮಸ್ಯೆಯಿಂದ ಬಳಲುತ್ತಿದ್ದವರು ಮಾತ್ರೆಗಳನ್ನು ಸೇವಿಸುವುದು ಮತ್ತು ಸಿರಪ್ ಕುಡಿಯುವುದರಿಂದ ಗ್ಯಾಸ್ ಕಡಿಮೆಯಾಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇವುಗಳ ಸೇವನೆ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.

ಅಸಿಡಿಟಿಯ ಲಕ್ಷಣಗಳು:

ಹೊಟ್ಟೆಯಲ್ಲಿ ಉಬ್ಬುವಿಕೆ, ಹೊಟ್ಟೆ ಉರಿ, ಎದೆಯುರಿ, ವಾಕರಿಕೆ, ತಲೆತಿರುಗುವಿಕೆ ಮತ್ತು ವಾಂತಿ ಸಂವೇದನೆ ಅಸಿಡಿಟಿಯ ರೋಗಲಕ್ಷಣಗಳಾಗಿವೆ. ಅಜೀರ್ಣ, ಆಗಾಗ್ಗೆ ಜೀರ್ಣಕಾರಿ ಸಮಸ್ಯೆಗಳು ಮತ್ತು ಮಲಬದ್ಧತೆ ಎಲ್ಲವೂ ಅಸಿಡಿಟಿ ಸಮಸ್ಯೆಯಡಿಯೇ ಬರುತ್ತದೆ.

ಇದನ್ನು ಓದಿ: Green Chilli: ಹಸಿ ಮೆಣಸಿನಕಾಯಿ ಬಳಕೆಯಿಂದ ಹೃದಯದ ಆರೋಗ್ಯ ಕಾಪಾಡಬಹುದು, ನಿತ್ಯ ತಿಂದರೆ ಇನ್ನೂ ಹಲವು ಪ್ರಯೋಜನಗಳಿವೆ

ಅಸಿಡಿಟಿ ಸಮಸ್ಯೆ ಇದ್ದವರು ಕೆಲವು ಸಮಯದವರೆಗೆ ಮಾತ್ರೆಗಳನ್ನು ಸೇವಿಸಿದರೆ ಪರವಾಗಿಲ್ಲ. ಆದರೆ ದೀರ್ಘಾವಧಿಯವರೆಗೆ ಒಂದೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ.

ಮಾಲೋಕ್ಸ್, ಮೈಲಾಂಟಾ, ರೋಲಾಯ್ಡ್ಸ್ ಮತ್ತು ಟಮ್ಸ್ ಸೇರಿದಂತೆ ಅನೇಕ ಆಂಟಿಸಿಡ್‌ಗಳು ಹೆಚ್ಚಿನ ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ. ಇವುಗಳನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚುತ್ತದೆ.

ಅಲ್ಲದೆ, ಅಸಿಡಿಟಿ ಮಾತ್ರೆಗಳ ಕಾರಣದಿಂದಾಗಿ ಆಸ್ತಮಾ ಮತ್ತು ವಾಕರಿಕೆ, ಆಗಾಗ್ಗೆ ವಾಂತಿ, ಮೂಡ್ ಬದಲಾವಣೆ ಮತ್ತು ಮೂತ್ರದ ಅಂಗಗಳಲ್ಲಿ ಕಲ್ಲುಗಳ ರಚನೆಯಂತಹ ಅಪಾಯಗಳಿವೆ. ಹಾಗಾಗಿ ಆಸಿಡಿಟಿಯ ಮಾತ್ರೆಗಳನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ನೀವು ಆಗಾಗ್ಗೆ ಗ್ಯಾಸ್ ರೋಗಲಕ್ಷಣಗಳನ್ನು ಹೊಂದಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ವೈದ್ಯರ ಸಲಹೆ ಸೂಚನೆಯಂತೆ ಮುಂದುವರಿಯಿರಿ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:01 am, Sun, 13 August 23