ಕೊವಿಡ್-19 ರೋಗಿಗಳು ತಮ್ಮ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ
ನಿರಾಳವಾದ ಉಸಿರಾಟ ಮತ್ತು ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವೈದ್ಯಕೀಯವಾಗಿ ಅಂಗೀಕರಿಸಲ್ಪಟ್ಟಿರುವ ಬೋರಲು ಮಲಗುವ ಹಂತಗಳನ್ನು ಇತ್ತೀಚಿಗೆ ಅರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದೆ.
ಕೊವಿಡ್-19 ಸೋಂಕಿನಿಂದ ಬಳಲುತ್ತಿರುವ ರೋಗಿಗಳು ತಮ್ಮ ದೇಹದಲ್ಲಿ ಆಮ್ಲಜನಕದ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಇದೆ ಎನ್ನುವುದನ್ನು ಗಮನಿಸುತ್ತಿರಬೇಕಾಗುತ್ತದೆ. ಒಂದು ಪಕ್ಷ ಅವರ ಅಮ್ಲಜನಕ ಪ್ರಮಾಣ 94ಕ್ಕಿಂತ ಕೆಳಗಿಳಿದರೆ, ಬೋರಲು ಮಲಗಿ ಅದನ್ನು ಸರಿಪಡಿಸಿಕೊಳ್ಳಬಹುದೆಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ನಿರಾಳವಾದ ಉಸಿರಾಟ ಮತ್ತು ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವೈದ್ಯಕೀಯವಾಗಿ ಅಂಗೀಕರಿಸಲ್ಪಟ್ಟಿರುವ ಬೋರಲು ಮಲಗುವ ಹಂತಗಳನ್ನು ಇತ್ತೀಚಿಗೆ ಅರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದೆ. ಇದು ಕೊವಿಡ್-19 ಸೋಂಕಿನಿಂದ ನರಳುತ್ತಿರುವ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.
ಮನೆಗಳಲ್ಲೇ ಕ್ವಾರಂಟೈನ್ಗೊಳಗಾದವರು ಬೋರಲು ಮಲಗುವ ವಿಧಾನ ಅನುಸರಿಸುವಾಗ ಕೆಲ ಸಂಗತಿಗಳನ್ನು ನೆನಪಿಟ್ಟುಕೊಂಡಿರಬೇಕು. ಇದನ್ನು ಮಾಡಲು ಮೊಟ್ಟಮೊದಲನೆಯದಾಗಿ ನಿಮಗೆ ತಲೆದಿಂಬುಗಳ ಅವಶ್ಯಕತೆಯಿರುತ್ತದೆ. ಒಂದು ನಿಮ್ಮ ಕುತ್ತಿಗೆ ಕೆಳಭಾಗದಲ್ಲಿ ಇಡಬೇಕು, ಮತ್ತೊಂದು ಇಲ್ಲವೇ ಎರಡನ್ನು ಎದೆಯ ಕೆಳಭಾಗ ಮತ್ತು ತೊಡೆಗಳಿಗಿಂತ ಮೇಲ್ಭಾಗದಲ್ಲಿಡಬೇಕು ಮತ್ತು ಇನ್ನೆರಡು ಮೊಣಕಾಲುಗಳ ಕೆಳಗಿರಬೇಕು, ಎಂದು ಆರೋಗ್ಯ ಇಲಾಖೆ ಹೇಳುತ್ತದೆ.
ಬೋರಲು ಮಲಗುವ ಸ್ಥಿತಿಗಳು (ಪೊಸಿಷನ್) ಕೆಳಗಿನಂತಿವೆ, ಗಮನಿಸಬೇಕಾದ ಅಂಶವೇನೆಂದರೆ ಯಾವುದೇ ಪೊಸಿಷನ್ನಲ್ಲಿ 30 ಕ್ಕಿಂತ ಜಾಸ್ತಿ ಸಮಯವಿರಬಾರದು.
-ಮೊದಲನೆಯದಾಗಿ, ನಿಮ್ಮ ಹೊಟ್ಟೆಯ ಮೇಲೆ ಮಲಗಲು ಆರಂಭಿಸಿರಿ
-ನಿಮ್ಮ ಬಲಪಕ್ಕಕ್ಕೆ ತಿರುಗಿ ಮಲಗಿರಿ
-ಎದ್ದು ಕೂತು ಕಾಲುಗಳೆರಡನ್ನು ನಿಮ್ಮ ಮುಂದೆ ಚಾಚಿರಿ
-ನಂತರ ಪುನಃ ಬೋರಲು ಮಲಗಿರಿ
Proning as an aid to help you breathe better during #COVID19 pic.twitter.com/FCr59v1AST
— Ministry of Health (@MoHFW_INDIA) April 22, 2021
ಬೋರಲು ಮಲಗಲು ಮಾಡಬೇಕಾದವುಗಳು ಮತ್ತು ಮಾಡದಿರಬೇಕಾದವುಗಳು:
– ಊಟ ಮಾಡಿದ ನಂತರ ಒಂದು ತಾಸಿನವರೆಗೆ ಬೋರಲು ಮಲಗುವ ಪ್ರಯತ್ನ ಮಾಡಬೇಡಿ
-ನಿಮಗೆ ಎಷ್ಟು ಸಲ ಸಾಧ್ಯವೋ ಅಷ್ಟು ಸಲ ಮಾತ್ರ ಬೋರಲು ಮಲಗುವುದನ್ನು ಮಾಡಿ
-ವ್ಯಕ್ತಿಯೊಬ್ಬ ದಿನವೊಂದರ ವಿವಿಧ ಅವಧಿಗಳಲ್ಲಿ 16 ಗಂಟೆಗಳ ಕಾಲ ಬೋರಲು ಮಲಗಬಹುದಾಗಿದೆ.
– ಒತ್ತಡ ಹೆಚ್ಚು-ಕಡಿಮೆ ಮಾಡಲು ನಮಗೆ ಹಿತವೆನಿಸಸುವ ಹಾಗೆ ತಲೆದಿಂಬುಗಳನ್ನು ಅಡ್ಜಸ್ಟ್ ಮಾಡಿಕೊಳ್ಳಬಹುದು.
-ಗಾಯ, ಹುಣ್ಣುಗಳಂಥವು ದೇಹದಲ್ಲಿದ್ದರೆ ವಿಶೇಷವಾಗಿ ಅವು ಪ್ರಮುಖ ಮೂಳೆಗಳಿರುವ ಪ್ರದೇಶಗಳಲ್ಲಿದ್ದರೆ ಬೋರಲು ಮಲಗುವ ಪ್ರಯತ್ನ ಯಾರು ಮಾಡಬಾರದು
ಈ ಕೆಳಕಂಡ ಸ್ಥಿತಿಗಳಿದ್ದರೆ ಬೋರಲು ಮಲಗುವ ಪ್ರಯತ್ನ ಮಾಡಬಾರದು
-ಗರ್ಭವತಿ ಮಹಿಳೆಯರು
-ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ತೊಂದರೆ ಇರುವವರು ( 48 ಗಂಟೆಗಳಷ್ಟು ಮುಂಚೆ ಚಿಕಿತ್ಸೆಗೊಳಗಾಗಿದ್ದರೆ)
-ದೊಡ್ಡ ಪ್ರಮಾಣದ ಹೃದ್ರೋಗಗಳಿಂದ ಬಳಲುತ್ತಿರುವವರು
-ಬೆನ್ನೆಲುಬು, ತೊಡೆ ಮೂಳೆ ಇಲ್ಲವೇ ಸೊಂಟದ ಭಾಗದಲ್ಲಿ ಮೂಳೆ ಮುರಿತಕ್ಕೊಳಗಾದವರು
ಇದನ್ನೂ ಓದಿ: Thank You Coronavirus Helpers: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಡೂಡಲ್ ಗೌರವ ಸಲ್ಲಿಸಿದ ಗೂಗಲ್