Alzheimer: ಹೆಚ್ಚೆಚ್ಚು ಸ್ಮಾರ್ಟ್​ಫೋನ್ ಬಳಕೆ ಮಾಡ್ತಿದ್ದೀರಾ, ಹಾಗಾದರೆ ಈ ರೋಗ ಗ್ಯಾರಂಟಿ

ಅಲ್ಜೈಮರ್ ಎಂಬುದು ಬುದ್ಧಿಮಾಂದ್ಯತೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದ್ದು, ಈ ವಾಸಿ ಮಾಡಲಾಗದ ಮಾರಕ ಕಾಯಿಲೆಯನ್ನು ಅಲೋಯ್ಸ್​ ಅಲ್ಜೈಮರ್ ಎಂಬ ಜರ್ಮನ್ ಮನೋವೈದ್ಯ 1906ರಲ್ಲಿ ಮೊದಲು ವಿವರಿಸಿದ ಹಾಗೂ ಈ ಕಾಯಿಲೆಗೆ ಅವರ ಹೆಸರನ್ನೇ ಇಡಲಾಯಿತು.

Alzheimer: ಹೆಚ್ಚೆಚ್ಚು ಸ್ಮಾರ್ಟ್​ಫೋನ್ ಬಳಕೆ ಮಾಡ್ತಿದ್ದೀರಾ, ಹಾಗಾದರೆ ಈ ರೋಗ ಗ್ಯಾರಂಟಿ
ಸಾಂಕೇತಿಕ ಚಿತ್ರ
Follow us
TV9 Web
| Updated By: ನಯನಾ ರಾಜೀವ್

Updated on: May 05, 2022 | 3:35 PM

ವಿಶ್ವಾದ್ಯಂತ ಅಲ್ಜೈಮರ್(Alzheimer)ರೋಗ ವೇಗವಾಗಿ ಹರಡುತ್ತಿದೆ, ಅದಕ್ಕೆ ಸಾಕಷ್ಟು ಕಾರಣಗಳೂ ಇವೆ, ಅದರಲ್ಲಿ ಸ್ಮಾರ್ಟ್​ಫೋನ್(Smartphone)ಬಳಕೆಯೂ ಒಂದು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ದಿನದಿಂದ ದಿನಕ್ಕೆ ವಿಶ್ವದ ಜನಸಂಖ್ಯೆ ಪ್ರಮಾಣ ಏರಿಕೆಯಾಗುತ್ತಿದೆ. 2015ರಲ್ಲಿ ಅಲ್ಜೈಮರ್ 49 ಮಿಲಿಯನ್ ಜನರನ್ನು ಕಾಡಿತ್ತು, ಇನ್ನು 2030 ವೇಳೆಗೆ ಸುಮಾರು 75 ಮಿಲಿಯನ್ ಜನರಿಗೆ ತಗುಲಬಹುದು ಎನ್ನುವ ನಿರೀಕ್ಷೆ ಇದೆ. 2022 ಮಾರ್ಚ್ 11ರ ಅಧ್ಯಯನ ವರದಿ ಪ್ರಕಾರ, ಸ್ಮಾರ್ಟ್​ಫೋನ್​ಗಳು, ವೈ-ಫೈ ನೆಟ್​ವರ್ಕ್​ಗಳ ಬಳಕೆದಾರರು ಅಲ್​ಜೈಮರ್​ ರೋಗ(Disease)ಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.

ಈ ಅಧ್ಯಯನದಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ಬಯೋಕೆಮಿಸ್ಟ್ರಿ ಪ್ರೊಫೆಸರ್ ಮಾರ್ಟಿನ್ ಎಲ್. ಬಾಲ್ ಅವರು ಇಲಿಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಅಂತಿಮವಾಗಿ ದೊರೆತ ವರದಿಯಲ್ಲಿ ಸ್ಮಾರ್ಟ್ ಪೋನ್ ಅಥವಾ ವೈಫ್ ಬಳಸುವ ಮಂದಿಯಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚಾಗುವುದಾಗಿ ಹೇಳಲಾಗಿದೆ. ಸಾಮಾನ್ಯವಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಕಂಡು ಬರುವ ಅಲ್ಜೈಮರ್ ಖಾಯಿಲೆಯು ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಈ ಖಾಯಿಲೆಯು ವ್ಯಕ್ತಿಯಲ್ಲಿ ನೆನಪಿನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ, ಆಲ್ಝೈಮರ್ ಖಾಯಿಲೆ ಹೊಂದಿರುವ ವ್ಯಕ್ತಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲದಂತೆ ವರ್ತಿಸಲು ಪ್ರಾರಂಭಿಸುತ್ತಾರೆ.

ವಯಸ್ಸಾದವರಲ್ಲಿ ಅಲ್ಜೈಮರ್ ಆರಂಭಿಕ ಲಕ್ಷಣಗಳಿಗೆ ಗಮನ ಕೊಡುವುದು ಮುಖ್ಯ. ವ್ಯಕ್ತಿಯ ನಡುವಳಿಕೆಗೆ ಮುಖ್ಯವಾದ ನರಗಳ ಕ್ಷೀಣತೆಯಿಂದಾಗಿ ಅಲ್ಜೈಮರ್ ಸಂಭವಿಸುತ್ತದೆ. ಕಳೆದ ಹಲವು ವರ್ಷಗಳಲ್ಲಿ ತಂತ್ರಜ್ಞಾನ ಸಾಕಷ್ಟು ಪ್ರಗತಿ ಸಾಧಿಸಿದೆ, ಇವುಗಳಲ್ಲಿ ಕೆಲವು ವೈದ್ಯಕೀಯ ಕ್ಷೇತ್ರಗಳಲ್ಲೂಪ್ರಯೋಜನಕಾರಿಯಾಗಿದೆ. ಈಗ ಏನಿಲ್ಲವೆಂದರೂ ಪ್ರಪಂಚದಲ್ಲಿ ಕನಿಷ್ಠ 49ಮಿಲಿಯನ್ ಜನರು ಬಳಲುತ್ತಿದ್ದಾರೆಂದು ಹೇಳಲಾಗುವ ಅಲ್ಜೈಮರ್ ಕಾಯಿಲೆಯ ಆರಂಭಿಕ ಹಂತವನ್ನು ಪತ್ತೆಹಚ್ಚಲು ಒಂದು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ವರದಿಯಂತೆ, ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಎರಿಕ್ ಗ್ರಾನ್‌ಹೋಮ್ ಅವರು ಪ್ರಸ್ತುತ ಸ್ಮಾರ್ಟ್‌ಫೋನ್ ಕ್ಯಾಮೆರಾ ತಂತ್ರಜ್ಞಾನವನ್ನು ಬಳಸಿಕೊಂಡು ವಿಶ್ವಾಸಾರ್ಹವಾಗಿ ಪ್ಯುಪಿಲ್ ಹಿಗ್ಗುವಿಕೆ ಡೇಟಾವನ್ನು ಪಡೆಯಬಹುದೇ ಎಂದು ತನಿಖೆ ಮಾಡಲು ಯುನಿವರ್ಸಿಟಿ ಕ್ಯಾಲಿಫೊರ್ನಿಯಾ ಸ್ಯಾನ್ ಡಿಯಾಗೋ ಕಂಪ್ಯೂಟರ್ ಎಂಜಿನಿಯರ್‌ಗಳ ಗುಂಪಿನೊಂದಿಗೆ ಕೆಲಸ ಮಾಡಿದರು. ಈ ಸಹಯೋಗದಿಂದ ಹೊರಹೊಮ್ಮಿದ ಫಲಿತಾಂಶವೇ ಈ ಪ್ರೋಟೋಟೈಪ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಆಗಿದ್ದು ಇದನ್ನು ಮನೆಯಲ್ಲೂ ಸಹ ಬಳಸಬಹುದಾಗಿದೆ.

ಅಲ್ಜೈಮರ್ ಕಾಯಿಲೆ ಎಂದರೇನು? ಅಲ್ಜೈಮರ್ ಎಂಬುದು ಬುದ್ಧಿಮಾಂದ್ಯತೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದ್ದು, ಈ ವಾಸಿ ಮಾಡಲಾಗದ ಮಾರಕ ಕಾಯಿಲೆಯನ್ನು ಅಲೋಯ್ಸ್​ ಅಲ್ಜೈಮರ್ ಎಂಬ ಜರ್ಮನ್ ಮನೋವೈದ್ಯ 1906ರಲ್ಲಿ ಮೊದಲು ವಿವರಿಸಿದ ಹಾಗೂ ಈ ಕಾಯಿಲೆಗೆ ಅವರ ಹೆಸರನ್ನೇ ಇಡಲಾಯಿತು, ಬಹುತೇಕ ಸಂದರ್ಭಗಳಲ್ಲಿ 65 ವರ್ಷಗಳಿಗೂ ಹೆಚ್ಚಿನ ವಯಸ್ಸಿನ ಜನರನ್ನು ಹೆಚ್ಚು ಕಾಡುತ್ತದೆ ಎಂದು ಹೇಳಲಾಗಿದೆಯಾದರೂ ಅದಕ್ಕೂ ಕಡಿಮೆ ವಯಸ್ಸಿನವರೂ ಕೂಡ ಈ ರೋಗದಕ್ಕೆ ತುತ್ತಾಗಿರುವ ನಿದರ್ಶನಗಳಿವೆ. 2006ರಲ್ಲಿ ವಿಶ್ವಾದ್ಯಂತ 26.6 ಮಿಲಿಯನ್ ಮಂದಿ ಈ ಕಾಯಿಲೆಯಿಂದ ನರಳುತ್ತಿದ್ದರು , 2050ರ ವೇಳೆಗೆ ಪ್ರತಿ 85 ಮಂದಿ ಪೈಕಿ ಒಬ್ಬರಿಗೆ ಅಲ್ಜೈಮರ್ ಕಾಯಿಲೆ ಬಹರಬಹುದು ಎಂದು ಅಂದಾಜಿಸಲಾಗಿದೆ. ರೋಗದ ಲಕ್ಷಗಳು ಬೇರೆ ಬೇರೆ ಸ್ವರೂಪದ್ದಾಗಿರುತ್ತದೆ. ಅಲ್ಜೈಮರ್ ಖಾಯಿಲೆಯ ಪ್ರಮುಖ ಲಕ್ಷಣವೆಂದರೆ ನೆನಪಿನ ಶಕ್ತಿ ಕುಂಠಿತಗೊಳ್ಳುವುದು.

ಸಾಮಾನ್ಯವಾಗಿ ಮರೆವು ಒಂದು ರೋಗವೇ ಅಲ್ಲ, ಆದರೆ ಅಲ್ಜೈಮರ್ ರೋಗಕ್ಕೆ ತುತ್ತಾದವರಲ್ಲಿ ನೆನಪಿನ ಶಕ್ತಿ ತುಂಬಾ ಕುಂಠಿತಗೊಳ್ಳುತ್ತದೆ. ಉದಾಹರಣೆಗೆ ಓರ್ವ ವ್ಯಕ್ತಿ ಒಂದು ಸ್ಥಲಕ್ಕೆ ಭೇಟಿ ನೀಡಿದ್ದರೆ, ಒಂದರೆಡು ದಿನಗಳಲ್ಲಿಯೇ ಆತ ಸಂಪೂರ್ಣವಾಗಿ ವಿಷಯವನ್ನು ಮರೆತುಬಿಡುತ್ತಾನೆ. ಕೆಲವು ಬಾರಿ ತಿಂದ ಆಹಾರವೇ ಆತನಿಗೆ ನೆನಪಿರುವುದಿಲ್ಲ. ಇಂತಹ ಲಕ್ಷಣಗಳು ಅಲ್ಜೈಮರ್ ಖಾಯಿಲೆಯ ಅರಂಭಿಕ ಲಕ್ಷಣಗಳಾಗಿವೆ. ಪ್ರತಿ ಖಿನ್ನತೆ ಮತ್ತು ಮನಸ್ಥಿತಿ ಬದಲಾವಣೆಗಳು ಅಲ್ಜೈಮರ್​ನಿಂದ ಬಳಲುತ್ತಿರುವ ವ್ಯಕ್ತಿಯು ಮನಸ್ಥಿತಿಯ ಬದಲಾವಣೆಗಳನ್ನು ಎದುರಿಸಬಹುದು. ಈ ಸಂದರ್ಭದಲ್ಲಿ ವ್ಯಕ್ತಿಗೆ ಖಿನ್ನತೆ ಕಾಡುತ್ತದೆ. ಮಾನಸಿಕವಾಗಿ ಆತನ ಚಿಂತೆನೆ, ಯೋಚನೆಗಳೆಲ್ಲ ಬದಲಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಪ್ರತಿ ಕ್ಷಣವೂ ಗೊಂದಲದಲ್ಲಿಯೇ ಇರುತ್ತಾನೆ, ಏಕಾಗ್ರತೆ ಮತ್ತು ಸಂವಹನದಲ್ಲಿ ತೊಂದರೆ ವ್ಯಕ್ತಿಯು ತನ್ನ ಕೆಲಸದಲ್ಲಿ ಏಕಾಗ್ರತೆಯನ್ನು ಸಾಧಿಸಲು ಹೆಚ್ಚು ಕಷ್ಟಪಡುತ್ತಾನೆ. ಯಾವುದೇ ವಿಷಯ ಅಥವಾ ಕೆಲಸದಲ್ಲಿ ಆತ ತನ್ನ ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಸಮಸ್ಯೆಗಳನ್ನು ಹೊಂದಿರಬಹುದು. ಮಾತನಾಡುವಾಗ ವಾಕ್ಯಗಳಲ್ಲಿ ಸರಿಯಾದ ಪದಗಳನ್ನು ರೂಪಿಸಲು ಕಷ್ಟ ಪಡುತ್ತಾನೆ. ನೆನಪಿನ ಶಕ್ತಿಯ ತೊಂದರೆಯಿಂದ ಸರಿಯಾದ ಪದ ಬಳಕೆಯಿಂದ ವಾಕ್ಯ ರಚಿಸಲು ತೊಂದರೆಗಳಾಗಬಹುದು.

ಹಣವನ್ನು ಎಣಿಸುವಲ್ಲಿ ಅಥವಾ ನಿರ್ವಹಿಸುವಲ್ಲಿ ತೊಂದರೆ ಈ ರೋಗದ ಮತ್ತೊಂದು ಆರಂಭಿಕ ಲಕ್ಷಣವೆಂದರೆ, ವ್ಯಕ್ತಿಯು ಸಾಮಾನ್ಯ ಲೆಕ್ಕಾಚಾರ ಮಾಡುವಲ್ಲಿಯೂ ಗೊಂದಲಕ್ಕೊಳಗಾಗುತ್ತಾನೆ. ಹಣದ ಲೆಕ್ಕಾಚಾರಗಳನ್ನು ಮಾಡುವುದು ಆತನಿಗೆ ಕಷ್ಟವಾಗುತ್ತದೆ. ಹಣವನ್ನು ನಿರ್ವಹಿಸುವಲ್ಲಿ ಅಥವಾ ಬಿಲ್ ಪಾವತಿಸುವಲ್ಲಿ ಗೊಂದಲಕ್ಕೊಳಗಾಗುತ್ತಾನೆ.

ಅಲ್ಜೈಮರ್ ಪತ್ತೆ ಹೇಗೆ? ಅರೆಕ್ಷಣದಲ್ಲಿ ಈ ಹಿಂದೆ ಮಾಡಿದ್ದನ್ನು, ಮಾತಾಡಿದ್ದನ್ನು, ಹೇಳಿದ್ದನ್ನು ಕ್ಷಣಮಾತ್ರದಲ್ಲೇ ಮರೆತು ಬಿಡುತ್ತಾರೆ. ವಸ್ತುವನ್ನು ಎಲ್ಲಿಯೋ ಇಟ್ಟು ಹುಡುಕಾಡಲು ಆರಂಭಿಸುತ್ತಾರೆ, ಮನೆಯವರ ಹೆಸರನ್ನು ಸಹ ಮರೆಯುವುದು. ಪದೇ ,ಪದೇಪದೆ ಕೇಳಿದ್ದನ್ನೆ ಕೇಳುವುದು. ದಾರಿ ತಪ್ಪಿ ಎಲ್ಲಿಯೋ ಹೋಗಿ ಬಿಡುವುದು. ದಿನನಿತ್ಯದ ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವುದು, ಪದೇಪದೆ ಬದಲಾಗುವ ಮಾನಸಿಕ ಸ್ಥಿತಿ, ಶಬ್ದ ಮತ್ತು ದೃಶ್ಯಗಳನ್ನು ಗೃಹಿಸುವಿಕೆಯಲ್ಲಿ ತೊಂದರೆ, ಸರಿಯಾಗಿ ಮಾತನಾಡಲು ಆಗದೆ ಇರುವುದು, ನಿದ್ರೆ ಮತ್ತು ಹಸಿವೆಯಲ್ಲಿ ಬದಲಾವಣೆಗಳು ಆಗುತ್ತವೆ. ಅಲ್ಜೈಮರ್‌ ಅಥವಾ ಮರೆವಿನ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಅದನ್ನು ನಿಯಂತ್ರಿಸಬಹುದು.

ಅಲ್ಜೈಮರ್ ನಿಭಾಯಿಸುವುದು ಹೇಗೆ? ಅಲ್ಜೈಮರ್​ನಿಂದ ಬಳಲುತ್ತಿರುವವರಿಗೆ ವಿಶೇಷ ಕಾಳಜಿ, ಆರೈಕೆಯ ಅಗತ್ಯವಿರುತ್ತದೆ ಮಗುವಿನಂತೆ ಪ್ರೀತಿಯಿಂದ ನೋಡಿಕೊಳ್ಳುವುದು ಅವರಲ್ಲಿ ಚೈತನ್ಯವನ್ನು ತುಂಬುತ್ತದೆ. ಬದುಕಲು, ಕಾಯಿಲೆಯನ್ನು ಎದುರಿಸಲು ಅವರಿಗೆ ಸಹಕಾರವನ್ನು ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ