Health Tips: ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಒಂದಷ್ಟು ಮನೆ ಮದ್ದುಗಳು

ಹೊಟ್ಟೆ ಉಬ್ಬರಿಸಿದಾಗ ಆ ಭಾಗಕ್ಕೆ  ಶಾಖ ಕೊಡಬೇಕು. ಬಿಸಿನೀರು ತುಂಬಿದ ವಾಟರ್​ ಬ್ಯಾಗ್​ ಅಥವಾ ಬಾಟಲಿಯನ್ನು ಆ ಭಾಗದಲ್ಲಿ ಇಡುವುದರಿಂದ ನಿಮಗೆ ರಿಲ್ಯಾಕ್ಸ್ ಸಿಗುತ್ತದೆ.

Health Tips: ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಒಂದಷ್ಟು ಮನೆ ಮದ್ದುಗಳು
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: Skanda

Updated on: May 20, 2021 | 7:24 AM

ಹೊಟ್ಟೆ ಉಬ್ಬರಿಸುವುದು ಅನೇಕರಲ್ಲಿ ಕಂಡುಬರುವ ಸಾಮಾನ್ಯವಾದ ಸಮಸ್ಯೆ. ನಮ್ಮ ಜೀರ್ಣಾಂಗವ್ಯೂಹದಲ್ಲಿ ಅನಿಲ ತುಂಬಿದಾಗ ಹೊಟ್ಟೆ ಉಬ್ಬರಿಸುತ್ತದೆ. ಹೊಟ್ಟೆ ಬಿಗಿತ, ಉಬ್ಬಿ ಬರುವುದು, ನೋವು, ವಾಂತಿ ಇದರ ಲಕ್ಷಣಗಳು. ಹೀಗೆ ಹೊಟ್ಟೆ ಉಬ್ಬರಿಸಲು ಹಲವು ಕಾರಣಗಳು ಇದ್ದರೂ ಅಸಮರ್ಪಕ ಆಹಾರ ವ್ಯವಸ್ಥೆ, ಸರಿಯಾದ ಸಮಯಕ್ಕೆ ಹೊಟ್ಟೆ ತುಂಬಿಸದೆ ಇರುವುದು ಪ್ರಾಥಮಿಕ ಕಾರಣವಾಗಿದೆ. ಇದರ ಹೊರತಾಗಿ ಮಲಬದ್ಧತೆಯಿಂದಲೂ ಹೊಟ್ಟೆ ಗಟ್ಟಿಯಾಗಿ, ಉಬ್ಬರಿಸುತ್ತದೆ. ಇನ್ನು ಅತಿವೇಗದಿಂದ ಆಹಾರ ಸೇವನೆ ಮಾಡುವುದು, ಸಿಕ್ಕಾಪಟೆ ಚೀವಿಂಗ್​ ಗಮ್​ ಅಗೆಯುವುದು, ಧೂಮಪಾನವೂ ಸಹ ಈ ಉಬ್ಬರಿಸುವಿಕೆಗೆ ಕಾರಣವಾಗುತ್ತದೆ.

ಹೊಟ್ಟೆ ಉಬ್ಬರಿಸುವಿಕೆ ತೀರ ಜಾಸ್ತಿಯಿದ್ದರೆ ವೈದ್ಯರ ಬಳಿ ತೋರಿಸಿಕೊಳ್ಳಬೇಕು. ಅವರು ಹೇಳಿದ ಔಷಧಿಯನ್ನು ಚಾಚೂತಪ್ಪದೆ ತೆಗೆದುಕೊಳ್ಳಬೇಕು. ಅದರ ಹೊರತಾಗಿ ಮನೆಯಲ್ಲೇ ಕೆಲವು ಔಷಧಿಗಳನ್ನು ಮಾಡಿಕೊಳ್ಳುವ ಮೂಲಕ ಹೊಟ್ಟೆ ಉಬ್ಬರಿಸುವ ಸಮಸ್ಯೆಯಿಂದ ಪಾರಾಗಬಹುದು. ಇಲ್ಲಿದೆ ನೋಡಿ ಅಂಥ ಕೆಲವು ವಿಧಾನಗಳು:

1.ಆ್ಯಪಲ್​ ಸೈಡರ್ ವಿನೆಗರ್​ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಕಿಣ್ವಗಳ ಉತ್ಪಾದನೆಗೆ ಈ ಆ್ಯಪಲ್ ಸೈಡರ್ ವಿನೆಗರ್​ ಸಹಾಯ ಮಾಡುತ್ತದೆ. ಈ ಮೂಲಕ ಹೊಟ್ಟೆ ಉಬ್ಬರಿಸುವುದು, ನೋವು ಬರುವುದನ್ನು ತಡೆಯುತ್ತದೆ. ಊಟ ಅಥವಾ ತಿಂಡಿಗೆ ಮೊದಲು ಒಂದು ಲೋಟ ನೀರಿಗೆ ಆ್ಯಪಲ್ ಸೈಡರ್​ ವಿನೆಗರ್​ನ್ನು ಬೆರೆಸಿ ಕುಡಿಯಬೇಕು. ಹೀಗೆ ಮಾಡಿದರೆ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

2.ಹರ್ಬಲ್ ಚಹಾ ಗ್ರೀನ್​ ಟೀ, ಶುಂಠಿ ಚಹಾ, ಪುದೀನಾ ಚಹಾ ಮತ್ತು ಕ್ಯಾಮೋಮೈಲ್ ಚಹಾಗಳಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಅಂಶಗಳಿರುತ್ತವೆ. ಹೊಟ್ಟೆ ಉಬ್ಬರವಾದಾಗ ಇವುಗಳಲ್ಲಿ ಯಾವುದಾದರೂ ಒಂದು ಚಹಾವನ್ನು ಕಪ್​​ ಸೇವಿಸುವುದರಿಂದ ದೇಹಕ್ಕೆ ಸಮಾಧಾನ ಸಿಗುತ್ತದೆ. ಹಾಗೇ, ಮನಸಿಗೂ ಶಾಂತಿ ಉಂಟಾಗುತ್ತದೆ.

3.ವ್ಯಾಯಾಮ ಇನ್ನು ಹೊಟ್ಟೆಯಲ್ಲಿ ಗ್ಯಾಸ್​ ತುಂಬುವುದರಿಂದ ಪಾರಾಗಲು ದೈಹಿಕ ಚಟುವಟಿಕೆ, ವ್ಯಾಯಾಮಗಳು ತುಂಬ ಸಹಕಾರಿ. ಯೋಗ, ಸ್ಕಿಪ್ಪಿಂಗ್​, ಸ್ಟ್ರೆಚಿಂಗ್​​ಗಳಂಥ ವ್ಯಾಯಾಮ ಮಾಡಿದರೆ ಈ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

4.ಶಾಖ ಕೊಡಿ ಇನ್ನು ಹೊಟ್ಟೆ ಉಬ್ಬರಿಸಿದಾಗ ಆ ಭಾಗಕ್ಕೆ  ಶಾಖ ಕೊಡಬೇಕು. ಬಿಸಿನೀರು ತುಂಬಿದ ವಾಟರ್​ ಬ್ಯಾಗ್​ ಅಥವಾ ಬಾಟಲಿಯನ್ನು ಆ ಭಾಗದಲ್ಲಿ ಇಡುವುದರಿಂದ ನಿಮಗೆ ರಿಲ್ಯಾಕ್ಸ್ ಸಿಗುತ್ತದೆ. ಅಲ್ಲಿನ ಮಾಂಸಖಂಡಗಳೂ ಸಡಿಲಗೊಳ್ಳುತ್ತವೆ.

5. ಮೊಸರು ಪ್ರೋಬಿಯಾಟಿಕ್​​ಗಳು ಕರುಳಿನಲ್ಲಿ ಸೂಕ್ಷ್ಮಜೀವಿಗಳನ್ನು ನಿಯಂತ್ರಿಸುತ್ತವೆ. ಈ ಮೂಲಕ ಜೀರ್ಣಾಂಗ ವ್ಯೂಹವನ್ನು ಆರೋಗ್ಯವಾಗಿಡುತತ್ವೆ. ಅದರಲ್ಲಿ ಮೊಸಲು ಕೂಡ ಪ್ರಮುಖ ಪ್ರೋಬಿಯಾಟಿಕ್​ ಆಗಿದ್ದು, ಅದನ್ನು ನಿಮ್ಮ ಬೆಳಗಿನ ಉಪಾಹಾರ, ಸ್ನಾಕ್​ ರೂಪದಲ್ಲಿ ಸೇವಿಸಬಹುದು. ಈ ಮೂಲಕ ಹೊಟ್ಟೆ ಉಬ್ಬರಿಸುವಿಕೆಯಿಂದ ಪಾರಾಗಬಹುದು.

ಇವೆಲ್ಲ ಹೊಟ್ಟೆ ಉಬ್ಬರವನ್ನು ನಿಯಂತ್ರಿಸುವ ಸಣ್ಣಪುಟ್ಟ ವಿಧಾನಗಳಾಗಿವೆ. ಆದರೆ ಪದೇಪದೆ ಈ ಸಮಸ್ಯೆ ಎದುರಾಗುತ್ತಿದ್ದರೆ, ಹೊಟ್ಟೆ ನೋವು ಹೆಚ್ಚಾಗಿದ್ದರೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಲೇಬೇಕಾಗುತ್ತದೆ. ಯಾಕೆಂದರೆ ಕೆಲವೊಮ್ಮೆ ಈ ಹೊಟ್ಟೆ ಉಬ್ಬರಿಸುವಿಕೆ ಬೇರೆ ಕೆಲವು ರೋಗಗಳ ಲಕ್ಷಣವೂ ಆಗಿರಬಹುದು. ಹಾಗಾಗಿ ಎಚ್ಚರಿಕೆ ಇರಬೇಕು.

ಇದನ್ನೂ ಓದಿ: Health Tips: ಪೌಷ್ಠಿಕಾಂಶಯುಕ್ತ ಸಾಮಗ್ರಿಗಳೇ ಅಡುಗೆ ಕೋಣೆಯಲ್ಲಿ ತುಂಬಿರಲಿ, ಪ್ರೋಟೀನ್​ಯುಕ್ತ ಆಹಾರವನ್ನೇ ಸೇವಿಸಿ

 ಕರ್ನಾಟಕದಲ್ಲಿ ಉತ್ಪಾದಿಸುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಲು ಕೇಂದ್ರದ ತಾತ್ವಿಕ ಒಪ್ಪಿಗೆ: ಜಗದೀಶ್‌ ಶೆಟ್ಟರ್‌