ವರ್ಕ್​ ಫ್ರಂ ಹೋಮ್​ ನಡುವೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕೆಲವು ಸಲಹೆಗಳು

ವರ್ಕ್​ ಫ್ರಂ ಹೋಮ್​ ನಡುವೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕೆಲವು ಸಲಹೆಗಳು
ಸಾಂಕೇತಿಕ ಚಿತ್ರ

ವರ್ಕ್​ ಫ್ರಂ ಹೋಮ್​ನಲ್ಲಿ ಕೆಲಸ ಮಾಡುತ್ತಿರುವವರು ಪ್ರತಿನಿತ್ಯ ಲ್ಯಾಪ್​ಟಾಪ್​ ಅಥವಾ ಕಂಪ್ಯೂಟರ್​ಗೆ ಅಂಟಿಕೊಂಡಿರಬಹುದು. ಹೀಗಿರುವಾಗ ಕಣ್ಣಿನ ಕಾಳಜಿ ಬಹಳ ಮುಖ್ಯ. ಬೆಳಿಗ್ಗೆಯಿಂದ ಸಂಜೆಯವರೆಗೆ ವಿರಾಮವಿಲ್ಲದೇ ಲ್ಯಾಪ್​ಟಾಪನ್ನೇ ದಿಟ್ಟಿಸಿ ನೋಡಿ ಕಣ್ಣಿಗೆ ಒತ್ತಡ ಉಂಟಾಗುತ್ತದೆ. ಅತ್ಯಂತ ಸೂಕ್ಷ್ಮವಾದ ಕಣ್ಣಿನ ಬಗೆಗೆ ನಿರ್ಲಕ್ಷ್ಯ ಬೇಡ.

TV9kannada Web Team

| Edited By: shruti hegde

Jun 06, 2021 | 10:42 AM

ದೇಶದಲ್ಲಿ ಕೊರೊನಾ ಹಾವಳಿಯಿಂದಾಗಿ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲಾಯಿತು. ಅನಗತ್ಯವಾಗಿ ಹೊರಗಡೆ ತಿರುಗಾಡದೇ ಮನೆಯಲ್ಲಿಯೇ ಇರುವಂತಹ ಪರಿಸ್ಥಿತಿ ಎದುರಾಯಿತು. ಹೀಗಿರುವಾಗ ಮನೆಯಲ್ಲಿರುವ ಎಲ್ಲರೂ ಸಹಜವಾಗಿ ಎಲೆಕ್ಟ್ರಾನಿಕ್​ ವಸ್ತುಗಳಾದ ಟಿವಿ, ಮೊಬೈಲ್​, ಕಂಪ್ಯೂಟರ್​ಗೆ ಹೊಂದಿಕೊಂಡರು. ಹೀಗಿರುವಾಗ ಕಣ್ಣಿಗೆ ಹೆಚ್ಚು ಒತ್ತಡ ಬೀಳುತ್ತದೆ. ಕಣ್ಣಿನಲ್ಲಿ ನೀರು ತುಂಬಿಕೊಳ್ಳುವುದು, ಕಣ್ಣಿನ ಉರಿಯೂತ, ತುರಿಕೆಯಂತಹ ಸಮಸ್ಯೆಗಳು ಎದುರಾಗಿರಬಹುದು. ಅದಕ್ಕೆ ಪರಿಹಾರ ಕ್ರಮಗಳೇನು ಎಂಬುದರ ಕುರಿತಾಗಿ ತಿಳಿದುಕೊಳ್ಳಿ.

ಇದೀಗ ವರ್ಕ್​ ಫ್ರಂ ಹೋಮ್​ನಲ್ಲಿ ಕೆಲಸ ಮಾಡುತ್ತಿರುವವರು ಪ್ರತಿನಿತ್ಯ ಲ್ಯಾಪ್​ಟಾಪ್​ ಅಥವಾ ಕಂಪ್ಯೂಟರ್​ಗೆ ಅಂಟಿಕೊಂಡಿರಬಹುದು. ಹೀಗಿರುವಾಗ ಕಣ್ಣಿನ ಕಾಳಜಿ ಬಹಳ ಮುಖ್ಯ. ಬೆಳಿಗ್ಗೆಯಿಂದ ಸಂಜೆಯವರೆಗೆ ವಿರಾಮವಿಲ್ಲದೇ ಲ್ಯಾಪ್​ಟಾಪನ್ನೇ ದಿಟ್ಟಿಸಿ ನೋಡಿ ಕಣ್ಣಿಗೆ ಒತ್ತಡ ಉಂಟಾಗುತ್ತದೆ. ಅತ್ಯಂತ ಸೂಕ್ಷ್ಮವಾದ ಕಣ್ಣಿನ ಬಗೆಗೆ ನಿರ್ಲಕ್ಷ್ಯ ಬೇಡ.

ಮನೆಯಿಂದಲೇ ಕೆಲಸ ಮಾಡುವಾಗ ಕಣ್ಣಿಗೆ ಸ್ವಲ್ಪ ವಿರಾಮ ನೀಡಿ. ಜತೆಗೆ ಕಂಪ್ಯೂಟರ್​ ಕನ್ನಡಕವನ್ನು ಧರಿಸುವುದು ಉತ್ತಮ. ಒಂದೇ ಸಮನೆ ಕಂಪ್ಯೂಟರ್​ಅನ್ನು ದಿಟ್ಟಿಸಿ ನೋಡುತ್ತಿರುವಾಗ ನೇರವಾಗಿ ಬೆಳಕು ನಮ್ಮ ಕಣ್ಣಿಗೆ ಪ್ರತಿಫಲಿಸದಂತೆ ಸಹಕರಿಸುತ್ತದೆ. ಹಾಗೂ ಉತ್ತಮ ಪೌಷ್ಠಿಕಾಂಶಯುಕ್ತ ಆಹಾರ ನಿಮ್ಮದಾಗಿರಲಿ. ಇವುಗಳನ್ನು ಪಾಲಿಸುವುದರಿಂದ ನಿಮ್ಮ ಕಣ್ಣಿನ್ನು ಅನಗತ್ಯ ಒತ್ತಡದಿಂದ ಉಳಿಸಬಹುದು.

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದಿಷ್ಟು ಸಲಹೆಗಳು ಆರೋಗ್ಯಕರ ಆಹಾರ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ನಿಮ್ಮ ಕಣ್ಣಿನ ಆರೋಗ್ಯವನ್ನು ನೋಡಿಕೊಳ್ಳುವ ಏಕೈಕ ಮಾರ್ಗವೆಂದರೆ ಆರೋಗ್ಯಕರ ಆಹಾರ. ವಿಟಮಿನ್​ಯುಕ್ತ ಆಹಾರ ಪದಾರ್ಥವನ್ನು ಸೇವಿಸುವುದರಿಂದ ನಿಮ್ಮ ಕಣ್ಣಿನ ಆರೈಕೆಯನ್ನು ಮಾಡಿಕೊಳ್ಳಬಹುದು. ಹಾಗಾಗಿ ಪೌಷ್ಠಿಕಾಂಶಯುಕ್ತ ಆಹಾರವೇ ನಿಮ್ಮದಾಗಿರಲಿ.

ಆಹಾರ ಕ್ರಮ ಹೇಗಿರಬೇಕು? ತರಕಾರಿಗಳು, ಪೌಷ್ಠಿಕಾಂಶಯುಕ್ತ ಹಣ್ಣುಗಳನ್ನು ಸೇವಿಸಿ. ಕ್ಯಾರೆಟ್​, ಕಿತ್ತಳೆ ಹಣ್ಣು, ಬಾಳೆಹಣ್ಣು, ಮಾವಿನ ಹಣ್ಣು, ದ್ರಾಕ್ಷಿ ಹಣ್ಣುಗಳನ್ನು ಸೇವಿಸಿ. ವಿಟಮಿನ್​ ಎ ಮತ್ತು ಸಿ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥವನ್ನು ಹೆಚ್ಚು ಸೇವಿಸಿ. ಹಾಗೂ ಹಸಿರು ಎಲೆಗಳು, ಸೊಪ್ಪಿನ ಪದಾರ್ಥವನ್ನು ಸೇವಿಸಿ. ಈ ಮೂಲಕ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಅಧಿಕ ಕೆಲಸದಿಂದ ವಿರಾಮ ತೆಗೆದುಕೊಳ್ಳಿ ದಿಟ್ಟಿಸಿ ಕಂಪ್ಯೂಟರ್ ಅಥವಾ ದೂರದರ್ಶನವನ್ನು ನೋಡುತ್ತಿರುವುದರಿಂದ ಕಣ್ಣಿಗೆ ಹೆಚ್ಚಿನ ಒತ್ತಡ ಉಂಟಾಗಿರುತ್ತದೆ. ಹಾಗಾಗಿ 10-15 ನಿಮಿಷಗಳ ನಂತರ ಕಣ್ಣನ್ನು ಒಮ್ಮೆ ಮುಚ್ಚಿ ಕೆಲವು ಸೆಕೆಂಡುಗಳ ಕಾಲ ವಿಶ್ರಾಂತಿ ಪಡೆಯಿರಿ. ಪ್ರತಿ ಎರಡು ಗಂಟೆಗೊಮ್ಮೆ ಕಣ್ಣಿನ ಸುತ್ತಲಿನ ಸ್ಯಾಯುವಿಗೆ ಬೆರಳುಗಳಿಂದ ಮಸಾಜ್​ ಮಾಡಿ. ಆಥವಾ ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ. ಆಗಾಗ ನಿಮ್ಮ ಕಣ್ಣುಗಳನ್ನು ಮಿಟಿಕಿಸುತ್ತಿರಿ. ಕಣ್ಣುಗಳನ್ನು ಉಜ್ಜುವುದನ್ನು ಆದಷ್ಟು ತಪ್ಪಿಸಿ.

ಕುಟುಂಬ ಮತ್ತು ಸಾಕು ಪ್ರಾಣಿಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ ಮನೆಯಲ್ಲಿ ಸಾಕಿದ ಪ್ರಾಣಿಗಳು ಅಥವಾ ಪಾಲಕರು-ಪೋಷಕರು-ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ. ಮನೆಯಲ್ಲಿ ಮಕ್ಕಳು ಪ್ರತಿನಿತ್ಯ ಮೊಬೈಲ್​, ಟಿವಿ ನೋಡುತ್ತಿರುವುದನ್ನು ತಪ್ಪಿಸಬಹುದು. ಹಾಗೂ ಮಕ್ಕಳು ಕುಟುಂಬದವರೊಡನೆ ಬೆರೆತಂತೆಯೂ ಆಗುತ್ತದೆ. ಇಲ್ಲವೇ ಮೊಬೈಲ್​ ಆತವಾ ಕಂಪ್ಯೂಟರ್​ನಂತಹ ಎಲೆಕ್ಟ್ರಾನಿಕ್​ ವಸ್ತುಗಳನ್ನು ಬದಿಗಿಟ್ಟು ಒಳಾಂಗಣ ಆಟವನ್ನು ಆಡಿಸಿ. ಈ ಮೂಲಕ ನಿಮ್ಮ ಹಾಗೂ ಮಕ್ಕಳ ಮನಸ್ಸು ಚೈತನ್ಯದಿಂದ ಕೂಡಿರುತ್ತದೆ ಹಾಗೂ ಕಣ್ಣಿಗೆ ಹೆಚ್ಚು ಒತ್ತಡ ಉಂಟಾಗುವುದಿಲ್ಲ.

ಸೂಚನೆ: ಯಾವುದೇ ಕಾರಣಕ್ಕೂ ನಿಮ್ಮ ಸೂಕ್ಷ್ಮವಾದ ಕಣ್ಣಿನ ಬಗ್ಗೆ ಅಲಕ್ಷ್ಯ ಬೇಡ. ಕಣ್ಣು ಸೂಕ್ಷ್ಮ ಭಾಗವಾಗಿದ್ದು ಒಂದು ಕ್ಷಣದ ನಿರ್ಲಕ್ಷ್ಯವೂ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು. ಹಾಗಾಗಿ ನಿಮ್ಮ ಆರೋಗ್ಯದ ಕುರಿತಾಗಿ ನಿಮಗೆ ಕಾಳಜಿ ಇರಲಿ. ಆರೋಗ್ಯದಲ್ಲಿ ಏರು-ಪೇರು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ವೈದ್ಯರ ಬಳಿ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: 

Health Tips: ಬಾದಾಮಿ ಸೇವನೆಯ 5 ಆರೋಗ್ಯಕಾರಿ ಪ್ರಯೋಜನಗಳು

Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ

Follow us on

Related Stories

Most Read Stories

Click on your DTH Provider to Add TV9 Kannada