Quitting smoking: ಧೂಮಪಾನ ಸೇವನೆ ಕಡಿಮೆಯಾಗುತ್ತಿದೆ! ಯಾಕೆ ಗೊತ್ತಾ? ಏನಿದೆ ಸದ್ಯದ ಚಿತ್ರಣ?
Quit Smoking: ಇಲ್ಲೊಂದು ಜಾಣ್ಮೆಯ ನುಡಿ ಹೇಳಬೇಕು ಅಂದರೆ ಜನರು, ವಿಶೇಷವಾಗಿ ಯುವಕರು, ಸಾಮಾನ್ಯವಾಗಿ ಗೆಳೆಯರ ಒತ್ತಡದಿಂದಾಗಿ, ಪರಿಸ್ಥಿತಿಗಳ ಒತ್ತಡದಿಂದಾಗಿ ಧೂಮಪಾನವನ್ನು ಪ್ರಾರಂಭಿಸುತ್ತಾರೆ. ಒಮ್ಮೆ ಆರಂಭಿಸಿದರೆ ನಿಲ್ಲಿಸುವುದು ಕಷ್ಟವಾಗುತ್ತದೆ. ತಂಬಾಕು ಧೂಮಪಾನ ಪ್ರಾರಂಭಿಸಿದ ನಂತರ ಅದನ್ನು ಬಿಟ್ಟುಬಿಡುವುದಕ್ಕೆ ಪ್ರಯತ್ನಿಸುವುದಕ್ಕಿಂತಾ ಎಂದಿಗೂ ಅದನ್ನು ಪ್ರಾರಂಭಿಸದಿರುವುದು ಉತ್ತಮ ಅನಿಸುತ್ತದೆ.
ಹೊಗೆ ಸಂಕೇತಗಳು: ಸಿಗರೇಟ್ ಮತ್ತು ಬೀಡಿ ಸೇವನೆಯು ನಿಮ್ಮ ಜೀವವನ್ನು ಹೇಗೆ ಹೊಗೆಯಾಡಿಸಬಲ್ಲವು, ನಿಮ್ಮ ಆರೋಗ್ಯ ಮತ್ತು ಜೀವಿತಾವಧಿಯ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ಸಾದ್ಯಂತವಾಗಿ ತಿಳಿಯೋಣ. ಕ್ಲುಪ್ತವಾಗಿ ಹೇಳಬೇಕು ಅಂದರೆ ಧೂಮಪಾನಿಗಳು ಸ್ಮೋಕಿಂಗ್ ಮಾಡದವರಿಗಿಂತ 3 ಪಟ್ಟು ಬೇಗನೆ ಸಾಯುತ್ತಾರೆ. ಅಂದರೆ ಸುಮಾರು ಒಂದು ದಶಕದಷ್ಟು ತಮ್ಮ ಅಮೂಲ್ಯ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ.
ಅದೃಷ್ಟವಶಾತ್, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಗಾಗ್ಗೆ ಜಾರಿಗೊಳಿಸಿರುವ ಕಠಿಣ ಕಾನೂನುಗಳಿಂದಾಗಿ ಸಿಗರೇಟ್ ಸೇವನೆಯು ಪ್ರಪಂಚದಾದ್ಯಂತ ಕ್ಷೀಣಿಸುತ್ತಿದೆ. ಇನ್ನು ಸ್ಮೋಕರುಗಳಿಗೆ ಹೆಚ್ಚು’ವರಿ’ಯಾಗಿ ಕಾಲಕಾಲಕ್ಕೆ ಹೆಚ್ಚು ಹೆಚ್ಚು ತೆರಿಗೆ ವಿಧಿಸುತ್ತಾ ಬಂದಿರುವುದರಿಂದ ಸಿಗರೇಟ್‌ಗಳ ಬೆಲೆ ನಿರಂತರವಾಗಿ ಏರುಗತಿಯಲ್ಲಿಯೇ ಇದೆ. ಸಿಗರೇಟ್ ಬೆಲೆ ಎಂದಿಗೂ ಕಮ್ಮಿಯಾಗಿಲ್ಲ. ಇದರ ಜೊತೆಗೆ ತಂಬಾಕು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯೂ ಕಾರಣೀಭೂತವಾಗಿವಾಗಿದೆ. ಇನ್ನು ಇ-ಸಿಗರೇಟ್‌ಗಳಂತಹ ಕಡಿಮೆ ಹಾನಿಕಾರಕ ಆಯ್ಕೆಗಳು ಸ್ಮೋಕಿಂಗ್ ದುರಭ್ಯಾಸ ಕಡಿಮೆ ಮಾಡಿಕೊಳ್ಳುವುದಕ್ಕೆ ಶಕ್ತ್ಯಾನುಸಾರ ಕೊಡುಗೆ ನೀಡುತ್ತಿದೆ.
ಇಲ್ಲೊಂದು ಜಾಣ್ಮೆಯ ನುಡಿ ಹೇಳಬೇಕು ಅಂದರೆ ಜನರು, ವಿಶೇಷವಾಗಿ ಯುವಕರು, ಸಾಮಾನ್ಯವಾಗಿ ಗೆಳೆಯರ ಒತ್ತಡದಿಂದಾಗಿ, ಪರಿಸ್ಥಿತಿಗಳ ಒತ್ತಡದಿಂದಾಗಿ ಧೂಮಪಾನವನ್ನು ಪ್ರಾರಂಭಿಸುತ್ತಾರೆ. ಒಮ್ಮೆ ಆರಂಭಿಸಿದರೆ ನಿಲ್ಲಿಸುವುದು ಕಷ್ಟವಾಗುತ್ತದೆ. ತಂಬಾಕು ಧೂಮಪಾನ ಪ್ರಾರಂಭಿಸಿದ ನಂತರ ಅದನ್ನು ಬಿಟ್ಟುಬಿಡುವುದಕ್ಕೆ ಪ್ರಯತ್ನಿಸುವುದಕ್ಕಿಂತಾ ಎಂದಿಗೂ ಅದನ್ನು ಪ್ರಾರಂಭಿಸದಿರುವುದು ಉತ್ತಮ ಅನಿಸುತ್ತದೆ. ಈ ಹಿನ್ನೆಲೆಯಲ್ಲಿ ಸಿಗರೇಟ್ ಸೇದುವುದಕ್ಕೆ ಸಂಬಂಧಿಸಿದ ಕೆಲವು ಸರಳ ಆದರೆ ಗಂಭೀರ ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ.
ಸಿಗರೇಟ್ ಸೇದುವುದು ಏಕೆ ಹಾನಿಕಾರಕ?
ಸಿಗರೇಟ್‌ಗಳಲ್ಲಿ ಬಳಸಲಾಗುವ ತಂಬಾಕು ಮತ್ತು ಇತರ ವಸ್ತುಗಳು ದೇಹಕ್ಕೆ ಹಾನಿಯನ್ನುಂಟುಮಾಡುತ್ತವೆ. ಅನಾರೋಗ್ಯ ಮತ್ತು ಕೊನೆಗೆ ಮರಣಕ್ಕೂ ಕಾರಣವಾಗಬಲ್ಲದು.
ಎ. ಹೆಚ್ಚಿದ ಮರಣ ಪ್ರಮಾಣ. ಧೂಮಪಾನಿಗಳು ಧೂಮಪಾನಿಗಳಲ್ಲದವರಿಗಿಂತ ಮೂರು ಪಟ್ಟು ಬೇಗನೇ ಸಾಯುತ್ತಾರೆ. ಅವರ ಜೀವಿತಾವಧಿಯ ಸರಿಸುಮಾರು ಒಂದು ದಶಕವನ್ನು ಕಳೆದುಕೊಳ್ಳುತ್ತಾರೆ. ಇದು ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶದ ಹಾನಿ, ಹೆಚ್ಚಿದ ಹೃದಯರಕ್ತನಾಳದ ಅಪಾಯ (ಹೃದಯಾಘಾತ, ಪಾರ್ಶ್ವವಾಯು) ಮತ್ತು ಒಟ್ಟಾರೆಯಾಗಿ ಕ್ಷೀಣಗೊಳ್ಳುವ ಇಮ್ಯುನಿಟಿ ಶಕ್ತಿಯೂ ಕಾರಣವಾಗುತ್ತದೆ.
ಬಿ. ಹೆಚ್ಚಿದ ಅಸ್ವಸ್ಥತೆ. ಇದರರ್ಥ ಕಡಿಮೆ ಆರೋಗ್ಯದ ಅವಧಿ ಮತ್ತು ಅಂಗವೈಕಲ್ಯದೊಂದಿಗೆ ಬದುಕುವುದು. ಕ್ಯಾನ್ಸರ್ ಹೊಂದಿರುವ ಹೆಚ್ಚಿನ ಜನರು ಸಾಮಾನ್ಯವಾಗಿ ಪತ್ತೆಯಾದ ಐದು ವರ್ಷಗಳಲ್ಲಿ ಸಾಯುತ್ತಾರೆ, ದೀರ್ಘಕಾಲದ ಶ್ವಾಸಕೋಶದ ಸಮಸ್ಯೆಗಳು ಮತ್ತು ಹೃದಯ ಮತ್ತು ಮಿದುಳಿನ ಕಾಯಿಲೆಗಳಿರುವವರು ಇತರರಿಗೂ ಹೊರೆಯಾಗಿ, ಕ್ಷೀಣ ಜೀವನವನ್ನು ಮುಂದುವರಿಸುತ್ತಾರೆ.
ಭಾರತದಲ್ಲಿ ಸಿಗರೇಟ್ ಸೇವನೆಯಿಂದ ಉಂಟಾಗುವ ಕಾಯಿಲೆಗಳ ಹೊರೆ ಏನು?
ತಂಬಾಕು ಸೇವನೆಯಿಂದ ಪ್ರತಿ ವರ್ಷ ಭಾರತದಲ್ಲಿ ಸುಮಾರು 1.2 ರಿಂದ 1.3 ಮಿಲಿಯನ್ (12 ರಿಂದ 13 ಲಕ್ಷ) ಸಾವುಗಳು ಸಂಭವಿಸುತ್ತಿವೆ. ಭಾರತದಲ್ಲಿನ ಎಲ್ಲಾ ವಯಸ್ಕರ ಪೈಕಿ ಸುಮಾರು 10 % ತಂಬಾಕು ಸೇವಿಸುತ್ತಾರೆ. ಆದರೂ ಇದು ಹಿಂದಿನ ದಶಕಕ್ಕೆ ಹೋಲಿಸಿದರೆ 15% ರಿಂದ ಕಡಿಮೆಯಾಗಿದೆ. ಬಡವರಲ್ಲಿಯೇ ಹೆಚ್ಚು ಧೂಮಪಾನ ಮಾಡುತ್ತಾರೆ. ಕಿರಿಯ ವಯಸ್ಸಿನಿಂದ ಪ್ರಾರಂಭಿಸುತ್ತಾರೆ. ಆದರೆ ಮುಂಧೆ ಅವರಲ್ಲಿ ಧೂಮಪಾನ ತ್ಯಜಿಸುವವ ಪ್ರಮಾಣ ಕಡಿಮೆಯಿರುತ್ತದೆ. ಈಶಾನ್ಯ ಮತ್ತು ಪೂರ್ವ ರಾಜ್ಯಗಳು ಹೆಚ್ಚು ಧೂಮಪಾನದ ದರವನ್ನು ಹೊಂದಿವೆ, ತ್ರಿಪುರ ಅಗ್ರಸ್ಥಾನದಲ್ಲಿದ್ದರೆ ಮಟ್ರೋ ರಾಜ್ಯಗಳ ಪೈಕಿ ಕೊಲ್ಕತ್ತಾ ಮಹಾನಗರ ಮೊದಲ ಸ್ಥಾನದಲ್ಲಿದೆ.
ಧೂಮಪಾನವನ್ನು ನಿಲ್ಲಿಸುವುದು ನಿಜಕ್ಕೂ ಏಕೆ ಮುಖ್ಯವಾಗುತ್ತದೆ ಗೊತ್ತಾ!?
ಜಾಗತಿಕವಾಗಿ, ಸೆಕೆಂಡ್ ಹ್ಯಾಂಡ್ ಸ್ಮೋಕರುಗಳು ಅಂದರೆ ಧೂಮಪಾನಿ ಹೊರಸೂಸುವ ಧೂಮ ಸೇವಿಸಿದವರಲ್ಲಿ 52 ಮಂದಿಯ ಮಧ್ಯೆ ಒಬ್ಬರು ಸಾವಿಗೀಡಾಗುತ್ತಾರೆ. ಶಿಶುಗಳು, ಯುವಕರು ಮತ್ತು ಗರ್ಭಿಣಿಯರಿಗೆ ಇದರಿಂದ ಹೆಚ್ಚುವರಿ ಹಾನಿಯುಂಟಾಗುತ್ತದೆ.
Also Read: ರೇಷ್ಮೆ ಸೀರೆ ತಯಾರಿಸುವುದು ಹೇಗೆ? ಒಂದು ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳ ಪರಿಶ್ರಮ ಬೇಕಾಗುತ್ತೆ ಗೊತ್ತಾ?
ಇತರ ಮೇಲಾಧಾರ ಹಾನಿ ಎಂದರೆ ಧೂಮಪಾನದಿಂದ ಉಂಟಾಗುವ ಕಾಯಿಲೆಗಳಿಂದ ಉಂಟಾಗುವ ಖರ್ಚುವೆಚ್ಚ ಅಧಿಕವಾಗತೊಡಗಿದೆ. ಭಾರತವು ತನ್ನ GDP ಯ ಸುಮಾರು 1% ರಷ್ಟು ತಂಬಾಕು ಬಳಕೆಗೆ ಸಂಬಂಧಿಸಿದ ವೆಚ್ಚಗಳಿಗೆ ಖರ್ಚು ಮಾಡುತ್ತದೆ. ತಂಬಾಕು ಮಾರಾಟದಿಂದ (ಎಲ್ಲಾ ರೂಪಗಳಲ್ಲಿ) ಸರ್ಕಾರವು ಪಡೆಯುವ ತೆರಿಗೆ ಮೊತ್ತವು ರೂ 100 ಆಗಿದ್ದರೆ, 816 ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಇದು ಋಣಾತ್ಮಕ ಮೊತ್ತದ ಲೆಕ್ಕಾವಾರವಾಗಿದ್ದು ಅದು ಖಜಾನೆಯನ್ನು ಬರಿದು ಮಾಡುತ್ತದೆ. ವೈಯಕ್ತಿಕ ಮಟ್ಟದಲ್ಲಿ, ತಂಬಾಕು-ಸಂಬಂಧಿತ ಅನಾರೋಗ್ಯವು ದುರಂತಮಯ ಖರ್ಚಿಗೆ ಕಾರಣವಾಗುತ್ತದೆ. ಬಡವರು ಹೆಚ್ಚು ಧೂಮಪಾನ ಮಾಡುತ್ತಾರೆ. ಜೊತೆಗೆ ಸಾಮಾನ್ಯವಾಗಿ ಅವರು ಯಾವುದೇ ವಿಮೆಯನ್ನು ಹೊಂದಿರುವುದಿಲ್ಲ. ಸ್ಮೋಕ್ ಮಾಡುವವರು ದೊಡ್ಡ ಆರ್ಥಿಕ ಹೊರೆಯನ್ನು ಹೊರುತ್ತಾರೆ ಮತ್ತು ಮತ್ತಷ್ಟು ಬಡತನಕ್ಕೆ ಜಾರುತ್ತಾರೆ.
ಧೂಮಪಾನವನ್ನು ನಿಲ್ಲಿಸಲು ಸಾಧ್ಯವಾ?
ಇದು ಖಂಡಿತಾ ಸುಲಭ ಸಾಧ್ಯವಲ್ಲ. ಇದಕ್ಕೆ ಪರಿಹಾರಗಳನ್ನು ಹುಡುಕಲು ಸರ್ಕಾರಿ ಸಂಸ್ಥೆಗಳು ಶತಕೋಟಿ ರೂಪಾಯಿಗಳನ್ನು ಸುರಿಯುತ್ತವೆ. ಜನರು ಧೂಮಪಾನ ಮಾಡುವುದನ್ನು ಕಾನೂನುಗಳು ಕಷ್ಟಕರವಾಗಿಸಿದರೂ, ಒಂದೆರಡು ದಿನಗಳ ಮಟ್ಟಿಗೆ ಸೇದುವ ಸಿಗರೇಟುಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತವೆ. ಆದರೆ ಅಂತಿಮವಾಗಿ ನಿಲ್ಲಿಸಲು ವೈಯಕ್ತಿಕ ಪ್ರೇರಣೆಯೇ ನಿರ್ಣಾಯಕವಾಗಿಬಿಡುತ್ತದೆ. ಧೂಮಪಾನವನ್ನು ಪ್ರೋತ್ಸಾಹಿಸುವ ಜನರು ಮತ್ತು ಪರಿಸರದಿಂದ ದೂರ ಹೋದರೆ ಅದು ಸಹಾಯ ಮಾಡುತ್ತದೆ. ನಿಕೋಟಿನ್ ಎಂಬುದು ದೇಹಕ್ಕೆ ಮತ್ತು ಮನಸ್ಸಿಗೆ ವ್ಯಸನಕಾರಿಯಾಗಿದೆ. ಆಲ್ಕೋಹಾಲ್‌ನಂತೆ, ಕೆಲವು ಜನರು ಅದನ್ನು ನಿಲ್ಲಿಸಲು ಅಸಾಧ್ಯವೆಂದು ಕಂಡುಕೊಳ್ಳುತ್ತಾರೆ. ಇದು ನಿಜಕ್ಕೂ ದುರಂತವೇ ಸರಿ. ಮೊದಲೇ ಹೇಳಿದಂತೆ, ಪ್ರಾರಂಭಿಸಿದ ನಂತರ ಬಿಡಲು ಪ್ರಯತ್ನಿಸುವುದಕ್ಕಿಂತ ಪ್ರಾರಂಭಿಸದಿರುವುದೇ ಉತ್ತಮ.
ಅವರದು ಸಿಟ್ಟಿಂಗ್ ಆನ್ ದಿ ವಾಲ್ ಜಾಯಮಾನ:
ಇನ್ನು ಕೆಲವು ಧೂಮಪಾನ ವ್ಯಸನಿಗಳು ಇದ್ದಾರೆ. ಅವರದು ಸಿಟ್ಟಿಂಗ್ ಆನ್ ದಿ ವಾಲ್ ಜಾಯಮಾನ. ಆ ಕಡೆಗೂ ನೆಗೆಯುವುದಿಲ್ಲ- ಈಕಡೆಗೂ ನೆಗೆಯುವುದಿಲ್ಲ. ಬಟ್ ಅಲ್ಲೇ ಇರಲೂ ಒದ್ಲಾಡುತ್ತಿರುತ್ತಾರೆ. ಅಂತಹವರಿ ಸಮರ್ಥ ಮನೋಚಿಕಿತ್ಸೆ ನೀಡಿದರೆ ಖಂಡಿತಾ ಅವರು ಧೂಮಪಾನ ಬಿಡುವಲ್ಲಿ ಯಶಸ್ವಿಯಾಗಬಲ್ಲರು.
ವ್ಯಾಪಿಂಗ್/ಇ-ಸಿಗರೇಟ್ ಬಳಕೆ/ನಿಕೋಟಿನ್ ಪ್ಯಾಚ್‌ಗಳು ಕಡಿಮೆ ಹಾನಿಕಾರಕ ಪರ್ಯಾಯಗಳಾಗಿ ಕಾರ್ಯನಿರ್ವಹಿಸುತ್ತವೆಯೇ? ಎಂಬ ಪ್ರಶ್ನೆ ಪೆಡಂಭೂತವಾಗಿ ಎದುರಾದಾಗ ಸರಳ ಉತ್ತರ ಹೌದು ಎಂದಾಗುತ್ತದೆ.
ನಿಕೋಟಿನ್ ಅಂದಾಕ್ಷಣ ಅದು ಕ್ಯಾನ್ಸರ್ಕಾರ ಎಂದಲ್ಲ. ತಂಬಾಕು ಹೊಗೆಯಲ್ಲಿರುವ ಇತರ ಪದಾರ್ಥಗಳೂ ಕ್ಯಾನ್ಸರಿಗೆ ಕಾರಣವಾಗುತ್ತವೆ. ಇದು ನಿಕೋಟಿನ್ ಪ್ಯಾಚ್‌ಗಳು, ನಿಕೋಟಿನ್ ಚೂಯಿಂಗ್ ಗಮ್ ಮತ್ತು ಮುಂತಾದವುಗಳ ರೂಪದಲ್ಲಿ ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿಯೊಂದಿಗೆ (NRT) ಧೂಮಪಾನಿಗಳನ್ನು ಸಿಗರೇಟ್‌ಗಳಿಂದ ದೂರವಿಡಲು ನಿಕೋಟಿನ್ ಆಧಾರಿತ ಪರ್ಯಾಯ ವಿಧಾನಗಳಿಗೆ ಕಾರಣವಾಗಿದೆ. ಇ-ಸಿಗರೇಟ್ (ECs) ಎಂದೂ ಕರೆಯಲ್ಪಡುವ ನಿಕೋಟಿನ್ ಧೂಮಪಾನದ ವಿತರಣಾ ವ್ಯವಸ್ಥೆಗಳು ಜನರನ್ನು ಸಿಗರೇಟ್‌ನಿಂದ ದೂರವಿಡುವ ಮತ್ತೊಂದು ಪರಿಹಾರವಾಗಿದೆ.
Published On - 2:23 pm, Thu, 16 May 24