ಮೆದುಳು ಮಾತ್ರವಲ್ಲ ದೇಹದ ಬೇರೆ ಭಾಗಗಳೂ ನೆನಪುಗಳನ್ನು ಸಂಗ್ರಹಿಸುತ್ತವೆ: ಹೊಸ ಸಂಶೋಧನೆ

ಸಾಮಾನ್ಯವಾಗಿ ನೆನಪುಗಳು ಶಾಶ್ವತವಾಗಿ ಉಳಿಯುವುದು ನಿಮ್ಮ ಮೆದುಳಿನಲ್ಲಿ, ನಿಮ್ಮ ದೇಹದ ಇತರೆ ಭಾಗಗಳು ನೆನಪುಗಳನ್ನು ಸಂಗ್ರಹಿಸಬಲ್ಲದು ಎಂದರೆ ನೀವು ನಂಬ್ತೀರಾ?. ಆದರೆ ಸಂಶೋಧನೆಯೊಂದು ಅದನ್ನು ಸತ್ಯ ಎಂದು ಬಹಿರಂಗಪಡಿಸಿದೆ. ಕೇವಲ ನಿಮ್ಮ ಮೆದುಳು ಮಾತ್ರವಲ್ಲ ನಿಮ್ಮ ದೇಹದ ಇತರೆ ಅಂಗಗಳು ಕೂಡ ನೆನಪುಗಳನ್ನು ಸಂಗ್ರಹಿಸುತ್ತವೆ.

ಮೆದುಳು ಮಾತ್ರವಲ್ಲ ದೇಹದ ಬೇರೆ ಭಾಗಗಳೂ ನೆನಪುಗಳನ್ನು ಸಂಗ್ರಹಿಸುತ್ತವೆ: ಹೊಸ ಸಂಶೋಧನೆ
ಮೆಮೊರಿImage Credit source: Medicalnewstoday
Follow us
|

Updated on: Nov 10, 2024 | 1:49 PM

ಸಾಮಾನ್ಯವಾಗಿ ನೆನಪುಗಳು ಶಾಶ್ವತವಾಗಿ ಉಳಿಯುವುದು ನಿಮ್ಮ ಮೆದುಳಿನಲ್ಲಿ, ನಿಮ್ಮ ದೇಹದ ಇತರೆ ಭಾಗಗಳು ನೆನಪುಗಳನ್ನು ಸಂಗ್ರಹಿಸಬಲ್ಲದು ಎಂದರೆ ನೀವು ನಂಬ್ತೀರಾ?. ಆದರೆ ಸಂಶೋಧನೆಯೊಂದು ಅದನ್ನು ಸತ್ಯ ಎಂದು ಬಹಿರಂಗಪಡಿಸಿದೆ. ಕೇವಲ ನಿಮ್ಮ ಮೆದುಳು ಮಾತ್ರವಲ್ಲ ನಿಮ್ಮ ದೇಹದ ಇತರೆ ಅಂಗಗಳು ಕೂಡ ನೆನಪುಗಳನ್ನು ಸಂಗ್ರಹಿಸುತ್ತವೆ.

ಮೆದುಳು ನೆನಪುಗಳನ್ನು ಸಂಗ್ರಹಿಸುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ, ಆದರೆ ದೇಹದ ಇತರೆ ಭಾಗಗಳು ನೆನಪುಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

ಇತರೆ ಜೀವಕೋಶಗಳು ಹೇಗೆ ನೆನಪುಗಳನ್ನು ಸಂಗ್ರಹಿಸುತ್ತವೆ? ಮೆದುಳಿನ ಕೋಶಗಳು ಮಾಹಿತಿಯ ಮಾದರಿಗಳನ್ನು ಕಂಡುಕೊಂಡಾಗ, ಅವು ಮೆಮೊರಿ ಜೀನ್​ಗಳನ್ನು ಸಕ್ರಿಯಗೊಳಿಸುತ್ತವೆ. ಮತ್ತು ಅವುಗಳ ರಚನೆಯನ್ನು ಮರುಸಂಘಟನೆಗೊಳಿಸುತ್ತವೆ. ಈ ಪ್ರಕ್ರಿಯೆಯನ್ನು ಇತರೆ ಜೀವಕೋಶಗಳಲ್ಲಿಯೂ ಗಮನಿಸಲಾಗಿದೆ. ವಿವಿಧ ರಾಸಾಯನಿಕ ಸಂಕೇತಗಳಿಗೆ ಪ್ರತಿಕ್ರಿಯಿಸಿ, ಮೆಮೊರಿ ಮತ್ತು ಕಲಿಕೆಯ ಪ್ರಕ್ರಿಯೆಗಳು ಸಹ ಈ ಕೋಶಗಳಲ್ಲಿ ಕಂಡುಕೊಳ್ಳಲಾಗಿದೆ.

ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯು ಮೆದುಳಿನ ಅಸ್ವಸ್ಥತೆಗಳ ಚಿಕಿತ್ಸೆಗೆ ಹೊಸ ಮಾರ್ಗವನ್ನು ಕಂಡುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪ್ರಮುಖ ಲೇಖಕ ನಿಕೊಲಾಯ್ ವಿ. ಕುಕುಶ್ಕಿನ್, ದೇಹದ ಇತರ ಜೀವಕೋಶಗಳು ಸಹ ಕಲಿಯಬಹುದು ಮತ್ತು ನೆನಪುಗಳನ್ನು ರೂಪಿಸಬಹುದು ಎಂದು ಹೇಳಿದರು.

ಮತ್ತಷ್ಟು ಓದಿ: ವಿಶ್ವ ರೋಗನಿರೋಧಕ ದಿನ ಏಕೆ ಆಚರಿಸಲಾಗುತ್ತದೆ? ಈ ವಿಶೇಷ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆ ತಿಳಿಯಿರಿ

ಮೆದುಳಿನ ಕೋಶಗಳಂತೆಯೇ ಮೆದುಳೇತರ ಕೋಶಗಳು ಸಹ ಆನ್ ಆಗುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮೆದುಳಿನಲ್ಲದ ಕೋಶಗಳಲ್ಲಿ ಮೆಮೊರಿಗೆ ಸಂಬಂಧಿಸಿದ ಜೀನ್‌ಗಳು ಸಕ್ರಿಯವಾಗಿವೆಯೇ ಎಂದು ಕಂಡುಹಿಡಿಯಲು ಸಂಶೋಧಕರು ಪ್ರೋಟೀನ್ ಅನ್ನು ಬಳಸಿದರು. ರಾಸಾಯನಿಕ ಸಂಕೇತಗಳು ಪುನರಾವರ್ತಿತವಾಗುತ್ತಿದ್ದಂತೆ, ಈ ಜೀವಕೋಶಗಳಲ್ಲಿನ ಮೆಮೊರಿ ಜೀನ್‌ಗಳು ಸಹ ಸಕ್ರಿಯಗೊಳ್ಳಲು ಪ್ರಾರಂಭಿಸಿದವು, ಇದು ಮೆದುಳು ಕಾರ್ಯನಿರ್ವಹಿಸುವ ವಿಧಾನವನ್ನು ಹೋಲುತ್ತದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿದವು.

2018ರಲ್ಲಿ ನಡೆದ ಸಂಶೋಧನೆಯೊಂದರಲ್ಲಿ ಮಾನವ ದೇಹದಲ್ಲಿ, ಕರುಳನ್ನು ಎರಡನೇ ಮೆದುಳು ಎಂದು ಕರೆಯಲಾಗುತ್ತದೆ. ಇದು ಬೆನ್ನುಹುರಿಗಿಂತ ಹೆಚ್ಚಿನ ನರಕೋಶಗಳನ್ನು ಹೊಂದಿದೆ ಮತ್ತು ದೇಹದ ಕೇಂದ್ರ ನರಮಂಡಲದಿಂದ ಸಂಪೂರ್ಣವಾಗಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

ಕರುಳಿನ ಸಂಕೀರ್ಣ ಕೆಲಸವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯು ಆಹಾರವನ್ನು ಜೀರ್ಣಿಸಿಕೊಳ್ಳುವುದನ್ನು ಹೊರತುಪಡಿಸಿ ಅನೇಕ ಕೆಲಸಗಳನ್ನು ಮಾಡುತ್ತದೆ ಎಂದು ವೈದ್ಯರು ನಂಬುತ್ತಾರೆ. ಮಾನಸಿಕ ಅಸ್ವಸ್ಥತೆ ಮತ್ತು ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಬಹುದೇ ಅಥವಾ ಇಲ್ಲವೇ ಎಂಬುದನ್ನು ವೈದ್ಯರು ಕಂಡುಕೊಳ್ಳುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ತಿಳಿಸಲಾಗಿತ್ತು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ