ಅತಿ ಹೆಚ್ಚು ಕೀಟನಾಶಕ ಸಿಂಪಡಿಸುವ ಹಣ್ಣು ಮತ್ತು ತರಕಾರಿಗಳಿವು
ನಾವು ಆರೋಗ್ಯಕರವೆಂಬ ನಂಬಿಕೆಯಿಂದ ತಿನ್ನುವ ತರಕಾರಿ ಹಾಗೂ ಹಣ್ಣುಗಳು ಸಂಪೂರ್ಣವಾಗಿ ಆರೋಗ್ಯಕರವಾಗಿರುವುದಿಲ್ಲ. ಇವುಗಳಿಗೆ ಸಿಂಪಡಿಸಲಾಗುವ ರಾಸಾಯನಿಕಗಳು ನಿಧಾನವಾಗಿ ನಮ್ಮ ದೇಹವನ್ನು ಸೇರಿ ಸ್ಲೋ ಪಾಯ್ಸನ್ನಂತೆ ಆರೊಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನಾವು ಇಷ್ಟಪಟ್ಟು ತಿನ್ನುವ ಹಣ್ಣು ಹಾಗೂ ತರಕಾರಿಗಳಲ್ಲಿ ಯಾವುದಕ್ಕೆ ಅತಿ ಹೆಚ್ಚು ಕೀಟನಾಶಕಗಳನ್ನು ಸಿಂಪಡಿಸುತ್ತಾರೆ ಎಂಬುದು ನಿಮಗೆ ಗೊತ್ತಾ?
ತರಕಾರಿಗಳು ಹಾಗೂ ಹಣ್ಣುಗಳಿಗೆ ವಿಪರೀತ ಕೀಟನಾಶಕಗಳನ್ನು ಸಿಂಪಡಿಸುವುದರಿಂದಾಗಿ ಇತ್ತೀಚೆಗೆ ಆರ್ಗಾನಿಕ್ ತರಕಾರಿ ಹಾಗೂ ಹಣ್ಣುಗಳಿಗೆ ಭಾರೀ ಬೇಡಿಕೆ ಬಂದಿದೆ. ಕೀಟನಾಶಕಮುಕ್ತ ಹಣ್ಣು ಹಾಗೂ ತರಕಾರಿಗಳನ್ನು ಜನರು ಹುಡುಕಿಕೊಂಡು ಹೋಗುತ್ತಿದ್ದಾರೆ. ಏಕೆಂದರೆ, ಕೀಟಗಳಿಂದ ತಮ್ಮ ಬೆಳೆಯನ್ನು ಕಾಪಾಡಲು ಸಿಂಪಡಿಸಲಾಗುವ ರಾಸಾಯನಿಕಗಳು ಮನುಷ್ಯರ ಆರೋಗ್ಯದ ಮೇಲೆ ಕ್ರಮೇಣ ಕೆಟ್ಟ ಪರಿಣಾಮ ಬೀರತೊಡಗುತ್ತವೆ. ಅತಿಹೆಚ್ಚು ಪ್ರಮಾಣದ ಕೀಟನಾಶಕ ಅಥವಾ ರಾಸಾಯನಿಕಗಳನ್ನು ಸಿಂಪಡಿಸಲಾಗುವ ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ಸ್ಟ್ರಾಬೆರಿಗಳು:
ನಾವು ತಿನ್ನುವ ಸ್ಟ್ರಾಬೆರಿ ಹಣ್ಣುಗಳಲ್ಲಿ ಶೇ. 30ಕ್ಕಿಂತ ಹೆಚ್ಚು ಕೀಟನಾಶಕದ ಅಂಶಗಳಿರುತ್ತದೆ.
ಸೊಪ್ಪು:
ಮಾರುಕಟ್ಟೆಗಳಲ್ಲಿ ಲಭ್ಯವಿರುವ ಪಾಲಕ್ ಸೊಪ್ಪು ಶೇ. 76ಕ್ಕಿಂತ ಹೆಚ್ಚು ಕೀಟನಾಶಕದ ಅಂಶಗಳಿಂದ ತುಂಬಿರುತ್ತದೆ. ಇದರಲ್ಲಿ ಪರ್ಮೆಥ್ರಿನ್ ಎಂಬುದು ಪ್ರಾಣಿಗಳಿಗೆ ಹೆಚ್ಚು ವಿಷಕಾರಿಯಾದ ನ್ಯೂರೋಟಾಕ್ಸಿಕ್ ಕೀಟನಾಶಕವಾಗಿದೆ. ಪಾಲಕ್ ಕಬ್ಬಿಣ ಮತ್ತು ವಿಟಮಿನ್ ಅಂಶಗಳನ್ನು ಅಧಿಕವಾಗಿ ಹೊಂದಿದ್ದರೂ ಪಾಲಕ್ ಸೊಪ್ಪನ್ನು ಸೇವಿಸುವ ಮೊದಲು ಚೆನ್ನಾಗಿ ತೊಳೆಯಬೇಕು.
ಇದನ್ನೂ ಓದಿ: ಹೊಟ್ಟೆಯ ಕಿರಿಕಿರಿ ಹೆಚ್ಚಾಗಿದೆಯೇ? ಅಜೀರ್ಣವನ್ನು ನಿಯಂತ್ರಿಸುವುದು ಹೇಗೆ?
ಚೆರಿಗಳು:
ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಅತ್ಯುತ್ತಮ ಹಣ್ಣುಗಳಲ್ಲಿ ಚೆರಿಗಳು ಕೂಡ ಒಂದು. ಚೆರಿಗಳು ಸರಾಸರಿ 5 ಕೀಟನಾಶಕ ಶೇಷಗಳನ್ನು ಹೊಂದಿವೆ. ಇದರಲ್ಲಿರುವ ಐಪ್ರೊಡಿಯೋನ್ ಎಂಬ ಕೀಟನಾಶಕವನ್ನು ಒಳಗೊಂಡಂತೆ ಕೆಲವು ಕೀಟನಾಶಕಗಳನ್ನು ಯುರೋಪ್ನಲ್ಲಿ ನಿಷೇಧಿಸಲಾಗಿದೆ.
ಹಸಿರು ಬೀನ್ಸ್:
ತೂಕ ಇಳಿಸಲು ಆರೋಗ್ಯಕ್ಕೆ ಉತ್ತಮ ಆಹಾರಗಳಲ್ಲಿ ಒಂದಾದ ಹಸಿರು ಬೀನ್ಸ್‌ನ ಶೇ. 90ಕ್ಕಿಂತ ಹೆಚ್ಚು ಅಸಿಫೇಟ್ ಮತ್ತು ನ್ಯೂರೋಟಾಕ್ಸಿನ್ ಸೇರಿದಂತೆ ಕೀಟನಾಶಕಗಳನ್ನು 2011ರಲ್ಲಿ ನಿಷೇಧಿಸಲಾಗಿದೆ.
ಕ್ಯಾಪ್ಸಿಕಂ:
ಕ್ಯಾಪ್ಸಿಕಂಗಳು ಇತರ ಹಣ್ಣುಗಳು ಮತ್ತು ತರಕಾರಿಗಳಿಗೆ ಹೋಲಿಸಿದರೆ ಕಡಿಮೆ ಕೀಟನಾಶಕ ಶೇಷಗಳನ್ನು ಹೊಂದಿರುತ್ತವೆ. ಆದರೂ, ಇವುಗಳಲ್ಲಿ ಬಳಸುವ ಕೀಟನಾಶಕಗಳು ಮಾನವನ ಆರೋಗ್ಯಕ್ಕೆ ಹೆಚ್ಚು ವಿಷಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.
ದ್ರಾಕ್ಷಿಗಳು:
ದ್ರಾಕ್ಷಿಯು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾದ ಹೆಚ್ಚಿನ ಕೀಟನಾಶಕ ಶೇಷಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದಾಗಿದೆ.
ಹೂಕೋಸು:
ಹೂಕೋಸು ಅತ್ಯಂತ ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದ್ದರೂ, ಕೀಟನಾಶಕಗಳ ಗರಿಷ್ಠ ಸಿಂಪಡಿಸುವಿಕೆಯನ್ನು ಹೊಂದಿದೆ. ಸಿಂಪಡಿಸಿದ ಕೀಟನಾಶಕಗಳ ಅಪಾಯಕಾರಿ ಪರಿಣಾಮಗಳ ಬಗ್ಗೆ ಹಲವು ಸಾಕ್ಷಿಗಳಿವೆ.
ಬೆಂಡೆಕಾಯಿ:
ಬೆಂಡೆಕಾಯಿಯನ್ನು ಪ್ರತಿ 2ರಿಂದ 3 ದಿನಗಳಿಗೊಮ್ಮೆ ಕೊಯ್ಲು ಮಾಡಲಾಗುತ್ತದೆ. ಇದರಿಂದಾಗಿ ಕೀಟನಾಶಕಗಳ ಶೇಷವು ತುಂಬಾ ಹೆಚ್ಚಿರುತ್ತದೆ.
ಇದನ್ನೂ ಓದಿ: ವಿಶ್ವಾದ್ಯಂತ ಪುರುಷರಲ್ಲಿ ವೀರ್ಯಾಣು ಕುಸಿತಕ್ಕೆ ಕೀಟನಾಶಕಗಳ ಬಳಕೆಯೂ ಕಾರಣ
ಕೀಟನಾಶಕಗಳಿಗೆ ನಮ್ಮ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡಲು 4 ಮಾರ್ಗಗಳು ಇಲ್ಲಿವೆ.
– ನಾವು ತಿನ್ನುವ ಉತ್ಪನ್ನಗಳಿಂದ ಕೀಟನಾಶಕಗಳ ಒಡ್ಡುವಿಕೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು, ತಾಜಾ ಉತ್ಪನ್ನಗಳನ್ನು ಬಳಸುವ ಮೊದಲು ಮತ್ತು ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
– ನಾವು ತಿನ್ನುವ ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆ ತೆಗೆಯುವ ಮೊದಲು ತೊಳೆಯುವುದರಿಂದ ಆ ಉತ್ಪನ್ನಗಳಿಂದ ನಾವು ಬಳಸುವ ಚಾಕುವಿನ ಮೇಲೆ ಕೊಳೆ ಮತ್ತು ಬ್ಯಾಕ್ಟೀರಿಯಾ ಅಂಟುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
– ನಾವು ಹೆಚ್ಚು ಬಳಸುವ ಉತ್ಪನ್ನಗಳಾದ ಸೌತೆಕಾಯಿಗಳು ಮತ್ತು ಕಲ್ಲಂಗಡಿಗಳನ್ನು ಸ್ವಚ್ಛವಾದ ತರಕಾರಿ ಬ್ರಷ್‌ನಿಂದ ಉಜ್ಜಿ ಕ್ಲೀನ್ ಮಾಡಬೇಕು.
– ನಾವು ಬಳಸುವ ಉತ್ಪನ್ನಗಳನ್ನು ಒಣಗಿಸುವುದು ಉತ್ತಮ ಪರಿಹಾರ. ಇದು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆದ ನಂತರ ಕ್ಲೀನ್ ಬಟ್ಟೆ ಅಥವಾ ಪೇಪರ್ ಟವೆಲ್ನಿಂದ ಒರೆಸಿ, ಒಣಗಿಸಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Sat, 24 February 24