Digestion Tips: ಜೀರ್ಣಕ್ರಿಯೆ ಸುಗಮಗೊಳಿಸಲು ಈ ಕ್ರಮಗಳನ್ನು ಪಾಲಿಸಿ: ಆರೋಗ್ಯದಿಂದಿರಿ
ಅಜೀರ್ಣದಿಂದ ಹೊಟ್ಟೆ ಉಬ್ಬರಿಸುವಿಕೆ, ಹೊಟ್ಟೆಯಲ್ಲಿ ಹುಣ್ಣು, ಗ್ಯಾಸ್ಟ್ರೊಸೋಪಿಜಿಲ್ ರಿಪಲಕ್ಸ್ , ಪಿತ್ತಕೋಶದ ಕಾಯಿಲೆಗಳು ಉಲ್ಬಣವಾಗುತ್ತವೆ. ಆದ್ದರಿಂದ ನಾವು ಸೇವಿಸುವ ಆಹಾರ ಜೀರ್ಣವಾಗುವಂತೆಯೂ ನೋಡಿಕೊಳ್ಳಬೇಕು. ನೆನಪಿಡಿ ಅಜೀರ್ಣ ಸಮಸ್ಯೆಯನ್ನು ನಿರ್ಲಕ್ಷಿಸುವುದು ಒಳಿತಲ್ಲ.
ದಿನನಿತ್ಯ ನಾವುಸೇವಿಸುವ ಆಹಾರ ಕೆಲವೊಮ್ಮೆ ಜೀರ್ಣವಾಗದೆ ಕಿರಕಿರಿ ಉಂಟುಮಾಡಬಹುದು. ಇದರಿಂದ ಹಲವು ಅನಾರೋಗ್ಯ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. ಹೀಗಾಗಿ ನಮ್ಮ ಆಹಾರ ಪದ್ಧತಿಯನ್ನು ಜಾಗರೂಕರಾಗಿ ನಿರ್ವಹಿಸುವುದು ಅಗತ್ಯವಾಗಿದೆ. ಅಜೀರ್ಣದಿಂದ ಹೊಟ್ಟೆ ಉಬ್ಬರಿಸುವಿಕೆ, ಹೊಟ್ಟೆಯಲ್ಲಿ ಹುಣ್ಣು, ಗ್ಯಾಸ್ಟ್ರೊಸೋಪಿಜಿಲ್ ರಿಪಲಕ್ಸ್ , ಪಿತ್ತಕೋಶದ ಕಾಯಿಲೆಗಳು ಉಲ್ಬಣವಾಗುತ್ತವೆ. ಆದ್ದರಿಂದ ನಾವು ಸೇವಿಸುವ ಆಹಾರ ಜೀರ್ಣವಾಗುವಂತೆಯೂ ನೋಡಿಕೊಳ್ಳಬೇಕು. ನೆನಪಿಡಿ ಅಜೀರ್ಣ ಸಮಸ್ಯೆಯನ್ನು ನಿರ್ಲಕ್ಷಿಸುವುದು ಒಳಿತಲ್ಲ.
ಅಜೀರ್ಣ ಉಂಟಾಗಿದೆ ಎಂದು ಈ ಲಕ್ಷಣಗಳು ನಿಮಗೆ ತಿಳಿಸುತ್ತವೆ. ಹೊಟ್ಟೆಯಲ್ಲಿ ನೋವು ಮತ್ತು ಸುಡುವ ಅನುಭವ ಹೊಟ್ಟೆ ಉಬ್ಬರಿಸುವಿಕೆ ವಾಕರಿಕೆ ಬಂದಂತಾಗುವುದು ಆಮ್ಲೀಯ ರುಚಿ
ಈ ರೀತಿಯ ಅನುಭವಗಳು ಆದರೆ ನಿಮಗೆ ನೀವು ತಿಂದ ಆಹಾರ ಜೀರ್ಣವಾಗದೆ ತೊಂದರೆ ಕೊಡುತ್ತಿದೆ ಎಂದರ್ಥ. ಹಾಗಾದರೆ ಈ ಅಜೀರ್ಣ ಸಮಸ್ಯೆಗೆ ಪರಿಹಾರವೇನು? ನಮ್ಮ ದೈನಂದಿನ ಅಭ್ಯಾಸಗಳಿಂದಲೇ ಅಜೀರ್ಣ ಸಮಸ್ಯೆನ್ನು ಪರಿಸಹರಿಸಿಕೊಳ್ಳಬಹುದು. ಈ ಕ್ರಮಗಳನ್ನು ಅನುಸರಿಸಿದರೆ ನೀವು ನಿಮ್ಮ ಅಜೀರ್ಣ ಸಮಸ್ಯೆಗೆಅಂತ್ಯ ಹಾಡಬಹುದು
ಬೆಳಗ್ಗೆ ಬಿಸಿ ನೀರಿನ ಸೇವನೆ ಬೆಳಗ್ಗೆ ತಿಂಡಿ ತಿನ್ನುವ ಒಂದು ಗಂಟೆ ಮೊದಲು ಉಗುರುಬೆಚ್ಚಗಿನ ನೀರುವ ಸೇವಿಸಿ. ಇದು ನಿಮ್ಮ ಹೊಟ್ಟೆಯನ್ನು ಶುದ್ಧವಾಗುವಂತೆ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಊಟಕ್ಕೆ ಅರ್ಧಗಂಟೆ ಮೊದಲೂ ಕೂಡ ಬಿಸಿ ನೀರಿನ ಸೇವನೆ ಉತ್ತಮ ಅಭ್ಯಾಸವಾಗಿದೆ. ಬಿಸಿನೀರು ನಿಮ್ಮ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹಾಗೂ ದೇಹವನ್ನೂ ಕೂಡ ಬೆಚ್ಚಗಿರಿಸುತ್ತದೆ.
ಕುಳಿತು ಆಹಾರ ಸೇವಿಸಿ ಯಾವಾಗಲೂ ಕುಳಿತು ಆಹಾರ ಸೇವಿಸಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಜತೆಗೆ ಅವಸರದಲ್ಲಿ ಆಹಾರ ಸೇವನೆ ಒಳಿತಲ್ಲ. ಆದ್ದರಂದ ನಿಧಾನವಾಗಿ ಕುಳಿತು ನಿಮ್ಮ ಊಟವನ್ನು ಅಥವಾ ಆಹಾರವನ್ನು ಸೇವಿಸಿ.
ಹೆಚ್ಚು ನೀರು ಕುಡಿಯಿರಿ ಅಜೀರ್ಣ ಸಮಸ್ಎ ಮಾತ್ರವಲ್ಲದೆ ಇನ್ನೂ ಅನೆಕದೇಹದ ಅನಾರೋಗ್ಯಕರ ಸಮಸ್ಯೆಗಳಿಗೆ ನೀರು ಪರಿಹಾರ ನೀಡುತ್ತದೆ. ಹೀಗಾಗಿ ದಿನಕ್ಕೆ 3-4 ಲೀಗಳಷ್ಟಾದರೂ ನೀರನ್ನು ಸೇವಿಸಿ. ನೀರು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧವಾಗಿರಿಸಲು ನೆರವಾಗುತ್ತದೆ ಹಾಗೂ ಲಿವರ್ ಸಂಬಂಧೀ ಕಾಯಿಲೆಗಳಿಗೂ ಪರಿಹಅರ ನೀಡುತ್ತದೆ.
ನಿಂಬೆರಸದ ಜ್ಯೂಸ್ ಸೇವಿಸಿ ನಿಂಬೆ ರಸ ದೇಹಕ್ಕೆಬೇಕಾದ ತಂಪನ್ನು ನೀಡುತ್ತದೆ. ಪ್ರತಿದಿನ ನೀರಿನೊಂದಿಗೆ ನಿಂಬೆರಸವನ್ನು ಸೇವಿಸುವುದರಿಂದ ನಿಮ್ಮ ಅಜೀರ್ಣ ಸಮಸ್ಯೆ ಊರವಾಗುತ್ತದೆ. ನಿಂಬೆ ರಸದಲ್ಲಿರುವ ಸಿಟ್ರಿಕ್ ಆಮ್ಲ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯಗೆ ರಾಮಬಾಣವಿದ್ದಂತೆ ಸರಿ. ಕೆಲವೊಮ್ಮೆ ಸಭೆ ಸಮಾರಂಭದಲ್ಲಿ ತಿಂದ ಅಹಾರಗಳು ಜೀರ್ಣವಾಗದೆ ಸಮಸ್ಯೆಗೆ ಕಅರಣವಾಗುತ್ತದೆ. ಅಗ ತಕ್ಷಣದ ಪರಿಹಾರವೆಂದರೆ ಅದು ನಿಂಬೆ ಹಣ್ಣಿ ಜ್ಯೂಸ್.
ಆಹಾರವನ್ನು ಅಗೆದು ನುಂಗಿರಿ ನೀವು ತಿಂದ ಆಹಾರವನ್ನು ಚೆನ್ನಾಗಿ ಅಗೆದು ನುಂಗಿರಿ. ಆಹಾರವನ್ನು ಅಗೆಯುವುದರಿಂದ ಜೀರ್ಣಕಾರಿ ಕಿಣ್ವವಾದ ಅಮೈಲೆಸ್ ಅನ್ನು ಉತ್ಪಾದನೆ ಮಾಡುತ್ತದೆ. ಇದು ನಿಮ್ಮ ಜೀರ್ಣಕ್ರೆಯೆಗೆ ಸಹಕಾರಿಯಾಗಿದೆ.
ಫೈಬರ್ ಬರಿತ ಆಹಾರ ಸೇವಿಸಿ ಚೆರಿ, ದ್ರಾಕ್ಷಿ, ಶೇಂಗಾದಂತಹ ಫೈಬರ್ ಅಂಶವಿರುವ ಆಹಾರ ಸೇವಿಸಿ. ಇದು ನಿಮ್ಮ ದೇಹದಲ್ಲಿ ಸರಾಗವಾಗಿ ಜೀರ್ಣವಾಗುತ್ತದೆ. ಜತೆಗೆ ನಿಮ್ಮ ಉಳಿದ ಅಹಾರದೊಂದಿಗೆ ಬೆರೆತು ಜೀರಣಕ್ರಿಯೆ ಉತ್ತಮವಾಗುವಂತೆ ಮಾಡುತ್ತದೆ.
ಕೊಬ್ಬು ತುಂಬಿರುವ ಆಹಾರಕ್ಕೆ ಕಡಿವಾಣವಿರಲಿ ಅತಿಯಾದ ಕೊಬ್ಬು ತುಂಬಿರುವ ಆಹಾರಗಳ ಬಳಕೆ ಕಡಿಮೆಯಿರಲಿ. ಉದಾಹರಣೆಗೆ ಡೈರಿ ಪದಾರ್ಥ. ಸಿಹಿ ತಿನಿಸುಗಳು. ಈ ರೀತಿಯ ಕೊಬ್ಬಿನ ಆಹಾರ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಾಡಬಹುದು. ಆಹಾರ ಸರಿಯಾದ ಕ್ರಮದಲ್ಲಿ ಜೀರ್ಣವಾಗದೆ ಉಳಿದಾಗ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಹೀಗಾಗಿ ತಿಂದ ಆಹಾರ ಹೊಟ್ಟಯಲ್ಲಿ ಹಾಗೇಯೇ ಉಳಿಯದಂತೆ ನೋಡಿಕೊಳ್ಳಿ. ಅನಿವಾರ್ಯವಾಗಿ ಸೇವಿಸುವ ಸಂದರ್ಭ ಬಂದರೆ ಬಿಸಿ ನೀರಿನ ಸೇವನೆಯನ್ನು ಅಭ್ಯಾಸಮಾಡಿಕೊಳ್ಳಿ.
ಮಸಾಲೆಯುಕ್ತ ಆಹಾರವಿರಲಿ ಮತ್ತು ಸಮಯಕ್ಕೆ ಸರಿಯಾಗಿ ತಿನ್ನಿ ನೀವು ತಿನ್ನುವ ಆಹಾರದಲ್ಲಿ ಶುಂಠಿ, ಕರಿಮೆಣಸು, ಕೊತ್ತಂಬರಿ ಸೊಪ್ಪಿನಂತಹ ಪದಾರ್ಥಗಳು ಸೇರಕೊಂಡಿರಲಿ. ಇವು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಇದರ ಜತೆಗೆ ಸರಿಯಾದ ಸಮಯಕ್ಕೆ ಆಹಾರ ಸೇವಿಸುವ ಅಭ್ಯಾಸವಿರಲಿ. ಸಮಯಕ್ಕೆ ಸರಿಯಾಗಿ ತಿನ್ನುವುದು ನಿಮ್ಮ ಜೀರ್ಣಕ್ರಿಯೆಗೆ ಮತ್ತೊಂದು ಕೀಲಿಕೈ ಇದ್ದಂತೆ. ಹೀಗಾಗಿ ತಡರಾತ್ರಿಯ ಊಟವನ್ನು ಮಾಡಲೇಬೇಡಿ. ರಾತ್ರಿ ಯಾವಾಗಲೂ ಲಘು ಆಹಾರಕ್ಕೆ ಆದ್ಯತೆಯಿರಲಿ.
ವ್ಯಾಯಾಮದ ಅಭ್ಯಾಸವಿರಲಿ ಪ್ರತಿದಿನ ಕನಿಷ್ಠ ಅಂದು ಗಂಟೆಯಾದರೂ ವ್ಯಾಯಾಮದ ಅಭ್ಯಾಸವಿರಲಿ. ಇದು ದೇಹದಲ್ಲಿರುವ ಅನಗತ್ಯ ಕೊಬ್ಬನ್ನು ನಿವಾರಿಸುತ್ತದೆ. ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಿ ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ. ಇದರೊಂದಿಗೆ ಸರಿಯಾದ ಪ್ರಮಾಣದಲ್ಲಿ ದೇಹದ ತೂಕ ಕಾಪಾಡಿಕೊಳ್ಳಲು ನೆರವಾಗುತ್ತದೆ.
ಇದನ್ನೂ ಓದಿ:
ದೇಹಕ್ಕೆ ಅಗತ್ಯವಿರುವ ಆಮ್ಲಜನಕ ಮಟ್ಟವನ್ನು ಸುಧಾರಿಸಲು ಈ ಕ್ರಮಗಳನ್ನು ಪಾಲಿಸಿ
ಒಮಿಕ್ರಾನ್ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚು ಮಂದಗೊಳಿಸುತ್ತದೆ: ಅಧ್ಯಯನ ವರದಿ
Published On - 10:06 am, Fri, 10 December 21