AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹಕ್ಕೆ ಅಗತ್ಯವಿರುವ ಆಮ್ಲಜನಕ ಮಟ್ಟವನ್ನು ಸುಧಾರಿಸಲು ಈ ಕ್ರಮಗಳನ್ನು ಪಾಲಿಸಿ

ಆಮ್ಲಜನಕ ಕೊರತೆಯ ಸಮಸ್ಯೆಗಳಿದ್ದಾಗ ಕೆಲವರಿಗೆ ಆಮ್ಲಜನಕ ಟ್ಯಾಂಕರ್​ನ ಅನಿವಾರ್ಯತೆ ಇರುತ್ತದೆ. ಅಂತಹ ಆಮ್ಲಜನಕ ಕೊರತೆಯ ಸಮಸ್ಯೆಗಳಿಗೆ ನಾವು ನಮ್ಮ ದಿನನಿತ್ಯದ ಅಭ್ಯಾಸಗಳಿಂದಲೇ ಪರಿಹಾರ ಕಂಡುಕೊಳ್ಳಬಹುದು.

ದೇಹಕ್ಕೆ ಅಗತ್ಯವಿರುವ ಆಮ್ಲಜನಕ ಮಟ್ಟವನ್ನು ಸುಧಾರಿಸಲು ಈ ಕ್ರಮಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
TV9 Web
| Updated By: Pavitra Bhat Jigalemane|

Updated on:Dec 09, 2021 | 5:23 PM

Share

ದೇಹಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವ ಅಂಶವೆಂದರೆ ಅದು ಆಮ್ಲಜನಕ. ಆಮ್ಲಜನಕದ ಕೊರತೆಯಿಂದ ಹಲವು ತೊಂದರೆಗಳು ಉಂಟಾಗುತ್ತವೆ. ದೀರ್ಘಕಾಲದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಮ್ಲಜನಕದ ಕೊರತೆಯಿಂದ ಉಂಟಾಗುವ ತೊಂದರೆಯ ಅನುಭವವಿರುತ್ತದೆ. ದೇಹದಲ್ಲಿ ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಬಹುದು. ಇತ್ತೀಚೆಗಂತೂ ಕೊರೋನಾ ಬಂದಮೇಲೆ ಕೃತಕ ಆಮ್ಲಜನಕ ಸಿಲಿಂಡರ್​ಗೆ ಬೇಡಿಕೆ ಹೆಚ್ಚಾಗಿದೆ. ದೇಹಕ್ಕೆ ಆಮ್ಲಜನಕ ಕಡಿಮೆಯಾದರೆ ತಲೆನೋವು, ವಿಪರೀತ ಸುಸ್ತು, ಮೂಗಿನಲ್ಲಿ ರಕ್ತ ಕಾಣಿಸಿಕೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ಆಮ್ಲಜನಕ ಕೊರತೆಯ ಸಮಸ್ಯೆಗಳಿದ್ದಾಗ ಕೆಲವರಿಗೆ ಆಮ್ಲಜನಕ ಟ್ಯಾಂಕರ್​ನ ಅನಿವಾರ್ಯತೆ ಇರುತ್ತದೆ. ಅಂತಹ ಆಮ್ಲಜನಕ ಕೊರತೆಯ ಸಮಸ್ಯೆಗಳಿಗೆ ನಾವು ನಮ್ಮ ದಿನನಿತ್ಯದ ಅಭ್ಯಾಸಗಳಿಂದಲೇ ಪರಿಹಾರ ಕಂಡುಕೊಳ್ಳಬಹುದು. ಏಕೆಂದರೆ ದೇಹಕ್ಕೆ ಯಾವಾಗಲೂ ನೈಸರ್ಗಿಕ ಆಮ್ಲಜನಕ ಪೂರೈಕೆಯಾದರೆ ಮಾತ್ರ ಉಸಿರಾಟ ಸರಾಗವಾಗಿ ಆಗಲು ಸಾಧ್ಯ. ನಿಮ್ಮ ದೇಹದ ಆಮ್ಲಜನಕ ಮಟ್ಟ ಸುಧಾರಿಸಲು ಈ ಕ್ರಮಗಳನ್ನು ಅನುಸರಿಸಿ.

ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಿ ನಾವು ತಿನ್ನುವ ಆಹಾರದ ಮೂಲಕ ನಮ್ಮ ದೇಹದ ಒಳಗೆ ಆಮ್ಲಜನಕ ಪೂರೈಕೆಯಾಗುತ್ತದೆ. ಹೀಗಾಗಿ ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಸ್ಟ್ರಾಬೆರಿ, ಬ್ಲಾಕ್​ಬೆರಿ ಹಣ್ಣುಗಳನ್ನು ಸೇವಿಸುವುದರಿಂದ ಅವುಗಳಲ್ಲಿನ ವಿವಿಧ ರಸಗಳು ದೇಹಕ್ಕೆ ಬೇಕಾದ ಆಮ್ಲನಕವನ್ನು ನೀಡುತ್ತದೆ. ವಿಟಮಿನ್​ ಎಫ್​ಗಳಿರುವ ಸೋಯಾಬಿನ್​, ವಾಲ್ನಟ್​ ಅಗಸೆಬೀಜಗಳ ಸೇವನೆಯಿಂದ ರಕ್ತದಲ್ಲಿನ ಹಿಮೋಗ್ಲೊಬಿನ್​ ಸಂಚಾರಕ್ಕೆ ಬೇಕಾದ ಆಮ್ಲಜನಕ ಪೂರೈಸುತ್ತದೆ.

ಕ್ರಿಯಾಶೀಲರಾಗಿರಿ ಆದಷ್ಟು ಚಟುವಟಿಕೆಯಿಂದಿರಿ. ವ್ಯಾಯಾಮ ಮಾಡುತ್ತಿರಿ. ವ್ಯಾಯಾಮದಿಂದ ದೇಹದ ಆರೋಗ್ಯ ಉತ್ತಮವಾಗುವುದಲ್ಲದೆ ದೇಹದಲ್ಲಿ ಆಮ್ಲನಕ ಮಟ್ಟವೂ ಏರುತ್ತದೆ. ದಿನದಲ್ಲಿ 30 ನಿಮಿಷವಾದರೂ ಆರಾಮವಾಗಿ ನಡೆಯಿರಿ ಇದು ದೇಹದಲ್ಲಿ ರಕ್ತಸಂಚಾರ ಹೆಚ್ಚಿಸುತ್ತದೆ. ಅಲ್ಲದೆ ಉಸಿರಾಟ ಸರಾಗವಾಗಿ ಆಗುವಂತೆ ಮಾಡುತ್ತದೆ. ವಾಕಿಂಗ್ ಮಾಡುವುದರಿಂದ ಮನಸ್ಥಿತಿ ಸುಧಾರಿಸುವುದಲ್ಲದೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಜತೆಗೆ ನಿಮ್ಮ ಒತ್ತಡ ನಿವಾರಣೆ ಮಾಡುತ್ತದೆ. ವಾರದಲ್ಲಿ 2-3 ದಿನವಾದರೂ ಜಿಮ್​ಗೆಹೋಗಿ ವರ್ಕೌಟ್​ ಮಾಡಿ, ಇದರಿಂದ ಸ್ನಾಯುಗಳಲ್ಲಿ ರಕ್ತಸಂಚಾರ ಸುಲಲಿತವಾಗುತ್ತದೆ.

ಪ್ರಾಣಾಯಾಮವನ್ನು ಅಭ್ಯಾಸಮಾಡಿಕೊಳ್ಳಿ ದೇಹಕ್ಕೆ ಬೇಕಾದ ಆಮ್ಲಜನಕವನ್ನು ಪ್ರಾಣಾಯಾಮದಿಂದ ಪೂರೈಸಿಕೊಳ್ಳಬಹುದು. ಪ್ರಾಣಾಯಾಮದಿಂದ ಶ್ವಾಸಕೋಶಗಳೂ ಕೂಡ ಬಲವಾಗುತ್ತದೆ. ಉಸಿರನ್ನು ಬಿಗಿಯಾಗಿ ಹಿಡಿದು ಬಿಡುವಾಗ ಶ್ವಾಸಕೋಶ ಸಂಕುಚಿತ ಮತ್ತು ವಿಕಸಿತವಾಗುವುದರಿಂದ ಇಡೀ ದೇಹಕ್ಕೆ ಆಮ್ಲಜನಕ ಪೂರೈಕೆಯಾಗುತ್ತದೆ.

ದೇಹವನ್ನು ತಂಪಾಗಿರಿಸಿಕೊಳ್ಳಿ ಮಾನವನ ದೇಹವು ಸರಿ ಸುಮಾರಿ 60 ಪ್ರತಿಶತದಷ್ಟು ನೀರಿನಿಂದಲೇ ಕೂಡಿದೆ. ಹೀಗಾಗಿ ಆರೋಗ್ಯಯುತ ವ್ಯಕ್ತಿ ದಿನಕ್ಕೆ 3-4ಲೀ ನೀರನ್ನು ಕುಡಿಯಲೇ ಬೇಕು ಎನ್ನುತ್ತಾರೆ ವೈದ್ಯರು. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಕ್ಕರೆ ಆಮ್ಲಜಕನದ ಕೊರೆತೆಯಾಗುವುದಿಲ್ಲ. ಉಷ್ಣತೆ ಹೆಚ್ಚಾದಂತೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದರಿಂದ ದೇಹಕ್ಕೆ ಬೇಕಾದ ಆಮ್ಲಜನಕ ದೊರೆಯುವುದಿಲ್ಲ. ಆದ್ದರಿಂದ ಹೆಚ್ಚು ನೀರು ಕುಡಿಯಿರಿ. ದೇಹವನ್ನು ತಂಪಾಗಿರಸಿಕೊಳ್ಳಿ.

ಇದನ್ನೂ ಓದಿ:

ಒಮಿಕ್ರಾನ್ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚು ಮಂದಗೊಳಿಸುತ್ತದೆ: ಅಧ್ಯಯನ ವರದಿ

Women health: ಮುಟ್ಟಿನ ಸಂದರ್ಭದಲ್ಲಿ ಮೂಡ್ ಸ್ವಿಂಗ್ ಆಗುತ್ತದೆಯೇ? ಕಾರಣ ತಿಳಿಯಿರಿ

Published On - 5:18 pm, Thu, 9 December 21

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ