AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Psoriasis Day 2024: ಸೋರಿಯಾಸಿಸ್ ಸಮಸ್ಯೆಗೆ ಕಾರಣವೇನು? ಇದರಿಂದ ಮುಕ್ತಿ ಪಡೆಯುವುದು ಹೇಗೆ?

ಸೋರಿಯಾಸಿಸ್ ಸಮಸ್ಯೆ ಮಾರಣಾಂತಿಕವಲ್ಲ. ಆದರೆ ಇದರಿಂದ ನಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ಜಾಗೃತಿ ಮೂಡಿಸಲು ಅಕ್ಟೋಬರ್ 29 ರಂದು ವಿಶ್ವ ಸೋರಿಯಾಸಿಸ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದರಿಂದ ವ್ಯಕ್ತಿ ಈ ಸಮಸ್ಯೆ ಬಗ್ಗೆ ತಿಳಿದು ಮತ್ತಷ್ಟು ತೊಂದರೆ ಅನುಭವಿಸುವುದನ್ನು ತಡೆಯಬಹುದಾಗಿದೆ. ಸಾಮಾನ್ಯವಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ರೋಗ ಕಣಗಳ ಮೇಲೆ ದಾಳಿ ನಡೆಸುವುದರಿಂದ ಸೋರಿಯಾಸಿಸ್ ಉಂಟಾಗುತ್ತದೆ. ಹಾಗಾದರೆ ಇದರ ಲಕ್ಷಣಗಳೇನು? ಯಾವ ರೀತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ.

World Psoriasis Day 2024: ಸೋರಿಯಾಸಿಸ್ ಸಮಸ್ಯೆಗೆ ಕಾರಣವೇನು? ಇದರಿಂದ ಮುಕ್ತಿ ಪಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 29, 2024 | 10:27 AM

Share

ಸೋರಿಯಾಸಿಸ್ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ದೀರ್ಘಕಾಲದ ಚರ್ಮದ ಕಾಯಿಲೆಯಾಗಿದ್ದು, ಬಹಳಷ್ಟು ಜನರು ಇದನ್ನು ಸಾಧಾರಣ ಕಾಯಿಲೆ ಎಂದು ಭಾವಿಸುತ್ತಾರೆ. ಹಾಗಾಗಿ ಇದಕ್ಕೆ ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಆದರೆ ಇದು ನಮ್ಮ ಶರೀರದಲ್ಲಿನ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಾಗ ಬರುವ ಚರ್ಮರೋಗ ಎಂಬುದು ನಿಮಗೆ ತಿಳಿದಿದೆಯೇ? ಸೋರಿಯಾಸಿಸ್ ಮಾರಣಾಂತಿಕವಲ್ಲ. ಆದರೆ ಇದರಿಂದ ನಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ಜಾಗೃತಿ ಮೂಡಿಸಲು ಅಕ್ಟೋಬರ್ 29 ರಂದು ವಿಶ್ವ ಸೋರಿಯಾಸಿಸ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದರಿಂದ ವ್ಯಕ್ತಿ ಈ ಸಮಸ್ಯೆ ಬಗ್ಗೆ ತಿಳಿದು ಮತ್ತಷ್ಟು ತೊಂದರೆ ಅನುಭವಿಸುವುದನ್ನು ತಡೆಯಬಹುದಾಗಿದೆ. ಸಾಮಾನ್ಯವಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ರೋಗ ಕಣಗಳ ಮೇಲೆ ದಾಳಿ ನಡೆಸುವುದರಿಂದ ಸೋರಿಯಾಸಿಸ್ ಉಂಟಾಗುತ್ತದೆ. ಹಾಗಾದರೆ ಇದರ ಲಕ್ಷಣಗಳೇನು? ಯಾವ ರೀತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ.

ಯಾವ ರೀತಿ ಕಾಣಿಸಿಕೊಳ್ಳುತ್ತದೆ?

ಮುಖ್ಯವಾಗಿ ಚರ್ಮದ ಮೇಲೆ ತುರಿಕೆಯಿಂದ ಕೂಡಿದ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಸೋರಿಯಾಸಿಸ್‌ನಲ್ಲಿ ಮೊದಲು ಚರ್ಮ ಇನ್‌ಫ್ಲಮೇಶನ್‌ಗೆ ಒಳಗಾಗುತ್ತದೆ. ಇದರಿಂದ ಚರ್ಮದ ಮೇಲಿನ ಪೊರೆ ಕೆಂಪು ಬಣ್ಣದಿಂದ ದದ್ದುಗಳ ರೂಪದಲ್ಲಿ ಕಳಚಿಕೊಳ್ಳುತ್ತದೆ. ಸಾಧಾರಣವಾಗಿ ತಂಪು ವಾತಾವರಣದಲ್ಲಿ ಈ ರೋಗ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಆರೋಗ್ಯವಂತ ಚರ್ಮವು ಕಾಲಕ್ರಮೇಣ ಉದುರುವುದರಿಂದ ಅದರ ಕೆಳಗೆ ಹೊಸ ಜೀವಕೋಶಗಳು ನಿರಂತರವಾಗಿ ಉತ್ಪತ್ತಿಯಾಗುತ್ತಿರುತ್ತವೆ. ಸುಮಾರು ಒಂದು ತಿಂಗಳ ಕಾಲ ಈ ಕಣಗಳು ಹೊರಗಡೆ ಸೇರಿಕೊಳ್ಳುತ್ತವೆ. ಈ ರೀತಿಯ ದೇಹದ ಪೊರೆಯಾಗಿ ಮಾರ್ಪಡುವ ಕಣಗಳು ಕ್ರಮೇಣ ನಿರ್ಜೀವವಾಗಿ ಉದುರಿ ಹೋಗುತ್ತವೆ. ಕೆಳಗಡೆ ಇರುವ ಕಣಗಳನ್ನು ಹೊಸ ಚರ್ಮ ಆಗುವುದಕ್ಕೆ ದಾರಿ ಮಾಡಿಕೊಡುತ್ತದೆ.

ಲಕ್ಷಣಗಳು;

ಗಾತ್ರದಲ್ಲಿ ಬದಲಾಗಬಹುದಾದ ತುರಿಕೆ ಅಥವಾ ನೋವಿನ ಪ್ಲೇಕ್ ಗಳು

ದಪ್ಪವಾದ ಚರ್ಮ

ಸಣ್ಣ ಗುಳ್ಳೆಗಳು (ಕೀವು ಹೊಂದಿರುವ ಗುಳ್ಳೆಗಳು)

ಉಗುರುಗಳ ಕೆಳಗೆ ಬಣ್ಣ ಬದಲಾವಣೆ

ತುಂಡಾಗುವ ಅಥವಾ ಒರಟಾದ ಉಗುರುಗಳು

ಬಿಗಿಯಾದ, ಊದಿಕೊಂಡ, ಅಥವಾ ನೋವಿನ ಕೀಲುಗಳು

ಒಣಗಿದ, ಬಿರುಕು ಬಿಟ್ಟ ಚರ್ಮ ಅಥವಾ ಚರ್ಮದ ಅಲ್ಲಲ್ಲಿ ರಕ್ತಸ್ರಾವವಾಗುವುದು

ಇದನ್ನೂ ಓದಿ: ಮೆದುಳಿನ ಆರೋಗ್ಯ ಕಾಪಾಡಿಕೊಂಡು ಪಾರ್ಶ್ವವಾಯು ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ

ಕಾರಣಗಳೇನು?

ಅನುವಂಶೀಯ ಕಾರಣಗಳಿಂದ ಅಥವಾ ಮಾನಸಿಕ ಒತ್ತಡದಿಂದ ಈ ಕಾಯಿಲೆ ಬರುತ್ತದೆ. ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಅಸಮತೋಲನ ಏರ್ಪಡುತ್ತದೆ. ಅಲ್ಲದೆ ಹಲವು ಬಗೆಯ ಔಷಧಗಳನ್ನು ದೀರ್ಘಕಾಲದ ವರೆಗೆ ಸೇವಿಸುವುದರಿಂದಲೂ ಸೋರಿಯಾಸಿಸ್ ಬರಬಹುದು.

ಪ್ರಚೋದಕಗಳು;

ಸ್ಟ್ರೆಪ್ ಗಂಟಲು ಅಥವಾ ಚರ್ಮದ ಸೋಂಕುಗಳು

ಹವಾಮಾನ, ವಿಶೇಷವಾಗಿ ಶೀತ, ಶುಷ್ಕ ಪರಿಸ್ಥಿತಿಗಳು

ಕೀಟ ಕಡಿತ, ಅಥವಾ ತೀವ್ರವಾದ ಬಿಸಿಲಿನಿಂದ ಚರ್ಮಕ್ಕೆ ಗಾಯ

ಧೂಮಪಾನ ಮತ್ತು ಸೆಕೆಂಡ್ ಹ್ಯಾಂಡ್ ಹೊಗೆಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು

ಅತಿಯಾದ ಆಲ್ಕೋಹಾಲ್ ಸೇವನೆ

ಕೆಲವು ಔಷಧಿಗಳ ಸೇವನೆ

ಸೋರಿಯಾಸಿಸ್ ಗೆ ಚಿಕಿತ್ಸೆ;

ಕ್ರೀಮ್ ಗಳು ಅಥವಾ ಮುಲಾಮುಗಳು

ಮಾತ್ರೆಗಳು, ಚುಚ್ಚುಮದ್ದುಗಳು, ಅಥವಾ ಲಘು ಚಿಕಿತ್ಸೆ

ಮಾಯಿಶ್ಚರೈಸರ್ ಗಳು

ಚರ್ಮದ ಜೀವಕೋಶಗಳ ಉತ್ಪಾದನೆಯನ್ನು ನಿಧಾನಗೊಳಿಸಲು ಔಷಧಿಗಳು

ವಿಟಮಿನ್ ಡಿ 3 ಮುಲಾಮು

ವಿಟಮಿನ್ ಎ ಅಥವಾ ರೆಟಿನಾಯ್ಡ್ ಕ್ರೀಮ್ ಗಳು

ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಮೊದಲು ವೈದ್ಯರನ್ನು ಸಂಪರ್ಕಿಸಿ. ಸರಿಯಾದ ಮದ್ದನ್ನು ಪಡೆಯಿರಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ