AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ಸಮಯದಲ್ಲಿ ನಿಮ್ಮ ಬಾಯಿ ಸ್ವಚ್ಛವಾಗಿರಲೇ ಬೇಕು; ಹಲ್ಲಿನ ಸ್ವಚ್ಛತೆಗೆ ಇಲ್ಲಿದೆ ಸಲಹೆಗಳು

ಬಾಯಿಯಲ್ಲಿನ ಲಾಲಾರಸದ ಮೂಲಕ ಕೊರೊನಾ ವೈರಸ್​ ಶ್ವಾಸಕೋಶವನ್ನು ತಲುಪುತ್ತದೆ. ಅದರಲ್ಲಿಯೂ ವಸಡು ಅಥವಾ ದವಡೆ ಸಮಸ್ಯೆ ಉಳ್ಳವರಿಗೆ ಅತಿ ವೇಗವಾಗಿ ಕೊರೊನಾ ಸೋಂಕು ಹಾನಿ ಮಾಡುತ್ತದೆ.

ಕೊವಿಡ್​ ಸಮಯದಲ್ಲಿ ನಿಮ್ಮ ಬಾಯಿ ಸ್ವಚ್ಛವಾಗಿರಲೇ ಬೇಕು; ಹಲ್ಲಿನ ಸ್ವಚ್ಛತೆಗೆ ಇಲ್ಲಿದೆ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jun 17, 2021 | 8:06 AM

ಉಸಿರಾಟದ ತೊಂದರೆ ಜತೆಗೆ ಕೊವಿಡ್-​19 ದೇಹದ ಇನ್ನಿತರ ಅಂಗಗಳ ಮೇಲೂ ಪರಿಣಾಮ ಬೀರುತ್ತಿದೆ. ಹಾಗಿದ್ದಾಗ ಕೊರೊನಾ ವೈರಸ್​ ವಿರುದ್ಧ ಹೋರಾಡಲು ನಾವು ದಿನನಿತ್ಯದ ಚಟುವಟಿಕೆಯಲ್ಲಿ ಒಂದಿಷ್ಟು ನಿಯಮವನ್ನು ಪಾಲಿಸಲೇಬೇಕು. ಕೊರೊನಾ ಸೋಂಕು ಎಷ್ಟು ಹಾನಿಕರವಾಗಿದೆ? ದೇಹದ ಇತರರ ಅಂಗಗಳಿಗೆ ಪ್ರವೇಶಿಸದಂತೆ ನಾವು ಯಾವ ರೀತಿಯಲ್ಲಿ ಮುನ್ನಚ್ಚರಿಕೆವಹಿಸಬೇಕು? ಎಂಬುದರ ಕುರಿತಾಗಿ ಒಂದಿಷ್ಟು ತಿಳಿಯಲೇ ಬೇಕಾದ ಮಾಹಿತಿ ಇಲ್ಲಿದೆ. 

ಬಾಯಿಯಲ್ಲಿನ ಲಾಲಾರಸದ ಮೂಲಕ ಕೊರೊನಾ ವೈರಸ್​ ಶ್ವಾಸಕೋಶವನ್ನು ತಲುಪುತ್ತದೆ. ಅದರಲ್ಲಿಯೂ ವಸಡು ಅಥವಾ ದವಡೆ ಸಮಸ್ಯೆ ಉಳ್ಳವರಿಗೆ ಅತಿ ವೇಗವಾಗಿ ಕೊರೊನಾ ಸೋಂಕು ಹಾನಿ ಮಾಡುತ್ತದೆ. ಹೀಗಿರುವಾಗ ಹಲ್ಲು ಮತ್ತು ಬಾಯಿಯನ್ನು ಆದಷ್ಟು ಸ್ವಚ್ಛವಾಗಿರಿಸಿಕೊಳ್ಳುವ ಕುರಿತಾಗಿ ನಾವು ಹೆಚ್ಚು ಗಮನಕೊಡಬೇಕಿದೆ.

ಕೊವಿಡ್​-19 ತಗುಲಿದ್ದ ಹೆಚ್ಚಿನ ರೋಗಿಗಳಲ್ಲಿ ಪಿರಿಯಾಂಟೈಸಿಸ್​ ಕಂಡು ಬಂದಿರುವುದರಿಂದ ಲಾಲಾರಸದ ಮೂಲಕ ದೇಹದ ಇತರ ಭಾಗಗಳಿಗೆ ಬ್ಯಾಕ್ಟೀರಿಯಾಗಳು ಹರಡುತ್ತವೆ. ಹಾಗಿದ್ದಾಗ ಇದಕ್ಕೆ ಪರಿಹಾರವೇನು ಎಂಬುದರ ಕುರಿತಾಗಿ ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ.

ಹೆಚ್ಚು ನೀರು ಕುಡಿಯಿರಿ ಮುಖಗವಸು ಧರಿಸುವುದರಿಂದ ಬಾಯಿ ಆಗಾಗ ಒಣಗುತ್ತದೆ. ಇದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಲು ಕಾರಣವಾಗುತ್ತದೆ. ಬಾಯಿಯಿಂದ ಉಸಿರಾಡುವ ಮೂಲಕ ಕೆಟ್ಟ ಗಾಳಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಬಾಯಾರಿಕೆ ಆಗುವವರೆಗೂ ಕಾಯಬೇಡಿ. ಆಗಾಗ ನೀರು ಕುಡಿಯುತ್ತಿರಿ.

ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಹಸಿರು ತರಕಾರಿಗಳು, ಹಣ್ಣುಗಳನ್ನು ಹೆಚ್ಚು ಸೇವಿಸಿ ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ದೇಹದಲ್ಲಿ ರೋಗರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಆಹಾರ ಆಯ್ಕೆಗಳು ಆದಷ್ಟು ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ. ಉದಾಹರಣೆಗೆ ಚಿಪ್ಸ್​, ಕರಿದ ತಿಂಡಿ​ ಮುಂತಾದ ತಿಂಡಿಗಳು. ಅದರ ಬದಲಾಗಿ ಕ್ಯಾರೆಟ್​, ಬೀಟ್ರೂಟ್​ನಂತಹ ಪೌಷ್ಠಿಕಯುಕ್ತ ಆಹಾರವನ್ನು ಸೇವಿಸಿ. ಆಹಾರ ಸೇವನೆಯ ಬಳಿಕ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳಿ

ಬಾಯಿ ಮುಕ್ಕಳಿಸಿ ಆಹಾರ ತಿಂದ ಬಳಿಕವೇ ನೀರಿನಿಂದ ನಿಮ್ಮ ಬಾಯಿಯನ್ನು ಮುಕ್ಕಳಿಸಿ. ಇದರಿಂದ ಹಲ್ಲುಗಳಲ್ಲಿ ಸಿಲುಕಿಕೊಂಡಿರುವ ಆಹಾರ ಪದಾರ್ಥಗಳನ್ನು ತೆಗೆಯಬಹುದು. ಆರೋಗ್ಯದ ಸುರಕ್ಷತೆಗೆ ಇದು ಮುಖ್ಯವಾದ ಸಲಹೆಯಾಗಿದೆ.

ಒಳ್ಳೆಯ ಬ್ಯಾಕ್ಟೀರಿಯಾ ನಾಶವಾಗದಂತೆ ನೋಡಿಕೊಳ್ಳಿ ಆಹಾರ ಸೇವನೆಯ ಬಳಿಕ ಅತಿಯಾಗಿ ಹಲ್ಲುಜ್ಜುವುದು ಮತ್ತು ನಾಲಿಗೆಯನ್ನು ಕ್ಲೀನರ್​ ಮೂಲಕ ಸ್ವಚ್ಛಗೊಳಿಸುವುದರಿಂದ ದೇಹಕ್ಕೆ ಅವಶ್ಯವಾಗಿರುವ ಒಳ್ಳೆಯ ಬ್ಯಾಕ್ಟೀರಿಯಾಗಳೂ ಸಹ ನಾಶವಾಗುತ್ತದೆ. ಆದ್ದರಿಂದ ಪದೇ ಪದೇ ಆಹಾರ ಸೇವಿಸಿ ಬಾಯಿ ಸ್ವಚ್ಛ ಮಾಡಿಕೊಳ್ಳುವಂತಹ ಪರಿಸ್ಥಿತಿ ತಂದುಕೊಳ್ಳುವುದು ಒಳ್ಳೆಯದಲ್ಲ.

ವರ್ಷಕ್ಕೆ ಎರಡು ಬಾರಿಯಾದರೂ ತಪಾಸಣೆ ವರ್ಷದಲ್ಲಿ ಎರಡು ಬಾರಿಯಾದರೂ ವೈದ್ಯರಲ್ಲಿ ನಿಮ್ಮ ದಂತ ಪರೀಕ್ಷೆ ಮಾಡಿಸಿಕೊಳ್ಳಿ. ನಿಮಗೆ ಯಾವುದೇ ಸಮಸ್ಯೆ ಕಾಡದೇ ಇರಬಹುದು. ಆದರೆ ಕೆಲವು ಬಾರಿ ದಂತ ಸವೆತದಂತಹ ಸಮಸ್ಯೆಗಳು ಗೊತ್ತೇ ಅಗುವುದಿಲ್ಲ. ಆದ್ದರಿಂದ ಹಲ್ಲಿನ ಸದೃಢತೆ ಮತ್ತು ದಂತದ ಆರೋಗ್ಯಕ್ಕಾಗಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ.

ಇದನ್ನೂ ಓದಿ:

Health Tips: ಸೈನಸ್ ಸಮಸ್ಯೆಯ ನಿವಾರಣೆಗೆ ಸರಳ ಉಪಾಯ; ಮನೆಯಲ್ಲೇ ತಯಾರಿಸಬಹುದಾದ ಔಷಧಿಗಳ ಬಗ್ಗೆ ಗಮನಹರಿಸಿ

Health Tips: ಆಸಿಡಿಟಿ ನಿವಾರಣೆಗೆ ಯೋಗಾಭ್ಯಾಸ; ಯಾವ ಯೋಗ ಭಂಗಿ ಸೂಕ್ತ?

ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ