Sign In

By signing in or creating an account, you agree with Associated Broadcasting Company's Terms & Conditions and Privacy Policy.

World Brain Tumor Day 2023: ಬ್ರೈನ್‌ ಟ್ಯೂಮರ್​ಗೆ ಕಾರಣವೇನು? ಇದರ ಲಕ್ಷಣಗಳು? ಇಲ್ಲಿದೆ ಮಾಹಿತಿ

ಬ್ರೈನ್‌ ಟ್ಯೂಮರ್‌ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಏಕೆಂದರೆ ಜನರಿಗೆ ಮೆದುಳು ಗಡ್ಡೆ(ಬ್ರೈನ್ ಟ್ಯೂಮರ್) ಬಗ್ಗೆ ಸೂಕ್ತ ರೀತಿಯ ಜಾಗೃತಿ ಇಲ್ಲದ ಕಾರಣ ಇದರ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಹಾಗಾಗಿ ಈ ದಿನ ವಿಶ್ವ ಆರೋಗ್ಯ ಸಂಸ್ಥೆಯು ಮೆದುಳು ಗಡ್ಡೆ ಬಗ್ಗೆ ಜಾಗೃತಿ ಮೂಡಿಸುತ್ತದೆ.

World Brain Tumor Day 2023: ಬ್ರೈನ್‌ ಟ್ಯೂಮರ್​ಗೆ ಕಾರಣವೇನು? ಇದರ ಲಕ್ಷಣಗಳು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 07, 2023 | 5:31 PM

ಪ್ರತಿ ವರ್ಷ ಜೂನ್ ತಿಂಗಳ 8ನೇ ತಾರೀಖಿನಂದು ವಿಶ್ವ ಬ್ರೈನ್‌ ಟ್ಯೂಮರ್‌ ದಿನ (World Brain Tumor Day 2023) ಅಥವಾ ವಿಶ್ವ ಮೆದುಳು ಕ್ಯಾನ್ಸರ್‌ ದಿನ ಎಂದು ಆಚರಿಸಲಾಗುತ್ತದೆ. ಮೆದುಳಿನ ಗೆಡ್ಡೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಈ ದಿವನ್ನು ಆಚರಣೆ ಮಾಡಲಾಗುತ್ತದೆ. ಏಕೆಂದರೆ ಬ್ರೈನ್‌ ಟ್ಯೂಮರ್‌ಗೆ ಸಂಬಂಧಿಸಿದಂತೆ ವಿವಿಧ ಪುರಾಣ ಮತ್ತು ತಪ್ಪು ಕಲ್ಪನೆಗಳು ಅಸ್ತಿತ್ವದಲ್ಲಿದ್ದು ಅವುಗಳನ್ನು ತೆಗೆದು ಹಾಕಿ ತಪ್ಪು ಯಾವುದು, ಸರಿ ಯಾವುದು ಎಂಬುದನ್ನು ತಿಳಿಸಬೇಕಾಗಿದೆ. ಜೊತೆಗೆ ಬ್ರೈನ್‌ ಟ್ಯೂಮರ್‌ ಎಂದರೇನು? ಯಾವ ರೀತಿಯ ಸಮಸ್ಯೆಗಳಿವೆ ಎಂಬುದನ್ನು ಮನದಟ್ಟು ಮಾಡಬೇಕಿದೆ. ಆರಂಭದಲ್ಲಿ ಜರ್ಮನ್‌ ಬ್ರೈನ್‌ ಟ್ಯೂಮರ್‌ ಅಸೋಸಿಯೇಷನ್‌ ಆರಂಭಿಸಿದ ಬ್ರೈನ್‌ ಟ್ಯೂಮರ್‌ ಡೇ ಅನ್ನು ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ಬ್ರೈನ್‌ ಟ್ಯೂಮರ್‌ ಎಂದರೇನು?

ಮಿದುಳಿನಲ್ಲಿ ಅನಾರೋಗ್ಯಕರ ಜೀವಕೋಶಗಳು ಗೆಡ್ಡೆಯಾಕಾರದಲ್ಲಿ ಗುಂಪು ಗೂಡುವುದನ್ನು ಬ್ರೈನ್‌ ಟ್ಯೂಮರ್‌ ಎನ್ನಲಾಗುತ್ತದೆ. ಇದನ್ನು ಮಿದುಳಿನ ಕ್ಯಾನ್ಸರ್‌ ಎಂದು ಗುರುತಿಸಲಾಗುತ್ತದೆ.

ಬ್ರೈನ್ ಟ್ಯೂಮರ್ ಆಗಲು ಕಾರಣವೇನು?

ಮೆದುಳಿನ ಕೋಶಗಳು ಇದ್ದಕ್ಕಿದ್ದಂತೆ ಅಸಹಜ ಬೆಳವಣಿಗೆ ಹೊಂದಿ, ಒಂದೇ ಕಡೆ ಶೇಖರಣೆಯಾಗಿ ಮೆದುಳಿನ ಕಾರ್ಯ ಕ್ಷಮತೆಯನ್ನು ಮತ್ತು ನರಮಂಡಲ ವ್ಯವಸ್ಥೆಯ ಪ್ರತಿ ದಿನದ ಕಾರ್ಯಾಚರಣೆಯನ್ನು ಕುಂಠಿತಗೊಳಿಸುತ್ತದೆ. ಇದೊಂದು ಗೆಡ್ಡೆಯ ರೂಪದಲ್ಲಿ ಉಂಟಾಗಿ ಕ್ರೇನಿಯಲ್ ನರ ಮಂಡಲ, ಮೆನಿಂಗ್ಸ್, ಪಿಟ್ಯುಯಿಟರಿ ಗ್ರಂಥಿ ಅಥವಾ ಪೀನಿಯಲ್ ಗ್ರಂಥಿಗಳನ್ನು ಒಳಗೊಂಡು ಮನುಷ್ಯನ ಆರೋಗ್ಯದ ಮೇಲೆ ತೀರಾ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಸಂಶೋಧಕರು ಇದನ್ನು ಯಾವ ರೀತಿ ಉಂಟಾಗುತ್ತದೆ ಎಂಬ ಅಧ್ಯಯನ ಕೈಗೊಂಡ ನಂತರ ಅವರು ಬಹಿರಂಗ ಪಡಿಸಿದ ಒಂದು ಅಚ್ಚರಿಯ ವಿಷಯ ಎಂದರೆ ಮೆದುಳಿನ ಸಾಮಾನ್ಯ ಕೋಶಗಳಲ್ಲಿ ಡಿಎನ್ಎ ರೂಪಾಂತರವಾಗಿ ಈ ಪ್ರಕ್ರಿಯೆ ಉಂಟಾಗುತ್ತದೆ.

ಈ ದಿನವನ್ನು ಯಾವ ಕಾರಣಕ್ಕೆ ಆಚರಿಸಲಾಗುತ್ತದೆ?

ವಿಶ್ವದಾದ್ಯಂತ ಮೆದುಳು ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಿ ಬ್ರೈನ್‌ ಟ್ಯೂಮರ್‌ ಬಗ್ಗೆ ಕೆಲವು ಸತ್ಯ ವಿಚಾರಗಳನ್ನು ತಿಳಿಸುವುದು ಈ ದಿನದ ಗುರಿಯಾಗಿದೆ. ಈ ರೋಗಕ್ಕೆ ಸಂಬಂಧಿಸಿದಂತೆ ಕೆಲವು ತಪ್ಪು ಕಲ್ಪನೆಗಳು ಅಸ್ತಿತ್ವದಲ್ಲಿದ್ದು ಅದನ್ನು ತೊಡೆದು ಹಾಕುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಈ ದಿನ ವಿಶ್ವ ಆರೋಗ್ಯ ಸಂಸ್ಥೆಯು ಮೆದುಳು ಗಡ್ಡೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ.

ಬ್ರೈನ್‌ ಟ್ಯೂಮರ್‌ ನಲ್ಲಿ ಎಷ್ಟು ವಿಧ? ಹೇಗೆ ವಿಂಗಡಿಸಲಾಗಿದೆ?

-ಮ್ಯಾಲಿಜ್ಞೆನ್ಟ್‌ ಬ್ರೈನ್‌ ಟ್ಯೂಮರ್‌: ಇದು ಕ್ಯಾನ್ಸರ್‌ ಸಹಿತ ಸಮಸ್ಯೆ.

-ಬೆನಿಗ್ನ್‌ ಬ್ರೈನ್‌ ಟ್ಯೂಮರ್‌: ಅಂದರೆ ಕ್ಯಾನ್ಸರ್‌ ರಹಿತ ಸಮಸ್ಯೆ.

-ಪ್ರೈಮರಿ ಬ್ರೈನ್‌ ಟ್ಯೂಮರ್‌: ಇದು ಮೊದಲು ಮೆದುಳಿನಲ್ಲಿ ಆರಂಭವಾಗುವ ಬ್ರೈನ್‌ ಟ್ಯೂಮರ್‌.

-ಮೆಟಾಸ್ಟಾಟಿಕ್‌ ಟ್ಯೂಮರ್‌: ಇದು ದೇಹದ ಇತರ ಭಾಗಗಳಲ್ಲಿ ಕ್ಯಾನ್ಸರ್‌ ಒಳಗೊಂಡು ನಂತರ ಮಿದುಳಿಗೆ ಹರಡುವ ಟ್ಯೂಮರ್‌.

ಇದನ್ನೂ ಓದಿ: Heart Health: ಪೌಷ್ಠಿಕತಜ್ಞರ ಪ್ರಕಾರ ಹೃದಯದ ಆರೋಗ್ಯಕ್ಕೆ ಉತ್ತಮವಾದ 7 ಸಮೃದ್ಧ ಆಹಾರಗಳು ಯಾವುವು?

ಲಕ್ಷಣಗಳೇನು?

-ನಿಧಾನವಾಗಿ ಆರಂಭಗೊಂಡ ತಲೆ ನೋವು ಇದ್ದಕ್ಕಿದ್ದಂತೆ ವಿಪರೀತವಾಗುವುದು,

-ಕಣ್ಣು ಮಂಜಾಗಿ ಕೆಲವೊಮ್ಮೆ ಏನೂ ಕಾಣಿಸದಂತಾಗುವುದು.

-ವಾಕರಿಕೆ ಮತ್ತು ವಾಂತಿ ಸಮಸ್ಯೆ.

-ಮಾನಸಿಕ ಒತ್ತಡ

-ಕೈ ಅಥವಾ ಕಾಲಿನ ಭಾಗದಲ್ಲಿ ನಿಧಾನವಾಗಿ ಸಂವೇದನೆ ಕಳೆದುಕೊಂಡು ಚಲನೆ ಇಲ್ಲದಂತಾಗುವುದು.

-ನಡೆದಾಡುವಾಗ ಸಮತೋಲನ ತಪ್ಪುವುದು.

-ಮಾತನಾಡಲು ಕಷ್ಟವಾಗುವುದು ಅಥವಾ ತೊದಲುವುದು.

-ದಿನದ ಕೆಲಸ ಕಾರ್ಯಗಳಲ್ಲಿ ವಿಪರೀತ ಗೊಂದಲ ಉಂಟಾಗುವುದು.

-ನಡವಳಿಕೆಯಲ್ಲಿ ತುಂಬ ಬದಲಾವಣೆ ಕಂಡುಬರುವುದು.

-ಕಿವಿ ಕೇಳಿಸದಂತಾಗುವುದು.

ಕಾರಣಗಳೇನು?

– ಕುಟುಂಬದ ಇತಿಹಾಸದಲ್ಲಿ ಮೆದುಳು ಕ್ಯಾನ್ಸರ್‌ ಇದ್ದಲ್ಲಿ.

-ದೀರ್ಘಕಾಲದಿಂದ ಧೂಮಪಾನ ಮಾಡುತ್ತಿದ್ದರೆ.

– ಸಸ್ಯನಾಶಕಗಳು, ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡುವಾಗ ತೆಗೆದುಕೊಳ್ಳದೇ ಇರುವ ಮುನ್ನೆಚ್ಚರಿಕೆಗಳು.

– ಸೀಸ, ಪ್ಲಾಸ್ಟಿಕ್, ರಬ್ಬರ್, ಪೆಟ್ರೋಲಿಯಂ ಮತ್ತು ಕೆಲವು ಬಟ್ಟೆಗಳಂತಹ ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳೊಂದಿಗೆ ಕೆಲಸ ಮಾಡುವುದು ಅಂದರೆ ಅಂತಹ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವುದರಿಂದಲೂ ಬರಬಹುದು.

– ಮಾನೋನ್ಯೂಕ್ಲಿಯೊಸಿಸ್ ಅಥವಾ ಎಪ್ಸ್ಟೀನ್-ಬಾರ್ ವೈರಸ್ ಸೋಂಕನ್ನು ಹೊಂದಿರುವುದು.

ಬ್ರೈನ್ ಟ್ಯೂಮರ್ ಪತ್ತೆ ಹಚ್ಚುವ ವಿಧಾನ

– CT ಸ್ಕ್ಯಾನ್ – ಮೆದುಳು ಪರೀಕ್ಷಿಸಲು

-MRI ಸ್ಕ್ಯಾನ್ – ನಿಖರವಾದ ಸ್ಥಳ ಮತ್ತು ಹರಡುವಿಕೆಯನ್ನು ತಿಳಿಯಲು

-MR ಸ್ಪೆಕ್ಟ್ರೋಸ್ಕೋಪಿ – ಅದರ ಸ್ವಭಾವವನ್ನು ಅರ್ಥಮಾಡಿಕೊಳ್ಳಲು

-ಪಿಇಟಿ ಸ್ಕ್ಯಾನ್ – ಸೆಕೆಂಡರಿಗಳನ್ನು ತಿಳಿಯಲು -ಆಂಜಿಯೋಗ್ರಾಮ್ – ಮೆದುಳಿನ ನಾಳಗಳನ್ನು ನೋಡಲು

-ಬಯಾಪ್ಸಿ.

ಯಾವುದೇ ರೀತಿಯ ರೋಗಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Wed, 7 June 23

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ