AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cancer Day 2023: ಇಂದು ವಿಶ್ವ ಕ್ಯಾನ್ಸರ್ ದಿನ; ಜೀವ ಹಿಂಡುವ ಈ ರೋಗದ ಬಗ್ಗೆ ನಿಮಗೆಷ್ಟು ಗೊತ್ತು?

ಕ್ಯಾನ್ಸರ್ ಸಂಬಂಧಿತ ಸಾವುಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಪ್ರಕರಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವ ಮೂಲಕ ಸುಲಭವಾಗಿ ತಡೆಯಬಹುದು. ಜೀವನಶೈಲಿ ಬದಲಾವಣೆ, ನಿಯಮಿತ ತಪಾಸಣೆಯಿಂದ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳಬಹುದು.

World Cancer Day 2023: ಇಂದು ವಿಶ್ವ ಕ್ಯಾನ್ಸರ್ ದಿನ; ಜೀವ ಹಿಂಡುವ ಈ ರೋಗದ ಬಗ್ಗೆ ನಿಮಗೆಷ್ಟು ಗೊತ್ತು?
ವಿಶ್ವ ಕ್ಯಾನ್ಸರ್ ದಿನ
ಸುಷ್ಮಾ ಚಕ್ರೆ
|

Updated on: Feb 04, 2023 | 6:51 AM

Share

ದೇಶಾದ್ಯಂತ ಅನಾರೋಗ್ಯದಿಂದ ಸಾವನ್ನಪ್ಪುವವರ ಪೈಕಿ ಕ್ಯಾನ್ಸರ್ (Cancer) ರೋಗಿಗಳ ಸಂಖ್ಯೆಯೇ ಹೆಚ್ಚು. ಪ್ರತಿ ವರ್ಷ ಸುಮಾರು 10 ಮಿಲಿಯನ್ ಜನರು ಕ್ಯಾನ್ಸರ್​​ನಿಂದ ಸಾವನ್ನಪ್ಪುತ್ತಾರೆ. ಆದರೆ, ಇಲ್ಲಿ ತಿಳಿದುಕೊಳ್ಳಬೇಕಾದ ಅಂಶವೆಂದರೆ, ಈ ಕ್ಯಾನ್ಸರ್ ಸಂಬಂಧಿತ ಸಾವುಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಪ್ರಕರಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವ ಮೂಲಕ ಸುಲಭವಾಗಿ ತಡೆಯಬಹುದು. ಜೀವನಶೈಲಿ ಬದಲಾವಣೆಗಳು ಮತ್ತು ನಿಯಮಿತ ತಪಾಸಣೆಯಿಂದ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳಬಹುದು. ಇಂದು ವಿಶ್ವ ಕ್ಯಾನ್ಸರ್ ದಿನ (World Cancer Day). ಕ್ಯಾನ್ಸರ್ ರೋಗದ ಕುರಿತ ವಾಸ್ತವಾಂಶಗಳು ಮತ್ತು ತಪ್ಪು ಕಲ್ಪನೆಗಳು ಇಲ್ಲಿವೆ.

ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರನ್ನು ಜಾಗರೂಕರಾಗಿರಲು ಪ್ರೋತ್ಸಾಹಿಸಲು ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಸರ್ಕಾರಗಳು, ಆರೋಗ್ಯ ತಜ್ಞರು ಮತ್ತು ಸಾರ್ವಜನಿಕರು ಸೇರಿದಂತೆ ಹಲವಾರು ಮಧ್ಯಸ್ಥಗಾರರನ್ನು ಒಟ್ಟುಗೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಕ್ಯಾನ್ಸರ್​ ಕುರಿತು ನಿಮಗೆಷ್ಟು ಗೊತ್ತು?:

– ದೈಹಿಕ ವ್ಯಾಯಾಮದ ಕೊರತೆ ಕೂಡ ಕ್ಯಾನ್ಸರ್​ಗೆ ಕಾರಣವಾಗಬಹುದು. ಈ ಮಾರಣಾಂತಿಕ ಕಾಯಿಲೆಯ ಇತರ ಪ್ರಮುಖ ಕಾರಣಗಳೆಂದರೆ, ತಂಬಾಕು ಬಳಕೆ, ಸ್ಥೂಲಕಾಯತೆ, ಸೂರ್ಯನ ನೇರಳಾತೀತ ಕಿರಣ ಮತ್ತು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದು.

– ಧೂಮಪಾನವು ಕ್ಯಾನ್ಸರ್ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು ಎಂಬುದು ಆಶ್ಚರ್ಯವೇನಿಲ್ಲ. ಧೂಮಪಾನವು ಶ್ವಾಸಕೋಶದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಜೊತೆಗೆ ಹಲವಾರು ಮಾರಣಾಂತಿಕತೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನೀವು ತಕ್ಷಣ ಧೂಮಪಾನವನ್ನು ನಿಲ್ಲಿಸಿದರೆ ಕ್ಯಾನ್ಸರ್ ಬರುವ ಅಪಾಯವು ಕಡಿಮೆಯಾಗುತ್ತದೆ.

– ಕ್ಯಾನ್ಸರ್‌ಗೆ ಮುಖ್ಯ ಕಾರಣವೆಂದರೆ ಬೊಜ್ಜು. ಸ್ತನ ಕ್ಯಾನ್ಸರ್, ಗುದನಾಳದ ಮತ್ತು ಕರುಳಿನ ಕ್ಯಾನ್ಸರ್, ಎಂಡೊಮೆಟ್ರಿಯಲ್ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಇದು ಅಪಾಯವನ್ನು ಹೆಚ್ಚಿಸುವ ಕೆಲವು ಕ್ಯಾನ್ಸರ್ಗಳಾಗಿವೆ. ಹೆಚ್ಚುವರಿ ಕೊಬ್ಬಿನ ಕೋಶಗಳು ಹೆಚ್ಚು ಈಸ್ಟ್ರೊಜೆನ್ ಮತ್ತು ಇನ್ಸುಲಿನ್ ಅನ್ನು ತಯಾರಿಸುತ್ತವೆ, ಕ್ಯಾನ್ಸರ್ ಬೆಳವಣಿಗೆಯನ್ನು ಬೆಂಬಲಿಸುವ ಎರಡು ರಾಸಾಯನಿಕಗಳು. ಆರೋಗ್ಯಕರ ದೇಹದ ತೂಕವನ್ನು ಸಾಧಿಸುವ ಅಥವಾ ನಿರ್ವಹಿಸುವ ಮೂಲಕ ನಿಮ್ಮ ಅಪಾಯಗಳನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: World Cancer Day 2023: ಕ್ಯಾನ್ಸರ್​​​ ಮೊದಲ ಹಂತದ ಲಕ್ಷಣ, ಬದುಕುಳಿಯುವ ಸಾಧ್ಯತೆ ಮತ್ತು ಚಿಕಿತ್ಸೆಯ ಕುರಿತು ತಜ್ಞರು ನೀಡಿದ ಮಾಹಿತಿ ಇಲ್ಲಿದೆ

– ಹೆಚ್ಚಿನ ಪ್ರಮಾಣದಲ್ಲಿ ಸೂರ್ಯನಿಗೆ ಒಡ್ಡಿಕೊಳ್ಳುವುದು ಚರ್ಮದ ಕ್ಯಾನ್ಸರ್​ಗೆ ಕಾರಣವಾಗಬಹುದು. ಸೂರ್ಯನಿಂದ ಉಂಟಾಗುವ ಚರ್ಮದ ಹಾನಿಯು ಸನ್ಬರ್ನ್ ಅಥವಾ ಟ್ಯಾನ್​ಗೆ ಕಾರಣವಾಗುತ್ತದೆ. ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್ ಬಳಸಬಹುದು. ಆದಷ್ಟೂ ಮಧ್ಯಾಹ್ನದ ಬಿಸಿಲಿನಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ, ಛತ್ರಿ ಬಳಸಿ. ಮೈ ಮುಚ್ಚುವ ಉಡುಪುಗಳನ್ನು ಧರಿಸಿ ಮತ್ತು ಕಣ್ಣಿನ ರಕ್ಷಣೆಗಾಗಿ ನಿಮ್ಮ ಸನ್‌ಗ್ಲಾಸ್‌ಗಳನ್ನು ಮರೆಯಬೇಡಿ.

– ಅತಿಯಾದ ಮದ್ಯಪಾನವೂ ಕ್ಯಾನ್ಸರ್​ಗೆ ಕಾರಣವಾಗಬಹುದು. ಆಲ್ಕೋಹಾಲ್ ಒಂದು ಉದ್ರೇಕಕಾರಿಯಾಗಿದ್ದು ಅದು ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಕ್ಯಾನ್ಸರ್ ಆನುವಂಶಿಕವಾಗಿರಬಹುದು. ಪ್ರತಿಕೂಲ ವಾತಾವರಣವು ಕ್ಯಾನ್ಸರ್​ಗೆ ಕಾರಣವಾಗಬಹುದು.

– ಕಳೆದ 10 ವರ್ಷಗಳಲ್ಲಿ ಕೇವಲ ತಂಬಾಕು ಸೇವನೆಯಿಂದ ಕ್ಯಾನ್ಸರ್​ಗೆ ತುತ್ತಾಗಿ ಕನಿಷ್ಠ 50 ಮಿಲಿಯನ್ ಜನ ಸಾವನ್ನಪ್ಪಿದ್ದಾರೆ. ಆದ್ದರಿಂದ, ನೀವು ಯಾವುದೇ ರೂಪದಲ್ಲಿ ತಂಬಾಕನ್ನು ಸೇವಿಸುತ್ತಿದ್ದರೆ, ನೀವು ಅದನ್ನು ಏಕೆ ಬೇಗನೆ ತ್ಯಜಿಸಬೇಕು.

ಇದನ್ನೂ ಓದಿ: World Cancer Day 2023: ಕ್ಯಾನ್ಸರ್​​ ದಿನದ ಇತಿಹಾಸ, ಮಹತ್ವ ಹಾಗೂ ಈ ವರ್ಷದ ಧ್ಯೇಯದ ಕುರಿತು ಮಾಹಿತಿ ಇಲ್ಲಿದೆ

– ಕ್ಯಾನ್ಸರ್ ನಿರ್ದಿಷ್ಟವಾಗಿ ಒಂದು ರೋಗವಲ್ಲ. ದೇಹದಲ್ಲಿನ ಅಸಹಜ ಕೋಶಗಳ ಬೆಳವಣಿಗೆಯು ನಿಯಂತ್ರಣದಿಂದ ಹೊರಬರುವ ಒಂದು ಸ್ಥಿತಿಯಾಗಿದೆ. ಇದು ದೇಹಕ್ಕೆ ಹಾನಿಕಾರಕ ಜೀವಕೋಶಗಳ ಅನಿಯಂತ್ರಿತ ವಿಭಜನೆಯಾಗಿದೆ.

– ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುವ 200ಕ್ಕೂ ಹೆಚ್ಚು ವಿಧಗಳ ಕ್ಯಾನ್ಸರ್‌ಗಳಿವೆ.

– ಕ್ಯಾನ್ಸರ್​ನಿಂದ ಉಂಟಾಗುವ ಸಾವುಗಳು ಸಾಕಷ್ಟು ಪ್ರಚಲಿತವಾಗಿದೆ. ಪ್ರತಿ 8 ಸಾವುಗಳಲ್ಲಿ ಒಂದು ಕ್ಯಾನ್ಸರ್ ನಿಂದ ಉಂಟಾಗುತ್ತದೆ.

– ಇತ್ತೀಚೆಗೆ ಸ್ತನ ಕ್ಯಾನ್ಸರ್​ ಅತ್ಯಂತ ಹೆಚ್ಚು ಕಂಡುಬರುತ್ತಿರುವ ಕ್ಯಾನ್ಸರ್​ನ ವಿಧವಾಗಿದೆ.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?