World Health Day 2025: ಪ್ರಶಾಂತ ಮನಸ್ಸು, ಆರೋಗ್ಯಕರ ದೇಹ , ಸಮೃದ್ಧ ಬದುಕಿಗೆ ಗುಟ್ಟು ಕೇಳಿ
ವಿಶ್ವ ಆರೋಗ್ಯ ದಿನ: ವಿಶ್ವ ಆರೋಗ್ಯ ದಿನದಂದು ನಿಮ್ಮ ಆರೋಗ್ಯ ಹೇಗಿರಬೇಕು. ಅದಕ್ಕಾಗಿ ವಿಶ್ವ ಆರೋಗ್ಯ ದಿನದಂದು ನಿಮ್ಮ ಆರೋಗ್ಯಕರ ಜೀವನಶೈಲಿ ಹೇಗಿರಬೇಕು? ಮಾನಸಿಕ ಹಾಗೂ ದೈಹಿಕ ಆರೋಗ್ಯಗಳು ಹೇಗಿರಬೇಕು ಎಂಬದಕ್ಕೆ ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯರಾದ ಕನ್ಸಲ್ಟೆಂಟ್ ಮನೋವೈದ್ಯ ಡಾ. ಕೃತಿಶ್ರೀ ಸೋಮಣ್ಣ ಹಾಗೂ ಹಿರಿಯ ಆಹಾರ ತಜ್ಞರು ಅರುಣಾ ಮಲ್ಯಾ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ.

ವಿಶ್ವ ಆರೋಗ್ಯ ದಿನವನ್ನು (World Health Day) ಪ್ರತಿ ಏಪ್ರಿಲ್ 7ರಂದು ಆಚರಣೆ ಮಾಡುತ್ತೇವೆ. ಆದರೆ ಆರೋಗ್ಯ ವಿಚಾರದಲ್ಲಿ ಪ್ರತಿ ದಿನವೂ ಮಹತ್ವವಾದದ್ದೆ. ಎಷ್ಟೋ ಜನ ಆರೋಗ್ಯ ಎಂದರೆ ದೇಹದ ಯೋಗ ಕ್ಷೇಮ ಎಂದು ಮಾತ್ರ ತಿಳಿದಿದ್ದಾರೆ. ಆದರೆ ಆರೋಗ್ಯವೆಂದರೆ, ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಕ್ಷೇಮವಾಗಿರುವುದು. ನಮ್ಮ ಭಾವನಾತ್ಮಕ ತುಮುಲಗಳು, ಸೇವಿಸುವ ಆಹಾರ, ದೈಹಿಕ ಚಟುವಟಿಕೆ, ನಿತ್ಯದ ಅಭ್ಯಾಸಗಳು, ನಾವು ಯೋಚಿಸುವ ಪರಿ ಎಲ್ಲವೂ ಓರ್ವ ವ್ಯಕ್ತಿಯ ಸಂಪೂರ್ಣ ಆರೋಗ್ಯಕ್ಕೆ ಕಾರಣವಾಗುತ್ತವೆ. ಹೀಗಾಗಿ ಆರೋಗ್ಯಕರ ಆರಂಭ , ಉತ್ತಮ ಭವಿಷ್ಯ ಎಂಬ ಧ್ಯೇಯ ವಾಕ್ಯದ ಜೊತೆ ಆಚರಿಸಲಾಗುತ್ತಿರುವ ಆರೋಗ್ಯ ದಿನದಂದು ಸಮೃದ್ಧ ಜೀವನಕ್ಕೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಗುಟ್ಟನ್ನು ತಿಳಿದುಕೊಳ್ಳೋಣ.
ಉತ್ತಮ ಅಭ್ಯಾಸದ ಜೊತೆ ದಿನ ಆರಂಭಿಸಿ
ನಿಮ್ಮ ದಿನ ಹೇಗಿರಲಿದೆ ಎಂಬುದು ನೀವು ದಿನವನ್ನು ಹೇಗೆ ಆರಂಭಿಸುತ್ತೀರಿ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಬೆಳಗಿನ ಸಮಯದಲ್ಲಿ ನಿಮ್ಮ ಮನಸ್ಸು ಎಷ್ಟು ಪ್ರಶಾಂತವಾಗಿರುತ್ತದೆಯೋ ಅಷ್ಟೇ ಉತ್ತಮವಾಗಿ ಅಂದಿನ ದಿನವನ್ನು ನೀವು ನಿಭಾಯಿಸಬಲ್ಲಿರಿ. ಹೀಗಾಗಿ ಉತ್ತಮ ಅಭ್ಯಾಸದ ಭಾಗವಾಗಿ ದಿನವನ್ನು ಆದಷ್ಟು ಬೇಗನೆ ಆರಂಭಿಸಿ. ಲೇಟಾಗಿ ಏಳುವುದರಿಂದ ಅಂದಿನ ದಿನಚರಿಯನ್ನು ಪ್ಲ್ಯಾನ್ ಮಾಡುವಲ್ಲಿ ಗೊಂದಲ ಉಂಟಾಗಬಹುದು. ಬೆಳಗಿನ ಸಮಯವೆನ್ನುವುದು ಮನಸ್ಸು ಹಾಗೂ ದೇಹವನ್ನು ಆ ದಿನದ ಚಟುವಟಿಕೆಗೆ ಸಿದ್ಧಪಡಿಸುವುದು. ಬೆಳಿಗಿನ ಸಮಯದಲ್ಲಿ ಯೋಗ, ವ್ಯಾಯಾಮ, ವಾಕಿಂಗ್ ನಂತಹ ಚಟುವಟಿಕೆಗಳು ಮನಸ್ಸಿಗೆ ಹಾಗೂ ದೇಹಕ್ಕೆ ಆರಾಮ ನೀಡುತ್ತವೆ. ಹಿತವಾದ ಬೆಳಗಿನ ಉಪಹಾರ ದೇಹಕ್ಕೆ ಇಂಧನದಂತೆ ಕಾರ್ಯನಿರ್ವಹಿಸುತ್ತದೆ. ಬೆಳಗಿನ ಉಪಹಾರ ತಪ್ಪಿಸುವುದು ಒಳ್ಳೆಯ ಅಭ್ಯಾಸ ಅಲ್ಲವೇ ಅಲ್ಲ. ಹಾಗೇ ಬೆಳಗಿನ ಸಮಯದಲ್ಲಿ ಸೂಕ್ತ ಪ್ರಮಾಣದಲ್ಲಿ ನೀರಿನ ಸೇವೆನೆಯಿಂದ ದೇಹವನ್ನು ಹೈಡ್ರೇಟ್ ಆಗಿಡಲು ನೆರವಾಗುತ್ತದೆ.
ತಡವಾಗಿ ಎದ್ದರೆ ಏನಾಗಬಹುದು?
ತಡವಾಗಿ ಏಳುವುದೆಂದರೆ ಬೆಳಗಿನ ಕೆಲಸವನ್ನು ತಪ್ಪಿಸಿ ಮುಂದುವರೆಯುವುದು . ಸ್ವಯಂ ಆರೈಕೆಗೆ ಇಲ್ಲದಿರುವುದು, ಬೆಳಗಿನ ಉಪಹಾರ ತಪ್ಪಿಸುವುದು, ಕಚೇರಿ, ಶಾಲೆಗೆ ತಡವಾಗಿ ತೆರಳುವುದು . ಇದರಿಂದ ಅಂದಿನ ದಿನ ಗೊಂದಲಮಯವಾಗಿರುತ್ತದೆ. ಸುಸ್ತು,ಮಾನಸಿಕ ಕಿರಿಕಿರಿ ಕೂಡ ಅನುಭವಿಸಬೇಕಾಗುತ್ತದೆ. ಹಾಗೇ ಬೆಳಿಗ್ಗೆ ಎದ್ದ ಕೂಡಲೇ ಜೋರಾದ ಮ್ಯೂಸಿಕ್, ಟಿವಿ, ಮೊಬೈಲ್ ಬಳಕೆಯನ್ನು ಮಾಡಬೇಡಿ. ಆದಷ್ಟು ಸುಮಧುರವಾದ ಮೃದು ಸಂಗೀತವನ್ನು ಕೇಳಿ.
ನಕಾರಾತ್ಮಕ ಯೋಚನೆಗಳಿಗೆ ಜಾಗ ಕೊಡಬೇಡಿ
ಕೆಲವರಿಗೆ ದೇವರ ಪ್ರಾರ್ಥನೆ ಬೆಳಗಿನ ಸಮಯದಲ್ಲಿ ಹಿತ ನೀಡುತ್ತದೆ. ಪ್ರಾರ್ಥನೆ ಜೊತೆಗೆ ಧ್ಯಾನ, ಅಂದಿನ ದಿನಚರಿ ರೂಪಿಸುವುದು ಉತ್ತಮ. ಇನ್ನೂ ಕೆಲವರಿಗೆ ಸಣ್ಣದೊಂದು ಕೋಣೆಯಲ್ಲಿ ತಮ್ಮ ಜೊತೆ ಸಮಯ ಕಳೆಯುತ್ತಾ ಅಂದಿನ ದಿನಚರಿ ಪ್ಲ್ಯಾನ್ ಮಾಡುವುದು ಇಷ್ಟವಾಗುತ್ತದೆ. ಇವೆರಡೂ ಉತ್ತಮ ಅಭ್ಯಾಸವೇ. ಯಾವುದೇ ರೀತಿಯ ನಕಾರಾತ್ಮಕ ಯೋಚನೆಗಳು, ಮನಸ್ಸು ಕೆಡಿಸುವ ವಿಚಾರ, ವಸ್ತುಗಳನ್ನು ದೂರವಿಡಿ.
ನಿದ್ರೆಗೊಂದು ಯೋಜನೆ, ಶಿಸ್ತು ಇರಲಿ
ಬೆಳಿಗ್ಗೆ ಬೇಗ ಏಳುವುದೆಂದರೆ, ರಾತ್ರಿ ಬೇಗ ಮಲಗುವುದು. ನಿದ್ರೆಗೊಂದು ಶಿಸ್ತು ರೂಢಿಸಿಕೊಳ್ಳಿ. ಉತ್ತಮವಾದ ರಾತ್ರಿ ನಿದ್ರೆ ನಿಮ್ಮ ನಾಳೆಯನ್ನು ಉತ್ತಮವಾಗಿಸುತ್ತದೆ ಎಂಬ ಮಾತಿದೆ. ಅದರಂತೆ ನಿದ್ದೆಗೆ ನಿರ್ದಿಷ್ಟ ಸಮಯ ಕೊಡಿ. ನಿದ್ದೆಯ ಸಮಯದಲ್ಲಿ ಬೇರೆ ಕೆಲಸಗಳು ಬೇಡ. ಜೀವನ ಮ್ಯಾರಥಾನ್ ಇದ್ದಂತೆ, ತಾಳ್ಮೆಯಿಂದ ಸೂಕ್ತ ಪ್ಲ್ಯಾನಿಂಗ್ ಜತೆ ಸಾಗಬೇಕಿದೆ.
ಆಹಾರ, ಭಾವನೆ ಮತ್ತು ದೈಹಿಕ ಆರೋಗ್ಯ
ನಾವು ಸೇವಿಸುವ ಆಹಾರ, ಮಾನಸಿಕ ಸ್ಥಿತಿ ಹಾಗೂ ದೈಹಿಕ ಆರೋಗ್ಯ ಇವೆಲ್ಲವೂ ಒಂದಕ್ಕೊಂದು ಸೇರಿಕೊಂಡಿವೆ. ಆಹಾರ ಸೇವನೆ ಹಾಗೂ ಮಾನಸಿಕ ಸ್ವಸ್ಥತೆ ನೇರವಾಗಿ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಯಾವ ಆಹಾರ ಸೇವಿಸುತ್ತೇವೆ ಎನ್ನುವುದರ ಜತೆಗೆ ಯಾವ ಮನಸ್ಥಿತಿಯಲ್ಲಿ ಆಹಾರ ಸೇವಿಸುತ್ತೇವೆ ಎಂಬುದು ಮುಖ್ಯವಾಗುತ್ತವೆ. ಹೀಗಾಗಿ ಭಾವನೆಗಳ ಕೈಗೆ ಊಟದ ನಿರ್ಧಾರವನ್ನು ನೀಡದೆ, ಯೋಚಿಸಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರ ಸೇವಿಸುವುದು ಉತ್ತಮ ಅಭ್ಯಾಸ.
ಭಾವನೆಗಳ ಮೇಲೆ ಊಟ ನಿರ್ಧಾರ
ಆಹಾರ ಸೇವನೆಯನ್ನು ಸಾಮಾನ್ಯವಾಗಿ ಮಾನಸಿಕ ಸ್ಥಿತಿಗತಿಗೆ ಲಿಂಕ್ ಮಾಡಲಾಗುತ್ತದೆ. ಇದಕ್ಕೆ ಎಮೋಶನಲ್ ಈಟಿಂಗ್ (Emotion Eating) ಎಂದೂ ಹೇಳಲಾಗುತ್ತದೆ. ಹಲವರಲ್ಲಿ ಅತಿಯಾದ ಒತ್ತಡವಿದ್ದಾಗ (ಸ್ಟ್ರೆಸ್) ಆಹಾರ ಸೇವನೆ ಹೆಚ್ಚಾಗುತ್ತದೆ, ಖಿನ್ನತೆಗೆ ಒಳಗಾದಾಗ ಆಹಾರ ಸೇವನೆ ಪ್ರಮಾಣ ಕಡಿಮೆಯಾಗುತ್ತದೆ. ಕೆಲವರ ಒತ್ತಡದಿಂದ ಹೊರಬರಲು ಆಹಾರವನ್ನು ಸೇವಿಸುತ್ತಾರೆ.ಇನ್ನೂ ಕೆಲವರು ಬಾಯಿ ರುಚಿಗಾಗಿ ತಿನಿಸುಗಳನ್ನು ಸೇವಿಸಿ ನಂತರ ತೂಕ ಏರಿಕೆ ಭಯದಲ್ಲಿ ವಾಂತಿ ಮಾಡುತ್ತಾರೆ. ಅಥವಾ ತೂಕದ ಬಗ್ಗೆ ಚಿಂತೆ ಮಾಡದೇ ಸಿಕ್ಕಿದೆಲ್ಲ ತಿನ್ನುತ್ತಾರೆ. ಇದಕ್ಕೆ ಬಿಂಜಿ ಈಟಿಂಗ್ (Binge Eating) ಎಂದೂ ಹೇಳುತ್ತಾರೆ. ಇದೊಂದು ಸಾಮಾನ್ಯ ರೋಗವಾಗಿ ಕಂಡುಬರುತ್ತಿದೆ.
ಬೇಸರದಿಂದ ಹೊರಬರಲು ಆಹಾರವೇ ದಾರಿ!
ಸ್ವೀಟ್ಸ್, ಡಿಸರ್ಟ್ಸ್, ಖಾರ ತಿನಿಸುಗಳು, ಚಿಪ್ಸ್, ಪಿಜ್ಜಾ, ಐಸ್‌ಕ್ರೀಮ್ಸ್, ಹೈ ಕ್ಯಾಲರಿ ಆಹಾರ ಪದಾರ್ಥಗಳಾದ ಬಿರಿಯಾನಿ ಅಥವಾ ಚೈನೀಸ್ ಆಹಾರ ಪದಾರ್ಥಗಳನ್ನು ಹಲವಾರು ಜನ ತಮ್ಮ ಕುಗ್ಗಿರುವ ಭಾವನಾತ್ಮಕ ಸ್ಥಿತಿಯನ್ನು ಸರಿಪಡಿಸಲು ಸೇವಿಸುತ್ತಾರೆ. ಇದು ಕೇವಲ ಭಾವನೆಗಳಿಗೆ ಮಾತ್ರ ಸೀಮಿತವಲ್ಲ ಗರ್ಭಿಣಿಯರಲ್ಲಿ ಮೂಡುವ ಆಹಾರ ಬಯಕೆಯಂತೆ, ಋತುಸ್ರಾವದ ಸಮಯ ಹತ್ತಿರ ಬಂದಾಗ ಇದೇ ರೀತಿ ಆಹಾರ ಸೇವಿಸುವ ಬಯಕೆ ಮೂಡುತ್ತದೆ. ಆಗ ಕೂಡ ತಮಗೆ ತೋಚಿದ್ದನ್ನೆಲ್ಲ ತಿನ್ನುವ ಅಭ್ಯಾಸ ಹಲವರಲ್ಲಿ ಕಾಣಬಹುದು.
ಖಿನ್ನತೆ ಮತ್ತು ಆಹಾರಾಭ್ಯಾಸ
ಒಂಟಿತನ, ವೈಯಕ್ತಿಕ ಬದುಕಿನ ಸಮಸ್ಯೆ, ಇಂತಹ ಸಂದರ್ಭದಲ್ಲಿ ಜನ ತಪ್ಪು ಆಹಾರ ಸೇವನೆ ಅಭ್ಯಾಸಕ್ಕೆ ಒಳಗಾಗುವುದು ಹೆಚ್ಚು. ತೂಕ ಇಳಿಸುವ ಭರದಲ್ಲಿ ಯಾವುದೇ ಪ್ರಯತ್ನವೂ ಫಲಿತಾಂಶ ಕೊಡದಿದ್ದಾಗ ಸೋತು ಮತ್ತೆ ಹೆಚ್ಚು ಹೆಚ್ಚು ತಿನ್ನುವ ಅಭ್ಯಾಸ ಆರಂಭಿಸುತ್ತಾರೆ, ಇನ್ನೂ ಕೆಲವರು ಬಾಡಿ ಶೇಮಿಂಗ್‌ಗೆ ಹೆದರಿ ತಿನ್ನುವುದನ್ನೇ ನಿಲ್ಲಿಸುತ್ತಾರೆ. ಇವೆರಡೂ ತಪ್ಪೇ.
ಆಹಾರ ಸೇವನೆ ದೇಹದ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಎರಡಕ್ಕೂ ಮುಖ್ಯ. ಒತ್ತಡ ಕಡಿಮೆ ಮಾಡಲು ಕೆಲವಷ್ಟು ಉತ್ತಮ ಆಹಾರಗಳು ಸಹಾಯ ಮಾಡಬಲ್ಲದು . ಅವುಗಳನ್ನು ಬಿಟ್ಟು ಜಂಕ್ ಫುಡ್ ಸೇವನೆ ತಪ್ಪು. ಜೊತೆಗೆ ಏನನ್ನೂ ತಿನ್ನದೇ ಹಸಿವನ್ನು ಕೊಲ್ಲುವುದು ಕೂಡ ತಪ್ಪು. ಏನ್ನನೂ ತಿನ್ನದೇ ಇರುವುದರಿಂದ ಆಕ್ಸಿಡೇಟಿವ್ ಒತ್ತಡ ಉಂಟಾಗುತ್ತದೆ. ಹೀಗಾಗಿ ಭಾವನೆಗಳು ಹಾಗೂ ಆಹಾರ ಸೇವನೆಯನ್ನು ಸಮತೋಲನದಲ್ಲಿರಿಸುವುದು ಅತ್ಯಗತ್ಯ.ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗವೆಂದರೆ ವ್ಯಾಯಾಮ, ಸಂಗೀತ , ಒಂದು ಲಾಂಗ್ ರೈಡ್, ಪ್ರೀತಿಪಾತ್ರರಾದವರ ಜತೆ ಮಾತುಕತೆ. ಬಾಯಿಗೆ ರುಚಿ ಎನಿಸುವ ಆಹಾರ ಸೇವಿಸುವುದಲ್ಲ. ನೆನಪಿರಲಿ.
ಆಹಾರಕ್ಕೆ ಯಾವಾಗಲೂ ಭಾವನೆಗಳೊಂದಿಗೆ ಸಂಬಂಧ ಇದೆ. ನಾವು ಅದನ್ನು ಭಾವನಾತ್ಮಕವಾಗಿ ತಿನ್ನುವುದು ಎಂದು ಕರೆಯುತ್ತೇವೆ. ಒತ್ತಡದ ಸಮಯದಲ್ಲಿ ತಿನ್ನುವುದು ಹೆಚ್ಚಾಗುತ್ತದೆ ಮತ್ತು ಖಿನ್ನತೆಯ ಸಮಯದಲ್ಲಿ ಕಡಿಮೆ ಮಾಡುತ್ತದೆ ಮತ್ತು ಕೆಲವೊಮ್ಮೆ ತಿರುಗು ಮುರುಗಾಗುತ್ತದೆ. ಕೆಲವರಿಗೆ ಒತ್ತಡ ನಿವಾ ರಿಸಲು ಏಕೈಕ ಮಾರ್ಗವೆಂದರೆ ಒತ್ತಡವನ್ನು ಶಮನಗೊಳಿಸಲು ಅಥವಾ ನಿವಾರಿಸಲು ಆಹಾರವನ್ನು ಬಳಸುವುದು. ಜನರು ತಿನ್ನಲು ಪ್ರಚೋದಿಸಿದಾಗ ತಿನ್ನುತ್ತಾರೆ ಮತ್ತು ತೂಕವನ್ನು ಕಾಪಾಡಿಕೊಳ್ಳಲು ತಕ್ಷಣವೇ ವಾಂತಿ ಮಾಡುತ್ತಾರೆ ಅಥವಾ ಜನರು ತಮ್ಮ ತೂಕದ ಬಗ್ಗೆ ತಲೆಕೆಡಿಸಿಕೊಳ್ಳದ ಅತಿಯಾಗಿ ತಿನ್ನುವುದು ಸಹ ಇದೆ. ಇದು ಇತ್ತೀಚೆಗೆ ಸಾಮಾನ್ಯವಾಗಿ ಕಂಡುಬರುವ ಅಸ್ವಸ್ಥತೆಯಾಗಿದೆ.
ಜನರು, ಭಾವನೆಗಳು ಕಡಿಮೆಯಾದಾಗ ಸಾಮಾನ್ಯವಾಗಿ ಅವಲಂಬಿಸುವ ಸಾಮಾನ್ಯ ಆಹಾರ ಪದಾರ್ಥ ಗಳೆಂದರೆ ಸಿಹಿತಿಂಡಿಗಳು, ಮಸಾಲೆಯುಕ್ತ ಆಹಾರಗಳು, ಚಿಪ್ಸ್, ಪಿಜ್ಜಾಗಳು, ಐಸ್ ಕ್ರೀಮ್‌ಗಳು ಮತ್ತು ಬಿರಿಯಾನಿ ಅಥವಾ ಚೈನೀಸ್ ಆಹಾರ ಪದಾರ್ಥಗಳಂತಹ ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳು. ಇದು ಕೇವಲ ಭಾವನೆಗಳ ಬಗ್ಗೆ ಮಾತ್ರವಲ್ಲ. ಹುಡುಗಿಯರು ಕೆಲವೊಮ್ಮೆ ತಮ್ಮ ಮುಟ್ಟಿನ ಸಮಯ ಬಂದಾಗ ಗರ್ಭಾವಸ್ಥೆಯಲ್ಲಿ ಮಹಿಳೆಯರಂತೆಯೇ ಹಂಬಲಿಸುತ್ತಾರೆ.
ಇದನ್ನೂ ಓದಿ: ಹೆಚ್ಚಾಗುತ್ತಿದೆ ಶಿಶು ಹಾಗೂ ತಾಯಂದಿರ ಸಾವು, WHOನ ಈ ಮಾರ್ಗಸೂಚಿಯನ್ನು ಪಾಲಿಸಲೇಬೇಕು
ಒಂಟಿತನ ಅಥವಾ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಸಹ ಮಾನಸಿಕ ತೊಂದರೆಗೆ ಕಾರಣವಾಗ ಬಹುದು ಮತ್ತು ಜನರು ತಪ್ಪು ಆಹಾರ ಪದ್ಧತಿಯಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಹೆಚ್ಚು. ಎಲ್ಲಾ ರೀತಿಯ ಆಹಾರಕ್ರಮಗಳನ್ನು ಪ್ರಯತ್ನಿಸಿಯೂ ತೂಕ ಇಳಿಸಿಕೊಳ್ಳದ ಜನರು ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಕೆಲವೊಮ್ಮೆ ತಮ್ಮ ಪ್ರಯತ್ನಗಳು ವ್ಯರ್ಥ ಎಂದು ಭಾವಿಸಿ ಹೆಚ್ಚು ತಿನ್ನುತ್ತಾರೆ. ಆದರೆ ತಮ್ಮ ಪ್ರಯತ್ನಗಳು ಫಲಿತಾಂಶಗಳನ್ನು ನೀಡಲು ಸಮಯ ತೆಗೆದುಕೊಳ್ಳುತ್ತಿವೆ ಎಂದು ಅವರಿಗೆ ತಿಳಿದಿರುವುದಿಲ್ಲ. ದೇಹವನ್ನು ನಾಚಿಕೆಪಡಿಸುವುದು, ಅವರು ಬಯಸಿದ ರೀತಿಯಲ್ಲಿ ಧರಿಸಲು ಸಾಧ್ಯವಾಗದಿರುವುದು, ಕೀಳರಿಮೆ ಸಂಕೀ ರ್ಣತೆ ಇವು ಯುವಜನರಲ್ಲಿ ನಾವು ನೋಡುವ ಸಾಮಾನ್ಯ ಭಾವನೆಗಳಾಗಿವೆ. ಅಲ್ಲಿ ಅವರು ತೂಕ ಇಳಿಸಿಕೊಳ್ಳಲು ಸಂಪೂರ್ಣವಾಗಿ ತಿನ್ನುವುದನ್ನು ನಿಲ್ಲಿಸುತ್ತಾರೆ.
ಆರೋಗ್ಯ ಕಾಪಾಡಲು ಜಾಗರೂಕತೆಯಿಂದ ತಿನ್ನುವುದನ್ನು ಅಭ್ಯಾಸ ಮಾಡುವುದು ಮತ್ತು ದೌರ್ಬಲ್ಯ ವನ್ನು ನಿಯಂತ್ರಿಸುವುದು ಪ್ರಮುಖ ಪಾತ್ರ ವಹಿಸುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಆಹಾರಗಳ ಹೆಚ್ಚು ಆಯ್ಕೆ ಇರುವಾಗ, ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಅನಾರೋಗ್ಯಕರ ತಿಂಡಿಗಳನ್ನು ತಿನ್ನುವ ಬದಲು ಒತ್ತಡವನ್ನು ನಿವಾರಿಸಲು ಅಥವಾ ಖಿನ್ನತೆಯನ್ನು ಕೊಲ್ಲಲು ಉತ್ತಮ ಆರೋಗ್ಯಕರ ಆಹಾರವನ್ನು ಆರಿಸಬೇಕಾಗುತ್ತದೆ. ಅದೇ ಸಮಯದಲ್ಲಿ ತಿನ್ನದೇ ಇರುವ ಮೂಲಕ ಹಸಿವನ್ನು ಕೊಲ್ಲುವುದು ಕೊರತೆಗಳಿಗೆ ಕಾರಣವಾಗಬಹುದು. ತಿನ್ನದೇ ಇರುವುದು ಆಕ್ಸಿಡೇಟಿವ್ ಒತ್ತಡಕ್ಕೂ ಕಾರಣವಾಗುತ್ತದೆ, ಇದು ಒಂದು ರೀತಿಯ ಒತ್ತಡವೂ ಆಗಿದೆ.
ಭಾವನೆಗಳು ಮತ್ತು ಆಹಾರದ ಸಮತೋಲನ ಅಷ್ಟೇ ಮುಖ್ಯ. ಒತ್ತಡ ನಿವಾರಿಸಲು ಉತ್ತಮ ಮಾರ್ಗ ವೆಂದರೆ ವ್ಯಾಯಾಮ, ಸಂಗೀತ ಕೇಳುವುದು ಅಥವಾ ದೀರ್ಘ ಡ್ರೈವ್‌ಗೆ ಹೋಗುವುದು ಅಥವಾ ಹಿತೈಷಿ ಯೊಂದಿಗೆ ಚಾಟ್ ಮಾಡುವುದು, ಇದು ಆಹಾರದಲ್ಲಿ ತೊಡಗಿಸಿಕೊಳ್ಳುವ ಬದಲು ನಿಮಗೆ ಸ್ವಲ್ಪ ಸಾಂತ್ವನ ನೀಡುತ್ತದೆ.
-ಡಾ. ಕೃತಿಶ್ರೀ ಸೋಮಣ್ಣ , ಕನ್ಸಲ್ಟೆಂಟ್ ಮನೋವೈದ್ಯರುಅರುಣಾ ಮಲ್ಯಾ, ಹಿರಿ, ಯ ಆಹಾರ ತಜ್ಞರು ಕೆಎಂಸಿ ಆಸ್ಪತ್ರೆ, ಡಾ. ಬಿ ಆರ್ ಅಂಬೇಡ್ಕರ್ ವೃತ್ತ, ಮಂಗಳೂರು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Sun, 6 April 25