World Heart Day: ಅಧಿಕ ಕೊಲೆಸ್ಟ್ರಾಲ್ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ನೇರ ಕಾರಣ; ಡಾ.ಮೀನಾಕ್ಷಿ ಮೋಹನ್

|

Updated on: Sep 29, 2023 | 10:55 AM

ಅಧಿಕ ರಕ್ತದ ಕೊಲೆಸ್ಟ್ರಾಲ್ ಅಥವಾ ಹೆಚ್ಚಿನ ಟ್ರೈಗ್ಲಿಸರೈಡ್‌ಗಳು (ಹೈಪರ್ಲಿಪಿಡೆಮಿಯಾ ಅಥವಾ ಹೈಪರ್ಕೊಲೆಸ್ಟರಾಲೀಮಿಯಾ) ಅಥವಾ ಎರಡರಿಂದಲೂ, ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೊಳ್ಳುತ್ತವೆ. ಕ್ರಮೇಣವಾಗಿ ರಕ್ತನಾಳಗಳಲ್ಲಿ ರಕ್ತವು ಅಪಧಮನಿಗಳ ಮೂಲಕ ಹರಿಯಲು ಕಷ್ಟವಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ,ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ" ಎಂದು ಡಾ.ಮೀನಾಕ್ಷಿ ಹೇಳುತ್ತಾರೆ.

World Heart Day: ಅಧಿಕ ಕೊಲೆಸ್ಟ್ರಾಲ್ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ನೇರ ಕಾರಣ; ಡಾ.ಮೀನಾಕ್ಷಿ ಮೋಹನ್
World Heart Day
Follow us on

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮಯಸ್ಕರಿಂದ ಯುವಕರೇ ಇದಕ್ಕೆ ಬಲಿಯಾಗುವುದು ಅಘಾತಕಾರಿ ಸಂಗತಿ. ಆದರೆ ಇದಕ್ಕೆ ಪ್ರಮುಖ ಕಾರಣ ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳು. ಆದ್ದರಿಂದ ವಿಶ್ವ ಹೃದಯ ದಿನದಂದು , ಹೃದ್ರೋಗದ ಅಪಾಯದಿಂದ ನಿಮ್ಮನ್ನು ಕಾಪಾಡಲು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಅಳೆಯುವುದು ಹೇಗೆ ಎಂಬುದರ ಕುರಿತು ನ್ಯೂಸ್ 9 ಸಂದರ್ಶನದಲ್ಲಿ ಹೃದ್ರೋಗಶಾಸ್ತ್ರಜ್ಞರಾದ ಡಾ.ಮೀನಾಕ್ಷಿ ಮೋಹನ್ ಅವರು ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

“ದೇಹದಲ್ಲಿರುವ ಕೊಬ್ಬನ್ನು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಲಿಪಿಡ್‌ಗಳು ಎಂದು ಕರೆಯಲಾಗುತ್ತದೆ. ಅಧಿಕ ರಕ್ತದ ಕೊಲೆಸ್ಟ್ರಾಲ್ ಅಥವಾ ಹೆಚ್ಚಿನ ಟ್ರೈಗ್ಲಿಸರೈಡ್‌ಗಳು (ಹೈಪರ್ಲಿಪಿಡೆಮಿಯಾ ಅಥವಾ ಹೈಪರ್ಕೊಲೆಸ್ಟರಾಲೀಮಿಯಾ) ಅಥವಾ ಎರಡರಿಂದಲೂ, ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೊಳ್ಳುತ್ತವೆ. ಕ್ರಮೇಣವಾಗಿ ರಕ್ತನಾಳಗಳಲ್ಲಿ ರಕ್ತವು ಅಪಧಮನಿಗಳ ಮೂಲಕ ಹರಿಯಲು ಕಷ್ಟವಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆ,ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ” ಎಂದು ಡಾ.ಮೀನಾಕ್ಷಿ ಹೇಳುತ್ತಾರೆ.

ಇದನ್ನೂ ಓದಿ: ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ ಎಂದು ಸೂಚಿಸುವ ಚಿಹ್ನೆಗಳಿವು

ಅಧಿಕ ಕೊಲೆಸ್ಟ್ರಾಲ್​​​​​ ಅಥವಾ ಹೈಪರ್ಲಿಪಿಡೆಮಿಯಾ ಅಪಾಯದಲ್ಲಿರುವವರು ಯಾರು?

  • ಮಧುಮೇಹಿಗಳು
  • ಧೂಮಪಾನಿಗಳು
  • ಸ್ಥೂಲಕಾಯತೆ ಅಥವಾ ಅಧಿಕ ಬೊಜ್ಜು ಹೊಂದಿರುವವರು
  • ಜಡ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಹೊಂದಿರುವವರು

ಕೆಟ್ಟ ಕೊಲೆಸ್ಟ್ರಾಲ್ ಎಂದರೇನು?

‘ಕೆಟ್ಟ ಕೊಲೆಸ್ಟ್ರಾಲ್’ ಎಂದೂ ಕರೆಯಲ್ಪಡುವ ಎಲ್‌ಡಿಎಲ್ ಒಂದು ರೀತಿಯ ಲಿಪಿಡ್ ಆಗಿದ್ದು ಅದು ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ, ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಎಚ್‌ಡಿಎಲ್ ಅಥವಾ ‘ಉತ್ತಮ ಕೊಲೆಸ್ಟ್ರಾಲ್’ ಒಂದು ರೀತಿಯ ಲಿಪಿಡ್ ಆಗಿದ್ದು, ಅದು ಸಂಗ್ರಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಿದ್ದರೆ ಅದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಎಚ್ ಡಿಎಲ್​ನ್ನು ಹೆಚ್ಚು ಮಾಡಲು ನಾವು ಪ್ರಯತ್ನಿಸಬೇಕು. ಹೃದಯದ ರಕ್ತನಾಳಗಳಲ್ಲಿ ಪದರಗಳು ನಿರ್ಮಾಣವಾಗುವಂತೆ ಮಾಡಲು ಕೆಟ್ಟ ಕೊಲೆಸ್ಟ್ರಾಲ್(ಎಲ್ ಡಿಎಲ್) ಪ್ರಮುಖ ಕಾರಣವಾಗಿರುವುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: