World IVF Day 2024 : ಐವಿಎಫ್‌ ಚಿಕಿತ್ಸೆಯಿಂದ ಮಗು ಪಡೆಯಲು ಮುಂದಾಗಿದ್ದಾರಾ? ಹಾಗಾದ್ರೆ ಈ ವಿಷಯಗಳು ತಿಳಿದಿರಲಿ

ಮಕ್ಕಳನ್ನು ಪಡೆಯಲು ಸಾಧ್ಯವಾಗದ ಹಾಗೂ ಫಲವತ್ತತೆ ಸಮಸ್ಯೆ ಅನುಭವಿಸುವ ಅನೇಕ ದಂಪತಿಗಳಿಗೆ ಈ ಐವಿಎಫ್​ ಚಿಕಿತ್ಸೆ ವರದಾನವಾಗಿದೆ. ಮಕ್ಕಳಿಲ್ಲದ ಅನೇಕರು ಈ ಚಿಕಿತ್ಸೆಯ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ಪ್ರತಿ ವರ್ಷ ಜುಲೈ 25 ರಂದು ವಿಶ್ವ ಐವಿಎಫ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವ ಭ್ರೂಣಶಾಸ್ತ್ರಜ್ಞರ ದಿನ ಎಂದೂ ಕರೆಯುತ್ತಾರೆ. ಈ ದಿನವು ಐವಿಎಫ್ ಮೂಲಕ ಗರ್ಭಧರಿಸಿ ಹಾಗೂ ಯಶಸ್ವಿಯಾಗಿ ಜನ್ಮ ನೀಡಿದ ಮೊದಲ ಮಗುವಿನ ಜನ್ಮದಿನವಾಗಿದ್ದು, ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಇನ್ನಷ್ಟು ಮಾಹಿತಿಯು ಇಲ್ಲಿದೆ.

World IVF Day 2024 : ಐವಿಎಫ್‌ ಚಿಕಿತ್ಸೆಯಿಂದ ಮಗು ಪಡೆಯಲು ಮುಂದಾಗಿದ್ದಾರಾ? ಹಾಗಾದ್ರೆ ಈ ವಿಷಯಗಳು ತಿಳಿದಿರಲಿ
ವಿಶ್ವ ಐವಿಎಫ್ ದಿನ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 25, 2024 | 9:45 AM

ತಾಯಿಯಾಗುವುದು ಹೆಣ್ಣಿನ ಜೀವನದ ಸಂತಸದ ಘಳಿಗೆಯಲ್ಲಿ ಒಂದು. ಪ್ರತಿಯೊಂದು ಹೆಣ್ಣಿಗೂ ಜೀವನದಲ್ಲಿ ತಾಯ್ತತನದ ಸುಖವನ್ನು ಅನುಭವಿಸಬೇಕು ಎನ್ನುವುದಿರುತ್ತದೆ. ಆದರೆ ಎಷ್ಟೋ ಹೆಣ್ಣು ಮಕ್ಕಳಿಗೆ ತಾಯಿಯಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹವರಿಗೆ ಈ ಇನ್‌ ವಿಟ್ರೋ ಫಲೀಕರಣ (ಐವಿಎಫ್‌) ತಂತ್ರಜ್ಞಾನವು ವರದಾನವಾಗಿದೆ. ಮಕ್ಕಳನ್ನು ಹೊಂದಲು ಸಾಧ್ಯವಾಗದ ಹೆಣ್ಣು ಮಕ್ಕಳು ಕೃತಕ ಗರ್ಭಧಾರಣೆಯಂತಹ ವಿಧಾನವನ್ನು ಅನುಸರಿಸುತ್ತಿದ್ದಾರೆ. ಐವಿಎಫ್ ಸಂತಾನೋತ್ಪತ್ತಿ ತಂತ್ರಜ್ಞಾನದ ಪ್ರಕ್ರಿಯೆಯಾಗಿದೆ. ಇದರ ಮೂಲಕ ವೀರ್ಯವನ್ನು ಮೊಟ್ಟೆಯೊಂದಿಗೆ ಫಲವತ್ತಾಗಿಸಿ ಆರೋಗ್ಯಕರ ಭ್ರೂಣವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಆ ಬಳಿಕ ಭ್ರೂಣವನ್ನು ಗರ್ಭಾಶಯದಲ್ಲಿ ಅಳವಡಿಸಿ ಗರ್ಭವತಿಯಾಗುವಂತೆ ಮಾಡಲಾಗುತ್ತದೆ. ಇದರಿಂದ ಎಷ್ಟೋ ಹೆಣ್ಣು ಮಕ್ಕಳು ತಾಯ್ತತನದ ಸುಖವನ್ನು ಅನುಭವಿಸುವಂತಾಗಿದೆ. ಈ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ವಿಶ್ವ ಐವಿಎಫ್‌ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಐವಿಎಫ್‌ ದಿನದ ಇತಿಹಾಸ ಹಾಗೂ ಮಹತ್ವ

ಜುಲೈ 25, 1978 ರಂದು ಜನಿಸಿದ ಲೂಯಿಸ್ ಜಾಯ್ ಬ್ರೌನ್ ಐವಿಎಫ್ ಕಾರ್ಯವಿಧಾನದ ಮೂಲಕ ಜನಿಸಿದ ಮೊದಲ ಮಗುವಾಗಿದೆ. ಈ ದಿನದಿಂದ ಐವಿಎಫ್‌ ಶಿಶುಗಳನ್ನು ಗರ್ಭಧರಿಸಲು ವಿಶ್ವಾಸಾರ್ಹ ಸಂತಾನೋತ್ಪತ್ತಿ ತಂತ್ರಜ್ಞಾನವೆಂದು ಗುರುತಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ವಿಶ್ವ ಐವಿಎಫ್‌ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮಕ್ಕಳಿಲ್ಲದ ದಂಪತಿಗಳಿಗೆ ಆಶಾ ಕಿರಣವಾದ ಐವಿಎಫ್ ಚಿಕಿತ್ಸೆಯ ಬಗೆಗಿನ ಮಾಹಿತಿ ನೀಡುವ ಸಲುವಾಗಿ ಹಾಗೂ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಈ ದಿನವು ಮಹತ್ವಕಾರಿಯಾಗಿದೆ.

ಇದನ್ನೂ ಓದಿ: ರಾತ್ರಿಯಿಡೀ ಸಂಗಾತಿಯನ್ನು ತಬ್ಬಿಕೊಂಡು ಮಲಗುವುದರಿಂದ ಈ ಎಲ್ಲ ಆರೋಗ್ಯ ಪ್ರಯೋಜನ

ಈ ಐವಿಎಫ್‌ ಚಿಕಿತ್ಸೆ ಪಡುವವರಿಗೆ ಈ ವಿಷಯಗಳು ತಿಳಿದಿರಲಿ

* ಯಾರು ಐವಿಎಫ್‌ ಚಿಕಿತ್ಸೆಗೆ ಒಳಪಡುತ್ತಾರೋ ಅವರು ಆಹಾರ ಸೇವನೆಯತ್ತ ಹೆಚ್ಚು ಗಮನ ಹರಿಸಬೇಕು. ಹಣ್ಣು, ಸೊಪ್ಪು, ತರಕಾರಿ, ಪೋಷಕಾಂಶವಿರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸುವುದು ಒಳ್ಳೆಯದು.

* ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ನೀರಿನ ಬದಲು ಫ್ರೆಶ್ ಜ್ಯೂಸ್ ಕುಡಿಯುವುದು ಉತ್ತಮ.

* ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ದೆ ಅವಶ್ಯಕ. ಒಳ್ಳೆಯ ನಿದ್ದೆಯೊಂದಿಗೆ ವಿಶ್ರಾಂತಿಯು ಅಗತ್ಯವಾಗಿದೆ.

* ಈ ಚಿಕಿತ್ಸೆ ಒಳಗಾಗುವವರು ಮಾನಸಿಕ ಒತ್ತಡಕ್ಕೆ ಒಳಗಾಗದೇ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಹೀಗಾಗಿ ಯೋಗ, ವ್ಯಾಯಾಮ ಹಾಗೂ ಧ್ಯಾನದತ್ತ ತೊಡಗಿಸಿಕೊಂಡರೆ ಉತ್ತಮ.

* ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರವಿರಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್