World Liver Day 2021: ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

ದೇಹದ ಎರಡನೇ ಅತಿದೊಡ್ಡ ಅಂಗದ ಬಗ್ಗೆ ಜಾಗೃತಿ ಮೂಡಿಸಲು ಏಪ್ರಿಲ್ 19 ರಂದು ವಿಶ್ವ ಯಕೃತ್ತು ಅಥವಾ ಪಿತ್ತಜನಕಾಂಗ ದಿನವೆಂದು ಆಚರಿಸಲಾಗುತ್ತದೆ.

World Liver Day 2021: ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?
World Liver Day
Follow us
shruti hegde
|

Updated on:Apr 19, 2021 | 11:42 AM

ನಮ್ಮ ಆರೋಗ್ಯವನ್ನು ಕಾಪಾಡಲು ಪಿತ್ತಜನಕಾಂಗ ಅಥವಾ ಯಕೃತ್ತು (liver) ಮುಖ್ಯ ಪಾತ್ರವನ್ನು ವಹಿಸುತ್ತದೆ. ಜೀರ್ಣಕ್ರಿಯೆ ಸೇರಿದಂತೆ ನಮ್ಮನ್ನು ಆರೋಗ್ಯವಾಗಿಡಲು ಪಿತ್ತಜನಕಾಂಗ ಮುಖ್ಯ. ನಾವು ತಿನ್ನುವ ಆಹಾರದಿಂದ ಹಿಡಿದು ಕುಡಿಯುವ ಎಲ್ಲವೂ ಯಕೃತ್ತಿನ ಮೂಲಕ ಹಾದು ಹೋಗುತ್ತದೆ. ಆಹಾರವನ್ನು ಕಲುಷಿತದಿಂದ ಬೇರ್ಪಡಿಸಿ, ಪೌಷ್ಠಿಕಾಂಶಯುಕ್ತ ಆಹಾರವನ್ನು ನಮ್ಮ ದೇಹಕ್ಕೆ ನೀಡುವ ಕ್ರಿಯೆ ಪಿತ್ತಜನಕಾಂಗದಿಂದ ಆಗುತ್ತದೆ.  ದೇಹದ ಎರಡನೇ ಅತಿದೊಡ್ಡ ಅಂಗದ ಬಗ್ಗೆ ಜಾಗೃತಿ ಮೂಡಿಸಲು ಏಪ್ರಿಲ್ 19 ರಂದು ವಿಶ್ವ ಯಕೃತ್ತು ದಿನವೆಂದು ಆಚರಿಸಲಾಗುತ್ತದೆ.

ಪಿತ್ತಜನಕಾಂಗ, ಪ್ರತಿದಿನ ಸುಮಾರು 800-1,000 ಮಿಲಿ ಪಿತ್ತರಸವನ್ನು ಸ್ರವಿಸುತ್ತದೆ. ಇದರಲ್ಲಿ ಕೊಬ್ಬಿನ ಜೀರ್ಣ ಕ್ರಿಯೆಗೆ ಅಗತ್ಯವಾದ ಲವಣಗಳು ಇರುತ್ತವೆ ಮತ್ತು ರಕ್ತದಿಂದ ತ್ಯಾಜ್ಯ ಮತ್ತು ವಿಷಕಾರಿ ವಸ್ತುಗಳನ್ನು ತೆಗೆದು ಹಾಕುತ್ತದೆ. ಯಕೃತ್ತು ಹಾನಿಗೊಳಗಾದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಸಮಯದ ವಿಳಂಬವು ಪಿತ್ತಜನಕಾಂಗದ ಸಿರೋಸಿಸ್ ಮತ್ತು ಪಿತ್ತಜನಕಾಂಗದ ಕ್ಯಾನ್ಸರ್​ಗೆ ಕಾರಣವಾಗಬಹುದು. ಯಕೃತ್ತಿಗೆ ಉಂಟಾಗುವ ತೊಂದರೆಗಳನ್ನು ದೂರವಿಡಲು ಅಥವಾ ನಾವು ಆರೋಗ್ಯವಾಗಿರಲು ಸಮತೋಲನ ಆಹಾರ ಮುಖ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ದೇಹದಲ್ಲಿ ಯಕೃತ್ತಿನ ಕೆಲಸವೇನು? ಅನಾರೋಗ್ಯದ ವಿರುದ್ಧ ಯಕೃತ್ತ ಹೋರಾಡುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಸೇರಿಕೊಂಡ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಣ ಮಾಡುತ್ತದೆ.

ಯಕೃತ್ತಿನ ಕಾಯಿಲೆಗೆ ಕಾರಣವೇನು? ಯಕೃತ್ತಿನ ಕಾಯಿಲೆ ಅನುವಂಶಿಕವಾಗಿ ಬರಬಹುದು. ಅನಾರೋಗ್ಯಕರ ಆಹಾರ ವ್ಯವಸ್ಥೆ ಮತ್ತು ತಿನ್ನುವ ಆಹಾರದ ಮಾದರಿಯ ಮೇಲೆ ಯಕೃತ್ತಿನ ಕಾಯಿಲೆಗಳು ಉಂಟಾಗುತ್ತದೆ. ಮದ್ಯಸೇವನೆ, ಬೀದಿಯಲ್ಲಿ ಸಿಗುವ ಜಂಕ್​ ಫುಡ್​​ಗಳ ಸೇವನೆ ಕಾಯಿಲೆಗೆ ಕಾರಣ. ದೇಹದಲ್ಲಿ ಹೆಚ್ಚು ಬೊಜ್ಜು, ಡಯಾಬಿಟಿಸ್​ ಉಂಟಾದಾಗ ಯಕೃತ್ತಿನ ಆರೋಗ್ಯದಲ್ಲಿ ಏರು-ಪೇರು ಉಂಟಾಗುತ್ತದೆ.

ಯಕೃತ್ತಿನ ಹಾನಿಯ ಲಕ್ಷಣಗಳು ಕಾಮಲೆ, ಕಡಿಮೆ ತೂಕ, ಹಸಿವಾಗದಿರುವುದು, ವಾಕರಿಕೆ ಮತ್ತು ವಾಂತಿ, ದೇಹಕ್ಕೆ ಸುಸ್ತು ಅಥವಾ ಆಯಾಸ, ಹೊಟ್ಟೆ ನೋವು ಇತ್ಯಾದಿಗಳಿಂದ ಯಕೃತ್ತ ಸಮಸ್ಯೆ ಆಗಿರುವುದು ತಿಳಿದು ಬರುತ್ತದೆ.

ಯಕೃತ್ತನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಹೇಗೆ? ಬೆಳ್ಳುಳ್ಳಿ, ಸೊಪ್ಪು ತರಕಾರಿಗಳು, ಸೇಬು ಹಣ್ಣು, ದ್ರಾಕ್ಷಿಹಣ್ಣು ಮತ್ತು ಕ್ಯಾರೆಡ್​ಗಳನ್ನು ಹೆಚ್ಚು ಸೇವಿಸಬೇಕು. ನಿಂಬೆ ರಸ, ಗ್ರೀನ್​ ಟೀ ಹೆಚ್ಚು ಕುಡಿಯಬೇಕು. ಆಹಾರದಲ್ಲಿ ಅರಿಶಿಣ ಬಳಸಿ ಆಹಾರ ಸೇವಿಸಬೇಕು. ಈ ರೀತಿಯಾಯಾಗಿ ಪಿತ್ತಜನಕಾಂಗವನ್ನು ಸರಿಯಾಗಿ ನೋಡಿಕೊಳ್ಳಬಹುದು.

ಇದನ್ನೂ ಓದಿ: ವಾಲ್​ನಟ್​ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂಬ ಆತಂಕ ಬಿಡಿ.. ನಿಯಮಿತವಾಗಿ ಸೇವಿಸಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ

Health Tips During Covid Pandemic: ಕೊರೊನಾ ಕಾಲದಲ್ಲಿ ಆರೋಗ್ಯ ರಕ್ಷಣೆಗೆ 9 ಸೂತ್ರಗಳು

(World liver day 2021 How to Maintain Liver Health)

Published On - 11:36 am, Mon, 19 April 21

ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್