Sign In

By signing in or creating an account, you agree with Associated Broadcasting Company's Terms & Conditions and Privacy Policy.

World Rabies Day 2022: ವಿಶ್ವ ರೇಬಿಸ್ ದಿನ, ಇತಿಹಾಸ, ಈ ವರ್ಷದ ಥೀಮ್ ಏನು? ಇಲ್ಲಿದೆ ಮಾಹಿತಿ

ಸೆಪ್ಟೆಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಫ್ರೆಂಚ್ ರಸಾಯನಶಾಸ್ತ್ರಜ್ಞ ಹಾಗೂ ಸೂಕ್ಷ್ಮ ಜೀವಿ ವಿಜ್ಞಾನಿ ಸರ್ ಲೂಯಿಸ್ ಪಾಶ್ಚರ್ ಅವರು ಮರಣ ಹೊಂದಿದ ದಿನ.

World Rabies Day 2022: ವಿಶ್ವ ರೇಬಿಸ್ ದಿನ, ಇತಿಹಾಸ, ಈ ವರ್ಷದ ಥೀಮ್ ಏನು? ಇಲ್ಲಿದೆ ಮಾಹಿತಿ
World Rabies Day
Follow us
TV9 Web
| Updated By: ನಯನಾ ರಾಜೀವ್

Updated on: Sep 28, 2022 | 6:30 AM

ಸೆಪ್ಟೆಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಫ್ರೆಂಚ್ ರಸಾಯನಶಾಸ್ತ್ರಜ್ಞ ಹಾಗೂ ಸೂಕ್ಷ್ಮ ಜೀವಿ ವಿಜ್ಞಾನಿ ಸರ್ ಲೂಯಿಸ್ ಪಾಶ್ಚರ್ ಅವರು ಮರಣ ಹೊಂದಿದ ದಿನ. ಪ್ರತಿ ವರ್ಷವೂ ಸೆಪ್ಟೆಂಬರ್ 28 ರಂದು ವಿಶ್ವಾದ್ಯಂತ ರೇಬಿಸ್ ದಿನವನ್ನು ಆಚರಿಸಿ ರೇಬಿಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅವರ ನೆನಪಿಗಾಗಿ ಈ ದಿನವನ್ನು ವಿಶ್ವ ರೇಬೀಸ್ ದಿನ ಎಂದು ಆಚರಣೆಗೆ ತರಲಾಯಿತು.

ಪ್ರತಿ ವರ್ಷ ಜಗತ್ತಿನಲ್ಲಿ ರೇಬಿಸ್‌ನಿಂದ ಸಂಭವಿಸುವ ಮರಣ 59 ಸಾವಿರ. ಅದರಲ್ಲಿ ಶೇ.90ರಷ್ಟು ಸಾವುಗಳು ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ವರದಿಯಾಗುತ್ತಿವೆ. ರೇಬಿಸ್ ಉಷ್ಣ ರಕ್ತದ ಪ್ರಾಣಿಗಳ ಗಂಭೀರ ಸೋಂಕು ಆಗಿದೆ. ನರಮಂಡಲಕ್ಕೆ ದಾಳಿಯಿಡುವ ವೈರಸ್‌ ನಿಂದ ರೇಬಿಸ್ ಉಂಟಾಗುತ್ತದೆ. ಇದೊಂದು ಮಾರಣಾಂತಿಕ ರೋಗವಾಗಿದೆ. ರೋಗಿ ರೇಬಿಸ್‌ಗೆ ತುತ್ತಾದರೆ ಯಾವುದೇ ಚಿಕಿತ್ಸೆ ಫಲಕಾರಿಯಾಗುವುದಿಲ್ಲ.

ರೇಬಿಸ್ ದಿನದ ಥೀಮ್ ಏನು? ‘ One Health Zero Death’ ಎಂಬ ಥೀಮ್​ನೊಂದಿಗೆ ಈ ಬಾರಿ ವಿಶ್ವ ರೇಬಿಸ್ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಸೋಂಕಿತ ಪ್ರಾಣಿಯೊಂದು ಇನ್ನೊಂದು ಪ್ರಾಣಿಯನ್ನು ಕಚ್ಚಿದಾಗ ಸೋಂಕಿತ ಪ್ರಾಣಿಯ ಜೊಲ್ಲಿನಲ್ಲಿರುವ ವೈರಸ್ ವರ್ಗಾವಣೆಗೊಳ್ಳುತ್ತದೆ. ಪ್ರಾಣಿಗಳು ತಮ್ಮ ಪಂಜ ಅಥವಾ ಉಗುರುಗಳನ್ನು ನೆಕ್ಕುತ್ತಿರುವುದರಿಂದ ಅವುಗಳು ಪರಚಿದರೂ ಅಪಾಯಕಾರಿಯಾಗುತ್ತದೆ.

ಗಾಯ ಅಥವಾ ಗೀರು ಅಥವಾ ಬಾಯಿ ಮತ್ತು ಕಣ್ಣುಗಳ ಲೋಳೆಯ ಪದರಗಳ ಮೂಲಕ ರೇಬಿಸ್ ವೈರಸ್ ಶರೀರವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಅದು ಮಿದುಳು ಮತ್ತು ಮಿದುಳು ಬಳ್ಳಿ ಅಥವಾ ಬೆನ್ನುಹುರಿಗೆ ಸಾಗುತ್ತದೆ. ಸೋಂಕು ಮಿದುಳಿಗೆ ಹರಡಿದಾಗ ಅದು ಮಿದುಳಿನ ನರಗಳ ಮೂಲಕ ಶರೀರದಲ್ಲಿ ಇಳಿಯುತ್ತದೆ ಮತ್ತು ವಿವಿಧ ಅಂಗಾಂಗಗಳಿಗೆ ದಾಳಿಯಿಡುತ್ತದೆ.

ಬಾವಲಿಗಳು ತಮ್ಮ ಮಲದ ಮೂಲಕ ರೇಬಿಸ್ ವೈರಸ್‌ನ್ನು ಹರಡುತ್ತವೆ. ಹೀಗಾಗಿ ಬಾವಲಿಗಳು ವಾಸವಿರುವ ಗುಹೆಗಳನ್ನು ಪ್ರವೇಶಿಸುವವರು ಅವು ಸೃಷ್ಟಿಸಿರುವ ವಾಯುದ್ರವವನ್ನು ಉಸಿರಾಡಿಸುವ ಮೂಲಕ ರೇಬಿಸ್‌ಗೆ ತುತ್ತಾಗುತ್ತಾರೆ.

ರೇಬಿಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಅದನ್ನು ತಡೆಯಲು ಎಲ್ಲ ಪ್ರಯತ್ನಗಳು ಅಗತ್ಯ. ಸಾಕುನಾಯಿ ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು. ಅವುಗಳ ಆರೋಗ್ಯದ ಬಗ್ಗೆ ಪಶುವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು.

ಬೀದಿನಾಯಿಗಳೊಂದಿಗೆ ಆಟವಾಡಲು ಮಕ್ಕಳಿಗೆ ಅವಕಾಶ ನೀಡಬಾರದು. ಪ್ರತಿವರ್ಷ ಭಾರತದಲ್ಲಿ ರೇಬಿಸ್‌ನಿಂದ 20 ಸಾವಿರ ಸಂಭವಿಸುತ್ತದೆ ಎಂದು ಕೇಂದ್ರ ಸರಕಾರವೇ ಹೇಳಿಕೊಂಡಿದೆ. ರೇಬಿಸ್‌ನಿಂದ ಸಾವಿಗೀಡಾಗುವ ಮಕ್ಕಳಲ್ಲಿ ಹೆಚ್ಚಿನವರು 5ರಿಂದ 13 ವರ್ಷದೊಳಗಿನ ಮಕ್ಕಳು. ಶ್ವಾನಗಳ ಜತೆ ಆಟವಾಡುವುದು, ಅವುಗಳ ವರ್ತನೆ ಗೊತ್ತಿಲ್ಲದೇ ಕೆಣಕಲು ಹೋಗಿ ಕಚ್ಚಿಸಿಕೊಳ್ಳುವುದು ಮುಖ್ಯ ಕಾರಣ.

ರೇಬಿಸ್‌ ಕುರಿತು ಅರಿವು ಮೂಡಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ ರೇಬಿಸ್‌ ನಿಯಂತ್ರಣ ಯೋಜನೆ ರೂಪಿಸಿದೆ. ವಿಶ್ವದೆಲ್ಲೆಡೆ ರೇಬಿಸ್‌ನಿಂದ ಆಗುವ ಮರಣದ ಸಂಖ್ಯೆಯಲ್ಲಿ ಭಾರತದವೊಂದರಲ್ಲೇ ಶೇ.36ರಷ್ಟು ಕಾಣಸಿಗುತ್ತದೆ. ರೇಬಿಸ್ ಎನ್ನುವ ವೈರಸ್ ಹೆಚ್ಚಾಗಿ ನಾಯಿ ಕಡಿತದಿಂದ ಹರಡುತ್ತದೆ. ಸಾಮಾನ್ಯವಾಗಿ ಸುಮಾರು ಶೇ.60 ಬೀದಿನಾಯಿಗಳಿಂದ ಮತ್ತು ಶೇ.40ರಷ್ಟು ಸಾಕು ನಾಯಿಗಳ ಕಡಿತದಿಂದ ಹರಡುತ್ತದೆ.

ಸಮಾಧಾನಕರ ಅಂಶವೆಂದರೆ ನಾಯಿ ಕಡಿತದ ತಕ್ಷಣ ಚಿಕಿತ್ಸೆ ದೊರೆತಲ್ಲಿ ಹೆಚ್ಚಿನ ಪ್ರಾಣಹಾನಿಯನ್ನು ತಡೆಗಟ್ಟಬಹುದಾಗಿದೆ. ನಾಯಿ ಕಚ್ಚಿದಾಗ ಎಂಜಲಿನ ಮೂಲಕ ರೋಗಿಯ ದೇಹವನ್ನು ಸೇರುವ ವೈರಸ್ ಸಾಮಾನ್ಯವಾಗಿ ನರಮಂಡಲವನ್ನು ಕ್ಷೀಣಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ