AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heart Attack: ಹೃದಯಾಘಾತವನ್ನು ತಡೆಗಟ್ಟಲು ಈ ಐದು ಕ್ರಮಗಳನ್ನು ಅನುಸರಿಸಿ

ಹೃದಯಾಘಾತದಿಂದ ಅಕಾಲಿಕ ಮರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಇದರಿಂದ ಹೊರಬರಲು ಆಯುರ್ವೇದ ತಜ್ಞರು 5 ವಿಧಾನಗಳನ್ನು ಸೂಚಿಸಿದ್ದಾರೆ.

Heart Attack: ಹೃದಯಾಘಾತವನ್ನು ತಡೆಗಟ್ಟಲು ಈ ಐದು ಕ್ರಮಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 07, 2021 | 7:42 AM

Share

ಇತ್ತೀಚಿನ ವರ್ಷಗಳಲ್ಲಿ ಯುವಕರು ಕೂಡ ಹೃದಯಾಘಾತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ 4 ಸಾವುಗಳಲ್ಲಿ ಒಂದು ಹೃದಯ ಸಂಬಂಧಿ ಕಾಯಿಲೆಯಿಂದ ಉಂಟಾಗುವ ಸಾವಾಗಿದೆ. ಶೇ 80ರಷ್ಟು ಪ್ರಕರಣಗಳು ಹೃದಯಾಘಾತಕ್ಕೆ ಸಂಬಂಧಿಸಿದೆ. ಅದರಲ್ಲೂ ಹೆಚ್ಚಿನವರು 40 ಮತ್ತು 55 ರ ವಯಸ್ಸಿನವರಾಗಿದ್ದಾರೆ. ಹೃದಯಾಘಾತದಿಂದ ಅಕಾಲಿಕ ಮರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಇದರಿಂದ ಹೊರಬರಲು ಆಯುರ್ವೇದ ತಜ್ಞರು 5 ವಿಧಾನಗಳನ್ನು ಸೂಚಿಸಿದ್ದಾರೆ. ಅವುಗಳು ಯಾವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

1. ಸೂರ್ಯೋದಯಕ್ಕೆ 2 ಗಂಟೆಗಳ ಮೊದಲು ಎಚ್ಚರಗೊಳ್ಳುವುದು ಆಯುರ್ವೇದ ತಜ್ಞರು ಸೂರ್ಯೋದಯಕ್ಕೆ ಎರಡು ಗಂಟೆ ಮುಂಚಿತವಾಗಿ ಎಲ್ಲರೂ ಎಚ್ಚರಗೊಳ್ಳಬೇಕು ಎಂದು ಹೇಳಿದ್ದಾರೆ. ಆಗ ಮನಸ್ಸು ತುಂಬಾ ಶಾಂತವಾಗಿರುತ್ತದೆ ಮತ್ತು ಮಾನಸಿಕ ಒತ್ತಡವು ಹೃದಯದ ಮೇಲೆ ಪರಿಣಾಮ ಬೀರುವುದಿಲ್ಲ.

2. ಎರಡು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ ಆಯುರ್ವೇದ ತಜ್ಞರು ಬೆಳಿಗ್ಗೆ ಎದ್ದ ನಂತರ ಎರಡು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಇದು ದೇಹದಲ್ಲಿ ಜೀವಾಣು ಸಂಗ್ರಹವಾಗದಂತೆ ರಕ್ಷಿಸುತ್ತದೆ. ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

3. ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಬೇಕು ಒತ್ತಡವನ್ನು ಕಡಿಮೆ ಮಾಡುವ ಹಾರ್ಮೋನ್​ಗಳಾದ ಎಂಡಾರ್ಫಿನ್ ಮತ್ತು ಸಿರೊಟೋನಿನ್-ಮೂಡ್ ಆಫ್​ ಲಿಫ್ಟಿಂಗ್​ನ ಸರಿಯಾದ ಡೋಸ್ ಪಡೆಯಲು ದೈನಂದಿನ ಯೋಗ ಮತ್ತು ಧ್ಯಾನ ಅತ್ಯಗತ್ಯ. ದೀರ್ಘಕಾಲದ ಒತ್ತಡ ಮತ್ತು ಖಿನ್ನತೆಯು ಹೃದಯ ಕಾಯಿಲೆಯ ಪ್ರಮುಖ ಕಾರಣವೆಂದು ಹಲವಾರು ಅಧ್ಯಯನಗಳು ತೋರಿಸಿವೆ. ಅದಕ್ಕಾಗಿಯೇ ತಜ್ಞರು ತಪ್ಪದೆ ಯೋಗ ಮಾಡಲು ಸಲಹೆ ನೀಡುತ್ತಾರೆ.

4. ಆಹಾರವನ್ನು ತೆಗೆದುಕೊಳ್ಳಲು ಸರಿಯಾದ ಸಮಯ ಊಟವನ್ನು ಮಧ್ಯಾಹ್ನ 12 ರಿಂದ 12.30 ಒಳಗೆ ಮಾಡಿ ಮತ್ತು ಉಪಹಾರವನ್ನು ಬೆಳಿಗ್ಗೆ 7.00 ಗೆ ಮಾಡಬೇಕು. ಊಟ ಮತ್ತು ಉಪಹಾರದ ನಡುವೆ 4 ರಿಂದ 5 ಗಂಟೆಗಳ ಅಂತರವಿರಬೇಕು. ಇದು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ. ಊಟದ ಸ್ವಲ್ಪ ಸಮಯದ ನಂತರ ಹಣ್ಣುಗಳನ್ನು ತಿನ್ನುವುದು ಉತ್ತಮ. ಒಳ್ಳೆಯ ನಿದ್ರೆಗಾಗಿ ಕನಿಷ್ಠ 2 ಗಂಟೆಗಳ ಊಟವನ್ನು ಸೇವಿಸಿ. ಆಗ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

5. ಮಧ್ಯಾಹ್ನ ನಿದ್ರೆಯಿಂದ ದೂರವಿರಿ ಮಧ್ಯಾಹ್ನ ನಿದ್ರೆಯಿಂದ ದೂರವಿರಿ. ಇದು ನಿದ್ರಾಹೀನತೆ, ಆಯಾಸ ಮತ್ತು ಆಲಸ್ಯವನ್ನು ಹೆಚ್ಚಿಸುತ್ತದೆ. ಬೇಕಿದ್ದರೆ ವಯಸ್ಸಾದವರು ಯೋಗ ನಿದ್ರೆ ಮಾಡಬಹುದು ಎಂದು ವೈದ್ಯರು ಸೂಚಿಸಿದ್ದಾರೆ.

ಇದನ್ನೂ ಓದಿ: ಹದಿಹರೆಯದ ವಯಸ್ಸಿನಲ್ಲಿ ಮದ್ಯಪಾನ‌ ಮಾಡಿ ಹೃದಯ ಆರೋಗ್ಯ ಸಮಸ್ಯೆ ತಂದುಕೊಂಡೀರಿ; ಎಚ್ಚರ!

Heart Health: ಹೃದಯಾಘಾತ ಮಾತ್ರ ಅಲ್ಲ, ಹೃದಯಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಗಳಿಂದ ಪಾರಾಗಲು ಸದಾ ಪ್ರಯತ್ನಿಸಿ

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ