Monsoon Health Tips: ಮಳೆಯಲ್ಲಿ ನೆಂದ ಕೂಡಲೇ ಏನು ಮಾಡಬೇಕು? ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

| Updated By: ಆಯೇಷಾ ಬಾನು

Updated on: Jul 15, 2021 | 7:43 AM

ಮಳೆಗೆ ಹೆಚ್ಚಿನ ಜನರು ಜ್ವರ, ಶೀತ ಮತ್ತು ಕೆಮ್ಮು ಹಾಗೂ ಇನ್ನಿತರ ಸೋಂಕುಗಳಿಗೆ ಗುರಿಯಾಗುತ್ತಾರೆ. ಆಸ್ಪತ್ರೆಗೆ ಈಗ ಹೋಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸೂಕ್ತ.

Monsoon Health Tips: ಮಳೆಯಲ್ಲಿ ನೆಂದ ಕೂಡಲೇ ಏನು ಮಾಡಬೇಕು? ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us on

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರೂ, ಕಾಲೋಚಿತವಾಗಿ ಬರುವ ಕಾಯಿಲೆಗಳ ಬಗ್ಗೆ ನಾವು ಗಮನಹರಿಸಿವುದು ಸೂಕ್ತ. ಅದರಲ್ಲೂ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಮಳೆಗೆ ಹೆಚ್ಚಿನ ಜನರು ಜ್ವರ, ಶೀತ ಮತ್ತು ಕೆಮ್ಮು ಹಾಗೂ ಇನ್ನಿತರ ಸೋಂಕುಗಳಿಗೆ ಗುರಿಯಾಗುತ್ತಾರೆ. ಆಸ್ಪತ್ರೆಗೆ ಈಗ ಹೋಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಅದರಲ್ಲೂ ಮಳೆಗಾಲದಲ್ಲಿ ಹೊರ ಹೋಗುವವರು ವಹಿಸಬೇಕಾದ ಮುಂಜಾಗ್ರತೆ ಯಾವುದು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

1. ಮಳೆಯಲ್ಲಿ ಒದ್ದೆಯಾದ ನಂತರ ಸ್ನಾನ ಮಾಡಿ
ಮಳೆಗಾಲದಲ್ಲಿ ನೆನೆಯುವುದು ಸರ್ವೆ ಸಾಮಾನ್ಯ. ಚಿಕ್ಕವರು ಇದರಲ್ಲಿ ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಾರೆ. ಆದರೆ ಮಳೆಯಲ್ಲಿ ನೆಂದ ನಂತರ ಸ್ನಾನ ಮಾಡಲು ಮರೆಯದಿರಿ. ಮಳೆಗಾಲದಲ್ಲಿ ಕೆಮ್ಮು ಮತ್ತು ಶೀತವನ್ನು ತಡೆಗಟ್ಟಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

2. ಸ್ವಚ್ಛತೆಯನ್ನು ಕಾಪಾಡಿ
ಮಳೆಗಾಲದಲ್ಲಿ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಅದರೆ ರಸ್ತೆಬದಿಯ ಗೂಡಂಗಡಿಗಳು, ಢಾಬಾಗಳು ಅಥವಾ ಅಂಗಡಿಗಳಿಂದ ಸಂಸ್ಕರಿಸದ ನೀರನ್ನು ಕುಡಿಯಬೇಡಿ. ಶುದ್ಧೀಕರಿಸಿದ ನೀರನ್ನು ಮಾತ್ರ ಕುಡಿಯಿರಿ. ಇದು ಅನೇಕ ಕಾಯಿಲೆಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ.

3. ಕೀಟಾಣುಗಳ ಬಗ್ಗೆ ಎಚ್ಚರವಹಿಸಿ
ಸಾಮಾನ್ಯವಾಗಿ ಮಳೆಗಾಲದಲ್ಲಿ ಅದರಲ್ಲೂ ಸಂಜೆ ಹೊತ್ತಿಗೆ ಸೊಳ್ಳೆ ಕಾಟ ಹೆಚ್ಚಾಗಿರುತ್ತದೆ. ಸೊಳ್ಳೆ ಕಚ್ಚುವುದರಿಂದ ಸಾಂಕ್ರಾಮಿಕ ರೋಗಗಳು ಬೇಗನೆ ಹರಡಬಹುದು. ಹೀಗಾಗಿ ಮನೆಯ ಕಿಟಕಿ ಬಾಗಿಲುಗಳನ್ನು ಹಾಕಿ ಮತ್ತು ಸೊಳ್ಳೆ ಕಡಿತದಿಂದ ದೂರವಿರಿ.

4. ಕೈಗಳನ್ನು ನಿಯಮಿತವಾಗಿ ತೊಳೆಯಿರಿ
ವಾಶ್ ರೂಂ ಬಾಗಿಲು, ಟ್ಯಾಪ್, ಫ್ಲಶ್ ಇತ್ಯಾದಿಗಳ ಮೂಲಕ ಸೂಕ್ಷ್ಮಜೀವಿಗಳು ನಮ್ಮ ಕೈಗೆ ತಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಊಟಕ್ಕೆ ಮೊದಲು ಮತ್ತು ನಂತರ ಕೈ ತೊಳೆಯಬೇಕು. ಸೋಂಕು ತಡೆಗಟ್ಟಲು ಇದು ಸಹಾಯ ಮಾಡುತ್ತದೆ.

5. ಸೂಪ್​ ಮಾಡಿ ಕುಡಿಯಿರಿ
ಮಳೆಗಾಲದಲ್ಲಿ ಸ್ವಲ್ಪ ಬೆಚ್ಚಗಿನ ಸೂಪ್ ಕುಡಿಯುವುದು ಉತ್ತಮ. ಕ್ಯಾರೆಟ್ ಸೂಪ್, ಮಶ್ರೂಮ್ ಸೂಪ್ ಅಥವಾ ತರಕಾರಿ ಸೂಪ್, ಚಿಕನ್ ಸೂಪ್ ಮಾಡಿ ಕುಡಿಯಿರಿ. ತುಳಸಿ, ಅರಿಶಿಣ, ದಾಲ್ಚಿನ್ನಿ, ಏಲಕ್ಕಿ ಮತ್ತು ನಿಂಬೆ ಮುಂತಾದ ರೋಗನಿರೋಧಕ ವರ್ಧಕಗಳ ಚಹಾಗಳನ್ನು ಸಹ ಮಾಡಿ ಕುಡಿಯಬಹುದು.

6. ತಂಪಾದ ಜ್ಯೂಸ್​ ಸೇವಿಸುವುದನ್ನು ತಪ್ಪಿಸಿ
ತಂಪು ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಿ. ಮಳೆಗಾಲದಲ್ಲಿ ಹೆಚ್ಚು ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ಮನೆಯಲ್ಲೇ ಹೆಚ್ಚು ಸಮಯ ಕಳೆಯಿರಿ.

ಇದನ್ನೂ ಓದಿ:
Health Tips: ನಾಲಿಗೆಯ ಮೇಲಿನ ಈ ಲಕ್ಷಣಗಳು, ದೇಹದ ಆರೋಗ್ಯ ಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತವೆ

Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಬಿಸಿ ಅಥವಾ ತಣ್ಣಗಿನ ಹಾಲಿನಲ್ಲಿ ಯಾವುದು ಒಳ್ಳೆಯದು ಎಂದು ತಿಳಿಯಿರಿ