AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಿಯಾಗಿ ನಿದ್ರೆ ಮಾಡದೆ ಹೋದರೆ ಈ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ಎಚ್ಚರ ಇರಲಿ

ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜಗತ್ತಿನಲ್ಲಿ, ಕೆಲಸದ ಒತ್ತಡವು ತುಂಬಾ ಹೆಚ್ಚಾಗಿದ್ದು, ಜನರು ಬಯಸಿದರೂ ಸಹ ಅವರು ಉತ್ತಮ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದಲ್ಲದೇ, ತಡರಾತ್ರಿಯವರೆಗೂ ಮೊಬೈಲ್ ನೋಡುವ ಅಭ್ಯಾಸ ನಿದ್ದೆಯನ್ನು ಕೆಡಿಸುತ್ತದೆ. ಆದರೆ ಸರಿಯಾಗಿ ನಿದ್ರೆ ಆಗದಿದ್ದರೆ, ಒತ್ತಡದ ಜತೆಗೆ ಇನ್ನಿತರ ಸಮಸ್ಯೆ ಕಾಡುತ್ತದೆ.

ಸರಿಯಾಗಿ ನಿದ್ರೆ ಮಾಡದೆ ಹೋದರೆ ಈ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ಎಚ್ಚರ ಇರಲಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 17, 2021 | 8:28 AM

Share

ದೇಹ ಮತ್ತು ಮನಸ್ಸಿನ ಉತ್ತಮ ಆರೋಗ್ಯಕ್ಕಾಗಿ ಸರಿಯಾಗಿ ನಿದ್ರೆ ಮಾಡುವುದು ಬಹಳ ಮುಖ್ಯ. ಆರೋಗ್ಯಕರ ದೇಹಕ್ಕೆ ಕನಿಷ್ಠ 7 ರಿಂದ 9 ಗಂಟೆಗಳ ನಿದ್ದೆ ಅಗತ್ಯ. ವಾಸ್ತವವಾಗಿ ನಿದ್ದೆ ಮಾಡುವಾಗ, ನಮ್ಮ ದೇಹವು ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಆರೋಗ್ಯವನ್ನು ಸರಿಪಡಿಸಲು ಕೆಲಸ ಮಾಡುತ್ತದೆ. ಇದರಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ನಿದ್ರೆಯಿಂದ ಎದ್ದ ನಂತರ ನಾವು ಶಕ್ತಿಯುತವಾಗಿರುವುದಕ್ಕೆ ಇದೇ ಕಾರಣ.

ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜಗತ್ತಿನಲ್ಲಿ, ಕೆಲಸದ ಒತ್ತಡವು ತುಂಬಾ ಹೆಚ್ಚಾಗಿದ್ದು, ಜನರು ಬಯಸಿದರೂ ಸಹ ಅವರು ಉತ್ತಮ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದಲ್ಲದೇ, ತಡರಾತ್ರಿಯವರೆಗೂ ಮೊಬೈಲ್ ನೋಡುವ ಅಭ್ಯಾಸ ನಿದ್ದೆಯನ್ನು ಕೆಡಿಸುತ್ತದೆ. ಆದರೆ ಸರಿಯಾಗಿ ನಿದ್ರೆ ಆಗದಿದ್ದರೆ, ಒತ್ತಡದ ಜತೆಗೆ ಇನ್ನಿತರ ಸಮಸ್ಯೆ ಕಾಡುತ್ತದೆ. ಇದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯಿಂದ ಯಾವ ಸಮಸ್ಯೆಗಳು ಉಂಟಾಗಬಹುದು ಎಂಬುವುದರ ಬಗ್ಗೆ ಗಮನಹರಿಸಿ.

ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸಲು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ನಿದ್ರೆಯ ಕೊರತೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗಿದ್ದರೆ, ಸೋಂಕು, ಕೆಮ್ಮು, ಶೀತ, ಜ್ವರ ಮೊದಲಾದ ಎಲ್ಲಾ ಸಮಸ್ಯೆಗಳು ಉಂಟಾಗುತ್ತದೆ.

ಒತ್ತಡ ಮತ್ತು ಖಿನ್ನತೆ ನಿದ್ರೆಯ ಕೊರತೆಯು ಒತ್ತಡವನ್ನು ಉಂಟುಮಾಡುತ್ತದೆ. ಒತ್ತಡದಿಂದಾಗಿ, ಒಬ್ಬ ವ್ಯಕ್ತಿಯು ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ, ಅವನ ಆತ್ಮವಿಶ್ವಾಸ ಕುಸಿಯಲು ಆರಂಭವಾಗುತ್ತದೆ ಮತ್ತು ಕ್ರಮೇಣ ವ್ಯಕ್ತಿಯು ಖಿನ್ನತೆಗೆ ಒಳಗಾಗುತ್ತಾನೆ.

ಸ್ತನ ಕ್ಯಾನ್ಸರ್ ಅಪಾಯ ನಿದ್ರೆಯ ಕೊರತೆಯು ಮಹಿಳೆಯರ ಜೀವಕೋಶಗಳನ್ನು ಹಾನಿಗೊಳಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಈ ಕಾರಣದಿಂದಾಗಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ.

ಮಧುಮೇಹ, ಬಿಪಿ ಮತ್ತು ಹೃದಯ ಸಮಸ್ಯೆ ಕಡಿಮೆ ನಿದ್ರೆ ನಮ್ಮ ದೇಹದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ದೇಹದ ತೂಕ ಹೆಚ್ಚಾಗುತ್ತದೆ ಮತ್ತು ಮಧುಮೇಹ, ಬಿಪಿ ಹಾಗೂ ಹೃದಯದ ತೊಂದರೆಗಳಿಗೆ ಕಾರಣವಾಗುತ್ತದೆ.

ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ ನಿದ್ರೆಯ ಕೊರತೆಯು ಹಾರ್ಮೋನುಗಳ ಅಸಮತೋಲನಕ್ಕೂ ಕಾರಣವಾಗಬಹುದು. ಹಾರ್ಮೋನುಗಳ ಅಸಮತೋಲನದಿಂದಾಗಿ, ಕಿರಿಕಿರಿ, ಮುಟ್ಟಿನ ಸಮಸ್ಯೆ, ಮೂಡ್ ಸ್ವಿಂಗ್, ಬೊಜ್ಜು, ಆಯಾಸದಂತಹ ಅನೇಕ ಸಮಸ್ಯೆಗಳು ಮಹಿಳೆಯರಲ್ಲಿ ಕಂಡುಬರುತ್ತವೆ. ಇದರ ಹೊರತಾಗಿ, ವ್ಯಕ್ತಿಯ ನೆನಪಿನ ಶಕ್ತಿ ಕೂಡ ದುರ್ಬಲಗೊಳ್ಳಲು ಆರಂಭವಾಗುತ್ತದೆ.

ಇದನ್ನೂ ಓದಿ: Fruits: ವಿವಿಧ ಬಗೆಯ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ?

Sleeping: ಒಳ್ಳೆಯ ನಿದ್ರೆಗಾಗಿ ಔಷಧಿಗಳ ಮೊರೆ ಹೋಗುವುದನ್ನು ಬಿಡಿ; ಮಲಗುವ ಮುನ್ನ ಈ ಅಭ್ಯಾಸಗಳನ್ನು ಅನುಸರಿಸಿ