ದೇಹ ಫಿಟ್ ಆಗಿರಲು ರಾತ್ರಿ ರನ್ನಿಂಗ್ ಮಾಡುತ್ತಿದ್ದಾರೆ ಬೆಂಗಳೂರಿನ ಜನ, ತಜ್ಞರು ಹೀಗೆನ್ನುವುದು ಏಕೆ?
ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯಯುತವಾಗಿರಲು ಬಹಳಷ್ಟು ವ್ಯಾಯಾಮದತ್ತ ಮೊರೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿನ ಯುವಜನತೆ ಬೆಳಗ್ಗಿನ ಜಾವ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದಕ್ಕಿಂತ ರಾತ್ರಿಯ ವೇಳೆ ರನ್ನಿಂಗ್ ಅಥವಾ ಜಾಗಿಂಗ್ ಮಾಡುತ್ತಿದ್ದಾರೆ. ಕಡಿಮೆ ವಾಹನ ಸಂಚಾರ, ಬೀದಿಯಲ್ಲಿ ಕಡಿಮೆ ಜನ, ತಂಪಾದ ವಾತಾವರಣ ಹಾಗೂ ಹೆಚ್ಚು ಸಮಯ ಸಿಗುವುದರಿಂದ ರಾತ್ರಿ ವೇಳೆ ರನ್ನಿಂಗ್ ಮಾಡುವುದು ಹೆಚ್ಚು ಅನುಕೂಲಕರವಾಗಿದೆ ಎನ್ನುವುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಆದರೆ ಬೆಳಗ್ಗಿನ ಜಾಗಿಂಗ್ ಗಿಂತ ರಾತ್ರಿ ರನ್ನಿಂಗ್ ಆರೋಗ್ಯಕ್ಕೆ ಉತ್ತಮವೇ, ಈ ಬಗ್ಗೆ ತಜ್ಞರು ನೀಡುವ ಸಲಹೆಗಳೇನು? ಈ ಕುರಿತಾದ ಮಾಹಿತಿ ಇಲ್ಲಿದೆ.

ಯುವಕರು, ವಯಸ್ಸಾದವರೆನ್ನದೆ ಎಲ್ಲ ವಯೋಮಾನದವರೂ ಆರೋಗ್ಯ (Health) ದ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ರನ್ನಿಂಗ್ (Running) ಅಥವಾ ಜಾಗಿಂಗ್ (Joging) ಒಂದು ಉತ್ತಮ ವ್ಯಾಯಾಮವಾಗಿದ್ದು, ಇದರಿಂದ ದೇಹದ ಹೆಚ್ಚುವರಿ ತೂಕ (Weight) ವನ್ನು ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ ಫಿಟ್ ಆಗಿ ಆರೋಗ್ಯಯುತವಾಗಿ ಎಂಬುದು ತಿಳಿದೇ ಇದೆ. ಆದರೆ ಮಾಯಾನಗರಿ ಬೆಂಗಳೂರಿನ (Bengaluru) ಜನರು ಬೆಳಗ್ಗೆ ಜಾಗಿಂಗ್ ಮಾಡುವ ಬದಲು ರಾತ್ರಿ ರನ್ನಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಅನೇಕರು ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆದರೆ ರಾತ್ರಿ ರನ್ನಿಂಗ್ ಮಾಡುವ ಅಭ್ಯಾಸವು ಆರೋಗ್ಯಕ್ಕೆ ಎಷ್ಟು ಉತ್ತಮ? ಈ ಬಗ್ಗೆ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಬಿಬಿಎ ವಿದ್ಯಾರ್ಥಿ ರೋಹಿತ್, ಸಂಜೆ ಜಿಮ್ ಸೆಷನ್ ನಂತರ ಎಸ್‌ಜಿ ಪಾಳ್ಯದ ಸುತ್ತಲೂ 45 ನಿಮಿಷಗಳ ಕಾಲ ರನ್ನಿಂಗ್ ಮಾಡುತ್ತೇನೆ. ಬೆಳಗ್ಗಿನ ವೇಳೆ ಜಾಗಿಂಗ್ ಅಥವಾ ರನ್ನಿಂಗ್ ನಂತಹ ಚಟುವಟಿಕೆ ಬದಲಾಗಿ ರಾತ್ರಿಯ ವೇಳೆ ತೊಡಗಿಕೊಂಡಿದ್ದಾನೆ. ಏಕೆಂದರೆ ನಾನು ಕಾಲೇಜಿಗೆ ಹೋಗಲು ಇರುವುದರಿಂದ ಹಾಗೂ ಟ್ರಾಫಿಕ್ ಇರುವುದರಿಂದ ರಾತ್ರಿಯೇ ಉತ್ತಮ ವಾತಾವರಣವಿದೆ ಎನ್ನುತ್ತಾರೆ. ಎಂಜಿನಿಯರಿಂಗ್ ಪದವೀಧರ ಬಾಣಸವಾಡಿಯ ನಿವಾಸಿಯಾದ ಪ್ರಣವ್ ಎನ್ ಆರು ತಿಂಗಳ ಹಿಂದೆ ರಾತ್ರಿಯ ವೇಳೆ ಜಾಗಿಂಗ್ ಪ್ರಾರಭಿಸಿದರು. ರಾತ್ರಿ 10.30 ಕ್ಕೆ ರಾಜ್‌ಕುಮಾರ್ ಪಾರ್ಕ್ ಸುತ್ತಲೂ 15 ನಿಮಿಷಗಳ ಕಾಲ ಜಾಗಿಂಗ್ ಮಾಡುತ್ತೇನೆ. ರಾತ್ರಿಯಲ್ಲಿ ಬೀದಿಗಳು ಶಾಂತವಾಗಿದ್ದು , ಜನರ ಓಡಾಟವು ಕಡಿಮೆ ಇರುತ್ತದೆ ಎಂದಿದ್ದಾರೆ.
ರಾತ್ರಿ ಜಾಗಿಂಗ್ ಮಾಡುವ ಬಗ್ಗೆ ತಜ್ಞರು ಹೇಳುವುದೇನು?
ಅಥ್ಲೆಟಿಕ್ಸ್ ತರಬೇತುದಾರ ಮತ್ತು ಮಾಜಿ ಕ್ರೀಡಾಪಟು ಬಿಂದು ರಾಣಿ ಜಿ ರಾತ್ರಿ ಜಾಗಿಂಗ್ ಬಗ್ಗೆ ಮಾತನಾಡಿದ್ದು “ಇದು ದೇಹದ ಚಯಾಪಚಯ ಕ್ರಿಯೆಯನ್ನು ಅಡ್ಡಿಪಡಿಸುತ್ತದೆ” ಎಂದು ಎಚ್ಚರಿಸಿದ್ದಾರೆ.
ಜೆಜೆಎಸ್ ರನ್ನಿಂಗ್‌ನ ಕೇಂದ್ರದ ಮುಖ್ಯಸ್ಥ ಹಾಗೂ ಮಾರ್ಗದರ್ಶಕ ಅಜಯ್ ಜೈಶಂಕರ್, ‘ಓಟವು ತೀವ್ರವಾದ ಚಟುವಟಿಕೆಯಾಗಿದ್ದು, ಬೆಳಿಗ್ಗೆ ಅದರ ಪರಿಣಾಮವನ್ನು ನಿಭಾಯಿಸಲು ದೇಹವು ಹೆಚ್ಚು ವಿಶ್ರಾಂತಿ ಪಡೆಯುತ್ತದೆ’ ಎಂದು ಸಲಹೆ ನೀಡಿದ್ದಾರೆ.
ಆಂತರಿಕ ಔಷಧ ತಜ್ಞ ಡಾ. ಫರಾಜ್ ಖಾನ್, ‘ಮಲಗುವ ಸಮಯಕ್ಕೆ ಮೂರರಿಂದ ನಾಲ್ಕು ಗಂಟೆಗಳ ಮೊದಲು ಹೆಚ್ಚಿನ ತೀವ್ರತೆಯ ಚಟುವಟಿಕೆಯನ್ನು ತಪ್ಪಿಸಬೇಕು. ಇದು ಸಿರ್ಕಾಡಿಯನ್ ಕೆಲಸಕ್ಕೆ ಅಡ್ಡಿಪಡಿಸಬಹುದು. ಅದಲ್ಲದೇ, ಆಳವಾದ ನಿದ್ರೆಯ ಸಮಯದಲ್ಲಿ ನಿದ್ರೆ, ಬೆಳವಣಿಗೆ, ಒತ್ತಡ ಮತ್ತು ಉರಿಯೂತಕ್ಕೆ ಸಂಬಂಧಿಸಿದ ಹಾರ್ಮೋನುಗಳ ಸ್ರವಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹಗಲಿನಲ್ಲಿ ಓಡಲು ಸಾಧ್ಯವಾಗದವರು ಚುರುಕಾದ ನಡಿಗೆಯಿಂದ ಪ್ರಾರಂಭಿಸಿ, ವೇಗದ ನಡಿಗೆಗೆ ಮುಂದುವರೆಸಿ, ಹೀಗೆ ಮಾಡಿದರೆ ದೇಹವು ನಿಧಾನವಾಗಿ ಈ ವ್ಯಾಯಾಮಕ್ಕೆ ಒಗ್ಗಿಕೊಳ್ಳುತ್ತದೆ. ನಿದ್ರೆಗೆ ಮುನ್ನ ಧ್ಯಾನ ಮತ್ತು ನಿದ್ರೆಯ ನೈರ್ಮಲ್ಯವನ್ನು ಅಭ್ಯಾಸ ಮಾಡಿ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೊಣಕಾನಲಿನ ನೋವು ಉಳುಕು ಮಾತ್ರವಲ್ಲ, ಗಂಭೀರ ಸಮಸ್ಯೆಯೂ ಆಗಿರಬಹುದು!
ಕ್ರೀಡೆ ಮತ್ತು ವ್ಯಾಯಾಮ ತಜ್ಞ ಡಾ. ಶ್ರೀನಂದ್ ಶ್ರೀನಿವಾಸ್, ‘ವ್ಯಾಯಾಮ ಮಾಡದೇ ಇರುವುದಕ್ಕಿಂತ ಸಂಜೆ ವ್ಯಾಯಾಮ ಮಾಡುವುದು ಉತ್ತಮ. ನೀವು ಮಲಗುವ ಸಮಯದಲ್ಲಿ ನೀವು ಮಾಡುವ ವ್ಯಾಯಾಮವು ಹಗುರವಾಗಿರಬೇಕು. ನೀವು ತೀವ್ರವಾದ ವ್ಯಾಯಾಮವನ್ನು ಸಂಜೆ 7 ರಿಂದ 7.30 ರೊಳಗೆ ಮುಗಿಸಿಕೊಳ್ಳಿ. ಅದಲ್ಲದೇ, ಬೆಳಗಿನ ವ್ಯಾಯಾಮ ಅತ್ಯುತ್ತಮ. ಬೆಳಗಿನ ವೇಳೆ ದೇಹವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಮಾತ್ರವಲ್ಲದೆ ಮನಸ್ಥಿತಿಯನ್ನು ಸುಧಾರಿಸುತ್ತದೆ’ ಎಂದು ತಿಳಿಸಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ