ಕೊರೊನಾ ನಡುವೆ ಉರಿಬಿಸಿಲಿನ ಆರ್ಭಟಕ್ಕೆ ತತ್ತರಿಸಿದ ಉತ್ತರ ಭಾರತ

ದೆಹಲಿ: ಅತ್ತ ಕೊರೊನಾ ಕಾಟ ಮತ್ತೊಂದ್ಕಡೆ ಬಿಸಿಲ ಧಗೆ ಉತ್ತರ ಭಾರತವನ್ನ ಧಂಗಾಗಿಸಿದೆ. ಈಗಾಗ್ಲೇ 45 ಡಿಗ್ರಿ ಸೆಲ್ಸಿಯಸ್ ಮೀರಿರುವ ಉಷ್ಣಾಂಶ ಜನರ ಜೀವನವನ್ನು ಅಲ್ಲೋಕಲ್ಲೋಲ ಮಾಡಿದೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದಿರುವಾಗ್ಲೇ ಶುಭ ಸುದ್ದಿಯೊಂದನ್ನ ಹವಾಮಾನ ಇಲಾಖೆ ನೀಡಿದೆ. ಹಾಗಾದ್ರೆ ಏನದು ಶುಭ ಸುದ್ದಿ..?

47 ಡಿಗ್ರಿಗಿಂತಲೂ ಹೆಚ್ಚಾಗುತ್ತಿದೆ ಉಷ್ಣಾಂಶ:
ಉತ್ತರ ಭಾರತದಲ್ಲಿ ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಏಕೆಂದರೆ ಬಿಸಿಗಾಳಿ ಆರ್ಭಟಕ್ಕೆ ಉತ್ತರ ಭಾರತ ತತ್ತರಿಸಿದೆ. ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ, ಉತ್ತರದಲ್ಲಿ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 47 ಡಿಗ್ರಿಗಿಂತ ಹೆಚ್ಚಿನ ಉಷ್ಣಾಂಶ ಉತ್ತರ ಭಾರತದಲ್ಲಿ ದಾಖಲಾಗಿರೋದು ಭಾರಿ ಆತಂಕ ಹುಟ್ಟುಹಾಕಿದೆ. ಮತ್ತೊಂದ್ಕಡೆ ಇನ್ನೊಂದು ಶಾಕ್ ಕೊಟ್ಟಿರುವ ಭಾರತೀಯ ಹವಾಮಾನ ಇಲಾಖೆ, ಉಷ್ಣಾಂಶ 48 ಡಿಗ್ರಿವರೆಗೂ ಏರಿಕೆ ಕಾಣಬಹುದು ಎಂದಿದೆ.

ಇಂದು ಕೂಡ ಅಬ್ಬರಿಸಲಿದೆ ಬಿಸಿಲು, ಅರ್ಧ ಶತಕದತ್ತ ಉಷ್ಣಾಂಶ?
ಅಂದಹಾಗೆ ಕೇಂದ್ರ ಹವಾಮಾನ ಇಲಾಖೆ ಮಾಹಿತಿಯಂತೆ ದೆಹಲಿ, ಹರಿಯಾಣ, ಪಂಜಾಬ್‌, ಪೂರ್ವ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಇಂದು ಕೂಡ ಭಾರಿ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗಲಿದೆಯಂತೆ. ಈ ರಾಜ್ಯಗಳಿಗೂ ಹವಾಮಾನ ಇಲಾಖೆ ರೆಡ್ ಆಲರ್ಟ್ ನೀಡಿದೆ. ಹೀಗಾಗಿ ಉತ್ತರಭಾರತದ ಜನ ಇಂದು ಕೂಡ ಬಿಸಿಲಿನ ಧಗೆ ಮತ್ತು ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಬೇಕಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರದ ವಿದರ್ಭ, ತೆಲಂಗಾಣದಲ್ಲಿ ನಾಲ್ಕೈದು ದಿನಗಳಲ್ಲಿ ಬಿಸಿ ಗಾಳಿ ಮುಂದುವರಿಯಲಿದೆ ಅಂತಾ ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಇದು ಹೀಗೆ ಮುಂದುವರಿದರೆ ಉಷ್ಣಾಂಶ 50 ಡಿಗ್ರಿಗಿಂತ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ಗುರುವಾರ ಸಿಗುತ್ತಾ ಗುಡ್ ನ್ಯೂಸ್?
ಇನ್ನು ಸುಡು ಬಿಸಿಲು ಹಾಗೂ ಬಿಸಿಗಾಳಿ ಭೂಮಿಗೆ ಅಪ್ಪಳಿಸುವಾಗ ಕೆಲಸ ಮಾಡಲು ಹೋದರೆ ಆರೋಗ್ಯಕ್ಕೆ ಕುತ್ತು ಪಕ್ಕಾ. ಬಿಸಿಗಾಳಿ ಬೀಸುವ ವೇಳೆ ತಲೆ ನೋವು, ಸುಸ್ತು, ಸ್ನಾಯುಗಳ ನೋವು, ಹೊಟ್ಟೆ, ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಜನ ಪ್ರಜ್ಞೆಯನ್ನೂ ಕಳೆದುಕೊಳ್ಳಬಹುದು. ಹೀಗಾಗಿ ಮುನ್ನೆಚ್ಚರಿಕೆ ವಹಿಸಿ ಅಂತಾ ವೈದ್ಯರು ಉತ್ತರ ಭಾರತದ ನಿವಾಸಿಗಳಿಗೆ ಸಲಹೆ ನೀಡಿದ್ದಾರೆ. ಇನ್ನು ಗುರುವಾರದಿಂದ ಶುರುವಾಗಲಿರುವ ಮಳೆಯ ಅಬ್ಬರ ಉತ್ತರದಲ್ಲಿ ಬಿಸಿಲಿನ ಆರ್ಭಟಕ್ಕೆ ಬ್ರೇಕ್ ಹಾಕೋ ನಿರೀಕ್ಷೆ ಇದೆ. ಈ ಸುದ್ದಿ ಸಂಕಷ್ಟದ ನಡುವೆ ಒಂದಷ್ಟು ನೆಮ್ಮದಿ ತಂದಂತಾಗಿದೆ.

ಒಟ್ನಲ್ಲಿ ‘ಕೊರೊನಾ’ ವಿಕೃತಿ ಮೆರೆಯುವಾಗಲೇ ಉತ್ತರ ಭಾರತಕ್ಕೆ ಪ್ರಕೃತಿ ವಿಕೋಪವೂ ಅಪ್ಪಳಿಸಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರ ಹಾಗೂ ಉತ್ತರ ಭಾರತದ ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿವೆ. ಆದ್ರೆ ಪ್ರಕೃತಿಯ ಬಲದ ಮುಂದೆ ಇದ್ಯಾವುದೂ ತಕ್ಕ ಫಲ ನೀಡ್ತಿಲ್ಲ.

Related Posts :

Category:

error: Content is protected !!

This website uses cookies to ensure you get the best experience on our website. Learn more