ರಾಯಚೂರು: ಭಾರಿ ಮಳೆ, ನಾಶವಾಯ್ತು ಸಾವಿರಾರು ಎಕರೆ ಭತ್ತದ ಪೈರು

ರಾಯಚೂರು: ಈ ಬಾರಿಯ ಮಾನ್ಸೂನ್, ರಾಜ್ಯದಲ್ಲಿ ಕಳೆದ ವರ್ಷದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರೌದ್ರಾವತಾರ ತಾಳಿದ್ದು, ಮಳೆಯ ಹೊಡೆತಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿಹೋಗಿದೆ.

ರಾಯಚೂರು ಜಿಲ್ಲೆಯಾದ್ಯಂತ ರಾತ್ರಿ ಸುರಿದ ಭಾರಿ ಮಳೆಗೆ ನೂರಾರು ಎಕರೆ ಬೆಳೆ ನಾಶವಾಗಿದ್ದು, ರಾಯಚೂರ ತಾಲೂಕಿನ ಡೊಂಗರಾಪುರ ಗ್ರಾಮ ಮಳೆಯಿಂದ ಜಲಾವೃತಗೊಂಡಿದೆ.

ಜಿಲ್ಲೆಯಾದ್ಯಂತ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದ ಕೈಗೆ ಬಂದ ಭತ್ತ ವರುಣನ ಅರ್ಭಟಕ್ಕೆ ನಾಶವಾಗಿರುವುದರಿಂದ ರೈತ ಕಂಗಲಾಗಿದ್ದಾನೆ.


Related Tags:

Related Posts :

Category: