ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ಎಲ್ಲೆಲ್ಲಿ ಮಳೆ?

ದೆಹಲಿ: ಭಾರತೀಯ ಹವಾಮಾನ ಇಲಾಖೆಯು ದೇಶದ ಪಶ್ಚಿಮ ಕರಾವಳಿಯಲ್ಲಿ ಇಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಭಾಗದ ಜನರು ಮನೆಯಿಂದ ಹೊರಹೋಗುವಾಗ ಎಚ್ಚರಿಕೆ ವಹಿಸಬೇಕೆಂದು IMD ಮನವಿ ಮಾಡಿದೆ.

ದೇಶದ ನಾನಾ ಭಾಗಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಈಗಾಗಲೇ ಮಹಾರಾಷ್ಟ್ರ, ಗುಜರಾತ್, ಕೊಂಕಣ, ಗೋವಾ ಕರಾವಳಿ ಭಾಗಗಳಲ್ಲಿ ಜುಲೈ 16ರವರೆಗೂ ಹಾಗೂ ಗುಜರಾತ್ ಕರಾವಳಿ ತೀರಕ್ಕೆ ಶುಕ್ರವಾರದವರೆಗೂ ಅಂದರೆ ಜು. 17ರವರೆಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಈಗಾಗಲೇ ಮುಂಬೈ ನಗರದ ನಾನಾ ಕಡೆ ಭಾರಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೆ ರಸ್ತೆಗಳು ಜಲಾವೃತ್ತಗೊಂಡಿದ್ದು ವಾಹನ ಸವಾರರರು ಪರದಾಡುವ ಪರಿಸ್ಥಿತಿ ಎದುರಾಗಿದೆ.

Related Tags:

Related Posts :

Category:

error: Content is protected !!