ಗಾಂಧಿ ಪ್ರತಿಮೆ‌ ಧಾರ್ಮಿಕ ಕೇಂದ್ರವಲ್ಲ, ಅಲ್ಲಿ ಮದ್ಯ ಮಳಿಗೆ ಸ್ಥಾಪಿಸಬಹುದು: ಹೈಕೋರ್ಟ್

  • TV9 Web Team
  • Published On - 12:53 PM, 7 Sep 2020

ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮದ್ಯ ಮಳಿಗೆ ನಿರ್ಮಾಣ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ, ಮಹಾತ್ಮ ಗಾಂಧಿ ಪ್ರತಿಮೆ‌ ಧಾರ್ಮಿಕ ಕೇಂದ್ರವಲ್ಲ‌. ಹಾಗಾಗಿ ಪ್ರತಿಮೆಯನ್ನು ಪೂಜಾ ಕೇಂದ್ರವಾಗಿಸುವುದು ಗಾಂಧಿ ಸಿದ್ಧಾಂತವಾಗಿರಲಿಲ್ಲ ಎಂದು ಸಿಜೆ ಎ.ಎಸ್.ಒಕಾ, ನ್ಯಾ.ಎನ್.ಎಸ್.ಸಂಜಯ್ ಗೌಡ ಅವರಿದ್ದ ಪೀಠ ಅಭಿಪ್ರಾಯ ಪಟ್ಟಿದೆ.

ಗಾಂಧಿ ಪ್ರತಿಮೆ ಬಳಿ ಮದ್ಯ ಮಳಿಗೆ ಸ್ಥಾಪಿಸಿದ್ದ ಹಿನ್ನೆಲೆಯಿಂದ ವಕೀಲ ಎ.ವಿ.ಅಮರನಾಥನ್ ಟಾನಿಕ್ ಮದ್ಯ ಮಳಿಗೆ ವಿರುದ್ಧದ PIL ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸಿಜೆ ಎ.ಎಸ್.ಒಕಾ, ನ್ಯಾ.ಎನ್.ಎಸ್.ಸಂಜಯ್ ಗೌಡರವರಿದ್ದ ಪೀಠ ಮಹಾತ್ಮ ಗಾಂಧಿ ಪ್ರತಿಮೆ‌ ಧಾರ್ಮಿಕ ಕೇಂದ್ರವಲ್ಲ‌.

ಹಾಗಾಗಿ ಪ್ರತಿಮೆಯನ್ನು ಪೂಜಾ ಕೇಂದ್ರವಾಗಿಸುವುದು ಗಾಂಧಿ ಸಿದ್ಧಾಂತವಾಗಿರಲಿಲ್ಲ ಎಂದು ತಿಳಿಸಿದೆ. ಜೊತೆಗೆ ಸರ್ವೆ ನಂತರ ಲೈಸೆನ್ಸ್ ನಿಯಮಬದ್ಧವಾಗಿದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ ವಕೀಲ ಎ.ವಿ.ಅಮರನಾಥನ್ ಸಲ್ಲಿಸಿದ್ದ PILಅನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.