ಅತಿ ಹೆಚ್ಚು ಸೋಂಕಿತರಿದ್ದ ಗ್ರಾಮ ಈಗ ಕೊರೊನಾ ಮುಕ್ತ! ಅದಕ್ಕೆ ಗ್ರಾಮಸ್ಥರು ಮಾಡಿದ್ದೇನು?

ಬೆಳಗಾವಿ: ರಾಜ್ಯದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣವಿದ್ದ ಗ್ರಾಮ ಈಗ ಕೊರೊನಾ ಸೋಂಕಿನಿಂದ ಮುಕ್ತ, ಮುಕ್ತ.  ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ 49 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು.  ಆದ್ರೆ ಈಗ ಕೊರೊನಾ ಮುಕ್ತವಾಗಿದೆ. ಇದರಿಂದ ಸಂಭ್ರಮಗೊಂಡಿರುವ ಹಿರೇಬಾಗೇವಾಡಿ ಗ್ರಾಮಸ್ಥರು  ಚಿಕ್ಕ ಮಕ್ಕಳಂತೆ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಬಹುಶಃ ಹೀಗೆ ಸಂಭ್ರಮಪಟ್ಟವರಲ್ಲಿ ರಾಜ್ಯದಲ್ಲಿ ಇವರೇ ಮೊದಲಿಗರು.

ಏಪ್ರಿಲ್ 3ರಿಂದ ಸೀಲ್‌ಡೌನ್ ಆಗಿದ್ದ ಹಿರೇಬಾಗೇವಾಡಿ ಗ್ರಾಮ ಈಗ ಓಪನ್ ಆಗಿದೆ. ಸೂಪರ್‌ಸ್ಪ್ರೆಡರ್ ತಬ್ಲಿಘಿ P-128ನಿಂದ 48 ಜನರಿಗೆ ಸೋಂಕು ಹರಡಿತ್ತು.  ಏಪ್ರಿಲ್ 3ರಂದು ಮೊದಲ ಬಾರಿ ಹಿರೇಬಾಗೇವಾಡಿಯಲ್ಲಿ ಪಿ 28 20 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿತ್ತು. ಏಪ್ರಿಲ್ 3 ರಿಂದ ಜೂನ್ 6ರವರೆಗೂ ಸೀಲ್‌ಡೌನ್ ಆಗಿದ್ದ ಹಿರೇಬಾಗೇವಾಡಿ ಗ್ರಾಮ ಈಗ ಓಪನ್ ಆಗಿದೆ.

ಕೊನೆಯಲ್ಲಿ ಹಿರೇಬಾಗೇವಾಡಿ ಗ್ರಾಮದ 49ನೇ ಸೋಂಕಿತೆ ಪಿ 1562, 43 ವರ್ಷದ ಮಹಿಳೆಯೂ ಗುಣಮುಖಗೊಂಡಿದ್ದಾರೆ.  ಕಳೆದ 28 ದಿನಗಳಿಂದ ಹಿರೇಬಾಗೇವಾಡಿಯಲ್ಲಿ ಯಾವುದೇ ಕೊರೊನಾ ಪತ್ತೆಯಾಗಿಲ್ಲ ಎಂಬುದು ಅತ್ಯಂತ ಸಮಾಧಾನಕರ ಸಂಗತಿ.

ಹಿರೇಬಾಗೇವಾಡಿ ಗ್ರಾಮದಲ್ಲಿ ಜನಜೀವನ ಈಗ ಯಥಾಸ್ಥಿತಿಗೆ ಮರಳುತ್ತಿದೆ. ಮಾಲೀಕರು  ತಮ್ಮಅಂಗಡಿ ಮುಂಗಟ್ಟು ಓಪನ್ ಮಾಡಿ ಶುಚಿಗೊಳಿಸುತ್ತಿದ್ದಾರೆ. ಗ್ರಾಹಕರಿಗಾಗಿ ಎದುರು ನೋಡುತ್ತಿದ್ದಾರೆ. ಇನ್ನು ಪಂಚಾಯಿತಿ ಸಿಬ್ಬಂದಿ ಗ್ರಾಮದ ರಸ್ತೆ ಹಾಗೂ ಬ್ಯಾರಿಕೇಡ್ ಗಳಿಗೆ ಸ್ಯಾನಿಟೈಸ್ ಮಾಡುತ್ತಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more