ಅಕ್ರಮ ವಲಸಿಗರಿಗೆ ಡೆಡ್​ಲೈನ್ ನೀಡಿದ ಅಮಿತ್ ಶಾ

, ಅಕ್ರಮ ವಲಸಿಗರಿಗೆ ಡೆಡ್​ಲೈನ್ ನೀಡಿದ ಅಮಿತ್ ಶಾ

ದೇಶಾದ್ಯಂತ ಎನ್‌ಆರ್‌ಸಿ ಅನುಷ್ಠಾನಗೊಳಿಸುವುದರ ಮೂಲಕ 2024ರ ಸಂಸತ್‌ ಚುನಾವಣೆಗೂ ಮುನ್ನ ಎಲ್ಲಾ ಅಕ್ರಮ ವಲಸಿಗರನ್ನು ಹೊರ ಹಾಕುತ್ತೇವೆ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಜಾರ್ಖಂಡ್‌ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮಾತನಾಡುವಾಗ ಈ ರೀತಿ ಹೇಳಿದ್ದಾರೆ.

ಮೋದಿ ಆಫರ್ ಕೊಟ್ಟಿದ್ರು:
ಮಹಾರಾಷ್ಟ್ರ ಸರ್ಕಾರ ರಚನೆ ಬೆನ್ನಲ್ಲೇ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಸ್ಫೋಟಕ ಟ್ವಿಸ್ಟ್ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ನಮ್ಮೊಂದಿಗೆ ಕೆಲಸ ಮಾಡುವಂತೆ ಆಫರ್ ಕೊಟ್ರು. ಆದ್ರೆ ನಾನು ಅದನ್ನು ತಿರಸ್ಕರಿಸಿದೆ. ನಮ್ಮ-ನಿಮ್ಮ ವೈಯಕ್ತಿಕ ಸಂಬಂಧ ಚೆನ್ನಾಗಿದೆ. ಹಾಗೇ ಮುಂದುವರಿಯೋಣ. ಆದ್ರೆ, ಜತೆಯಾಗಿ ಕೆಲಸ ಅಸಾಧ್ಯವೆಂದೆ ಅಂದಿದ್ದಾರೆ.

ಮರು ಪರಿಶೀಲನಾ ಅರ್ಜಿ ಸಲ್ಲಿಸಿದ ಜಮಾತ್‌:
ಅಯೋಧ್ಯಾ ಭೂವಿವಾದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಮರು ಪರಿಶೀಲನೆ ಕೋರಿ ಜಮಾತ್ ಉಲೇಮಾ ಇ ಹಿಂದ್ ಸಂಘಟನೆ ಅರ್ಜಿ ಸಲ್ಲಿಸಿದೆ. ಅಲ್ಲದೆ ರಾಮ ಮಂದಿರ ನಿರ್ಮಿಸಲು 3 ತಿಂಗಳ ಒಳಗೆ ಟ್ರಸ್ಟ್ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿರುವ ತೀರ್ಪಿನ ಜಾರಿಗೂ ಮಧ್ಯಂತರ ತಡೆ ಕೋರಿದೆ.

ಸೇನೆಯಿಂದ ಪೂರ್ವಾಭ್ಯಾಸ:
ನೌಕಾಪಡೆ ದಿನಾಚರಣೆ ಹಿನ್ನೆಲೆಯಲ್ಲಿ ಕಾರ್ಯಾಚರಣಾ ಪ್ರದರ್ಶನಗಳ ಪೂರ್ವಾಭ್ಯಾಸವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆಸಲಾಯಿತು. ಡಿಸೆಂಬರ್ 4 ಅಂದ್ರೆ ನಾಳೆ ನೌಕಾಪಡೆ ದಿನಾಚರಣೆ ಹಿನ್ನೆಲೆ ಸೇನೆಯಿಂದ ಪೂರ್ವಾಭ್ಯಾಸ ನಡೆಯಿತು.

ನಗದು ರಹಿತ ವಹಿವಾಟಿಗೆ ಉತ್ತೇಜನ:
ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ಸಲುವಾಗಿ ಎಲ್‌ಐಸಿ ಕ್ರಿಡೆಟ್ ಕಾರ್ಡ್‌ ಮೂಲಕ ಹಣ ಪಾವತಿಸುವುದಕ್ಕೆ ವಿಧಿಸುತ್ತಿದ್ದ ಶುಲ್ಕವನ್ನ ರದ್ದುಪಡಿಸಿದೆ. ಕ್ರೆಡಿಟ್ ಕಾರ್ಡ್ ಮೂಲಕ ಮುಂಗಡ ಕಂತು, ಕಂತು ನವೀಕರಣ, ಸಾಲ ಮರುಪಾವತಿ, ಸಾಲದ ಬಡ್ಡಿಗೆ ವಿಧಿಸುತ್ತಿದ್ದ ಶುಲ್ಕವನ್ನ ಎಲ್‌ಐಸಿ ರದ್ದುಪಡಿಸಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!