Astrology: ಈ ರಾಶಿಯವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ

ರಾಶಿ ಭವಿಷ್ಯ, ಬುಧವಾರ(ಅಕ್ಟೋಬರ್: 02): ನಿಮ್ಮ ಉನ್ನತ ಅಭ್ಯಾಸಕ್ಕೆ ಯಾರಾದರೂ ಆರ್ಥಿಕ ಸಹಾಯವನ್ನು ಮಾಡಬಹುದು. ಸರ್ಕಾರದ ಉದ್ಯೋಗಕ್ಕೆ ನಿಮ್ಮ ಸಣ್ಣ ಪ್ರಯತ್ನ ಇರಲಿದೆ. ಭಾರದ ವಸ್ತುಗಳನ್ನು ನೀವು ಒಯ್ಯುವುದು ಬೇಡ. ನಿಮ್ಮದಾದ ಚೌಕಟ್ಟನ್ನು ಮಾಡಿಕೊಳ್ಳುವಿರಿ. ಹಾಗಾದರೆ ಅಕ್ಟೋಬರ್: 02ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ
ರಾಶಿಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 02, 2024 | 12:30 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಬ್ರಹ್ಮ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 20 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:22 ರಿಂದ ಸಂಜೆ 01:51, ಯಮಘಂಡ ಕಾಲ ಬೆಳಿಗ್ಗೆ 07:53ರಿಂದ 09:23ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ10:52 ರಿಂದ 12:22 ರವರೆಗೆ.

ಧನು ರಾಶಿ : ಮಕ್ಕಳು ಧೃತಿಗೆಡದಂತೆ ಅವರಿಗೆ ಧೈರ್ಯವನ್ನು ತುಂಬುವ ಅನಿವಾರ್ಯತೆ ಇದೆ. ಸ್ವಂತ ಬಲವಿಲ್ಲದೇ ನೀವು ಯಾರನ್ನೂ ಎದುರಿಸಲಾಗದು. ನಿಮಗೆ ಸಂಬಂಧಿಸದ ವಿಚಾರಗಳನ್ನು ನೀವು ಹೆಚ್ಚು ಮಾತನಾಡಲು ಬಯಸುವಿರಿ. ದೂರ ಪ್ರಯಾಣದಿಂದ ಹೆಚ್ಚು ಆಯಾಸಗೊಳ್ಳುವಿರಿ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚಿಸಿ. ಕೆಲವರಿಂದ ನಿಮ್ಮ ಕಾರ್ಯಕ್ಕೆ ತಾತ್ಸಾರದ ಮಾತು ಕೇಳಿಬರಬಹುದು. ನೀವು ಇಂದು ನಾಜೂಕಾದ ಮಾತುಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಹೆಚ್ಚು ಆಡಂಬರವನ್ನು ನೀವು ಇಷ್ಟಪಡುವಿರಿ. ಭೋಗವಸ್ತುಗಳ ಖರೀಯು ಅಧಿಕವಾಗಿ ಇರಲಿದೆ.‌ ಬಂಗಾರದ ಸೂಜಿಯಾದರೂ ಕಣ್ಣಿಗೆ ಚುಚ್ಚುವುದಿಲ್ಲ. ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು.

ಮಕರ ರಾಶಿ : ದೈವಾನುಗ್ರಹವಿದ್ದರೆ ಏನನ್ನೂ ಸಾಧಿಸಬಹುದು ಎಂಬ ಆತ್ಮವಿಶ್ವಾಸವು ಇರುವುದು. ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ಉದ್ಯೋಗದ ಕಾರಣದಿಂದ ಬೇರೆ ಊರಿನಲ್ಲಿ ಇದ್ದರೂ ಮನೆಯ ನೆನಪು ನಿಮ್ಮನ್ನು ಅತಿಯಾಗಿ ಕಾಡಬಹುದು. ಉದ್ಯೋಗವೇ ಸಾಕು ಎನಿಸಬಹುದು.‌ ಸಾಲದ ಅತಿಯಾದ ಚಿಂತೆ ಇರುವುದು. ಅತಿಯಾದ ಒತ್ತಡದಿಂದ ಹೊರಬರಲು ಯಂತ್ರಗಳನ್ನು ಮಾಡುವಿರಿ.‌ ಏಕಾಗ್ರತೆಯಿಂದ ಸ್ವಲ್ಪ ಓದಿದರೂ ನಿಮಗೆ ಹೆಚ್ಚು ಫಲವನ್ನು ಕೊಟ್ಟೀತು. ಅನಗತ್ಯ ತಿರುಗಾಟದಿಂದ ನಿಮಗೆ ಬೇಸರವಾಗಲಿದೆ. ಸಂಗಾತಿಯನ್ನು ನೀವು ದೂರ ಮಾಡಿಕೊಳ್ಳುವಿರಿ ಉಳಿತಾಯಕ್ಕೆ ಹೆಚ್ಚು ಪ್ರಾಮುಖ್ಯವನ್ನು ಕೊಡುವಿರಿ. ಜಾಡ್ಯವು ನಿಮ್ಮ ಪ್ರಗತಿಗೆ ಮಾರಕ. ಪ್ರತ್ಯೇಕವಾಗಿ ಇರಲು ನಿಮಗೆ ಬಾರದು. ಸಾಲ ಹೊರೆಯ ಸ್ವಲ್ಪ ಕಡಿಮೆ ಆಗುವುದು. ಉನ್ನತ ಅಭ್ಯಾಸವನ್ನು ಸಮಸ್ಯೆಯ ಕಾರಣದಿಂದ ಮುಂದೂಡುವಿರಿ.

ಕುಂಭ ರಾಶಿ : ನಿಮ್ಮ ಉನ್ನತ ಅಭ್ಯಾಸಕ್ಕೆ ಯಾರಾದರೂ ಆರ್ಥಿಕ ಸಹಾಯವನ್ನು ಮಾಡಬಹುದು. ಸರ್ಕಾರದ ಉದ್ಯೋಗಕ್ಕೆ ನಿಮ್ಮ ಸಣ್ಣ ಪ್ರಯತ್ನ ಇರಲಿದೆ. ಭಾರದ ವಸ್ತುಗಳನ್ನು ನೀವು ಒಯ್ಯುವುದು ಬೇಡ. ನಿಮ್ಮದಾದ ಚೌಕಟ್ಟನ್ನು ಮಾಡಿಕೊಳ್ಳುವಿರಿ. ಅಸಾಮಾನ್ಯ ವಿಚಾರವನ್ನು ನೀವು ಸರಳೀಕರಿಸುವ ನೈಪುಣ್ಯತೆಯನ್ನು ಹೊಂದಿರುವಿರಿ. ಕೆಲವು ವಿಚಾರಕ್ಕೆ ಆಲಸ್ಯವು ವರವಾಗಬಹುದು. ಯಾರ ಜೊತೆಯೂ ನೀವು ಕಲಹವನ್ನು ಮಾಡಿಕೊಳ್ಳ ಬೇಡಿ. ಇನ್ಮೊಬ್ಬರನ್ನು ನೋಡಿ ನೀವೂ ನಿರುತ್ಸಾಹಿಗಳಾಗುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣವನ್ನು ಮಾಡಿ ಬನ್ನಿ. ಅನನುಕೂಲತೆಯನ್ನು ಸ್ನೇಹಿತರಿಗೆ ಹೇಳಿ ಸಮಾಧಾನವನ್ನು ತಂದುಕೊಳ್ಳುವಿರಿ. ವ್ಯಾಪಾರವು ಕುಂಟುತ್ತ ಸಾಗುವುದು. ಹಿರಿಯರ‌ ಮಾತನನ್ನು ಅನಿಸರಿಸಲು ನೀವು ಹಿಂದೇಟು ಹಾಕಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾದಾರು. ನಿಮ್ಮ ಸಹಾಯವನ್ನು ಕೇಳಿಯಾರು.

ಮೀನ ರಾಶಿ : ನಿಮ್ಮಲ್ಲಿ ವಿನೀತ ಸ್ವಭಾವವಿದ್ದರೆ ಏನನ್ನೂ ಪಡೆಯಲು ಸಾಧ್ಯ. ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವವನ್ನು ತೋರಿಸಿದಂತೆ ಕಾಣಿಸುಬುದು.‌ ಲಾಭವನ್ನು ಗಮನದಲ್ಲಿಟ್ಟುಕೊಂಡು ನೀವು ಮತ್ತೆಲ್ಲವನ್ನೂ ಮರೆಯುವಿರಿ. ನಿಮ್ಮ ಬಗ್ಗೆ ಇತರರಿಗೆ ಅನುಕಂಪ ಬರಬಹುದು. ನಿಮ್ಮ ಮಾತನ್ನು ನಡಸಿಕೊಡಲು ನಿಮ್ಮಿಷ್ಟದವರು ಪ್ರಯತ್ನಿಸುವರು. ಅಹಂಕಾರವು ನಿಮ್ಮನ್ನು ಎಲ್ಲರಿಂದ ದೂರವಿರಿಸಬಹುದು. ತಾಯಿಯು ನಿಮ್ಮ ಪರವಾಗಿ ನಿಲ್ಲು ಅವರ. ವಾಹನವನ್ನು ಖರೀದಿಸುವ ಯೋಚನೆ ಮಾಡವಿರಿ. ಹಣಕ್ಕಾಗಿ ಸಾಲ‌ ಮಾಡಲು ಸಲಹೆಯನ್ನೂ ಕೊಡಬಹುದು.‌ ನಿರಂತರ ಕಾರ್ಯವನ್ನು ಮಾಡು ಅವಶ್ಯಕತೆ ಇಲ್ಲ. ಸುಮ್ಮನೇ ಕುಳಿತು ಏನ್ನಾದರೂ ನಕಾರಾತ್ಮಕ ಯೋಚನೆಯನ್ನು ಮಾಡುವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’