Horoscope: ಇಂದಿನ ರಾಶಿಭವಿಷ್ಯ, ಸಮಸ್ಯೆಗಳು ಬರುವ ಮೊದಲೇ ಈ ರಾಶಿಯವರು ಎಚ್ಚೆತ್ತುಕೊಳ್ಳುವುದು ಉತ್ತಮ

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 3) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಇಂದಿನ ರಾಶಿಭವಿಷ್ಯ, ಸಮಸ್ಯೆಗಳು ಬರುವ ಮೊದಲೇ ಈ ರಾಶಿಯವರು ಎಚ್ಚೆತ್ತುಕೊಳ್ಳುವುದು ಉತ್ತಮ
ಇಂದಿನ ರಾಶಿಭವಿಷ್ಯImage Credit source: Getty Images
Follow us
TV9 Web
| Updated By: Rakesh Nayak Manchi

Updated on: Jul 03, 2023 | 12:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 3 ರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:46 ರಿಂದ 09:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:59 ರಿಂದ ಮಧ್ಯಾಹ್ನ 12:37ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:50ರ ವರೆಗೆ.

ತುಲಾ: ಆರ್ಥಿಕವಾದ ನಷ್ಟವನ್ನು ಸರಿ‌ಮಾಡಿಕೊಳ್ಳಲು ನೀವು ಉದ್ಯೋಗವನ್ನು ಬದಲಿಸುವಿರಿ. ವಾದದಲ್ಲಿ ನೀವು ಸೋಲುವ ಸಾಧ್ಯತೆ ಇದ್ದು, ಗೆಲ್ಲಲು ನಿಮ್ಮ‌ ಪರಿಶ್ರಮವು ಅಧಿಕವಾಗಲಿದೆ. ನಿಮ್ಮ ಪ್ರಯಾಣವನ್ನು ಮುಂದೂಡುವಿರಿ. ಇನ್ನೊಬ್ಬರ ಸಮಸ್ಯೆಯನ್ನು ಮಧ್ಯಸ್ತಿಕೆಯಿಂದ ಪರಿಹರಿಸುವಿರಿ. ನಿಮ್ಮನ್ನು ಪೂರ್ವಪುಣ್ಯವು ಕಾಪಾಡುವುದು. ಸದ್ಯಕ್ಕೆ ಸಿಕ್ಕ ಉದ್ಯೋಗವನ್ನು ಅಚ್ಚುಕಟ್ಟಾಗಿ ಮಾಡಿರಿ. ಸರ್ಕಾರಿ ಉದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದೆ. ಸರ್ಕಾರಿ ಶಿಕ್ಷಕರು ಭಡ್ತಿಯನ್ನು ಪಡೆಯುವರು.

ವೃಶ್ಚಿಕ: ಉದ್ಯೋಗಕ್ಕೆ ಸಂಬಂಧಿಸಿದಂತೆ ಸ್ವತಂತ್ರನಿರ್ಧಾರವನ್ನು ತೆಗೆದುಕೊಳ್ಳದೇ ಉದ್ಯೋಗಿಗಳ ಅಭಿಪ್ರಾಯವನ್ನೂ ಕಲೆಹಾಕಿ ಅಂತಿಮ‌ನಿರ್ಧಾರಕ್ಕೆ ಬರುವುದು ಉತ್ತಮ. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗಂತೆ ಸರಿ ಮಾಡಿಕೊಳ್ಳಬೇಕಾಗಬಹುದು. ಆಕಸ್ಮಿಕ ವಾರ್ತೆಯು ನಿಮಗೆ ಆಚ್ಚರಿಯನ್ನು ತಂದೀತು. ವಿದೇಶಿ ಕಂಪನೆಯಲ್ಲಿ ನೀವು ಕೆಲಸಕ್ಕೆ ಸೇರುವಿರಿ. ಹೊಟ್ಟೆಯ ನೋವಿನಿಂದ ನೀವು ಬಳಲಬಹುದು. ಸಮಸ್ಯೆಗಳು ಬರುವ ಮೊದಲೇ ನೀವು ಎಚ್ಚೆತ್ತುಕೊಳ್ಳುವುದು ಉತ್ತಮ. ನಿಮ್ಮ ಪ್ರಯಾಣವು ತೊಂದರೆಯಿಂದ ಕೂಡಿರಲಿದೆ.

ಧನು: ಲೆಕ್ಕ ಪರಿಶೋಧಕರು ತಮ್ಮ ಕಾರ್ಯದಲ್ಲಿ ಮಗ್ನರಾಗುವರು. ಸಂಗಾತಿಯ ಮನೋಭಾವವನ್ನು ಪೂರ್ತಿಯಾಗಿ ತಿಳಿಯಲು ಸಾಧ್ಯವಾಗದು. ನಿಮ್ಮ ಕೆಳಗೆ ಕೆಲಸ ಮಾಡುವವರು ಸರಿಯಾಗಿ ನಿರ್ವಹಿಸದೇ ನೀವು ಅನಂತರ ಮಾಡಬೇಕಾದೀತು. ವ್ಯಂಗ್ಯದಿಂದ ಕೂಡಿದ ಮಾತಿನಲ್ಲಿ‌ ಸ್ಪಷ್ಟತೆ ಇರದು. ನಿಮ್ಮ ಯೋಜನೆಯನ್ನು ಸರಿಯಾಗಿ ಪ್ರಸ್ತುತ ಪಡಿಸಿ. ನೀವು ಇಷ್ಟಪಟ್ಟ ವಸ್ತುವನ್ನು ಇಂದು ಪಡೆಯುವಿರಿ. ನಿಮ್ಮ ಕೆಲಸವನ್ನು ತಪ್ಪಾಗುವುದು ಎಂಬ ಭಯದಿಂದ ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ನಿಮ್ಮ‌ ಪ್ರತಿನಿತ್ಯದ ಉದ್ಯೋಗದ ಸಮಯವು ಬದಲಾಗಿದ್ದು ನಿಮಗೆ ಅದಕ್ಕೆ ಹೊಂದಿಕೊಳ್ಳಲು ಕಷ್ಟವಾದೀತು. ಸೊಂಟಕ್ಕೆ ಸಂಬಂಧಿಸಿದ ನೋವು ಇರಲಿದೆ.

ಮಕರ: ನಿಮ್ಮ ವೈಯಕ್ತಿಕ ಕೆಲಸಗಳೇ ಬಹಳ ಇರಲಿದ್ದು ಇನ್ನೊಂದರ ಕುರಿತು ಇಂದು ಯೋಚನೆ ಅಸಾಧ್ಯವಾದೀತು. ಕುಟುಂಬದ ಜೊತೆ ಸಮಯವನ್ನು ಕಳೆಯಲು ಸಾಧ್ಯವಾಗದೇ ಇರಬಹುದು. ಇಂದು ನಿಮಗೆ ಸಿಕ್ಕ ಗೌರವವನ್ನು ಕಂಡು ಶತ್ರುಗಳು ಹುಟ್ಟಿಕೊಂಡಾರು. ಉದ್ಯೋಗವನ್ನು ಬದಸಲಿಸುವಿರಿ. ಅಧಿಕಾರವನ್ನು ಪಡೆಯಲು ಕೆಟ್ಟ ಮಾರ್ಗವನ್ನು ಹಿಡಿಯುವಿರಿ. ಅಪರಿಚಿತರ ಒಡನಾಟವನ್ನು ಕಡಿಮೆ ಮಾಡಿ. ಸರಳ ಜೀವನವನ್ನು ಇಷ್ಟಪಡುವಿರಿ. ಹೊಸ ವಸ್ತ್ರಗಳನ್ನು ಖರೀದಿಮಾಡುವಿರಿ. ರಾತ್ರಿ ನಿದ್ರೆ ಬಾರದೇ ಇದ್ದೀತು.

ಕುಂಭ: ಇಂದು ನೀವು ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುವಿರಿ. ಮಾತಿಗೆ ಎದುರುತ್ತರ ಕೊಡುವಿರಿ. ವಿವೇಚನೆಯನ್ನು ಕಳೆದುಕೊಂಡು ಇಂದಿನ ಮಾತುಕತೆಗಳು ತಾರಕಕ್ಕೆ ಹೋಗಬಹುದು. ನಿಮ್ಮ ಪರಾಕ್ರಮವು ಕೆಲಸದಲ್ಲಿ ಇರಲಿ. ಬಂಧುಗಳು ನಿಮ್ಮನ್ನು ದೂರವಿಡಬಹುದು. ನಿಮ್ಮ ವಸ್ತುವನ್ನು ಇನ್ನೊಬ್ಬರ ಬಳಕೆಗೆ ಕೊಡಲಿದ್ದೀರಿ. ಮಾನಭಂಗವನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಇಂದು ಆರಾಮಾಗಿ ಇರಬೇಕೆಂದುಕೊಂಡಿದ್ದರೆ ಇರಲಾಗದು. ಕಛೇರಿಯಲ್ಲಿ ಒತ್ತಡದ ವಾತಾವರಣ ಇದ್ದಕಾರಣ ನಿಮ್ಮ ಪೂರ್ವಯೋಜನೆ ಸಫಲವಾಗದು. ಕಫಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳಬಹುದು.

ಮೀನ: ಸಮಯಕ್ಕೆ ಬೆಲೆ ಕೊಟ್ಟು ಇಂದಿನ ಕೆಲಸವನ್ನು ಮಾಡಿ. ಧಾರ್ಮಿಕವಾಗಿ ನೀವು ಹೆಚ್ಚು ಆಸಕ್ತರಾಗಬೇಕಾಗುತ್ತದೆ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಹಾಯ ಸಿಗಲಿದೆ, ಕೇಳಿ ಪಡೆಯಿರಿ. ಅಧಿಕ ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ಭೂಮಿಗೆ ಸಂಬಂಧಿಸಿದ ನಿಮ್ಮ ವ್ಯಾಜ್ಯವು ನ್ಯಾಯಾಲಯದ ಮೆಟ್ಟಿಲೇರಬಹುದು. ನಿಮ್ಮ ಬಳಿ ಸಹಾಯ ಕೇಳಿ ಬಂದರೆ ಇಲ್ಲವೆನ್ನಬೇಡಿ. ಕೈಲಾದುದನ್ನು ಮಾಡಿ. ನಿಮ್ಮ ವಿದ್ಯೆಗೆ ಯೋಗ್ಯವಾದ ಹುದ್ದೆಗೆ ನೀವು ಹುಡುಕಾಡುವಿರಿ. ಆದಷ್ಟು ವಸ್ತುಸ್ಥಿತಿಯಂತೆ ಆಲೋಚಿಸಿ. ವಾಹನವನ್ನು ಚಲಾಯಿಸುವ ಎಚ್ಚರವಿರಲಿ. ಪ್ರೇಮಪ್ರಕರಣದಲ್ಲಿ ಯಾವ ವ್ಯತ್ಯಸವೂ ಆಗದೇ ನಿಮ್ಮ ನಿರೀಕ್ಷೆ ಹುಸಿಯಾಗಬಹುದು.

-ಲೋಹಿತಶರ್ಮಾ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ