ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 02 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ:ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:27 ರಿಂದ 07:04 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 02:13 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:50 ರಿಂದ 05:27 ರ ವರೆಗೆ.
ಮೇಷ: ಆರಾಮಾಗಿ ಇರಬೇಕೆಂದುಕೊಂಡರೂ ಅನೇಕ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗಬಹುದು. ಸಂಗಾತಿಯ ಜೊತೆ ಕಲಹವಾಗಬಹುದು. ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಗಮನಕೊಟ್ಟರೂ ಪ್ರಯೋಜನವಾಗದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಣವನ್ನು ಖರ್ಚುಮಾಡುವಿರಿ. ಉತ್ತಮ ಆಹಾರವು ಸಿಗಲಿದೆ. ಇಂದಿನ ಪ್ರಯಾಣವನ್ನು ನೀವು ಇಷ್ಟಪಡುವುದಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ವಿವೇಕದಿಂದ ವರ್ತಸಿ. ಸುಬ್ರಹ್ಮಣ್ಯನ ಆರಾಧನೆಯು ಶ್ರೇಯಸ್ಕರವಾಗಿದೆ.
ವೃಷಭ: ನಿಮ್ಮವರ ನೋವಿಗೆ ಸ್ಪಂದಿಸಲು ನಿಮಗೆ ಸಮಯ ಸಿಗದೇ ಹೋಗಬಹುದು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ವಿವಾಹಕ್ಕೆ ಬೇಕಾದ ತಯಾರಿಯನ್ನು ಮಾಡುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವು ಕಡಿಮೆ ಆಗಬಹುದು. ನಿಮ್ಮ ಕೆಲಸವನ್ನು ಬಹಳ ಛಲದಿಂದ ಮಾಡುವಿರಿ. ನೀವು ಭವಿಷ್ಯಕ್ಕೆಂದು ರೂಪಿಸಿಕೊಂಡ ಯೋಜನೆಯಲ್ಲಿ ಗೊಂದಲವಿರಲಿದೆ. ಆಪ್ತರ ಸಲಹೆಯನ್ನು ಪಡೆಯುವು ಒಳ್ಳೆಯದು. ಸಂಭನೀಯ ವಿಷಯವನ್ನು ನೀವು ಊಹಿಸುವಿರಿ. ಆಪ್ತರ ಭೇಟಿಯಿಂದ ಸಂತೋಷವಾಗಲಿದೆ.
ಮಿಥುನ: ಮನೆಯನ್ನು ಬಿಟ್ಟು ಬರಲು ನಿಮಗೆ ಬಹಳ ನೋವಾದೀತು. ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡುವಿರಿ. ಕೆಲಸದಿಂದ ನಿಮ್ಮ ವ್ಯಕ್ತಿತ್ವ ಗೊತ್ತಾಗಲಿದೆ.
ಸಣ್ಣ ನೋವನ್ನೂ ನೀವು ನಿರ್ಲಕ್ಷ್ಯ ಮಾಡುವುದು ಬೇಡ. ದೇವರಿಗೆ ಅರ್ಪಿಸುವ ವಿಚಾರವನ್ನು ನೀವು ಮುಂದೂಡಬೇಡಿ. ಸ್ತ್ರೀಗೆ ಆಕರ್ಷಿತವಾಗುವಿರಿ. ಆರ್ಥಿಕವಾಗಿ ನೀವು ಸುಧಾರಣೆ ಕಾಣುವಿರಿ. ವ್ಯಾಪಾರವು ಹೆಚ್ಚಿನ ಲಾಭವನ್ನು ಕೊಡಬಹುದು. ನಿಮ್ಮ ಚಿಂತನೆಯನ್ನು ಸರಿಯಾದ ಕ್ರಮದಲ್ಲಿ ಮುಂದುವಿರಿಸಿ.
ಕಟಕ: ಉನ್ನತ ಅಧಿಕಾರಕ್ಕಾಗಿ ಅಪೇಕ್ಷೆ ಪಟ್ಟಿದ್ದರೆ ಇಂದು ಸಿಗಬಹುದು. ನೂತನ ಸಂಸ್ಥೆಯೊಂದರ ಮುಖ್ಯಸ್ಥರೂ ಆಗಬಹುದು. ನೀವಾಡಿದ ಸುಳ್ಳಿನಿಂದ ನಿಮಗೇ ತೊಂದರೆಯಾಗಲಿದೆ. ನಿಮ್ಮ ವಿಚಾರವಾಗಿ ಕೆಲವು ಸಮಸ್ಯೆಗಳನ್ನು ಮನೆಯಲ್ಲಿ ಎದುರಿಸಬೇಕಾದೀತು. ನ್ಯಾಯಾಲಯದಲ್ಲಿ ಇರುವ ದೂರನ್ನು ಪುನಃ ಮೇಲೆ ತರುವ ಕೆಲಸ ಮಾಡುವಿರಿ. ಪಶ್ಚಾತ್ತಾಪದಿಂದ ಮಾಡಿದ ತಪ್ಪನ್ನು ಸರಿಮಾಡಿಕೊಳ್ಳುವಿರಿ. ಹದ ತಪ್ಪಿದ ಆರೋಗ್ಯದಿಂದ ಕಷ್ಟವಾದೀತು. ನೀವು ದೇವರಲ್ಲಿ ದೃಢವಾದ ಭಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ಯೋಚನೆಯನ್ನು ಕಾರ್ಯರೂಪಕ್ಕೆ ತರುವಿರಿ. ವಾಹನ ಖರೀದಿಯತ್ತ ನಿಮ್ಮ ಗಮನ ಇರಲಿದೆ.