AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

2023 ಏಪ್ರಿಲ್​ 5 ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Apr 05, 2023 | 5:30 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 5 ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ಬುಧ: ಮಂಗಳ, ತಿಥಿ : ಪೌರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ: ಧ್ರುವ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 12:35 ರಿಂದ 02:07ರ ವರೆಗೆ, ಯಮಘಂಡ ಕಾಲ 07:59 ರಿಂದ 09:31ರ ವರೆಗೆ, ಗುಳಿಕ ಕಾಲ 11:03ರಿಂದ 12:35ರ ವರೆಗೆ.

ಮೇಷ: ಇಂದು ನಿಮಗೆ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವನ್ನು ಗಳಿಸಲಿದ್ದೀರಿ. ಪ್ರಯಾಣದ ಆಯಾಸವು ನಿಮಗೆ ವಿಶ್ರಾಂತಿಯನ್ನು ಕೇಳಬಹುದು. ದಾಂಪತ್ಯದಲ್ಲಿ ಪ್ರೀತಿ, ವಿಶ್ವಾಸಗಳು ಇರಲಿದೆ. ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ನೀವು ಏಳ್ಗೆಯನ್ನು ಕಾಣುವಿರಿ. ನಿಮ್ಮ ಸ್ವಾಂತ್ರ್ಯಕ್ಕೆ ಅಡ್ಡಿಯಾಗುವ ಘಟನೆಗಳು ನಡೆಯಬಹುದು. ಮನಸ್ಸನ್ನು ಕದಲುವ ಕೆಲಸಗಳು ಉಂಟಾಗಲಿದೆ. ಮಾತುಗಳೂ ಕೇಳಬಹುದು. ವಿಶಾಲವಾದ ಸ್ಥಳದಲ್ಲಿ ಒಂಟಿಯಾಗಿ ಓಡಾಡಲು ಇಚ್ಛಿವಿಸುವಿರಿ. ದಿನನಿತ್ಯದ ‌ಕೆಲಸಗಳನ್ನು ಬದಲಿಸಿಕೊಳ್ಳಲಿದ್ದೀರಿ.

ವೃಷಭ: ಅನಗತ್ಯವಾದ ತಿರಗಾಟವು ಆಯಾಸವನ್ನು ತರಿಸಬಹುದು. ಕೆಲಸದ ಒತ್ತಡವಿದ್ದು ಕೆಲಸವನ್ನು ಮಾಡಲು ಏನೂ ತೋಚದೇ ಹೋಗಬಹುದು. ಹೊಸಬರ ಭೇಟಿಯಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳು ತಿಳಿಯುವುವು. ಉನ್ನತಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ. ಯಾರ ಮಾತಿಗೆ ಎಷ್ಟು ಬೆಲೆ ಕೊಡಬೇಕು ಎನ್ನುವುದನ್ನು ಅರಿತಿದ್ದೀರಿ. ದುಃಖಕ್ಕೆ ಅವಕಾಶಗಳನ್ನು ಕೊಡಬೇಡಿ. ಯಾರನ್ನೂ ದೂಷಿಸುವ ಕೆಲಸಕ್ಕೆ ಹೋಗಬೇಡಿ.

ಮಿಥುನ: ಒಳ್ಳೆಯದಾಗುವುದೆಂಬ ಕಾಲದ ನಿರೀಕ್ಷೆಯಲ್ಲಿ ಇದ್ದೀರಿ. ಸಂಗಾತಿಯೊಂದಿಗೆ ವಿನಾಕಾರಣ ಅಥವಾ ಸಣ್ಣ ಕಾರಣಗಳಿಗೆ ಮುನಿಸಿಕೊಳ್ಳುವಿರಿ.‌ ನೀವಿಂದು ಮಾಡುವ ಕೆಲಸದಲ್ಲಿ ಒತ್ತಡ ಇರಲಿದೆ. ತಾಯಿಯ ಸೇವೆಯನ್ನು ಮಾಡಲು ನಿಮಗೆ ಮನಸ್ಸಿರುವುದು. ವಿವಾಹಕ್ಕೆ ತಡೆಗಳು ಬರಬಹುದು. ಗೌರವವು ಸಿಗುವಲ್ಲಿ ಸಿಗದೇ ಇರುವುದು ನಿಮಗೆ ನೋವುಂಟು ಮಾಡಬಹುದು. ತಾಳ್ಮೆಯ ಪರೀಕ್ಷೆ ನಡೆಯುವ ದಿನವಾಗಲಿದೆ. ಜನರ ಜೊತೆ ಬೆರೆಯುವ ಮನಸ್ಸು ನಿಮ್ಮದಾಗಲಿದೆ.

ಕರ್ಕ: ನಿಮ್ಮ ಶಕ್ತಿ-ಸಾಮರ್ಥ್ಯಗಳು ಪ್ರದರ್ಶನವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಅಪಮಾನವಾದೀತು. ಆರ್ಥಿಕತೆಯು ನಿಧಾನವಾಗಿ ಏರುವುದು. ಬಂಧುಗಳ ನಡೆವೆ ವಾದ – ವಿವಾದಗಳು ಆಗಬಹುದು. ನಿಮ್ಮ ಕುರಿತು ಅವಲೋಕನ ಮಾಡಿಕೊಳ್ಳಿ. ನಿಮ್ಮ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬರಬಹುದು.‌ ಯಾರದೋ ಒತ್ತಾಯಕ್ಕೆ ಮಣಿದು ಕೆಲಸಗಳನ್ನು ಮಾಡಲು ಹೋಗಿ ಸಮಯವನ್ನು ಹಣವನ್ನೂ ವ್ಯಯಿಸಬೇಡಿ. ಸ್ವಂತಿಕೆ ಇರಲಿ. ನಿಮ್ಮನ್ನು ಅನುಸರಿಸುವ ಕೆಲವರು ಇರಲಿದ್ದಾರೆ. ಆರೋಗ್ಯದ ಬಗ್ಗೆ ಗಮನಹರಿಸುವುದು ಒಳ್ಳೆಯದು.