Horoscope ದಿನ ಭವಿಷ್ಯ | ಈ ರಾಶಿಯವರು ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವಿರಿ.. ಎಚ್ಚರಿಕೆ

Today Horoscope ಮಾರ್ಚ್ 08, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

  • TV9 Web Team
  • Published On - 6:50 AM, 8 Mar 2021
Horoscope ದಿನ ಭವಿಷ್ಯ | ಈ ರಾಶಿಯವರು ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವಿರಿ.. ಎಚ್ಚರಿಕೆ
ದಿನ ಭವಿಷ್ಯ

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣಪಕ್ಷ, ದಶಮಿ ತಿಥಿ, ಸೋಮವಾರ, ಮಾರ್ಚ್ 08, 2021. ಪೂರ್ವಾಷಾಢ ನಕ್ಷತ್ರ, ರಾಹುಕಾಲ : ಇಂದು ಬೆಳಿಗ್ಗೆ 7.58 ರಿಂದ ಬೆಳಿಗ್ಗೆ 9.27. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.29. ಸೂರ್ಯಾಸ್ತ: ಸಂಜೆ 6.24.

ತಾ.08-03-2021 ರ ಸೋಮವಾರದ ರಾಶಿಭವಿಷ್ಯ

ಮೇಷ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 3

ವೃಷಭ: ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವುದು. ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮೃತೆಗೆ ಯೋಗ್ಯ ಸಮ್ಮಾನ ದೊರೆಯುವುದು. ಶುಭ ಸಂಖ್ಯೆ: 7

ಮಿಥುನ: ವ್ಯವಹಾರಿಕ ಸಂಪರ್ಕಗಳು ಹೆಚ್ಚುವವು ಅದರಂತೆ ಧನದ ಮೂಲಗಳೂ ಹೆಚ್ಚುವವು. ಸಾಲ ಮರುಪಾವತಿಯಾಗುವುದು. ಮನೆಯಲ್ಲಿ ನೆಮ್ಮದಿ ಇರುವುದು. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು. ಶುಭ ಸಂಖ್ಯೆ: 1

ಕರ್ಕ: ಎಲ್ಲವನ್ನು ಹಗುರವಾಗಿ ಕಾಣುವದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವುದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 5

ಸಿಂಹ: ಉದಾಸೀನತೆಯಿಂದ ಕಾರ್ಯಹಾನಿ ಸಂಭವ. ಅನುಮಾನಗಳು ಮೂಡಿ ಕೈಗೊಂಡ ಕಾರ್ಯಕ್ಕೆ ವಿಘ್ನ ಉಂಟಾಗುವ ಸಂಭವವಿದೆ. ಸಾಮಾಜಿಕ ಗೌರವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಶುಭ ಸಂಖ್ಯೆ: 9

ಕನ್ಯಾ: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ: 6

ತುಲಾ: ಅಲ್ಪ ತೃಪ್ತಿ, ವ್ಯಾಪಾರದಲ್ಲಿ ನಿರಾಸಕ್ತಿ, ಅಪೇಕ್ಷಿತ ಕೆಲಸಗಳು ನೆರವೇರುವವು, ಧನಲಾಭ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹಿರಿಯರಿಗೆ ಕೀರ್ತಿದಾಯಕ. ಆಲಸ್ಯದಿಂದ ತೊಂದರೆ ಇರುವದು ಗುರುಸ್ತೋತ್ರ ಪಾರಾಯಣ ಮಾಡಿರಿ. ಶುಭ ಸಂಖ್ಯೆ: 8

ವೃಶ್ಚಿಕ: ಆದಾಯ ಹೆಚ್ಚುವುದು. ವ್ಯವಹಾರಿಕ ಏಳ್ಗೆ ಇರುವುದು. ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಶಾಂತಚಿತ್ತರಾಗಿ ವ್ಯವಹರಿಸಿರಿ. ಕೆಲಸದಲ್ಲಿ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಶುಭ ಸಂಖ್ಯೆ: 2

ಧನು: ವಾದ-ವಿವಾದ, ಹಠಸಾಧನೆ, ತಪ್ಪುಗಳ ಸಮರ್ಥನೆ, ಮತ್ತೊಬ್ಬರ ಮೇಲೆ ದೋಷಾರೋಪಣೆ ಬೇಡ. ಆಯಾಸದಿಂದ ಕೂಡಿದ ಕೆಲಸ ಇರುವುದು. ಅಧಿಕಾರ ಪ್ರಾಪ್ತಿಗಾಗಿ ಅಲೆದಾಟ ಸಂಭವ. ನಿರೀಕ್ಷಿತ ಆದಾಯಕ್ಕೆ ತೊಂದರೆ ಇಲ್ಲ. ಶುಭ ಸಂಖ್ಯೆ: 4

ಮಕರ: ಸ್ವೀಕೃತ ಕಾರ್ಯವು ಫಲಪ್ರದವಾಗಿ ಗೌರವ ಆದರಗಳು ಪ್ರಾಪ್ತವಾಗುವವು. ಈ ಸಮಯದಲ್ಲಿ ಉತ್ತಮ ಧನಾರ್ಜನೆ ಯಾಗುವುದು ವಿದೇಶ ಪ್ರಯಾಣ, ಪ್ರೇಮ ಸಂಭಾಷಣೆ, ದೇವ ಬ್ರಾಹ್ಮಣ, ಧರ್ಮಕಾರ್ಯಗಳು ನಡೆಯುವವು. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ ಪರಿಹಾರವಾಗುವವು. ಶುಭ ಸಂಖ್ಯೆ: 3

ಕುಂಭ: ದಿಟ್ಟತನ, ಮನೋಸ್ಥೈರ್ಯ, ನೇರ, ನಿಷ್ಟುರ ನಡೆಗಳಿಗೆ ಉತ್ತಮ ಫಲಪಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವದು. ಶುಭ ಸಂಖ್ಯೆ: 5

ಮೀನ: ಹೊಸ ಯೋಜನೆಗಳು ಬೇಡ. ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವುದು. ಕೊಟ್ಟ ಸಾಲ ಮರುಪಾವತಿ ಆಗಲಾರದು, ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಧ್ಯತೆ ಇದೆ. ಶುಭ ಸಂಖ್ಯೆ: 1

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937