ದಿನಭವಿಷ್ಯ
Horoscope Today: ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2022 ಡಿಸೆಂಬರ್ 23ರ ಶುಕ್ರವಾರವಾದ ಇಂದು ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ತಾ 24-12-2022 ರ ಶುಕ್ರವಾರದ ರಾಶಿ ಭವಿಷ್ಯ
ನಿತ್ಯ ಪಂಚಾಂಗ: ಶುಭಕೃತನಾಮ ಸಂವತ್ಸರ, ದಕ್ಷಿಣಾಯನ, ಧನುರ್ಮಾಸ ಮಾಸ, ಹೇಮಂತ ಋತು, ಪುಷ್ಯ ಮಾಸ, ಪಾಡ್ಯ, ಪೂರ್ವಾಷಾಢ ನಕ್ಷತ್ರ, ಶನಿವಾರ, ಡಿಸೆಂಬರ್ 24, 2022. ರಾಹುಕಾಲ: ಇಂದು ಬೆಳಿಗ್ಗೆ 09.44ರಿಂದ ಇಂದು ಮಧ್ಯಾಹ್ನ 11.08ರ ತನಕ. ಸೂರ್ಯೋದಯ: ಬೆಳಿಗ್ಗೆ 06.55. ಸೂರ್ಯಾಸ್ತ: ಸಂಜೆ 06.09
- ಮೇಷ: ಜನರಿಂದ ಕೆಲಸದ ವಿಚಾರದಲ್ಲಿ ಮನ್ನಣೆ ದೊರೆಯಲಿದೆ. ನಿಮ್ಮನ್ನು ಬಂದು ಸೇರಲಿರುವ ಸಂಪತ್ತನ್ನು ಉತ್ತಮಕಾರ್ಯಕ್ಕೆಂದು ವಿನಿಯೋಗಿಸಿ. ಸತ್ಫಲವನ್ನು ಪಡಯಬಹುದಾಗಿದೆ. ವ್ಯಕ್ತಿತ್ವದಿಂದ ಸಕ್ಕರೆ ಇರುವೆಗಳು ಬಂದು ಮುತ್ತುವಂತೆ ನಿಮ್ಮನ್ನು ಬಂದು ಸೇರುವರು. ಅಕಾಲದಲ್ಲಿ ಆಸ್ಥಾನದಲ್ಲಿ ಉಂಟಾದ ಪ್ರೀತಿಯು ಕಂಟಕವನ್ನು ತಂದೀತು. ಒಬ್ಬರೇ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲು ಹೋಗಬೇಡಿ. ಸಮಾಧಾನದಿಂದ ಬಂದುದನ್ನು ಎದುರಿಸಿ. ಸಹನೆಯನ್ನು ಬಿಟ್ಟು ಮನಸ್ಸು ಚಂಚಲವಾಗದಿರಲಿ. ಸುಬ್ರಹ್ಮಣ್ಯನು ಪೂಜಕರನ್ನು ಕೈ ಬಿಡಲಾರ.
- ವೃಷಭ: ಸಾಲ ನೀಡುವಾಗ ಪೂರ್ವಾಪರ ಆಲೋಚನೆ ಇರಲಿ. ಸಾಲವು ಮರಳಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಷ್ಟಗಳು ಕಣ್ಮುಂದೆ ಕಂಡರೂ ಬೆಳಗಿನ ಸೂರ್ಯನಕಿರಣಕ್ಕೆ ಮಂಜು ಕರಗುವಂತೆ ಕರಗಿಹೋಗುತ್ತದೆ. ಕುಟುಂಬದವರೊಂದಿಗೆ ದಿನದ ಹೆಚ್ಚು ಕಾಲವನ್ನು ಕಳೆಯಲು ಪ್ರಯತ್ನಿಸಿ. ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ನಿಮ್ಮ ಒಡನಾಟ ದುಃಖದಲ್ಲಿರುವವರಿಗೆ ಸಂತೋಷವನ್ನು ನೀಡುತ್ತದೆ. ಕಾರ್ಯಸ್ಥಾನದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ.
- ಮಿಥುನ: ರೂಪ ಹಾಗೂ ವ್ಯಕ್ತಿತ್ವ ಸ್ನೇಹಿತರನ್ನು ಗಳಿಸಲು ಸಹಕಾರಿ. ಪರಿಸ್ಥಿತಿಗಳು ಹೇಗೂ ಬರಲಿ. ಮನಸ್ಸು ಮತ್ತು ಬುದ್ಧಿ ದೃಢವಾಗಿರಲಿ. ಸಂತೋಷದ ಬೆಲೆಯನ್ನು ಇಂದು ಅರಿತುಕೊಳ್ಳುವಿರಿ. ಸಭೆ, ಸಮಾರಂಭಗಳಿಗೆ ಭೇಟಿ ನೀಡಿ, ಮನಸ್ಸು ನೆಮ್ಮದಿಯ ದಡಕ್ಕೆ ಸೇರಲಿದೆ. ಹಿಂದೆ ಕೂಡಿಟ್ಟ ಹಣವು ಕೈ ಸೇರುವ ಸುದಿನ. ಕಾರ್ಯದ ಒತ್ತಡದಿಂದ ಕಛೇರಿಯಲ್ಲಿ ಹೆಚ್ಚು ಕಾಲ ಕಳೆಯಬೇಕಾಗಿಬರಬಹುದು. ಇದೇ ಕಾರಣಕ್ಕೆ ಮನೆಯಲ್ಲಿ ಉದ್ವಿಗ್ನತೆಯುಂಟಾಗುವುದು. ಮೃಷ್ಟಾನ್ನ ಭೋಜನವನ್ನು ಇಂದು ಉಂಡು ಸುಖಿಸುವಿರಿ. ಮಹಾವಿಷ್ಣುವು ಭಜಕರನ್ನು ಪೋಷಿಸುತ್ತಾನೆ.
- ಕರ್ಕ: ದಂಪತಿಗಳ ನಡುವೆ ಕಲಹವೆದ್ದು ಕೊನೆಗೆ ಪೂರ್ವಕೃತ್ಯವನ್ನು ಸ್ಮರಿಸಕೊಂಡಲ್ಲಿ ವಿನೋದದಲ್ಲಿ ಮುಕ್ತಾಯಗೊಳ್ಳುವುದು. ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಇಮ್ಮಡಿಸುವುದು. ಹೂಡಿಕೆಗಳನ್ನು ಮಾಡಿ, ಲಾಭವು ನಿಮ್ಮನ್ನು ಬಂದು ಸೇರುವುದು. ಸ್ನೇಹಿತನಿಗೆ ಧನಸಹಾಯ ಅಥವಾ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಡುವಿರಿ. ಬೆಳಗಿನಿಂದ ಸಂಜೆಯ ತನಕ ಉಲ್ಲಾಸ, ಉತ್ಸಾಹ, ಲವಲವಿಕೆ ನಿಮ್ಮದೇ ಆಗಿರುತ್ತದೆ. ವಿನಾಕಾರಣ ಹಣದ ವ್ಯಯದ ಸಾಧ್ಯತೆ ಇದೆ. ಮುಂಜಾಗ್ರತೆಯನ್ನು ಇರಿಸಿಕೊಳ್ಳಿ.
- ಸಿಂಹ: ಸಿಂಹದಂತೆ ಹಿಂದೆ ಆಗಿಹೋದ ಮಹತ್ಕಾರ್ಯಗಳ ಅವಲೋಕನ ಮಾಡಿಕೊಳ್ಳಿ. ನಿಮಗೆ ಇನ್ನಷ್ಟು ಬಲ, ಸ್ಫೂರ್ತಿ ಸಿಗುವುದು. ಸಂಬಂಧಿಕರ ಹಾಗೂ ಸ್ನೇಹಿತರಿಂದ ಕೂಡಿಕೊಂಡು ಮನಬಿಚ್ಚಿ ಹರಟೆ ಹೊಡೆದು ಹೋಗುತ್ತೀರಿ. ಯಾರನ್ನಾದರೂ ಪ್ರೀತಿಸಿದ್ದರೆ ತನ್ನ ದೊಡ್ಡ ಹೆಜ್ಜೆಯನ್ನು ಇಟ್ಟು ತನ್ನ ಸರಿಯಾದ ರೂಪವನ್ನು ತೋರಿಸುವುದು. ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ‘ವಿಶ್ವಾಸಃ ಫಲದಾಯಕಃ’ ಎನ್ನುವ ಮಾತನ್ನು ನಂಬಿ ನಡೆಯಿರಿ. ಶಿವನನ್ನು ನಂಬಿ. ಶ್ರಮಕ್ಕೆ ತಕ್ಕ ಫಲವನ್ನು ಕೊಡುತ್ತಾನೆ.
- ಕನ್ಯಾ: ದೇಹಾಯಾಸದ ಕರ್ಮಗಳನ್ನು ಕೈಗೆತ್ತಿಕೊಳ್ಳುವುದು ಉಚಿತವಲ್ಲ. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಕೊಟ್ಟರೆ ಆರ್ಥಿಕ ಸ್ಥಿತಿಯ ಹದ ಕೆಡುವುದು. ಉಭಯಸಂಕಟದಲ್ಲಿ ನೋಯಬೇಕಾಗಬಹುದು. ವೈವಾಹಿಕ ಜೀವನವು ಉಸಿರುಗಟ್ಟಿಸಿದಂತೆನಿಸಬಹುದು. ಚೆನ್ನಾಗಿ ಮಾತನಾಡುವುದೊಂದೇ ನಿಮಗೀಗ ಬೇಕಾಗಿದ್ದು. ಹಣದ ವಿಚಾರದಲ್ಲಿ ಹಾಸಿಗೆಯಿದ್ದಷ್ಟೆ ಕಾಲುಚಾಚುವುದು ಕ್ಷೇಮ. ಮಹಾವಿಷ್ಣು ಶರಣಾದವರನ್ನು ಪೊರೆಯುತ್ತಾನೆ.
- ತುಲಾ: ದೈವವೇ ನಿಮ್ಮ ಭವಿಷ್ಯವನ್ನು ಕಂಡು ಪೂರ್ವಭಾವಿಯಾಗಿ ಹಣವನ್ನು ಕೂಡಿಡಿಸುವಂತೆ ಪ್ರೇರಿಸಿತ್ತು. ಆ ಹಣವನ್ನು ಅನಾರೋಗ್ಯದಿಂದ ಗುಣವಾಗಲು ಬಳಸಬಹುದಾಗಿದೆ. ಯೋಜನಾಬದ್ಧಕಾರ್ಯಗಳನ್ನು ಮಾಡಿ. ಪ್ರಯೋಜನವು ಸರಿಯಾದ ಕಾಲಕ್ಕೆ ಸಿಗುತ್ತದೆ. ತೀರ್ಥಯಾತ್ರಾ ಪ್ರಸಂಗಗಳು ಎದುರಾಗಬಹುದು. ಪ್ರೇಮಿಸಿದವರು ತಮ್ಮ ಕುಟುಂಬಕ್ಕೆ ಅದನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆಯುವರು. ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ಹಳೆಯ ಘಟನೆಯನ್ನು ನೆನೆದು ಕೊರಗಬೇಡಿ. ಹರುಷಕ್ಕೆ ಹತ್ತಾರು ದಾರಿಗಳಿವೆ.
- ವೃಶ್ಚಿಕ: ಪ್ರವಾಹದ ವಿರುದ್ಧ ಈಜುವುದು ಅಸಾಧ್ಯ. ಪ್ರವಾಹದ ದಿಕ್ಕಿನಲ್ಲೇ ಹೋದರೆ ದಡಸೇರಲು ಏನಾದರೂ ಆಧಾರ ಸಿಕ್ಕೀತು. ಹಣವನ್ನು ಉಳಿಸಿಯೇ ಉಳಿಸುತ್ತೇನೆ ಎಂಬ ಹಠ ಬೇಡ. ಸಿಕ್ಕುವ ಅಲ್ಪವೂ ನಷ್ಟವಾದೀತು. ಜೀವನದ ತೊಂದರೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ಅವರಾಡುವ ಮಾತುಗಳಿಂದ ಉದ್ವೇಗಕ್ಕೆ ಒಳಗಾಗಲು ಹೋಗಬೇಡಿ. ಆಲೋಚನೆಗಳನ್ನು ಚೆನ್ನಾಗಿ ಪ್ರಸ್ತುತಪಡಿಸಿ ಹಾಗೂ ಕೆಲಸದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದರೆ ನೀವು ಯಾರೆಂದು ತಿಳಿಯುತ್ತದೆ. ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಏನು ಮಾಡುತ್ತಿದ್ದೇನೆ ಎಂದು ಸರಿಯಾಗಿ ಗ್ರಹಿಸಿ ಮುನ್ನಡೆಯಿರಿ.
- ಧನುಸ್ಸು: ನಿಮ್ಮ ಹಿಂದೆ ಕಹಿಯಾದ ಮಾತುಗಳು ಕೇಳಿಬರಬಹುದು. ಅಂತಹ ಮಾತುಗಳಿಗೆ ನಿರ್ಲಕ್ಷ್ಯವೇ ಉತ್ತರ. ಸಾರ್ವಜನಿಕವಾಗಿ ತೆಗೆದುಕೊಳ್ಳುವ ನಿಮ್ಮ ನಿರ್ಧಾರವು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಆಹಾರವನ್ನು ಮನಸೋಯಿಚ್ಛೆ ಸೇವಿಸಿ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ. ಉತ್ತಮ ಆಹಾರವು ನಿಮ್ಮ ಮನಸ್ಸನ್ನೂ ಸರಿಯಾಗಿರಿಸಬಲ್ಲದು. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಸಮಯ ಸುಮ್ಮನೇ ವ್ಯರ್ಥವಾಗುತ್ತಿದೆ. ಎಲ್ಲಿ ವ್ಯರ್ಥವಾಗುತ್ತಿದೆ ಎನ್ನುವುದನ್ನು ಗಮನಿಸಿಕೊಳ್ಳಿ. ನಿಮ್ಮನ್ನು ಇಷ್ಟಪಡುವವರೊಂದಿಗೆ ಸ್ವಲ್ಪ ಕಾಲ ಕಳೆಯಿರಿ. ಮನಸ್ಸು ಹಗುರಾದೀತು.
- ಮಕರ: ಜ್ಞಾನವಂತರಾದ ತಾವು ಸದಾ ಪ್ರಯತ್ನಶೀಲರು. ನಿರಂತರ ಪ್ರಯತ್ನಕ್ಕೆ ಫಲವಿಲ್ಲದಿಲ್ಲ. ಸಮಯವನ್ನು ನೀರೀಕ್ಷಿಸುತ್ತ ಕಾಲ ಕಳೆಯಬೇಕು. ಆಪದ್ಧನ ಇಂದು ತನ್ನ ಅಸ್ತಿತ್ವವನ್ನು ತೋರಿಸಲಿದೆ. ಇದರೊಂದಿಗೆ ವ್ಯಯದ ದುಃಖವು ನಿಮಗೆ ಆಗುತ್ತದೆ. ಬಂಧುಗಳ ಬೆಂಬಲ ನಿಮ್ಮ ಕಷ್ಟದ ಭಾರವನ್ನು ಕಡಿಮೆ ಮಾಡುತ್ತದೆ. ಪ್ರಣಯವನ್ನು ಪ್ರಕಟಿಸಲು ಹೋಗಬೇಡಿ. ನೀವು ಕಷ್ಟಕರವೆಂದು ತೋರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗಿರುವ ಸಂಪರ್ಕಗಳನ್ನು ಬಳಸಬೇಕಾಗುತ್ತದೆ. ಕ್ರೀಡಾಪಟುಗಳಿಗೆ ಶುಭವಾರ್ತೆ ಬರುವ ಸಾಧ್ಯತೆ ಇದೆ.
- ಕುಂಭ: ಪೂರ್ವಾರ್ಜಿತ ಸಂಪತ್ತುಗಳು ಸಿಗುವ ಸಾಧ್ಯತೆ ಇದೆ. ಒಳಗೇನಿದೆ ಎಂದು ತಿಳಿಯಲಾಗದ ನಿಮ್ಮ ಸ್ವಭಾವ ಇಂದು ಜಗಜ್ಜಾಹಿರಾಗಲಿದೆ. ನಿಮ್ಮ ನಂಬಿಕೆ ಇಂದು ಫಲವನ್ನು ಕೊಡುತ್ತದೆ. ವ್ಯಸನಕ್ಕೆ ಬಲಿಯಾಗುವ ಮೊದಲು ಯೋಚಿಸಿ. ಅನಂತರ ಅದರಿಂದ ಹೊರಬರುವುದು ಅಸಾಧ್ಯ. ಅನಾರೋಗ್ಯ ಎದುರಾದಾಗ ವೈದ್ಯರನ್ನು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆಯಿರಿ. ಅಸಡ್ಡೆ ಒಳ್ಳೆಯದಲ್ಲ. ರಾಮದೂತ ಹನುಮಂತನನ್ನು ಧ್ಯಾನಿಸಿ, ಪೂಜಿಸಿ. ಬಲವನ್ನು ಕೊಟ್ಟು ನಿಮ್ಮ ಕಾರ್ಯ ಸಾಧ್ಯವಾಗುವಂತೆ ಮಾಡುವನು.
- ಮೀನ: ಖುಷಿಯಾಗಿರುವಂತೆ ನಿಮ್ಮ ಸುತ್ತಲನ್ನು ರೂಪಿಸಿಕೊಳ್ಳಿ. ಆರ್ಥಿಕಸ್ಥಿತಿ ಸುಧಾರಿಸಲಿದೆ. ಮಾತನಾಡುವಾಗ ಸಮಯ, ಸಂದರ್ಭ, ವ್ಯಕ್ತಿಗಳನ್ನು ಗಮನಿಸಿಕೊಳ್ಳಿ. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ಹೊಂದಾಣಿಕೆಯಿಂದ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಅಪರೂಪದ ಅತಿಥಿಗಳ ಆಗಮನ ನಿಮ್ಮ ಕಾರ್ಯಕ್ಕೆ ಅಡ್ಡಿಯುಂಟುಮಾಡಬಹುದು. ಬೇಸರಿಸದೇ ಕರ್ತವ್ಯವೆಂದು ಅವರೊಂದಿಗೆ ಮಾತನಾಡಿ. ಮಹತ್ತರವಾದ ಮಾರ್ಗವೂ ತೆರೆದುಕೊಳ್ಳಬಹುದು. ಕುಲದೇವರನ್ನು ಆರಾಧಿಸಿ, ಅನುಗ್ರಹ ಪಡೆದುಕೊಳ್ಳಿ.
ಲೋಹಿತ ಶರ್ಮಾ, ಇಡುವಾಣಿ
96325 96444