Nitya Bhavishya: ಈ ರಾಶಿಯವರ ಜೇಬು ಖಾಲಿಯಾಗಿ ಸಂಗಾತಿಯಿಂದ ಹಣ ಪಡೆಯುವ ಸ್ಥಿತಿ ಬರಬಹುದು, ಅನಗತ್ಯ ಖರ್ಚು ಬೇಡ

TV9kannada Web Team

TV9kannada Web Team | Edited By: Rakesh Nayak Manchi

Updated on: Jan 24, 2023 | 6:03 AM

Horoscope Today: ಜನವರಿ 24, 2023ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹು ಕಾಲ ಮಧ್ಯಾಹ್ನ 3:36 ಗಂಟೆಯಿಂದ 5:01ರವರೆಗೆ, ಯಮಘಂಡ ಕಾಲ ಬೆಳಗ್ಗೆ 09:54 - 11:19, ಗುಳಿಕ ಕಾಲ ಮಧ್ಯಾಹ್ನ 12:45 - 2:10ರ ವರೆಗೆ. ಸೂರ್ಯೋದಯ: ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 26 ನಿಮಿಷಕ್ಕೆ.

Nitya Bhavishya: ಈ ರಾಶಿಯವರ ಜೇಬು ಖಾಲಿಯಾಗಿ ಸಂಗಾತಿಯಿಂದ ಹಣ ಪಡೆಯುವ ಸ್ಥಿತಿ ಬರಬಹುದು, ಅನಗತ್ಯ ಖರ್ಚು ಬೇಡ
ರಾಶಿ ಭವಿಷ್ಯ

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 23 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಮಾಘ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವರಿಯಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 03ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ. ರಾಹು ಕಾಲ ಮಧ್ಯಾಹ್ನ 3:36 ಗಂಟೆಯಿಂದ 5:01ರವರೆಗೆ, ಯಮಘಂಡ ಕಾಲ ಬೆಳಗ್ಗೆ 09:54 – 11:19 ಗಂಟೆವರೆಗೆ, ಗುಳಿಕ ಕಾಲ ಮಧ್ಯಾಹ್ನ 12:45 – 2:10ರ ವರೆಗೆ
 1. ಮೇಷ: ಧನವನ್ನು ಸಂಪಾದಿಸಬೇಕು ಎನ್ನುವ ನಿಮ್ಮ ತೀವ್ರತರವಾದ ಪ್ರಯತ್ನಕ್ಕೆ ಇಂದು ಕೆಲವು ತಿಂದರೆಗಳು, ನಕಾರಾತ್ಮಕ ಸಲಹೆಗಳು ಬರಬಹುದು. ಇರುವುದರಲ್ಲಿ ಸದ್ಯಕ್ಕೆ ಸಂತೋಷಪಡುವುದು ಉತ್ತಮ. ಭೂಮಿಯ ಕ್ರಯ ಹಾಗೂ ವಿಕ್ರಯದ ವಿಚಾರದಲ್ಲಿ ನಿಮಗೆ ಲಾಭವಂತೂ ಸಿಗಲಿದೆ. ಕೃಷಿ ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಲಾಭವನ್ನು ಕಾಣಬಹುದು. ಸಂಗಾತಿಯ ಜೊತೆ ಖುಷಿಯಿಂದ ಇರಲಿದ್ದೀರಿ. ಯಾರೋ ಬಂದು ನಿಮ್ಮ ದಾಂಪತ್ಯದಲ್ಲಿ ಹುಳಿಯನ್ನು ಹಿಂಡುವ ಸಾಧ್ಯತೆ ಇದೆ. ನಂಬಿಕೆಯು ಶುದ್ಧವಾಗಿರಲಿ.
 2. ವೃಷಭ: ಕಷ್ಟಗಳನ್ನು ಕೊಡಬೇಡ ಎಂದು ಹೇಳಲು ಸಾಧ್ಯವಿಲ್ಲ, ಹೇಳಬಾರದು ಕೂಡ. ಕಷ್ಟಗಳು ನಮ್ಮ ಕರ್ಮದ್ದು ಎನ್ನುವ ವಿಚಾರ ನೆನಪಿರಲಿ. ಅದನ್ನು ಸಹಿಸುವ ಎದುರಿಸುವ ಶಕ್ತಿಯನ್ನು ಕೊಡು ಎಂದು ಕೇಳಿಕೊಳ್ಳಿ. ಸಂಪಾದನೆಗೆ ನೂರು ದಾರಿಗಳಿದ್ದರೂ ನಿಮ್ಮ ಆಯ್ಕೆ ಸ್ಪಷ್ಟವೂ ಯೋಗ್ಯವೂ ಆಗಿರುತ್ತದೆ. ದುಡುಕಿ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ. ಮಾತುಗಳು ನಿಮ್ಮ ನಿಯಂತ್ರಣದಲ್ಲಿ ಇರಲಿ. ಸಹೋದರರು ನಿಮಗೆ ಬೇಕಾದ ಸಲಹೆಗಳನ್ನು ಕೊಡುವರು. ಇಷ್ಟವಿಲ್ಲದಿದ್ದರೂ‌ ಅನಿವಾರ್ಯವಾಗಿ ಕೇಳಬೇಕಾದೀತು.
 3. ಮಿಥುನ: ಸಂಪತ್ತುಗಳು ಹರಿದು ಬರುವ ದಾರಿಯನ್ನು ಶುದ್ಧವಾಗಿರಿಸಿಕೊಂಡರೆ ಹಣವೂ ಉಳಿದೀತು. ಉಪಕಾರದ ಬುದ್ಧಿಯು ಸರಿಯೇ ಆಗಿದೆ. ಆದರೆ ಸಮಯ ಹಾಗೂ ಸಂದರ್ಭವನ್ನು ನೋಡಿ ಮಾಡಿ. ಕುಟುಂಬವು ಯಾವತ್ತೂ ಇರುವಂತೆ ನಿಮ್ಮ ಬೆಂಬಲಕ್ಕೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ಆಪ್ತರಿಗೆ ನೀವು ಕಾಳಜಿಯ ಕುರಿತು ಹೇಳುವಿರಿ. ಯಾವ ಪ್ರತ್ಯುತ್ತರವನ್ನೂ ಬಯಸದೇ ಮಾತನಾಡುವ ನಿಮ್ಮ ವಾಚಾಳಿತನವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಿ.
 4. ಕಟಕ: ಹಣದ ಅಗತ್ಯತೆಗಳು ತುಂಬಾ ಇರಲಿವೆ. ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ. ಖರ್ಚನ್ನು ಕಡಿಮೆಮಾಡಿಕೊಳ್ಳುವ ವಿಚಾರದಲ್ಲಿ ಚಿಂತಿಸುವುದು ಉತ್ತಮ. ಅನಗತ್ಯವಾದ ಖರ್ಚು ಅಗತ್ಯದ ವಸ್ತುಗಳನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಬಂಧುಗಳು ನಿಮ್ಮ ನಡೆತೆಯಿಂದ ದೂರವೂ ಹೋಗಬಹುದು ಅಥವಾ ನಿಮ್ಮಿಬ್ಬರ ನಡುವೆ ಕಲಹವೂ ಆಗಬಹುದು. ಯಂತ್ರಜ್ಞರು ಅಧಿಕವಾದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
 5. ಸಿಂಹ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಮಹತ್ವವು ತಿಳಿಯುವ ದಿನವಾಗಿದೆ. ನೀವಿಂದು ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳುವ ಮನಸ್ಸು ಮಾಡುವಿರಿ. ನಿಮ್ಮೊಳಗೆ ಇಂದು ವಿಚಿತ್ರವಾದ ಕೆಲವು ಆಲೋಚನೆಗಳು ಬರಲಿದ್ದು, ನಿಮಗೇ ಆಶ್ಚರ್ಯವೆನಿಸುವಂತೆ ಮಾಡುವುದು. ತಂದೆ ಮತ್ತು ತಾಯಿಯರು ನಿಮಗೆ ಹಿತವಚನವನ್ನು ಹೇಳುವರು. ಆಲಿಸಿ ಮುಂದಿನ ಕ್ರಮವನ್ನು ಕೈಗೊಳ್ಳಿ. ವ್ಯವಹಾರವನ್ನು ಬಂಧುಗಳ ಜೊತೆ ಮಾಡಬೇಡಿ.
 6. ಕನ್ಯಾ: ದಾಂಪತ್ಯದಲ್ಲಿ ಸುಖವನ್ನು ಕಾಣಬಹುದು. ಎಲ್ಲರ ಜೊತೆ ಸಲುಗೆಯಿಂದ ಇರುವ ನಿಮ್ಮ ಬಗ್ಗೆ ಕೆಲವು ಅಪವಾದದ ಮಾತುಗಳು ಕೇಳಿಬರಬಹುದು. ನಿಮ್ಮನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಮುಂದಿನ ಹೆಜ್ಜೆಯನ್ನು ಇಡುವಾಗ ಜಾಗರೂಕರಾಗಿರಿ. ಕಛೇರಿಯ ಕೆಲಸವು ಒತ್ತಡದ ಕಾರಣದಿಂದ ನಿಮಗೆ ಸಾಕೆನಿಸಬಹುದು. ತೀವ್ರವಾದ ಒತ್ತಡವಿದ್ದರೆ ಬಿಡುವುದು ಒಳ್ಳೆಯದು. ಮಾನಸಿಕ ಸ್ಥಿತಿಯು ಶಾಂತವಾಗುವ ತನಕ ವಿರಾಮವನ್ನೂ ಪಡೆದು ಸ್ವಲ್ಪ ಆರಾಮದಾಯಕವಾದ ಸ್ಥಳಕ್ಕೆ ಹೋಗಿ ಬನ್ನಿ.
 7. ತುಲಾ: ದ್ವಂದ್ವಗಳು ನಿಮಗೆ ನಿರ್ಧಾರವನ್ನು ಮಾಡಲಾಗದ ಸ್ಥಿತಿಗೆ ತಂದುಬಿಟ್ಟಾವು. ನಿಮಗೆ ನಿರ್ಧಾರಮಾಡುವುದು ಕಷ್ಟವೆನಿಸದರೆ ಆಪ್ತರ ಸಲಹೆಯನ್ನು ಪಡೆಯಿರಿ. ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ‌. ಸಂಗಾತಿಯಿಂದ ಅಪಮಾನವೂ ಆಗಬಹುದು. ಅದಕ್ಕೆ ಮನಃಸ್ಥಿತಿಯನ್ನು ಹಾಳು ಮಾಡಿಕೊಂಡು ಅನಾಹುತವನ್ನೋ ದುಶ್ಚಟಗಳಿಗೆ ದಾಸನೋ ಆಗುವ ಬದಲು ಉತ್ತಮ ಕೆಲಸವನ್ನು ಮಾಡಿ. ಕಾಲಾನಂತರ ನಿಮಗೆ ಉತ್ತಮವಾದ ಫಲವನ್ನೇ ನೀಡುವುದು. ತಿಳಿದುಕೊಳ್ಳುವ ಕುತೂಹಲವು ನಿಮ್ಮಲಿಂದು ಅಧಿಕವಾಗಿರುವುದು.
 8. ವೃಶ್ಚಿಕ: ಗೃಹನಿರ್ಮಾಣ ಕಾರ್ಯವು ಆರಂಭಗೊಂಡಿದ್ದು ನಿಮ್ಮ ಚಿಂತೆಗಳೂ ಆರಂಭವಾಗುವುವು. ಯಾರಾದರೂ ನಿಮ್ಮ ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸದೇ ತೊಂದರೆಗಳನ್ನು ಕೊಡಬಹುದು. ಅದಕ್ಕೆ ಬೇಕಾದ ಕಾನೂನಿನ ಹಾದಿಯನ್ನು ಅನುಸರಿಸಿ ಸರಿಮಾಡಿಕೊಳ್ಳಿ. ಯಾವುದೇ ಅನೈತಿಕ ಅಥವಾ ಕಾನೂನು ಬಾಹಿರ ಕೆಲಸಗಳನ್ನು ಮಾಡಲು ಹೋಗಬೇಡಿ. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಮಯವೂ ಇದಾಗಲಿದೆ.
 9. ಧನು: ಹಳೆಯ ಸಿಟ್ಟನ್ನು ನೆನಪಿಸಿಕೊಂಡು ದ್ವೇಷವನ್ನು ಸಾಧಿಸುವ ಕೆಲಸವನ್ನು ಮಾಡಬೇಡಿ. ಭೂಮಿಯ ವ್ಯವಹಾರದ ಕಾರಣಕ್ಕೆ ಹೆಚ್ಚು ಓಡಾಟವನ್ನು ಮಾಡಬೇಕಾಗಿ ಬರಬಹುದು. ನಿಮ್ಮ ಪ್ರಭಾವವು ಜೊತೆಗಾರರಿಗೆ ಗೊತ್ತಾಗಲಿದೆ. ಅನಿವಾರ್ಯತೆಯಿಂದ ಹಣವನ್ನು ಖರ್ಚುಮಾಡಬೇಕಾಗಿ ಬರಬಹುದು. ಹಣವನ್ನು ಕೂಡಿಡುವ ಯಾವುದಾದರೂ ಯೋಗ್ಯವಾದ ಮಾರ್ಗವನ್ನು ಆಲೋಚಿಸಿ. ಸ್ವಲ್ಪಮಟ್ಟಿನ ಆನಾರೋಗ್ಯವು ಆಲಸ್ಯವನ್ನು ತರಬಹುದು. ಅದನ್ನು ಗಮನಿಸಿಕೊಂಡು ಮಾಡಬೇಕಾದ ಕೆಲಸದಕಡೆ ಗಮನ ಹರಿಸಿ.
 10. ಮಕರ: ಯಂತ್ರಜ್ಞರಾಗಿರುವವರು ಹೊಸದಾದ ಉದ್ಯೋಗವನ್ನು ಆರಂಭಿಸುವ ಯೋಜನೆಯೊಂದನ್ನು ಕೈಗೊಂಡಿದ್ದರೆ ಉತ್ತಮ. ನಿಮಗೆ ಬೇಕಾದ ಸಲಹೆ ಸಹಕಾರಗಳು ಸಿಗಲಿವೆ. ಬಂಧುಗಳ ಮಾತು ಕಹಿ ಎನಿಸಬಹುದು. ನಿಮ್ಮ ಮನಸ್ಸನ್ನು ಕುಗ್ಗಿಸಬಹುದು. ಆತ್ಮಸ್ಥೈರ್ಯವನ್ನು ಬಿಡಬೇಡಿ.‌ ಏನನ್ನಾದರೂ ಸಾಧಿಸಬೇಕು ಎನ್ನುವ ಛಲವು ನಿಮ್ಮ ನಿತ್ಯಮಂತ್ರವಾಗಲಿ. ಶುಕ್ಲಪಕ್ಷದ ಚಂದ್ರನಂತೆ ಒಂದೊಂದಾಗಿ ಬೆಳವಣಿಗೆಯನ್ನು ಹೊಂದುವುದು. ವ್ಯವಹಾರದಲ್ಲಿ ಶುದ್ಧರಾಗಿರಿ.
 11. ಕುಂಭ: ಕಳೆದುಕೊಂಡ ಸಂಪತ್ತು ನಿಮಗೆ ಸಿಗಲಿದೆ. ನೀವು ಕೊಟ್ಟಿರುವ ಸಂಪತ್ತು ತಾನಾಗಿಯೇ ಬರಲಿದೆ. ಅಧಿಕವಾದ ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗಬೇಡಿ. ಸಾಮರ್ಥ್ಯ ಮತ್ತು ಸಂಪತ್ತಿಗೆ ಅನುಸಾರವಾಗಿ ಯೋಚನೆ ಹಾಗೂ ಯೋಜನೆಗಳು ಇರಲಿ. ದಾಂಪತ್ಯದಲ್ಲಿ ಸುಖವೂ ನೆಮ್ಮದಿಯೂ ಸಿಗಲಿದೆ. ಅತಿಥಿಗಳ ಸತ್ಕಾರವನ್ನು ಇಂದು ಮಾಡಲಿದ್ದೀರಿ. ಅನಿರೀಕ್ಷಿತ ಬಂಧುಗಳ ಆಗಮನದಿಂದ ನಿಮ್ಮ ಕಾರ್ಯಕ್ಕೆ ತೊಂದರೆಯಾದರೂ ತೋರಿಸಿಕೊಳ್ಳಲು ಹೋಗದೇ ಸಂತೋಷದಿಂದ ಇರುವಿರಿ.
 12. ಮೀನ: ಕಾಲವು ತಿರುಗುತ್ತದೆ, ಅದರಂತೆ ಶುಭಾಶುಭಗಳೂ ಪರಿವರ್ತಿತವಾಗುತ್ತವೆ ಎನ್ನುವ ಸತ್ಯವನ್ನು ತಿಳಿಯುತ್ತೀರಿ. ಉಪಯೋಗಕ್ಕೆ ಬಾರದ ಕೆಲಸವನ್ನು ಬಿಟ್ಟುಬಿಡುವುದು ಒಳ್ಳೆಯದು. ಮಂಗಲಕರವಾದ ಕಾರ್ಯಗಳನ್ನು ಮಾಡಲಿದ್ದೀರಿ. ಅಸ್ಥಾನದಲ್ಲಿ ತೋರಿಸುವ ಪೌರುಷವು ನಿಷ್ಪ್ರಯೋಜಕವಾಗಲಿದೆ‌. ಕಾಲಹರಣವನ್ನು ಮಾಡದೇ ಒಳ್ಳೆಯ ಕೆಲಸದಲ್ಲಿ ಮಗ್ನರಾಗಿ. ಸ್ವಲ್ಪ ಆಯಾಸವು ಬಾಧಿಸಬಹುದು. ತಕ್ಕ ವಿಶ್ರಾಂತಿಯಿಂದ ಪರಿಹಾರವನ್ನು ಮಾಡಿಕೊಳ್ಳಿ.

-ಲೋಹಿತಶರ್ಮಾ, ಇಡುವಾಣಿ

ತಾಜಾ ಸುದ್ದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada