Horoscope: ನಿಮ್ಮ ವಿರುದ್ಧ ನಡೆಯುವ ಪಿತೂರಿಯನ್ನು ತಿಳಿದುಕೊಳ್ಳುವಿರಿ

ಸೆಪ್ಟೆಂಬರ್​ 28,​ 2024ರ​​ ನಿಮ್ಮ ರಾಶಿಭವಿಷ್ಯ: ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ಆರ್ಥಿಕತೆಯು ಉತ್ತಮವಾದಂತೆ ಅನ್ನಿಸುವುದು. ಸುಮ್ಮನೇ ಆಡಿದ ಮಾತುಗಳೂ ನಿಮಗೆ ತೊಂದರೆಯಾಗಬಹುದು. ಹಾಗಾದರೆ ಸೆಪ್ಟೆಂಬರ್​ 28ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ನಿಮ್ಮ ವಿರುದ್ಧ ನಡೆಯುವ ಪಿತೂರಿಯನ್ನು ತಿಳಿದುಕೊಳ್ಳುವಿರಿ
ನಿಮ್ಮ ವಿರುದ್ಧ ನಡೆಯುವ ಪಿತೂರಿಯನ್ನು ತಿಳಿದುಕೊಳ್ಳುವಿರಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 28, 2024 | 12:05 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಸಿದ್ಧ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 23 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:23 ರಿಂದ 10:53, ಯಮಘಂಡ ಕಾಲ ಮಧ್ಯಾಹ್ನ 01:53ರಿಂದ ಸಂಜೆ 03:23ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:23 ರಿಂದ 07:53 ರ ವರೆಗೆ.

ಮೇಷ ರಾಶಿ: ಇನ್ನೊಬ್ಬರನ್ನು ನೋಡಿ ಬದುಕುವುದಕ್ಕಿಂತ ನಿಮ್ಮನ್ನೇ ನೋಡಿದರೆ ಒಳ್ಳೆಯದು. ನೀವು ಇಂದು ಸ್ನೇಹಿತನ ನಂಬಿಕೆಯ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ನೂತನ ವಸ್ತ್ರಾದಿಗಳು ಬಂಧುಗಳಿಂದ ನಿಮಗೆ ಸಿಗಲಿದೆ. ಕೆಲಸದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ದಾರಿ ಅಗಲವಿದೆ ಎಂದು ಹೇಗಾದರೂ ಹೋದರೆ ಬೀಳುವುದು ನೀವೇ. ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕಿ ಕೆಲಸದಲ್ಲಿ ಉತ್ಸಾಹವು ಇರಲಿದೆ. ಖಾಸಗಿ ಉದ್ಯೋಗಿಗೆ ಮುಖ್ಯಸ್ಥರಿಂದ ಕಿರಿಕಿರಿ ಆಗಬಹುದು. ಸ್ನೇಹಿತರ ಸಮಸ್ಯೆಯನ್ನು ಬಿಡಿಸಲು ನೀವು ಮುಂದಾಗುವಿರಿ. ನಿಮ್ಮ ಕೆಲಸಗಳನ್ನು ಮುಗಿಸುವ ಚಿಂತೆಯಲ್ಲಿ ಇರುವಿರಿ. ಹಣಕಾಸಿನ‌ ಹರಿವಿನಿಂದ ಸಂತೋಷವಾಗಲಿದೆ. ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಬಹುದು. ಇಂದು ಕಾರ್ಯದ ಒತ್ತಡವು ಅಧಿಕವಾಗಿ ಇರಲಿದೆ. ನಿಮಗೆ ಕೊಟ್ಟ ಸಣ್ಣ ಕೆಲಸವನ್ನೂ ಶಿಸ್ತು ಹಾಗೂ ಉತ್ಸಾಹದಿಂದ ಮಾಡುವಿರಿ. ಪ್ರೇಮವು ಬಹಿರಂಗು ಅಂಜಿಕೆ ಇರವುದು.

ವೃಷಭ ರಾಶಿ: ನಿಮ್ಮ ಅಸತ್ಯಗಳನ್ನು ಜನರು ಎಂದಿನಂತೆ ನಂಬಲಾರರು. ಇಂದು ನಿವು ಏನೂ ಕೆಲಸವಿಲ್ಲದೇ ಸಮಯವನ್ನು ವ್ಯರ್ಥ‌ಮಾಡುವಿರಿ. ಅಪರೂಪದ ದ್ರವ್ಯಗಳು ಸಿಗಲಿದೆ‌. ಕುಟುಂಬದ ಜೊತೆ ಸಮಯವನ್ನು ಕಳೆದುದಕ್ಕೆ ಮನಸ್ಸು ನೆಮ್ಮದಿಯಿಂದ ಇರಲಿದೆ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ಆರ್ಥಿಕತೆಯು ಉತ್ತಮವಾದಂತೆ ಅನ್ನಿಸುವುದು. ಸುಮ್ಮನೇ ಆಡಿದ ಮಾತುಗಳೂ ನಿಮಗೆ ತೊಂದರೆಯಾಗಬಹುದು. ನಿಕಟವರ್ತಿಗಳೇ ನಿಮಗೆ ತೊಂದರೆಯಾಗುವುದು. ನಿಮ್ಮ ವಿರುದ್ಧ ನಡೆಯುವ ಪಿತೂರಿಯನ್ನು ತಿಳಿದುಕೊಳ್ಳುವಿರಿ. ಹಿರಿಯರಿಗೆ ಅಗೌರವವನ್ನು ತೋರುವಿರಿ. ದೇವರ ಸನ್ನಿಧಿಯಲ್ಲಿ ನಿಮಗೆ ನೆಮ್ಮದಿಯು ಸಿಗಲಿದೆ. ಆಗಿರುವ ನಕಾರಾತ್ಮಕತೆಯನ್ನು ಮರೆತು ಮುನ್ನಡೆಯುವಿರಿ. ನಿಮ್ಮ ಸಿದ್ಧಾಂತದ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳಬಹುದು.

ಮಿಥುನ ರಾಶಿ: ಸ್ಪರ್ಧಾತ್ಮಕವಾಗಿ ನೀವು ಗೆಲ್ಲಬೇಕು ಎನ್ನುವ ಹಂಬಲವಿರುವುದು. ಇಂದು ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭವು ಅನಿರೀಕ್ಷಿತವಾಗಿ ಬರುವುದು. ಶತ್ರುಗಳ ಕಾಟವನ್ನು ಕಡಿಮೆ‌ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು.‌ ಕುಟುಂಬದ ತೊಡಕನ್ನು ಸರಿಮಾಡಿ ಒಂದುಮಾಡುವ ಕಾರ್ಯವು ಸಫಲವಾಗುವುದು. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕೆಲಸದ ಒತ್ತಡವು ಮೇಲಧಿಕಾರಿಗಳಿಂದ ಬರಲಿದೆ. ದೂರ ಪ್ರಯಾಣವನ್ನು ಮಾಡಲು ಬೇಕಾದ ತಯಾರಿಯ ಜೊತೆ ಹೊರಡಿ. ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ. ಸಹೋದರನಿಗೆ ಸಹಾಯವನ್ನು ಮಾಡುವ ಮನಸ್ಸು ಇರಲಿದೆ. ನಿಮ್ಮ ದ್ವಂದ್ವ ನೀತಿಯು ಮನೆಯವರಿಗೆ ಕಷ್ಟವಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ನೀವು ಸರಳತೆಯನ್ನು ರೂಢಿಸಿಕೊಳ್ಳುವುದು ಉತ್ತಮ. ಬೇಕಾದ ವಸ್ತುವನ್ನೇ ನೀವು ಯಾರಿಗಾದರೂ ಕೊಟ್ಟು ಕಳೆದುಕೊಳ್ಳುವಿರಿ.

ಕರ್ಕಾಟಕ ರಾಶಿ: ಯಾರಿಂದಲೂ ನಿಮಗೆ ಸುಲಭವಾಗಿ ಮೆಚ್ಚುಗೆ ಸಿಗದು. ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಒಂದು ಕಡೆ ಹಣದ ವ್ಯವಹಾರವನ್ನು ಮುಕ್ತಾಯ ಮಾಡಿದರೆ ಮತ್ತೊಂದು ಕಡೆಗೆ ತೆರೆದುಕೊಳ್ಳುವುದು. ಸಂಗಾತಿಯ ಒತ್ತಾಯದ ಮೇರೆಗೆ ಹೊಸ ಉದ್ಯೋಗಕ್ಕೆ ಹೋಗುವ ಮನಸ್ಸು ಮಾಡುವಿರಿ. ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಿದ್ದು ಗಂಭೀರವಾಗಿ ಇದನ್ನು ಪರಿಗಣಿಸಬೇಕಾದೀತು. ಸಮಾರಂಭಗಳಿಗೆ ಭೇಟಿ ನೀಡುವಿರಿ. ಹೂಡಿಕೆಯ ಹಣವು ಎಷ್ಟೋ ವರ್ಷಗಳ ಅನಂತರ ಸಿಗಲಿದ್ದು ನಿಮ್ಮ ಸರಿಯಾಗಿ ಉಪಯೋಗಕ್ಕೆ ಬರಲಿದೆ. ಉರಿಯುವ ಬೆಂಕಿಗೆ ತುಪ್ಪವನ್ನು ಹಾಕುವುದು ಬೇಡ. ಸುಲಭವಾದ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿಗಳು ಒಂದೆಡೆ ಕುಳಿತು ನಿಮ್ಮ ಮನಸ್ಸನ್ನು ಹಂಚಿಕೊಳ್ಳಿ. ನಿಮ್ಮ ಕರ್ತವ್ಯವನ್ನು ಮರೆಯದೇ ನಿಭಾಯಿಸಲು ಪ್ರಯತ್ನಿಸಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ನಿಮಗೇ ಗೊತ್ತಾಗದಂತೆ ಇಂದು ಹಣವು ಖರ್ಚಾಗವುದು.

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​