Daily Horoscope 02 July: ನಿಮ್ಮವರ ನೋವಿಗೆ ಸ್ಪಂದಿಸಲು ನಿಮಗೆ ಸಮಯ ಸಿಗದೇ ಹೋಗಬಹುದು

| Updated By: Digi Tech Desk

Updated on: Jul 04, 2023 | 11:19 AM

ಇಂದಿನ (2023 ಜುಲೈ​ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 02 July: ನಿಮ್ಮವರ ನೋವಿಗೆ ಸ್ಪಂದಿಸಲು ನಿಮಗೆ ಸಮಯ ಸಿಗದೇ ಹೋಗಬಹುದು
ಪ್ರಾತಿನಿಧಿಕ ಚಿತ್ರ
Follow us on

ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ​ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ:ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:27 ರಿಂದ 07:04 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 02:13 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:50 ರಿಂದ 05:27 ರ ವರೆಗೆ.

ಮೇಷ: ಆರಾಮಾಗಿ ಇರಬೇಕೆಂದುಕೊಂಡರೂ ಅನೇಕ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗಬಹುದು. ಸಂಗಾತಿಯ ಜೊತೆ ಕಲಹವಾಗಬಹುದು.‌ ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಗಮನಕೊಟ್ಟರೂ ಪ್ರಯೋಜನವಾಗದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಣವನ್ನು ಖರ್ಚುಮಾಡುವಿರಿ. ಉತ್ತಮ‌ ಆಹಾರವು ಸಿಗಲಿದೆ. ಇಂದಿನ ಪ್ರಯಾಣವನ್ನು ನೀವು ಇಷ್ಟಪಡುವುದಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ವಿವೇಕದಿಂದ ವರ್ತಸಿ. ಸುಬ್ರಹ್ಮಣ್ಯನ ಆರಾಧನೆಯು ಶ್ರೇಯಸ್ಕರವಾಗಿದೆ.

ವೃಷಭ: ನಿಮ್ಮವರ ನೋವಿಗೆ ಸ್ಪಂದಿಸಲು ನಿಮಗೆ ಸಮಯ ಸಿಗದೇ ಹೋಗಬಹುದು. ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಿರಿ. ವಿವಾಹಕ್ಕೆ ಬೇಕಾದ ತಯಾರಿಯನ್ನು ಮಾಡುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವು ಕಡಿಮೆ ಆಗಬಹುದು. ನಿಮ್ಮ ಕೆಲಸವನ್ನು ಬಹಳ ಛಲದಿಂದ‌ ಮಾಡುವಿರಿ. ನೀವು ಭವಿಷ್ಯಕ್ಕೆಂದು ರೂಪಿಸಿಕೊಂಡ ಯೋಜನೆಯಲ್ಲಿ ಗೊಂದಲವಿರಲಿದೆ. ಆಪ್ತರ ಸಲಹೆಯನ್ನು ಪಡೆಯುವು ಒಳ್ಳೆಯದು‌. ಸಂಭನೀಯ ವಿಷಯವನ್ನು ನೀವು ಊಹಿಸುವಿರಿ. ಆಪ್ತರ ಭೇಟಿಯಿಂದ ಸಂತೋಷವಾಗಲಿದೆ.

ಮಿಥುನ: ಮನೆಯನ್ನು ಬಿಟ್ಟು ಬರಲು‌ ನಿಮಗೆ ಬಹಳ ನೋವಾದೀತು. ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡುವಿರಿ.‌ ಕೆಲಸದಿಂದ ನಿಮ್ಮ ವ್ಯಕ್ತಿತ್ವ ಗೊತ್ತಾಗಲಿದೆ.
ಸಣ್ಣ ನೋವನ್ನೂ ನೀವು ನಿರ್ಲಕ್ಷ್ಯ ಮಾಡುವುದು ಬೇಡ. ದೇವರಿಗೆ ಅರ್ಪಿಸುವ ವಿಚಾರವನ್ನು ನೀವು ಮುಂದೂಡಬೇಡಿ. ಸ್ತ್ರೀಗೆ ಆಕರ್ಷಿತವಾಗುವಿರಿ. ಆರ್ಥಿಕವಾಗಿ ನೀವು ಸುಧಾರಣೆ ಕಾಣುವಿರಿ. ವ್ಯಾಪಾರವು ಹೆಚ್ಚಿನ ಲಾಭವನ್ನು ಕೊಡಬಹುದು. ನಿಮ್ಮ ಚಿಂತನೆಯನ್ನು ಸರಿಯಾದ ಕ್ರಮದಲ್ಲಿ ಮುಂದುವಿರಿಸಿ.

ಕಟಕ: ಉನ್ನತ ಅಧಿಕಾರಕ್ಕಾಗಿ ಅಪೇಕ್ಷೆ ಪಟ್ಟಿದ್ದರೆ ಇಂದು ಸಿಗಬಹುದು. ನೂತನ ಸಂಸ್ಥೆಯೊಂದರ ಮುಖ್ಯಸ್ಥರೂ ಆಗಬಹುದು. ನೀವಾಡಿದ ಸುಳ್ಳಿನಿಂದ ನಿಮಗೇ ತೊಂದರೆಯಾಗಲಿದೆ. ನಿಮ್ಮ ವಿಚಾರವಾಗಿ ಕೆಲವು ಸಮಸ್ಯೆಗಳನ್ನು ಮನೆಯಲ್ಲಿ ಎದುರಿಸಬೇಕಾದೀತು. ನ್ಯಾಯಾಲಯದಲ್ಲಿ ಇರುವ ದೂರನ್ನು ಪುನಃ ಮೇಲೆ ತರುವ ಕೆಲಸ ಮಾಡುವಿರಿ. ಪಶ್ಚಾತ್ತಾಪದಿಂದ‌ ಮಾಡಿದ ತಪ್ಪನ್ನು ಸರಿಮಾಡಿಕೊಳ್ಳುವಿರಿ. ಹದ ತಪ್ಪಿದ ಆರೋಗ್ಯದಿಂದ ಕಷ್ಟವಾದೀತು. ನೀವು ದೇವರಲ್ಲಿ ದೃಢವಾದ ಭಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ಯೋಚನೆಯನ್ನು ಕಾರ್ಯರೂಪಕ್ಕೆ ತರುವಿರಿ. ವಾಹನ ಖರೀದಿಯತ್ತ ನಿಮ್ಮ ಗಮನ ಇರಲಿದೆ.

ಸಿಂಹ: ನಿಮ್ಮನ್ನು ಸಮಾರಂಭಗಳಿಗೆ ಅತಿಥಿಯಾಗಿ ಆಹ್ವಾನಿಸಬಹುದು. ಆಹಾರದ ವ್ಯತ್ಯಾಸವನ್ನು ಮಾಡಿಕೊಳ್ಳದೇ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಯೋಚನೆಯನ್ನು ಇತರರು ಲಾಭವನ್ನು ಪಡೆದುಕೊಳ್ಳಬಹುದು. ಭವಿಷ್ಯವನ್ನು ಆಲೋಚಿಸಿ ನೀವು ಮಂಕಾಗಬಹುದು. ಅಂತರಂಗದ ಕಲಹವು ಇಂದು ಪ್ರಕಡವಾದೀತು. ನಿಮ್ಮ ಪರಿಶ್ರಮವನ್ನು ಯಾರೂ ತಿಳಿಯಲಾರರು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾದೀತು. ಒಳ್ಳೆಯ ಕೆಲಸದ ಕಡೆ ನಿಮ್ಮ ಗಮನವಿರಲಿದೆ. ಮನೆಯಲ್ಲಿ ಏನಾನ್ನಾದರೂ ಕಳೆದುಕೊಳ್ಳಬಹುದು. ಇಂದು ಅದು ಬೇಕಾದೀತು.

ಕನ್ಯಾ: ನಿಮ್ಮ ನಡೆಯು ಕೆಲವರಿಗೆ ಅಸಮಾಧಾನವನ್ನು ಉಂಟುಮಾಡಲಿದೆ. ಪುಣ್ಯಸ್ಥಳಗಳಿಗೆ ಹೋಗಬೇಕು ಎಂದು ಅನಿಸಬಹುದು. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹವು ಸಿಗಬಹುದು. ಇಂದು ನೀವು ಖರ್ಚನ್ನು ಮಾಡುವಾಗ ಸರಿಯಾದ ಲೆಕ್ಕಾಚಾರ ಇರಲಿ. ಹೊಸ‌ ಕೆಲಸದಲ್ಲಿ ನಿಮಗೆ ಗೊಂದಲಗಳು ಆಗಬಹುದು. ನಿಮ್ಮ ವಸ್ತುವು‌ ಕಾಣೆಯಾಗಲಿದೆ. ವಿರೋಧವನ್ನು ನೀವು ಎದುರಿಸಲು ಸಿದ್ಧರಾಗಿರುವಿರಿ. ನೈಪುಣ್ಯತೆಯನ್ನು ಕರಗತಮಾಡಿಕೊಳ್ಳುವ ಅಗತ್ಯವಿದೆ. ಯಾರ ಸಹಾಯವನ್ನೂ ಕೇಳಲು ಹೋಗುವುದಿಲ್ಲ. ನಿಮ್ಮದೇ ಗುಂಗಿನಲ್ಲಿ ಇರುವಿರಿ.

ತುಲಾ: ಉದ್ಯೋಗದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ. ಮಕ್ಕಳ ಜೊತೆ ಎಲ್ಲಿಗಾದರೂ ಹೋಗಿಬರುವಿರಿ. ವಿದೇಶಕ್ಕೆ ಹೋಗಿಬರಬೇಕಾಗಿಯೂ ಬರಬಹುದು. ಕ್ರೀಡೆಯಲ್ಲಿ ಹೆಚ್ಚಿನ ಉತ್ಸಾಹವು ಇರಲಿದೆ. ಸ್ವಲ್ಪ ಆಸ್ತಿಯನ್ನು ಕಳೆದುಕೊಳ್ಳಬೇಕಾದೀತು. ಅಧಿಕಾರಿಗಳ ಸಹಾಯದಿಂದ ನಿಮ್ಮ ಕೆಲಸವನ್ನು ಸಾಧ್ಯ ಮಾಡಿಕೊಳ್ಳುವಿರಿ. ಆಸ್ತಿಯ ವಿಚಾರವಾಗಿ ನೀವು ಮನೆಯಲ್ಲಿ ಕಲಹವಾಗಬಹುದು. ನಿಮ್ಮ ಸ್ಪಷ್ಟ ನಿರ್ಧಾರವು ಇಷ್ಟವಾಗದೇ ಹೋದೀತು. ಧಾರ್ಮಿಕ ವಿಚಾರಕ್ಕೆ ಹೆಚ್ಚಿನ ಸಮಯವನ್ನು ಕೊಡುವಿರಿ. ಆಪದ್ಧನವನ್ನು ಸಂಗ್ರಹಿಸಿಡಲು ಯೋಚಿಸುವಿರಿ. ಸಕಾರಾತ್ಮಕ ಬದಲಾವಣೆಗಳು ನಿಮ್ಮಲ್ಲಿ ಆಗಬಹುದು.

ವೃಶ್ಚಿಕ: ವಿಶ್ವಾಸವನ್ನು ಪಡೆಯಲು ನೀವು ಬಹಳ ಶ್ರಮವನ್ನು ವಹಿಸಬೇಕಾದೀತು. ಸರ್ಕಾರಿ ಉದ್ಯೋಗಿಗಳಾಗಿದ್ದರೆ ತೊಂದರೆಯಾಗಬಹುದು. ಬಂಧುಗಳ ಮಾತು ನಿಮ್ಮ ಉತ್ಸಾಹವು ಕುಗ್ಗಿಸಬಹುದು. ನಿಮ್ಮ ಮಕ್ಕಳಿಂದ ನೀವು ಪ್ರತ್ಯುತ್ತರವನ್ನು ಕೇಳುವಿರಿ. ಸಮಾಜದ ಜೊತೆ ಉತ್ತಮ‌ ಬಾಂಧವ್ಯವು ಇರಲಿದೆ. ಯಾರ ಮಾತೂ ನಿಮಗೆ ಸಹ್ಯವಾಗದು‌. ಸಮಯೋಚಿತ ಆಲೋಚನೆಯಿಂದ ಉದ್ಯೋಗದಲ್ಲಿ ಹೆಚ್ಚಿನ ಅಭಿವೃದ್ಧಿಯು ಸಾಧ್ಯವಾಗುವುದು. ಮನೆಯ ಕೆಲಸದಲ್ಲಿ ನೀವು ಹೆಚ್ಚು ಸಮಯವನ್ನು ಕಳೆಯುವಿರಿ. ಖರ್ಚುಗಳು ಸ್ವಲ್ಪ ಕಡಿಮೆ ಆಗಲಿದೆ. ಅಡುಗೆಯಲ್ಲಿ ಹೆಚ್ಚು ಆಸಕ್ತಿಯು ಇರಬಹುದು. ಇಂದು ನಿಮ್ಮ ಮುಖ್ಯ ವಿಷಯವೇ ಮರೆತುಹೋಗುವ ಸಾಧ್ಯತೆ ಇದೆ.

ಧನು: ನಿಮ್ಮ ಗಾಂಭಿರ್ಯವು ಮನೆಯಲ್ಲಿ ಹೆದರಿಕೆಯನ್ನು ತರಿಸೀತು. ಹಳೆಯ ದಾಖಲೆಗಳನ್ನು ಇಂದು ಹುಡುಕುವ ಪ್ರಯತ್ನ ಮಾಡುವಿರಿ. ಹೊಸ ರೀತಿಯಲ್ಲಿ ಉದ್ಯಮವನ್ನು ಬದಲಿಸಲು ಇಚ್ಛಿಸುವಿರಿ. ಹಳೆಯ ವಾಹನಕ್ಕೆ ಹಣ ಸುರಿಯುವಿರಿ. ಅನೇಕ ವರ್ಷಗಳ ಅನಂತರ ಆದ ಸಂತಾನವು ನಿಮಗೆ ಸಂತೋಷವನ್ನು ಕೊಡಬಹುದು. ಮನೆಗೆ ಇಂದು ವಿದ್ಯುತ್ ಉಪಕರಣವನ್ನು ಖರೀದಿಸುವಿರಿ. ಸಹೋದರನ‌ ಕಾರಣದಿಂದ ಇಂದು ನಿಮ್ಮ ವಿವಾಹವು ಆಗಬಹುದು. ಸುಳ್ಳುವಾರ್ತೆಯನ್ನು ಕೇಳಿ ಮೋಸ ಹೋಗಬಹುದು. ಸರಿಯಾದ ನಿರ್ಧಾರವು ನಮಗೆ ಉತ್ತಮ ಫಲಿತಾಂಶವನ್ನು ಕೊಡಬಹುದು.

ಮಕರ: ನಿಮಗೆ ಸಂಬಂಧಿಸಿದ ಕೆಲಸವಷ್ಟನ್ನೇ ಮಾಡಿ. ಇನ್ನೊಬ್ಬರ ಬಗ್ಗೆ ನಿಮ್ಮ‌ ಮಾತುಗಳು ಬೇಡ. ಸಂದರ್ಭವನ್ನು ನೀವು ಸರಿಯಾಗಿ ನಿಭಾಯಿಸಲು ಕಷ್ಟವಾದೀತು. ನಿಮ್ಮ ಬಗ್ಗೆ ಅಸಂಬದ್ಧ ಮಾತುಗಳನ್ನು ಕೇಳಿ ಬೇಸರವಾಗುವುದು. ಅತಿಯಾದ ಕೋಪವು ನಿಮ್ಮ ಈ ದಿನವನ್ನು ಹಾಳುಮಾಡಬಹುದು. ವಾಹನದಿಂದ ಸಣ್ಣ ಅಪಘಾತವೂ ಆಗಬಹುದು. ಕೃಷಿಯು ನಿಮಗೆ ಬೇಸರವಾಗಬಹುದು. ಎಷ್ಟೋ ದಿನಗಳ ಅನಂತರ ನಿಮ್ಮ ಮಾನಸಿಕ ಸ್ಥಿತಿ ಉತ್ತಮವಾಗುವುದು. ಬಂಧುಗಳು ನಿಮಗೆ ಕೆಲವು ಹಿತ ನುಡಿಗಳನ್ನು ಹೇಳುವರು. ಸಮಾಜದಲ್ಲಿ ಬೆರೆಯಲು ನೀವು ಇಷ್ಟಪಡುವಿರಿ.

ಕುಂಭ: ಖುಷಿಯಿಂದ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗುವಿರಿ. ಸಮಾಧಾನದ ಚಿತ್ತವು ನಿಮ್ಮ ಇಂದಿನ ದಿನವನ್ನು ಚೆನ್ನಾಗಿ ಇಡುವುದು. ಪ್ರಾಣವನ್ನು ನೀವು ಆನಂದದಿಂದ ಮಾಡುವಿರಿ. ದಾಂಪತ್ಯವು ಸುಖವಾಗಿರಲು ಒಂದು ಕಡೆಯಿಂದ ಮಾತ್ರ ಇದ್ದರೆ ಸಾಲದು. ನೀವು ಇಂದು ಕ್ಷಮಾಗುಣದಿಂದ ದೊಡ್ಡವರಾಗುವಿರಿ. ಸಭೆ ಸಮಾರಂಭಗಳಿಗೆ ನೀವು ಹೋಗಲಿದ್ದೀರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ನಿಮ್ಮವರು ಕಷ್ಟಪಡುವರು. ನಿಮ್ಮ ನಡೆಯು ಯಾರಿಗೂ ತಿಳಿಯದಾಗಿದೆ. ಆರಾಮಿ ಇರಲು ಇಂದು ಇಷ್ಟಪಡುವಿರಿ. ಅನಿರೀಕ್ಷಿತವಾಗಿ ಧನಾಗಮನದಿಂದ ಸಂತೋಷವಾಗುವುದು. ನಿಮ್ಮ ಸ್ನೇಹಿತರಿಗೆ ಪ್ರತ್ಯುಪಕಾರವನ್ನು ಮಾಡಲು ಇಚ್ಛಿಸುವಿರಿ. ಶಿವಪಂಚಾಕ್ಷರವನ್ನು ಪಠಿಸಿರಿ.

ಮೀನ: ನಿಮಗೆ ಕೃತ್ರಿಮ ಮಾಡಿರುವ ಬಗ್ಗೆ ಭೀತಿ ಇರಲಿದೆ. ವಿದ್ಯಾರ್ಥಿಗಳು ಆಭ್ಯಾಸದಿಂದ ವಿಮುಖರಾಗುವಿರಿ. ಅನಿವಾರ್ಯವಾಗಿ ಸಾಲವನ್ನು ಮಾಡಬೇಕಾಗಬಹುದು. ತಾಯಿಯ ಜೊತೆ ಕಲಹ ಆಗುವ ಸಾಧ್ಯತೆ ಇದೆ. ಮನೆಯ ಕೆಲಸಗಳನ್ನು ಮಾಡಲು ನೀವು ಆಸಕ್ತಿಯ ತೊರುವುದಿಲ್ಲ. ಆಲಸ್ಯದಿಂದ ಇರುವಿರಿ ಇಂದು. ಸಂಗಾತಿಯ ಮೇಲೆ ಅನುಮಾನ ಬರಬಹುದು. ಹೆಚ್ಚು ಸುಖವಾಗಿರಲು ಇಂದು ಇಚ್ಛಿಸುವಿರಿ. ಬಂಧುಗಳ ಮನೆಗೆ ಹೋಗುವಿರಿ. ಆಂತರಿಕ ಕಲಹಕ್ಕೆ ಅವಕಾಶವನ್ನು ಕೊಡಬೇಡಿ. ಶನೈಶ್ಚರ ದೇವಾಲಯಕ್ಕೆ ಹೋಗಿ ಎಳ್ಳನ್ನು ದಾನವಾಗಿ ಕೊಡಿ.

-ಲೋಹಿತಶರ್ಮಾ 8762924271 (what’s app only)

Published On - 12:02 am, Sun, 2 July 23