AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tarabala: ತಾರಾಬಲ ಅಂದರೇನು, ಲೆಕ್ಕಾಚಾರ ಹೇಗೆ? ಯಾವ ನಕ್ಷತ್ರದವರಿಗೆ ಯಾವ ತಾರೆ ಉತ್ತಮ?

ಪ್ರತಿ ನಕ್ಷತ್ರದ ಕೆಳಗೆ ಮೊದಲ ಸಾಲಿನಲ್ಲಿ ಬರುವಂಥದ್ದು ಸಂಪತ್ತಾರೆ, ಎರಡನೇ ಸಾಲಿನಲ್ಲಿ ಬಂದಿರುವುದು ಕ್ಷೇಮತಾರೆ, ಮೂರನೇ ಸಾಲಿನಲ್ಲಿ ಬಂದಿರುವುದು ಸಾಧಕತಾರೆ, ನಾಲ್ಕನೇ ಸಾಲಿನಲ್ಲಿ ಮಿತ್ರತಾರೆ, ಐದನೇ ಸಾಲಿನಲ್ಲಿ ಬಂದಿರುವುದು ಪರಮಮೈತ್ರತಾರೆ ಆಗಿದೆ. ವ್ಯಾಪಾರ- ವ್ಯವಹಾರಗಳನ್ನು ಸಂಪತ್ತಾರೆಯಲ್ಲಿಯೂ, ಪ್ರಯಾಣವನ್ನು ಕ್ಷೇಮತಾರೆಯಲ್ಲಿಯೂ, ವಿದ್ಯೆ- ಕಲಿಕೆ- ಕೋರ್ಸ್ ಗಳನ್ನು ಸಾಧಕತಾರೆಯಲ್ಲಿಯೂ, ಸಂಧಾನ- ರಾಜೀ- ಪಾರ್ಟನರ್ ಷಿಪ್ ಇತ್ಯಾದಿಗಳನ್ನು ಮಿತ್ರತಾರೆ ಹಾಗೂ ಪರಮಮೈತ್ರತಾರೆಯಲ್ಲಿಯೂ ಮಾಡಬಹುದು.

Tarabala: ತಾರಾಬಲ ಅಂದರೇನು, ಲೆಕ್ಕಾಚಾರ ಹೇಗೆ? ಯಾವ ನಕ್ಷತ್ರದವರಿಗೆ ಯಾವ ತಾರೆ ಉತ್ತಮ?
ತಾರಾಬಲ
ಸ್ವಾತಿ ಎನ್​ಕೆ
| Updated By: Digi Tech Desk|

Updated on:Jul 10, 2024 | 10:16 AM

Share

ತಾರಾಬಲ ಎಂಬುದರ ಬಗ್ಗೆ ಈ ಲೇಖನ ಇರಲಿದೆ. ನಾವು ಯಾವುದಾದರೂ ಶುಭ ಕಾರ್ಯವನ್ನು ಮಾಡುವಾಗ ಆ ಕಾರ್ಯ ನಿಗದಿ ಮಾಡಿದಂಥ ದಿನ, ಅದರಲ್ಲೂ ಸಮಯಕ್ಕೆ ಇರುವಂಥ ನಕ್ಷತ್ರವು ಆ ಕರ್ತೃವಿನ (ಆ ಕೆಲಸ ಮಾಡುವಂಥ ವ್ಯಕ್ತಿ) ಜನ್ಮನಕ್ಷತ್ರಕ್ಕೆ ಅನುಕೂಲವಾಗಿ ಇರಬೇಕು. ಆಗ ಕೆಲಸ ಆರಂಭಿಸಿದರೆ ಅಥವಾ ಮಾಡಿದರೆ ಯಶಸ್ಸು- ಶ್ರೇಯಸ್ಸು ಎಂಬುದು ನಂಬಿಕೆ. ಇಲ್ಲಿ ಇಪ್ಪತ್ತೇಳು ನಕ್ಷತ್ರಗಳ ತಾರಾಬಲವನ್ನೂ ನೀಡಲಾಗಿದೆ.

೦ 1 2 3 4 5 6 7 8 9 ಹೀಗೆ ಆಯಾ ಸಂಖ್ಯೆಗೆ ಒಂದೊಂದು ಹೆಸರನ್ನು ನೀಡಲಾಗಿದೆ. 9 ಅಥವಾ ೦ ಬಂದರೆ ಪರಮಮೈತ್ರ ತಾರೆ, 1 – ಜನ್ಮತಾರೆ, 2- ಸಂಪತ್ತಾರೆ, 3 – ವಿಪತ್ತಾರೆ, 4 – ಕ್ಷೇಮತಾರೆ, 5- ಪ್ರತ್ಯಋಕ್ ತಾರೆ, 6- ಸಾಧಕತಾರೆ, 7- ವಧತಾರೆ, 8 – ಮಿತ್ರತಾರೆ ಹೀಗೆ ವಿಂಗಡಣೆ ಮಾಡಲಾಗಿದೆ.

ಕಾರ್ಯವನ್ನು ಮಾಡುತ್ತಿರುವ ವ್ಯಕ್ತಿಯ ಜನ್ಮ ನಕ್ಷತ್ರದಿಂದ ಮೊದಲುಗೊಂಡು, ಇಷ್ಟ ಕಾಲ (ಕಾರ್ಯಕ್ರಮ ನಡೆಯುವ ಸಮಯಕ್ಕೆ ಇರುವ ನಕ್ಷತ್ರ) ತನಕ ಗಡಿಯಾರದ ರೀತಿಯಲ್ಲಿ ಎಣಿಕೆ ಮಾಡಬೇಕು. ಉದಾಹರಣೆಗೆ: ಅಶ್ವಿನಿ ಜನ್ಮ ನಕ್ಷತ್ರದ ವ್ಯಕ್ತಿಯು ಗೃಹಪ್ರವೇಶ ಮಾಡುತ್ತಿದ್ದಾರೆ. ಗೃಹಪ್ರವೇಶದ ದಿನ ರೋಹಿಣಿ ನಕ್ಷತ್ರ ಇದೆ ಎಂದುಕೊಳ್ಳಿ. ಅಶ್ವಿನಿ ನಕ್ಷತ್ರದಿಂದ ಎಣಿಕೆ ಮಾಡುತ್ತಾ ರೋಹಿಣಿಯು ಎಷ್ಟನೇ ನಕ್ಷತ್ರ ನೋಡಬೇಕು. ಅಶ್ವಿನಿಯಿಂದ ರೋಹಿಣಿ 4ನೇ ನಕ್ಷತ್ರ ಆಗುತ್ತದೆ. ಅಂದರೆ ಅದು ಕ್ಷೇಮತಾರೆ. ಒಂದು ವೇಳೆ ಗೃಹಪ್ರವೇಶದ ದಿನ ಚಿತ್ತಾ ನಕ್ಷತ್ರ ಇದ್ದಲ್ಲಿ, ಅಶ್ವಿನಿಯಿಂದ ಆರಂಭಿಸಿ ಚಿತ್ತಾ ಎಷ್ಟನೇ ತಾರೆ ಆಗುತ್ತದೆ ಎಣಿಸಿಕೊಳ್ಳಬೇಕು. 14ನೇ ನಕ್ಷತ್ರ ಆಗುತ್ತದೆ. 14 ಅನ್ನು 9ರಿಂದ ಭಾಗಿಸಬೇಕು. ಶೇಷ 5 ಉಳಿಯುತ್ತದೆ. ಸಂಖ್ಯೆ 5 ಅಂದರೆ ಪ್ರತ್ಯಋಕ್ ತಾರೆ ಆಗುತ್ತದೆ.

2, 4, 6, 8, 9 ಅಥವಾ ೦ ಬಂದಲ್ಲಿ ಶುಭ ಕಾರ್ಯಗಳನ್ನು ಮಾಡಬಹುದು. ಪೂಜಾ ಕಾರ್ಯಗಳಿಗೂ ತಾರಾ ಬಲ ನೋಡುವ ಪದ್ಧತಿ ಉಂಟು. ಸಂಖ್ಯೆ 9 ಬಂದಲ್ಲಿ ಮಾಡಬಹುದು ಅಂತ ಕೆಲವರು ಹಾಗೂ ಮಾಡಬಾರದು ಎಂದು ಕೆಲವರ ಅಭಿಪ್ರಾಯ ಇದೆ. ಆದ್ದರಿಂದ ಜನ್ಮ ನಕ್ಷತ್ರದಿಂದ ಎಣಿಸುತ್ತಾ ಇಷ್ಟಕಾಲದ ನಕ್ಷತ್ರದವರೆಗೆ ಎಣಿಸಿ, 2, 4, 6, 8 ಅಥವಾ ೦ ಈ ಸಂಖ್ಯೆ ಉಳಿದಲ್ಲಿ ಅಥವಾ ಬಂದಲ್ಲಿ ಶುಭ ಕಾರ್ಯಗಳನ್ನು ಮಾಡಬಹುದು. ಗ್ರಹ ಶಾಂತಿಗಳನ್ನು, ಆಯುಷ್ಯ ವೃದ್ಧಿ ಶಾಂತಿಗಳನ್ನು ಮಾಡಿಸುವಾಗ ಮಾತ್ರ ಜನ್ಮ ನಕ್ಷತ್ರದಲ್ಲಿ ಮಾಡುವ ಪರಿಪಾಠ ಇದೆ.

ಈಗ ಇಪ್ಪತ್ತೇಳೂ ನಕ್ಷತ್ರಗಳಿಗೆ ಅನುಕೂಲ ತಾರೆಗಳು ಯಾವುವು ಎಂಬುದನ್ನು ವಿವರಿಸಲಾಗುವುದು

ಅಶ್ವಿನಿ:
ಭರಣಿ, ಪುಬ್ಬಾ, ಪೂರ್ವಾಷಾಢ-
ರೋಹಿಣಿ, ಹಸ್ತಾ, ಶ್ರವಣ-
ಆರಿದ್ರಾ, ಸ್ವಾತಿ, ಶತಭಿಷಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಭರಣಿ:
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ಮೃಗಶಿರಾ, ಚಿತ್ತಾ, ಧನಿಷ್ಠಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಮಖಾ, ಮೂಲಾ, ಅಶ್ವಿನಿ-

ಕೃತ್ತಿಕಾ:
ರೋಹಿಣಿ, ಹಸ್ತಾ, ಶ್ರವಣ-
ಆರಿದ್ರಾ, ಸ್ವಾತಿ, ಶತಭಿಷಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಮಖಾ, ಮೂಲಾ, ಅಶ್ವಿನಿ-
ಪುಬ್ಬಾ, ಪೂರ್ವಾಷಾಢ, ಭರಣಿ-

ರೋಹಿಣಿ:
ಮೃಗಶಿರಾ, ಚಿತ್ತಾ, ಧನಿಷ್ಠಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಪುಬ್ಬಾ, ಪೂರ್ವಾಷಾಢ, ಭರಣಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-

ಮೃಗಶಿರಾ:
ಆರಿದ್ರಾ, ಸ್ವಾತಿ, ಶತಭಿಷಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಮಖಾ, ಮೂಲಾ, ಅಶ್ವಿನಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ರೋಹಿಣಿ, ಹಸ್ತಾ, ಶ್ರವಣ-

ಆರಿದ್ರಾ:
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಪುಬ್ಬಾ, ಪೂರ್ವಾಷಾಢ, ಭರಣಿ-
ರೋಹಿಣಿ, ಹಸ್ತಾ, ಶ್ರವಣ-
ಮೃಗಶಿರಾ, ಚಿತ್ತಾ, ಧನಿಷ್ಠಾ-

ಪುನರ್ವಸು:
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಮಖಾ, ಮೂಲಾ, ಅಶ್ವಿನಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ಮೃಗಶಿರಾ, ಚಿತ್ತಾ, ಧನಿಷ್ಠಾ-
ಆರಿದ್ರಾ, ಸ್ವಾತಿ, ಶತಭಿಷಾ-

ಪುಷ್ಯ:
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಪುಬ್ಬಾ, ಪೂರ್ವಾಷಾಢ, ಭರಣಿ-
ರೋಹಿಣಿ, ಹಸ್ತಾ, ಶ್ರವಣ-
ಆರಿದ್ರಾ, ಸ್ವಾತಿ, ಶತಭಿಷಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-

ಆಶ್ಲೇಷಾ:
ಮಖಾ, ಮೂಲಾ, ಅಶ್ವಿನಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ಮೃಗಶಿರಾ, ಚಿತ್ತಾ, ಧನಿಷ್ಠಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-

ಮಖಾ:
ಪುಬ್ಬಾ, ಪೂರ್ವಾಷಾಢ, ಭರಣಿ-
ರೋಹಿಣಿ, ಹಸ್ತಾ, ಶ್ರವಣ-
ಆರಿದ್ರಾ, ಸ್ವಾತಿ, ಶತಭಿಷಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-

ಪುಬ್ಬಾ:
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ಮೃಗಶಿರಾ, ಚಿತ್ತಾ, ಧನಿಷ್ಠಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಮಖಾ, ಮೂಲಾ, ಅಶ್ವಿನಿ-

ಉತ್ತರಾ:
ರೋಹಿಣಿ, ಹಸ್ತಾ, ಶ್ರವಣ-
ಆರಿದ್ರಾ, ಸ್ವಾತಿ, ಶತಭಿಷಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಮಖಾ, ಮೂಲಾ, ಅಶ್ವಿನಿ-
ಪುಬ್ಬಾ, ಪೂರ್ವಾಷಾಢ, ಭರಣಿ-

ಹಸ್ತಾ:
ಮೃಗಶಿರಾ, ಚಿತ್ತಾ, ಧನಿಷ್ಠಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಪುಬ್ಬಾ, ಪೂರ್ವಾಷಾಢ, ಭರಣಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-

ಚಿತ್ತಾ:
ಆರಿದ್ರಾ, ಸ್ವಾತಿ, ಶತಭಿಷಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಮಖಾ, ಮೂಲಾ, ಅಶ್ವಿನಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ರೋಹಿಣಿ, ಹಸ್ತಾ, ಶ್ರವಣ-

ಸ್ವಾತಿ:
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಪುಬ್ಬಾ, ಪೂರ್ವಾಷಾಢ, ಭರಣಿ-
ರೋಹಿಣಿ, ಹಸ್ತಾ, ಶ್ರವಣ-
ಮೃಗಶಿರಾ, ಚಿತ್ತಾ, ಧನಿಷ್ಠಾ-

ವಿಶಾಖಾ:
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಮಖಾ, ಮೂಲಾ, ಅಶ್ವಿನಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ಮೃಗಶಿರಾ, ಚಿತ್ತಾ, ಧನಿಷ್ಠಾ-
ಆರಿದ್ರಾ, ಸ್ವಾತಿ, ಶತಭಿಷಾ-

ಅನೂರಾಧಾ:
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಪುಬ್ಬಾ, ಪೂರ್ವಾಷಾಢ, ಭರಣಿ-
ರೋಹಿಣಿ, ಹಸ್ತಾ, ಶ್ರವಣ-
ಆರಿದ್ರಾ, ಸ್ವಾತಿ, ಶತಭಿಷಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-

ಜ್ಯೇಷ್ಠಾ:
ಮಖಾ, ಮೂಲಾ, ಅಶ್ವಿನಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ಮೃಗಶಿರಾ, ಚಿತ್ತಾ, ಧನಿಷ್ಠಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-

ಮೂಲಾ:
ಪುಬ್ಬಾ, ಪೂರ್ವಾಷಾಢ, ಭರಣಿ-
ರೋಹಿಣಿ, ಹಸ್ತಾ, ಶ್ರವಣ-
ಆರಿದ್ರಾ, ಸ್ವಾತಿ, ಶತಭಿಷಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-

ಪೂರ್ವಾಷಾಢ:
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ಮೃಗಶಿರಾ, ಚಿತ್ತಾ, ಧನಿಷ್ಠಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಮಖಾ, ಮೂಲಾ, ಅಶ್ವಿನಿ-

ಉತ್ತರಾಷಾಢ:
ರೋಹಿಣಿ, ಹಸ್ತಾ, ಶ್ರವಣ-
ಆರಿದ್ರಾ, ಸ್ವಾತಿ, ಶತಭಿಷಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಮಖಾ, ಮೂಲಾ, ಅಶ್ವಿನಿ-
ಪುಬ್ಬಾ, ಪೂರ್ವಾಷಾಢ, ಭರಣಿ-

ಶ್ರವಣ:
ಮೃಗಶಿರಾ, ಚಿತ್ತಾ, ಧನಿಷ್ಠಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಪುಬ್ಬಾ, ಪೂರ್ವಾಷಾಢ, ಭರಣಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-

ಧನಿಷ್ಠಾ:
ಆರಿದ್ರಾ, ಸ್ವಾತಿ, ಶತಭಿಷಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಮಖಾ, ಮೂಲಾ, ಅಶ್ವಿನಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ರೋಹಿಣಿ, ಹಸ್ತಾ, ಶ್ರವಣ-

ಶತಭಿಷಾ:
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಪುಬ್ಬಾ, ಪೂರ್ವಾಷಾಢ, ಭರಣಿ-
ರೋಹಿಣಿ, ಹಸ್ತಾ, ಶ್ರವಣ-
ಮೃಗಶಿರಾ, ಚಿತ್ತಾ, ಧನಿಷ್ಠಾ-

ಪೂರ್ವಾಭಾದ್ರಾ:
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-
ಮಖಾ, ಮೂಲಾ, ಅಶ್ವಿನಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ಮೃಗಶಿರಾ, ಚಿತ್ತಾ, ಧನಿಷ್ಠಾ-
ಆರಿದ್ರಾ, ಸ್ವಾತಿ, ಶತಭಿಷಾ-

ಉತ್ತರಾಭಾದ್ರಾ:
ಆಶ್ಲೇಷಾ, ಜ್ಯೇಷ್ಠಾ, ರೇವತಿ-
ಪುಬ್ಬಾ, ಪೂರ್ವಾಷಾಢ, ಭರಣಿ-
ರೋಹಿಣಿ, ಹಸ್ತಾ, ಶ್ರವಣ-
ಆರಿದ್ರಾ, ಸ್ವಾತಿ, ಶತಭಿಷಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-

ರೇವತಿ:
ಮಖಾ, ಮೂಲಾ, ಅಶ್ವಿನಿ-
ಕೃತ್ತಿಕಾ, ಉತ್ತರಾಫಲ್ಗುಣಿ, ಉತ್ತರಾಷಾಢ-
ಮೃಗಶಿರಾ, ಚಿತ್ತಾ, ಧನಿಷ್ಠಾ-
ಪುನರ್ವಸು, ವಿಶಾಖಾ, ಪೂರ್ವಾಭಾದ್ರಾ-
ಪುಷ್ಯ, ಅನೂರಾಧಾ, ಉತ್ತಾರಾಭಾದ್ರಾ-

ಪ್ರತಿ ನಕ್ಷತ್ರದ ಕೆಳಗೆ ಮೊದಲ ಸಾಲಿನಲ್ಲಿ ಬರುವಂಥದ್ದು ಸಂಪತ್ತಾರೆ, ಎರಡನೇ ಸಾಲಿನಲ್ಲಿ ಬಂದಿರುವುದು ಕ್ಷೇಮತಾರೆ, ಮೂರನೇ ಸಾಲಿನಲ್ಲಿ ಬಂದಿರುವುದು ಸಾಧಕತಾರೆ, ನಾಲ್ಕನೇ ಸಾಲಿನಲ್ಲಿ ಮಿತ್ರತಾರೆ, ಐದನೇ ಸಾಲಿನಲ್ಲಿ ಬಂದಿರುವುದು ಪರಮಮೈತ್ರತಾರೆ ಆಗಿದೆ. ವ್ಯಾಪಾರ- ವ್ಯವಹಾರಗಳನ್ನು ಸಂಪತ್ತಾರೆಯಲ್ಲಿಯೂ, ಪ್ರಯಾಣವನ್ನು ಕ್ಷೇಮತಾರೆಯಲ್ಲಿಯೂ, ವಿದ್ಯೆ- ಕಲಿಕೆ- ಕೋರ್ಸ್ ಗಳನ್ನು ಸಾಧಕತಾರೆಯಲ್ಲಿಯೂ, ಸಂಧಾನ- ರಾಜೀ- ಪಾರ್ಟನರ್ ಷಿಪ್ ಇತ್ಯಾದಿಗಳನ್ನು ಮಿತ್ರತಾರೆ ಹಾಗೂ ಪರಮಮೈತ್ರತಾರೆಯಲ್ಲಿಯೂ ಮಾಡಬಹುದು. ಇನ್ನು ಮದುವೆ, ಉಪನಯನ, ಸೀಮಂತ ಮೊದಲಾದ ಶುಭ ಕಾರ್ಯಗಳಲ್ಲಿ ತಾರಾ ಬಲ ಇರುವಂತೆ ನೋಡಿಕೊಳ್ಳಿ.

ಇನ್ನು ಅನಿವಾರ್ಯ ಸಂದರ್ಭಗಳಲ್ಲಿ ತಾರಾಬಲ ಇಲ್ಲದಿದ್ದರೂ ಕಾರ್ಯಕ್ರಮಗಳು ಮಾಡಲೇಬೇಕು ಅಂತಾದಾಗ: 1 – ಜನ್ಮತಾರೆಗೆ ತರಕಾರಿಗಳು, 3 – ವಿಪತ್ತಾರೆಗೆ ಬೆಲ್ಲ, 5- ಪ್ರತ್ಯಋಕ್ ತಾರೆಗೆ ಉಪ್ಪು, 7- ವಧತಾರೆಗೆ ಎಳ್ಳು ಅಥವಾ ಚಿನ್ನ ಅಥವಾ ವಸ್ತ್ರವನ್ನು ದಾನ ಮಾಡಬೇಕಾಗುತ್ತದೆ. ಇನ್ನು ಅಂಥ ಸನ್ನಿವೇಶದಲ್ಲಿ ಉತ್ತಮವಾದ ತಿಥಿ, ವಾರ, ಲಗ್ನಗಳು- ಮುಹೂರ್ತಗಳನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರ. ಆದ್ದರಿಂದ ಬ್ರಾಹ್ಮಿ ಮುಹೂರ್ತ, ಅಭಿಜಿನ್ ಲಗ್ನ ಅಥವಾ ಗೋಧೂಳಿ ಮುಹೂರ್ತದಲ್ಲಿ ಕಾರ್ಯಕ್ರಮಗಳನ್ನು. ಮಾಡಲು ಸಾಧ್ಯವಿದ್ದಲ್ಲಿ ಅದನ್ನು ಇಟ್ಟುಕೊಳ್ಳುವ ಪರಿಪಾಠ ನಡೆದುಬಂದಿದೆ. ಈ ಸಮಯವನ್ನು ಜ್ಯೋತಿಷಿಗಳು ಅಥವಾ ಪುರೋಹಿತರಿಂದ ಕೇಳಿ ತಿಳಿದುಕೊಳ್ಳಬಹುದು.

Published On - 10:49 pm, Tue, 9 July 24